AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fake App: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಇರಬಹುದು ಫೇಕ್ ಆ್ಯಪ್: ಹೇಗೆ ಕಂಡುಹಿಡಿಯುವುದು?

ಒಂದೇ ಹೆಸರಿನ, ನೋಡಲು ಕೂಡ ಒಂದೇ ರೀತಿಯಾಗಿರುವ ಆ್ಯಪ್ ಅದುಕೂಡ​​ ಒಂದೇ ದಿನದಲ್ಲಿ ಹುಟ್ಟಿಕೊಳ್ಳುವುದರಿಂದ ಇಲ್ಲಿರುವ ಆ್ಯಪ್​ಗಳ ಸಾಚಾತನದ ಬಗ್ಗೆ ನಾವು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು.

Fake App: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಇರಬಹುದು ಫೇಕ್ ಆ್ಯಪ್: ಹೇಗೆ ಕಂಡುಹಿಡಿಯುವುದು?
Google Play Store
Follow us
TV9 Web
| Updated By: Vinay Bhat

Updated on: Aug 07, 2021 | 3:19 PM

ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳ ಪ್ಲೇ ಸ್ಟೋರ್ (Play Store) ಅಥವಾ ಐಫೋನಿನ ಆ್ಯಪಲ್ ಸ್ಟೋರ್ ತೆಗೆದರೆ ಸಾಕು ಸಾವಿರಾರು ಆ್ಯಪ್ ಗಳು ಇದರಲ್ಲಿ ಕಾಣಸಿಗುತ್ತದೆ. ಆಂಡ್ರಾಯ್ಡ್ ಗೂಗಲ್‌ ಪ್ಲೇ ಸ್ಟೋರ್‌ಗೆ ಡೆವಲಪರ್‌ಗಳು ಆ್ಯಪ್​ಗಳನ್ನು ತಯಾರಿಸಿ ಸೇರ್ಪಡೆಗೊಳಿಸುವುದು ತುಂಬಾ ಸುಲಭವಾಗಿರುವುದರಿಂದಾಗಿ, ಈ ಆ್ಯಪ್​​ಗಳ ರಾಶಿಯಲ್ಲಿ ಫೇಕ್ ಆ್ಯಪ್​​ ಸಹ ಸೇರಿಕೊಳ್ಳುತ್ತವೆ. ಹೀಗಾಗಿ ಯಾವುದು ವರಿಜಿನಲ್?, ಯಾವುದು ಫೇಕ್ ಆ್ಯಪ್​​ (Fake App) ಎಂದು ಕಡಿಯಲು ಸಾಧ್ಯ ಆಗುವುದೇ ಇಲ್ಲ.

ಒಂದೇ ಹೆಸರಿನ, ನೋಡಲು ಕೂಡ ಒಂದೇ ರೀತಿಯಾಗಿರುವ ಆ್ಯಪ್ ಅದುಕೂಡ​​ ಒಂದೇ ದಿನದಲ್ಲಿ ಹುಟ್ಟಿಕೊಳ್ಳುವುದರಿಂದ ಇಲ್ಲಿರುವ ಆ್ಯಪ್​ಗಳ ಸಾಚಾತನದ ಬಗ್ಗೆ ನಾವು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಇತ್ತೀಚೆಗಂತು ಕೋವಿಡ್- 19 ಲಸಿಕೆ ನೋಂದಣಿ ಆ್ಯಪ್ ಗಳ ಹೆಸರಲ್ಲಿ ಅವೆಷ್ಟೋ ನಕಲಿ ಆ್ಯಪ್ ಸೃಷ್ಟಿಯಾಗಿದ್ದವು.

ಈ ರೀತಿಯ ಅಪಾಯಕಾರಿ ಆ್ಯಪ್​ಗಳನ್ನು ಗೂಗಲ್ ತನ್ನ ಗಮನಕ್ಕೆ ಬಂದಾಗಲೆಲ್ಲಾ ಆಗಾಗ್ಗೆ ತೆಗೆದುಹಾಕುತ್ತದೆ. ಆದರೆ, ಅದು ಎಷ್ಟೇ ಎಚ್ಚರಿಕೆ ವಹಿಸಿದರೂ, ನಕಲಿ ಮತ್ತು ಅಪಾಯಕಾರಿ ಆ್ಯಪ್ ಪ್ಲೇ ಸ್ಟೋರ್ ಒಳಗೆ ನುಸುಳಿಬಿಡುತ್ತವೆ. ಹಾಗಾಗಿ ಪ್ಲೇ ಸ್ಟೋರ್​ನಲ್ಲಿ ಯಾವುದೇ ಆ್ಯಪ್ ಅನ್ನು ಡೌನ್ಲೋಡ್ ಮಾಡುವ ಮುನ್ನ ಪ್ರಮುಖ ವಿಚಾರಗಳನ್ನ ಗಮನದಲ್ಲಿ ಇಟ್ಟುಕೊಂಡಿರಬೇಕು. ಇದರಿಂದ ಫೇಕ್ ಆ್ಯಪ್ ಯಾವುದು ಎಂಬುದನ್ನು ನಾವು ಕಂಡುಹಿಡಿಯಬಹುದು.

ಫೇಕ್ ಆ್ಯಪ್ ಮೊಬೈಲ್ ಸೇರುವುದು ಹೇಗೆ?:

ನಮ್ಮ ಮೊಬೈಲ್​ನ ನಿರ್ವಹಣೆಗೆ ಬೇಕಾದ ಸೆಕ್ಯುರಿಟಿ ಆ್ಯಪ್ ಗಳ ರೂಪದಲ್ಲಿಯೇ ಫೇಕ್ ಆ್ಯಪ್ ಗಳ ಕೂಡ ಸೇರಿಕೊಳ್ಳುತ್ತವೆ. ಆ್ಯಂಟಿ ವೈರಸ್ ರೀತಿಯಲ್ಲಿ, ಕ್ಯಾಚೆ ಕ್ಲಿಯರಿಂಗ್ ರೂಪದಲ್ಲಿ ಫೇಕ್ ಆ್ಯಪ್ ಗಳು ಮೊಬೈಲ್ ಬಳಕೆದಾರರನ್ನು ವಂಚಿಸುತ್ತವೆ. ಇಂತಹ ವೈರಸ್ ಆ್ಯಪ್ ಗೇಮ್ಸ್ ಮತ್ತು ಶೈಕ್ಷಣಿಕ ರೂಪದಲ್ಲಿಯೂ ತಲೆಮರೆಸಿಕೊಂಡು ಕುಳಿತಿರುತ್ತವೆ.

ಪ್ರಚೋದಿಸುತ್ತಲೇ ಇರುತ್ತವೆ:

ಹೌದು, ಇದು ನಿಮ್ಮ ಗಮನಕ್ಕೂ ಬಂದಿರಬಹುದು. ಹೆಚ್ಚಿನ ನಕಲಿ ಆ್ಯಪ್ ತಯಾರಕರು ಈ ಆ್ಯಪ್ ಅನ್ನು ಹೆಚ್ಚು ಜಾಹಿತಾರುಗೊಳಿಸಿರುತ್ತಾರೆ. ಜಾಹಿರಾತು ಮೂಲಕ ಅಥವಾ ಪಾಪ್ ಅಪ್ ವಿಂಡೋಗಳ ಮೂಲಕ ಬೇರೆಯೇ ಹಲವು ಆ್ಯಪ್ ಗಳನ್ನು ಇನ್​ಸ್ಟಾಲ್ ಮಾಡುವಂತೆ ಬಳಕೆದಾರರನ್ನು ಪ್ರಚೋದಿಸುತ್ತಲೇ ಇರುತ್ತವೆ. ಇಂತಹುಗಳು ಬಹುತೇಕ ದುರುದ್ದೇಶಪೂರಿತ ಕಿರು ತಂತ್ರಾಂಶಗಳೇ ಆಗಿರುತ್ತವೆ.

ತಂತ್ರಜ್ಞರು ಎಚ್ಚರಿಸಿದ ಆ್ಯಪ್ ಗಳು ಯಾವುವು?:

ಸೆಕ್ಯುರಿಟಿ ತಂತ್ರಜ್ಞರು ಎಚ್ಚರಿಸಿದ ಪ್ರಕಾರ, ವೈರಸ್ ಕ್ಲೀನರ್, ವೈರಸ್ ಬೂಸ್ಟರ್, ಆಯಂಟಿ ವೈರಸ್, ಆಪ್ ಲಾಕ್, ಕ್ಲೀನರ್, ಆಯಂಟಿ ವೈರಸ್ ಫ್ರೀ, ವೈರಸ್ ರಿಮೂವರ್, ಗೇಮ್ ಬಿಲಿಯರ್ಡ್ಸ್, ಚಿಲ್ಡ್ರನ್ ಪೊಲೀಸ್, ಗೇಮ್ ಆಫ್ ಕಾರ್ಸ್ ಹೀಗೆಲ್ಲ ವಿಭಿನ್ನ ಹೆಸರುಗಳಲ್ಲಿರುವ ಆ್ಯಪ್ ಗಳು ನಕಲಿ ಎಂದು ತಜ್ಞರು ಎಚ್ಚರಿಸಿದ್ದಾರೆ.

ಒಳ್ಳೆಯ ಆ್ಯಪ್ ಎಂದು ಗುರುತಿಸುವುದು ಹೇಗೆ?:

ಮೊದಲು ಆ್ಯಪ್ ನ ನಿಖರ ಹೆಸರು ಪರೀಕ್ಷಿಸಿ ಡೆವಲಪರ್ ಯಾರೆಂದು ನೋಡಿರಿ. ನಂತರ ಆ ಆ್ಯಪ್ಅನ್ನು ಎಷ್ಟು ಜನ ಡೌನ್ಲೋಡ್ ಮಾಡಿದ್ದಾರೆಂದು ನೋಡಿ, ಬಳಕೆದಾರ ರಿವ್ಯೂ ಓದಿ. ಹೆಚ್ಚು ಮಂದಿ ರೇಟಿಂಗ್ಸ್ ನೀಡಿದ್ದರೆ ಮತ್ತು ಅದರ ರೇಟಿಂಗ್ 4ಕ್ಕಿಂತ ಮೇಲ್ಪಟ್ಟು ಇದ್ದರೆ ಆ ಆ್ಯಪ್ ಅನ್ನು ನೀವು ಇನ್​ಸ್ಟಾಲ್ ಮಾಡಿಕೊಳ್ಳಬಹುದು.

BSNL: ಜಿಯೋ, ಏರ್ಟೆಲ್​ಗೆ ಟಕ್ಕರ್ ಕೊಟ್ಟ ಬಿಎಸ್​ಎನ್​ಎಲ್: ಪ್ರತಿದಿನ 5GB ಡೇಟಾ, 84 ದಿನ ವ್ಯಾಲಿಡಿಟಿ

Xiaomi: ಇದೇ ಮೊದಲ ಬಾರಿಗೆ ವಿಶ್ವದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್​ ಪಟ್ಟಕ್ಕೇರಿದ ಶವೋಮಿ

(Fake App How to Identify Fake Apps in Google Play Store Here is the Tricks )

ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು