Daam Virus: ಪ್ಲೇ ಸ್ಟೋರ್​ನಲ್ಲಿ ಅಪಾಯಕಾರಿ ಆ್ಯಪ್ ಪತ್ತೆ: ಈ ಆ್ಯಪ್ ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ

|

Updated on: May 27, 2023 | 2:06 PM

Fake App: ಇದೀಗ ದಾಮ್ (Daam) ಎಂಬ ಅಪಾಯಕಾರಿ ಆ್ಯಪ್ ಪ್ಲೇ ಸ್ಟೋರ್​ನಲ್ಲಿ ಕಂಡು ಬಂದಿದೆ. ಇದರ ಬಗ್ಗೆ CERT-In ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

Daam Virus: ಪ್ಲೇ ಸ್ಟೋರ್​ನಲ್ಲಿ ಅಪಾಯಕಾರಿ ಆ್ಯಪ್ ಪತ್ತೆ: ಈ ಆ್ಯಪ್ ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
Android Virus
Follow us on

ಆಂಡ್ರಾಯ್ಡ್ ಸ್ಮಾರ್ಟ್​ಫೋನುಗಳಲ್ಲಿ ಪ್ಲೇ ಸ್ಟೋರ್ (Play Store) ತೆರೆದರೆ ಸಾಕು ಸಾವಿರಾರು ಆ್ಯಪ್​ಗಳು ಇದರಲ್ಲಿ ಕಾಣಸಿಗುತ್ತದೆ. ಆಂಡ್ರಾಯ್ಡ್ ಗೂಗಲ್‌ ಪ್ಲೇ ಸ್ಟೋರ್‌ಗೆ ಡೆವಲಪರ್‌ಗಳು ಆ್ಯಪ್​ಗಳನ್ನು ತಯಾರಿಸಿ ಸೇರ್ಪಡೆಗೊಳಿಸುವುದು ತುಂಬಾ ಸುಲಭವಾಗಿರುವುದರಿಂದಾಗಿ, ಈ ಆ್ಯಪ್​​ಗಳ ರಾಶಿಯಲ್ಲಿ ಫೇಕ್ ಆ್ಯಪ್​​ (Fake App) ಕೂಡ ಸೇರಿಕೊಳ್ಳುತ್ತವೆ. ತಿಳಿಯದೆ ಈ ನಕಲಿ ಆ್ಯಪ್​ಗಳನ್ನು ನೀವು ಡೌನ್ಲೋಡ್ ಮಾಡಿ ಇನ್​ಸ್ಟಾಲ್ ಮಾಡಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಬಳಕೆದಾರರ ಖಾಸಗಿ ಫೋಟೋ, ವಿಡಿಯೋ, ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವುದು ಈ ಆ್ಯಪ್​ನ ಮುಖ್ಯ ಉದ್ದೇಶವಾಗಿದೆ. ಇದೀಗ ದಾಮ್ (Daam) ಎಂಬ ಅಪಾಯಕಾರಿ ಆ್ಯಪ್ ಪ್ಲೇ ಸ್ಟೋರ್​ನಲ್ಲಿ ಕಂಡು ಬಂದಿದೆ. ಇದರ ಬಗ್ಗೆ CERT-In ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

ದಾಮ್ ಎಂಬ ವೈರಸ್ ಆ್ಯಪ್ ಬಳಕೆದಾರರ ಎಲ್ಲಾ ಕರೆ ಮಾಹಿತಿಯನ್ನು ಕದಿಯುತ್ತಿದೆ ಎಂದು ಹೇಳಿದೆ. ಇದು ಡೇಟಾವನ್ನು ಕದಿಯುತ್ತಿದೆ. ಮೊಬೈಲ್​ನಲ್ಲಿರುವ ಕಾಂಟೆಕ್ಟ್, ಹಿಸ್ಟರಿ ಮತ್ತು ಕ್ಯಾಮೆರಾದಂತಹ ಸೂಕ್ಷ್ಮ ಡೇಟಾವನ್ನು ಇದು ಹ್ಯಾಕ್ ಮಾಡುತ್ತಿದೆ. ಅದರಲ್ಲೂ ಮಾಲ್‌ವೇರ್ ವಿರೋಧಿ ವೈರಸ್ ಪ್ರೋಗ್ರಾಂಗಳನ್ನು ಬೈಪಾಸ್ ಮಾಡುವ ಸಾಮರ್ಥ್ಯವನ್ನು ಈ ಆ್ಯಪ್‌ ಹೊಂದಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೂಚಿಸಲಾಗಿದೆ.

Xiaomi Civi 3: ಒಂದಲ್ಲ ಎರಡು ಸೆಲ್ಫಿ ಕ್ಯಾಮೆರಾ: ಮಾರುಕಟ್ಟೆಯನ್ನು ನಡುಗಿಸಿದ ಶವೋಮಿ Civi 3 ಸ್ಮಾರ್ಟ್​ಫೋನ್

ಇದನ್ನೂ ಓದಿ
Realme 11 Pro+: ಜೂನ್ 8ಕ್ಕೆ ಭಾರತಕ್ಕೆ ಅಪ್ಪಳಿಸಲಿದೆ ಬರೋಬ್ಬರಿ 200MP ಕ್ಯಾಮೆರಾದ ಹೊಸ ರಿಯಲ್ ಮಿ ಸ್ಮಾರ್ಟ್​ಫೋನ್
Tech Tips: ಬ್ಯಾನ್ ಆದ ವಾಟ್ಸ್​ಆ್ಯಪ್ ಖಾತೆಯನ್ನು ಮರಳಿ ಪಡೆಯುವುದು ಹೇಗೆ?: ಇಲ್ಲಿದೆ ಟಿಪ್ಸ್
Galaxy M33 5G: ಬರೋಬ್ಬರಿ 6000mAh ಬ್ಯಾಟರಿ, 50MP ಕ್ಯಾಮೆರಾದ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌ ಮೇಲೆ ಬಂಪರ್ ಡಿಸ್ಕೌಂಟ್
Vivo Y36: 4G, 5G ಆವೃತ್ತಿಯಲ್ಲಿ ಕಡಿಮೆ ಬೆಲೆಗೆ ಒಂದು ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದ ವಿವೋ

ಇದು ಅತ್ಯಂತ ದೊಡ್ಡ ಆಪಾಯಕಾರಿ ಆ್ಯಪ್‌ ಎಂದು CERT-In ಹೇಳಿದ್ದು, ಫೋನ್ ಕರೆ ರೆಕಾರ್ಡಿಂಗ್, ಸಂಪರ್ಕಗಳನ್ನು ಹ್ಯಾಕಿಂಗ್ ಮಾಡುವುದು, ಕ್ಯಾಮೆರಾಗೆ ಪ್ರವೇಶ ಪಡೆಯುವುದು, ಡಿವೈಸ್‌ನ ಪಾಸ್‌ವರ್ಡ್ ಬದಲಾಯಿಸುವುದು, ಸ್ಕ್ರೀನ್‌ಶಾಟ್‌ಗಳನ್ನು ಸೆರೆಹಿಡಿಯುವುದು, ಎಸ್‌ಎಮ್ಎಸ್‌ ಅನ್ನು ಕದಿಯುವುದು, ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಅಪ್‌ಲೋಡ್ ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ನಿಮಗೆ ತಿಳಿಯದಂತೆ ಮಾಡುತ್ತದಂತೆ.

ಹೆಚ್ಚಾಗಿ ಮೊಬೈಲ್​​ನ ನಿರ್ವಹಣೆಗೆ ಬೇಕಾದ ಸೆಕ್ಯುರಿಟಿ ಆ್ಯಪ್​​ಗಳ ರೂಪದಲ್ಲಿಯೇ ಫೇಕ್ ಆ್ಯಪ್ ಗಳ ಕೂಡ ಸೇರಿಕೊಳ್ಳುತ್ತವೆ. ಆ್ಯಂಟಿ ವೈರಸ್ ರೀತಿಯಲ್ಲಿ, ಕ್ಯಾಚೆ ಕ್ಲಿಯರಿಂಗ್ ರೂಪದಲ್ಲಿ ಅಥವಾ ಗ್ಯಾಲರಿಯಾಗಿ ಫೇಕ್ ಆ್ಯಪ್​ಗಳು ಮೊಬೈಲ್ ಬಳಕೆದಾರರನ್ನು ವಂಚಿಸುತ್ತವೆ. ಇಂತಹ ವೈರಸ್ ಆ್ಯಪ್ ಗೇಮ್ಸ್ ಮತ್ತು ಶೈಕ್ಷಣಿಕ ರೂಪದಲ್ಲಿಯೂ ತಲೆಮರೆಸಿಕೊಂಡು ಕುಳಿತಿರುತ್ತವೆ. ಹೆಚ್ಚಿನ ನಕಲಿ ಆ್ಯಪ್ ತಯಾರಕರು ತಮ್ಮ ಆ್ಯಪ್ ಅನ್ನು ಜಾಹಿತಾರುಗೊಳಿಸಿರುತ್ತಾರೆ. ಜಾಹಿರಾತು ಮೂಲಕ ಅಥವಾ ಪಾಪ್ ಅಪ್ ವಿಂಡೋಗಳ ಮೂಲಕ ಬೇರೆಯೇ ಹಲವು ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡುವಂತೆ ಬಳಕೆದಾರರನ್ನು ಪ್ರಚೋದಿಸುತ್ತಲೇ ಇರುತ್ತವೆ. ಇಂತಹುಗಳು ಬಹುತೇಕ ದುರುದ್ದೇಶಪೂರಿತ ಆಗಿರುತ್ತವೆ. ಹೀಗಾಗಿ ಇಂತಹ ಫೇಕ್ ಆ್ಯಪ್​ಗಳಿಂದ ಎಚ್ಚರವಾಗಿರಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ