Flipkart Electronics Sale: ಒಂದೇ ದಿನ ಬಾಕಿ: ಎಲೆಕ್ಟ್ರಾನಿಕ್ ಸೇಲ್​ನ ಈ ಆಫರ್ ಮಿಸ್ ಮಾಡ್ಬೇಡಿ

Flipkart Electronics Sale: ಫ್ಲಿಪ್​ಕಾರ್ಟ್ (Flipkart) ಸದ್ಯ ಎಲೆಕ್ಟ್ರಾನಿಕ್ ಸೇಲ್ (Electronics Sale) ಹಮ್ಮಿಕೊಂಡಿದೆ. ಈಗಾಗಲೇ ಈ ಮೇಳ ಪ್ರಾರಂಭವಾಗಿದ್ದು ಸ್ಮಾರ್ಟ್​ಟಿವಿ, ಸ್ಮಾರ್ಟ್​ಫೋನ್ ಸೇರಿದಂತೆ ಅನೇಕ ಪ್ರೊಡಕ್ಟ್​ಗಳ ಮೇಲೆ ಬಂಪರ್ ರಿಯಾಯಿತಿ ನೀಡಲಾಗಿದೆ.

Flipkart Electronics Sale: ಒಂದೇ ದಿನ ಬಾಕಿ: ಎಲೆಕ್ಟ್ರಾನಿಕ್ ಸೇಲ್​ನ ಈ ಆಫರ್ ಮಿಸ್ ಮಾಡ್ಬೇಡಿ
Flipkart
TV9kannada Web Team

| Edited By: Vinay Bhat

Jun 26, 2022 | 6:45 AM

ಗ್ರಾಹಕರಿಗೆ ಭರ್ಜರಿ ರಿಯಾಯಿತಿ ದರದಲ್ಲಿ ಸದಾ ಒಂದಲ್ಲ ಒಂದು ಮೇಳವನ್ನು ಆಯೋಜಿಸುತ್ತಿರುವ ಪ್ರಸಿದ್ಧ ಇ ಕಾಮರ್ಸ್​ ತಾಣ ಫ್ಲಿಪ್​ಕಾರ್ಟ್ (Flipkart) ಸದ್ಯ ಎಲೆಕ್ಟ್ರಾನಿಕ್ ಸೇಲ್ (Electronics Sale) ಹಮ್ಮಿಕೊಂಡಿದೆ. ಈಗಾಗಲೇ ಈ ಮೇಳ ಪ್ರಾರಂಭವಾಗಿದ್ದು ಇನ್ನೊಂದೆ ದಿನ ಬಾಕಿ ಇದೆ. ಇದರಲ್ಲಿ ಸ್ಮಾರ್ಟ್​ಟಿವಿ, ಸ್ಮಾರ್ಟ್​ಫೋನ್ ಸೇರಿದಂತೆ ಅನೇಕ ಪ್ರೊಡಕ್ಟ್​ಗಳ ಮೇಲೆ ಬಂಪರ್ ರಿಯಾಯಿತಿ ನೀಡಲಾಗಿದೆ. ಜೂನ್ 27ರವರೆಗೆ ಈ ಮೇಳ ನಡೆಯುತ್ತಿದ್ದು, ಗ್ರಾಹಕರು ಎಕ್ಸ್‌ಚೇಂಜ್‌ ಆಫರ್‌ ಮತ್ತು ಬ್ಯಾಂಕ್ ಕಾರ್ಡ್ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ನೋ ಕಾಸ್ಟ್‌ ಈಎಂಐ ಆಯ್ಕೆಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಪ್ರಮುಖವಾಗಿ ಐಫೋನ್​ಗಳ ಮೇಲೆ ಊಹಿಸಲಾಗದಷ್ಟು ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ರಿಯಲ್ ಮಿ, ಸ್ಯಾಮ್​ಸಂಗ್, ರೆಡ್ಮಿ ಹಾಗೂ ಶವೋಮಿ (Xiaomi) ಸ್ಮಾರ್ಟ್​ಫೋನ್​ಗಳು, ಸ್ಮಾರ್ಟ್​​ ಟಿವಿಗಳ ಮೇಲೂ ಅತ್ಯುತ್ತಮ ಡಿಸ್ಕೌಂಟ್ ನೀಡಲಾಗಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್‌ ಸೇಲ್‌ನಲ್ಲಿ ಆಫರ್​ನಲ್ಲಿ ಪಡೆದುಕೊಳ್ಳಬಹುದಾದ ಪ್ರಮುಖ ಪ್ರಾಡಕ್ಟ್​ಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

Vu ಪ್ರೀಮಿಯಂ 108cm (43-ಇಂಚು) ಅಲ್ಟ್ರಾ HD (4K) LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಈ ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ರಿಯಾಯಿತಿ ದರದಲ್ಲಿ ರೂ. 26,999 (MRP ರೂ. 45,000)ಗೆ ಲಭ್ಯವಾಗಲಿದೆ. ಜೊತೆಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದು. ಟಿವಿಯು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಯೂಟ್ಯೂಬ್‌ನಂತಹ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. 43-ಇಂಚಿನ ಡಿಸ್ಪ್ಲೇ 60Hz ರಿಫ್ರೆಶ್ ದರದೊಂದಿಗೆ ಬರುತ್ತದೆ.

ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್‌ ಸೇಲ್‌ನಲ್ಲಿ ಶವೋಮಿ 11i 5G ಫೋನ್‌ ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರ ಮೂಲ ಬೆಲೆ 24,999 ರೂ. ಪ್ರಿಪೇಯ್ಡ್ ವಹಿವಾಟುಗಳ ಮೇಲೆ 4,000 ರೂ. ರಿಯಾಯಿತಿ ದೊರೆಯಲಿದೆ. ಅಂದರೆ ಈ ಸ್ಮಾರ್ಟ್‌ಫೋನ್‌ ನಿಮಗೆ ಕೇವಲ 20,999 ರೂ. ಬೆಲೆಯಲ್ಲಿ ದೊರೆಯಲಿದೆ. ಜೊತೆಗೆ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 10% ಡಿಸ್ಕೌಂಟ್‌ ಹೊಂದಿದೆ.

Reliance JIO: 56 GB ಡೇಟಾ, ಅನ್ಲಿಮಿಟೆಡ್ ಕಾಲ್: ಇದು ಜಿಯೋ ಕಂಪನಿಯ ಬಂಪರ್ ಆಫರ್

ಇನ್ನು ವೋಲ್ಟಾಸ್ 1.5 ಟನ್ 5 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ ಫ್ಲಿಪ್ ಕಾರ್ಟಿನಲ್ಲಿ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ ರೂ. 67,990 ಇದ್ದು 37,999 ರೂ. ರಿಯಾಯಿತಿಯೊಂದಿಗೆ ಸಿಗಲಿದೆ. ಈ ಎಸಿ ಖರೀದಿಸಲು UPI ವಹಿವಾಟುಗಳ ಮೇಲೆ 1,000 ರಿಯಾಯಿತಿ ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5 ಪ್ರತಿಶತ ಕ್ಯಾಶ್‌ಬ್ಯಾಕ್ ಸಿಗಲಿದೆ.

ಒನಿಡಾ 7ಕೆಜಿ 5 ಸ್ಟಾರ್ ಫುಲ್ಲಿ ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ರಿಯಾಯಿತಿ ಬೆಲೆ ರೂ.ಗಳಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ 13,490 (MRP ರೂ. 21,990) ರೂ. ವರೆಗಿನ ಎಕ್ಸ್ ಚೇಂಜ್ ಆಫರ್‌ನೊಂದಿಗೆ ನೀವು ಒನಿಡಾ ವಾಷಿಂಗ್ ಮೆಷಿನ್ ಅನ್ನು ಖರೀದಿಸಬಹುದು. ಹೆಚ್‌‌‌ಡಿಎಫ್‍ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ 1,250 ರೂ. ಡಿಸ್ಕೌಂಟ್ ಪಡೆಯಬಹುದು.

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 13 ಮೂಲ ಬೆಲೆ 79,900 ರೂ. ಗಳಿಗೆ ಬದಲಾಗಿ 73,999 ರೂ. ಗಳಿಗೆ ದೊರೆಯಲಿದೆ. ಅಂದರೆ ಐಫೋನ್‌ 13 ಮೇಲೆ 5,901 ರೂ. ವರೆಗೆ ರಿಯಾಯಿತಿ ದೊರೆಯಲಿದೆ. ಇದಲ್ಲದೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್, ಕ್ರೆಡಿಟ್ ಮತ್ತು ಡೆಬಿಟ್ EMI ವಹಿವಾಟುಗಳ ಮೇಲೆ 4,000ರೂ.ಗಳ ಹೆಚ್ಚುವರಿ ರಿಯಾಯಿತಿ ಸಿಗಲಿದೆ. 14,999ರೂ. ಮೂಲ ಬೆಲೆ ಹೊಂದಿರುವ ರೆಡ್ಮಿ ನೋಟ್‌ 10S ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 12,999ರೂ.ಬೆಲೆಯಲ್ಲಿ ದೊರೆಯಲಿದೆ. ಅಂತೆಯೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F22 ನಿಮಗೆ 11,499 ರೂ. ಬೆಲೆಗೆ ದೊರೆಯಲಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು 1,000 ರೂ. ವರೆಗಿನ ರಿಯಾಯಿತಿ ಪಡೆದುಕೊಳ್ಳಬಹುದು.

ಇದನ್ನೂ ಓದಿ

Realme Narzo 50i Prime: ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜೆಟ್ ಬೆಲೆಯ ರಿಯಲ್‌ ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್​​ಫೋನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada