ಡಿಜಿಟಲ್ ಪ್ಲಾಟ್ಫಾರ್ಮ್ಗಳಾದ ಅಮೆಜಾನ್, ಝೊಮ್ಯಾಟೋ, Myntra ಮತ್ತಿತರ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಜುಲೈ 22ನೇ ತಾರೀಕಿನ ಗುರುವಾರ ತಾತ್ಕಾಲಿಕವಾಗಿ ತಡೆ ಆಗಿದ್ದು, ತಾಂತ್ರಿಕ ಸಮಸ್ಯೆ ಎದುರಾಗಿದೆ. ಇವುಗಳ ಕಂಟೆಂಟ್ ವಿತರಣೆ ಜಾಲವು Akamaiಗೆ ಜೋಡಣೆ ಆಗಿವೆ. ಜೂನ್ ನಂತರದಲ್ಲಿ ಇದು ಎರಡನೇ ಬಾರಿಗೆ ವಿಶ್ವದಾದ್ಯಂತ ಹೀಗೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಕೊನೆಯದಾಗಿ ಜೂನ್ 8ನೇ ತಾರೀಕಿನಂದು ಈ ರೀತಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಡೆಲ್ಟಾ ಏರ್ಲೈನ್ಸ್, ಅಮೆಜಾನ್, Myntra, ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೋ, ಪೇಮೆಂಟ್ ಆ್ಯಪ್ ಪೇಟಿಎಂ, ಒಟಿಟಿ ಪ್ಲಾಟ್ಫಾರ್ಮ್ ಡಿಸ್ನಿ+ ಹಾಟ್ಸ್ಟಾರ್, ಗೇಮ್ಸ್ಗಳಾದ ಕಾಲ್ ಆಫ್ ಡ್ಯೂಟಿ, ಅದರ ಜತೆಗೆ ಬ್ಯಾಂಕ್ ಹೋಸ್ಟ್ ಪುಟಗಳು ಸಹ ಲೋಡ್ ಆಗುತ್ತಿರಲಿಲ್ಲ. ಈ ಬಗ್ಗೆ ಟ್ರ್ಯಾಕಿಂಗ್ ವೆಬ್ಸೈಟ್ ಡೌನ್ ಡಿಟೆಕ್ಟರ್ ವರದಿ ಮಾಡಿದೆ. Akamaiಗೆ ನಂಟು ಹೊಂದಿಕೊಂಡಂತಿರುವ PlayStation Network ಮತ್ತು Steam ಸಹ ಡೌನ್ ಆಗಿತ್ತು.
ಆಪಲ್ನ ಸಿಸ್ಟಮ್ ಸ್ಟೇಟಸ್ ಪೇಜ್ ಪ್ರಕಾರ, ಐಕ್ಲೌಡ್ ಬ್ಯಾಕ್ಅಪ್, ಐಕ್ಲೌಡ್ ಮೇಲ್, ಐಕ್ಲೌಡ್ ಸ್ಟೋರೇಜ್ ಅಪ್ಗ್ರೇಡ್ಸ್ ಮತ್ತು ಫೋಟೋಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಣಿಸಿಕೊಂಡಿತು. ಆದರೆ ಈ ಸಮಸ್ಯೆ ಕಾಣಿಸಿಕೊಂಡಿದ್ದು Akamai ಸೇವೆ ವ್ಯತ್ಯಯದ ಪರಿಣಾಮದಿಂದ ಹೌದೋ ಅಲ್ಲವೋ ಎಂಬುದು ಗೊತ್ತಾಗಿಲ್ಲ. ಆ್ಯಪ್ ಡೌನ್ ಆಗಿರುವ ಬಗ್ಗೆ ಝೊಮ್ಯಾಟೋದಿಂದ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಲಾಗಿದೆ. Akamai ತಾಂತ್ರಿಕ ಸಮಸ್ಯೆಯಿಂದ ನಮ್ಮ ಆ್ಯಪ್ ಡೌನ್ ಆಗಿದೆ. ನಮ್ಮ ತಂಡವು ಎಲ್ಲ ಆರ್ಡರ್ ಆಗಿದೆ ಮತ್ತು ಶೀಘ್ರವಾಗಿ ಡೆಲಿವರಿ ಆಗಿದೆ ಎಂಬುದನ್ನು ಖಾತ್ರಿ ಪಡಿಸಲಾಗುತ್ತಿದೆ ಎಂದಿದೆ.
Akamai ಎಂದು ಇಂಟರ್ನೆಟ್ ಮೂಲಸೌಕರ್ಯ ಕಂಪೆನಿ. ಇದು ಸಮಸ್ಯೆಯ ಕೇಂದ್ರಬಿಂದುವಾಗಿದೆ. ಇದು ಸೇವೆಯಲ್ಲಿ ವ್ಯತ್ಯಯವನ್ನು ಅನುಭವಿಸುತ್ತಿರುವುದಾಗಿ ಟ್ವೀಟ್ ಮಾಡಿದೆ. ಅದು ಟ್ವೀಟ್ ಮಾಡಿರುವಂತೆ, Akamai ಸೇವೆ ವ್ಯತ್ಯಯವನ್ನು ಅನುಭವಿಸಿದೆ. ನಾವು ಈ ಸಮಸ್ಯೆಗೆ ಕಾರಣ ಏನು ಎಂಬ ವಿಚಾರಣೆ ನಡೆಸುತ್ತಿದ್ದೇವೆ. 30 ನಿಮಿಷದಲ್ಲಿ ಅಪ್ಡೇಟ್ ನೀಡತ್ತೇವೆ ಎಂದು ಹೇಳಿಕೊಂಡಿದೆ. ಹಲವು ಬಳಕೆದಾರರು ಸಮಸ್ಯೆ ಬಗ್ಗೆ ವರದಿ ಮಾಡಿದ್ದಾರೆ. Error 503 ಅಥವಾ Service Unavailabe- DNS failure ಅಂತ ಬಂದಿದೆ.
ಏನಿದು Error 503?
Error 503 ಇದನ್ನು ಅರ್ಥ ಮಾಡಿಕೊಳ್ಳಬೇಕು ಅಂದರೆ ವೆಬ್ಸೈಟ್ ಹೇಗೆ ಕೆಲಸ ಮಾಡುತ್ತದೆ ಅಂತ ತಿಳಿಯಬೇಕು. ವೆಬ್ಸೈಟ್ ತನ್ನಷ್ಟಕ್ಕೆ ಕೋಡ್ಗಳು ಮತ್ತು ಪುಟಗಳ ಸಂಗ್ರಹ. ಈ ಕೋಡ್ಗಳು ಫಾರ್ಮಾಟಿಂಗ್ ಮತ್ತು ಪೇಜ್ ಲೇಔಟ್ನಲ್ಲಿ ಕಂಟೆಂಟ್ ಡಿಸ್ಪ್ಲೇ ಸಹಾಯ ಮಾಡುತ್ತವೆ. ನಿಜವಾದ ವರ್ಕ್ಹಾರ್ಸ್ ಬಂದು ವೆಬ್ಸರ್ವರ್. ಇದನ್ನು ಇನ್ನೊಂದು ಕಂಪ್ಯೂಟರ್ ರೀತಿ ಅಂದುಕೊಳ್ಳಿ. ಕೆಲವು ನಿರ್ದಿಷ್ಟ ಪುಟವನ್ನು ತೋರಿಸಲು ಸಿದ್ಧವಾಗಿರುತ್ತದೆ. ಯಾವಾಗ ಪುಟವನ್ನು ನೇವಿಗೇಟ್ ಮಾಡಲು ಬ್ರೌಸರ್ ಬಳಸುತ್ತೀರೀ ಆಗ ವೆಬ್ ಸರ್ವರ್ ಆ ಮನವಿಯ ನಿರ್ವಹಣೆ ಮಾಡುತ್ತದೆ ಮತ್ತು ಡೇಟಾ ಬೇಸ್ನಿಂದ ಆ ಮಾಹಿತಿಯನ್ನು ಹೊರತೆಗೆಯುತ್ತದೆ. ಅದಾದ ಮೇಲೆ ಆಯಾ ವೆಬ್ ಪೇಜ್ನಲ್ಲಿ ತೋರಿಸುತ್ತದೆ. ಯಾವಾಗ ಮನವಿ ಹ್ಯಾಂಡಲ್ ಮಾಡಲು ಆಗುವುದಿಲ್ಲವೋ ಆಗ Error 503 ಕಾಣಿಸುತ್ತದೆ.
Published On - 11:57 pm, Thu, 22 July 21