ಗೂಗಲ್ ಯಶಸ್ಸಿನ ಬೆನ್ನ ಹಿಂದಿವೆ ಹಲವು ವಿಫಲ ಉತ್ಪನ್ನಗಳು; ಇಲ್ಲಿದೆ ಟಾಪ್ 10 ಪಟ್ಟಿ

Google Failed Products: ಗೂಗಲ್ ಒಂದು ಸರ್ಚ್ ಎಂಜಿನ್ ಆಗಿ ರೂಪುಗೊಂಡು ಈಗ ಸಾಕಷ್ಟು ವ್ಯಾಪ್ತಿ ವಿಸ್ತರಿಸಿದೆ. ಇದರ ಓಟ ಸರಾಗವೇನಾಗಿರಲಿಲ್ಲ. ಇದು ಹೆಜ್ಜೆ ಮುಂದೆ ಇಡುವ ಮುನ್ನ ಒಂದು ಹೆಜ್ಜೆ ಹಿಂದಕ್ಕೆ ಹೋಗಿದ್ದು ಹಲವಿರಗೆ ಈಗ ಮರೆತಂತಿರಬಹುದು. ಗೂಗಲ್​ನ ಓಟಕ್ಕೆ ಈ ಹಿನ್ನಡೆಗಳೂ ಕಾರಣವೇ ಆಗಿರಬಹುದು. ಗೂಗಲ್​ನಿಂದ ವಿಫಲಗೊಂಡ ಉತ್ಪನ್ನಗಳು ಯಾವ್ಯಾವುವು ಎಂಬ ವಿವರ ಇಲ್ಲಿದೆ...

ಗೂಗಲ್ ಯಶಸ್ಸಿನ ಬೆನ್ನ ಹಿಂದಿವೆ ಹಲವು ವಿಫಲ ಉತ್ಪನ್ನಗಳು; ಇಲ್ಲಿದೆ ಟಾಪ್ 10 ಪಟ್ಟಿ
ಗೂಗಲ್ ರೀಡರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 27, 2023 | 3:04 PM

Google 25th Anniversary: ಇವತ್ತು ಸೆಪ್ಟೆಂಬರ್ 27, ಗೂಗಲ್​ನ 25ನೇ ವಾರ್ಷಿಕ ಸಂಭ್ರಮ. ಈ ಗೂಗಲ್ ಹೆಸರು ಯಾರು ಕೇಳಿಲ್ಲ…? ಇಂಟರ್ನೆಟ್​ನಲ್ಲಿ ಸರ್ಚ್ ಮಾಡು ಎನ್ನುವುದಕ್ಕೆ ಗೂಗಲ್ ಮಾಡು ಎಂಬ ಹೆಸರೇ ಹೆಚ್ಚು ಬಳಕೆಯಲ್ಲಿದೆ. ಅಷ್ಟರಮಟ್ಟಿಗೆ ಗೂಗಲ್ ಬ್ರ್ಯಾಂಡ್ (Google) ಹಾಸುಹೊಕ್ಕಾಗಿದೆ. ಅದರ ಮ್ಯಾಪ್ಸ್, ಪ್ಲೇ ಸ್ಟೋರ್, ಕ್ರೋಮ್ ಬ್ರೌಸರ್, ಕ್ಲೌಡ್ ಸ್ಟೋರೇಜ್ ಇತ್ಯಾದಿ ಹಲವು ಅಪ್ಲಿಕೇಶನ್​ಗಳು ತೀರಾ ಸಾಮಾನ್ಯವಾಗಿ ಬಳಕೆಯಾಗುತ್ತಿದ್ದು, ಒಂದು ಬ್ರಹ್ಮಾಂಡವೇ ಇದರಲ್ಲಿದೆ. ಇಂತಿಪ್ಪ ಗೂಗಲ್​ನಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗಿಲ್ಲ, ಸಾಕಷ್ಟು ಉತ್ಪನ್ನಗಳು ವಿಫಲವಾಗಿವೆ. ಆದರೆ, ಅಂಥವೇ ಬೇರೆ ಉತ್ಪನ್ನಗಳ ತಯಾರಿಕೆಗೆ ಇದು ಅನುವು ಮಾಡಿಕೊಟ್ಟಿದ್ದು ಹೌದು. ಅಂಥ ಕೆಲ ಉತ್ಪನ್ನಗಳ ಬಗ್ಗೆ ಕಿರು ಪರಿಚಯ ಇಲ್ಲಿದೆ…

ಗೂಗಲ್ ರೀಡರ್

ನ್ಯೂಸ್ ಅಗ್ರಿಗೇಟರ್ ಆಗಿ ಇದನ್ನು 2005ರಲ್ಲಿ ಆರಂಭಿಸಲಾಯಿತು. ಈಗಿರುವ ಗೂಗಲ್ ನ್ಯೂಸ್ ರೀತಿಯಲ್ಲಿ ಒಂದೇ ಕಡೆ ವಿವಿಧ ವೆಬ್​ಸೈಟ್​ಗಳ ಸುದ್ದಿಗಳನ್ನು ನೋಡಬಹುದಾಗಿತ್ತು. ಆದರೆ, ನಿರೀಕ್ಷಿತ ರೀತಿಯಲ್ಲಿ ಇದು ಜನಪ್ರಿಯವಾಗಲಿಲ್ಲ. 2013ರಲ್ಲಿ ಇದನ್ನು ಕೊನೆಗಾಣಿಸಲಾಯಿತು.

ಗೂಗಲ್ ವೇವ್

ಗೂಗಲ್ ಡಾಕ್ ರೀತಿಯಲ್ಲಿ ರಿಯಲ್​ಟೈಮ್​ನಲ್ಲಿ ಫೈಲ್ ಅಪ್​ಡೇಟ್ ಮಾಡುವ ರೀತಿಯಲ್ಲಿ ವಿವಿಧ ಬಳಕೆದಾರರು ಏಕಸಮಯದಲ್ಲಿ ಪಠ್ಯ, ಫೋಟೋ, ವಿಡಿಯೋ, ಮ್ಯಾಪ್ ಮತ್ತಿತರ ವಿವಿಧ ಸಾಧನ ಮತ್ತು ಫೀಚರ್​ಗಳನ್ನು ಬಳಸಲು ಅನುವು ಮಾಡಿಕೊಡುವ ಒಂದು ಪ್ಲಾಟ್​ಫಾರ್ಮ್ ಆಗಿತ್ತು ಗೂಗಲ್ ವೇವ್. 2009ರಲ್ಲಿ ಇದು ಚಾಲನೆ ಬಂತು. ಒಂದು ವರ್ಷದಲ್ಲಿ ಇದು ಮುಚ್ಚಿತು.

Google 25th Anniversary, Know About Its Failed Products

ಗೂಗಲ್ ವೇವ್

ಇದನ್ನೂ ಓದಿ: Google 25th Birthday:: ಗೂಗಲ್ ಜನ್ಮದಿನ ಇಂದು; ಗೂಗಲ್ ಹೆಸರಿನ ಅರ್ಥ ಏನು? ಗ್ಯಾರೇಜ್​ನಿಂದ ಶುರುವಾಗಿ ಇವತ್ತದು ಎಷ್ಟು ಅಗಾಧವಾಗಿ ಬೆಳೆದಿದೆ ನೋಡಿ..!

ಗೂಗಲ್ ಬಜ್

ಫೇಸ್​ಬುಕ್, ಟ್ವಿಟ್ಟರ್​ನಂಥ ಸೋಷಿಯಲ್ ನೆಟ್ವರ್ಕಿಂಗ್ ಪ್ಲಾಟ್​ಫಾರ್ಮ್​ಗಳಿಗೆ ಸ್ಪರ್ಧೆಯಾಗಿ ಬೂಗಲ್ ಸಂಸ್ಥೆ 2010ರಲ್ಲಿ ಬಜ್ ಅನ್ನು ಬಿಡುಗಡೆ ಮಾಡಿತ್ತು. ಫೋಟೋ, ವಿಡಿಯೋ ಮತ್ತಿತರ ಅಪ್​ಡೇಟ್​ಗಳನ್ನು ಹಂಚಿಕೊಳ್ಳುವ ತಾಣವಾಗಿತ್ತು. ಆದರೆ, ಇದೂ ಕೂಡ ಒಂದು ವರ್ಷದಲ್ಲಿ ಮುಚ್ಚಿತು. ಗೌಪ್ಯತೆಯ ವಿಚಾರದಲ್ಲಿ ಅಸುರಕ್ಷತೆಯ ಅಂಶ ಅದರ ಬಳಕೆದಾರರನ್ನು ನಿರಾಸೆಗೊಳಿಸಿತ್ತು.

Google 25th Anniversary, Know About Its Failed Products

ಗೂಗಲ್ ಬಜ್

ಗೂಗಲ್ ನೆಕ್ಸಸ್

ನೆಕ್ಸಸ್ ಬ್ರ್ಯಾಂಡ್​ನಲ್ಲಿ ಗೂಗಲ್ ವಿವಿಧ ಎಲೆಕ್ಟ್ರಾನಿಕ್ ಸಾಧನಗಳನ್ನು 2010ರಿಂದ ಬಿಡುಗಡೆ ಮಾಡಿತ್ತು. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಿಂದ ಚಾಲನೆಯಾಗುವ ಸ್ಮಾರ್ಟ್​ಫೋನ್, ಟ್ಯಾಬ್ಲೆಟ್ ಮತ್ತು ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್​ಗಳು ನೆಕ್ಸಸ್ ಸರಣಿಯಲ್ಲಿ ಬಂದವು. 2016ರಲ್ಲಿ ನೆಕ್ಸಸ್ ನಿಲ್ಲಿಸಿ, ಗೂಗಲ್ ಪಿಕ್ಸೆಲ್ ಎಂಬ ಹೊಸ ಬ್ರ್ಯಾಂಡ್ ರೂಪಿಸಲಾಯಿತು. ಈಗ ಪಿಕ್ಸೆಲ್ ಫೋನ್​ಗಳು ಸಾಕಷ್ಟು ಜನಪ್ರಿಯವಾಗಿವೆ.

ಇದನ್ನೂ ಓದಿ: ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ ಗೂಗಲ್ ಪಿಕ್ಸೆಲ್ 8 ಸರಣಿಯ ಸ್ಮಾರ್ಟ್​ಫೋನ್ಸ್

ಗೂಗಲ್ ಪ್ಲಸ್

2011ರಲ್ಲಿ ಆರಂಭವಾದ ಗೂಗಲ್ ಪ್ಲಸ್ ಒಂದು ಸೋಷಿಯಲ್ ನೆಟ್ವರ್ಕಿಂಗ್ ಸೈಟ್ ಆಗಿದೆ. ಗೂಗಲ್ ಬಜ್​ನಂತೆ ಇದೂ ಕೂಡ ಜನಪ್ರಿಯತೆ ಗಳಿಸಲು ವಿಫಲವಾಯಿತು. ಮೊದಮೊದಲು ಸಾಕಷ್ಟು ಆಸಕ್ತಿ ಕೆರಳಿಸಿದ್ದ ಇದು ಕ್ರಮೇಣವಾಗಿ ಸಕ್ರಿಯ ಬಳಕೆದಾರರನ್ನು ಕಳೆದುಕೊಳ್ಳುತ್ತಾ ಹೋಯಿತು. 2019ರಲ್ಲಿ ಇದನ್ನು ನಿಲ್ಲಿಸಲಾಯಿತು.

Google 25th Anniversary, Know About Its Failed Products

ಗೂಗಲ್ ಗ್ಲಾಸ್

ಗೂಗಲ್ ಗ್ಲಾಸ್

ಕನ್ನಡಕದಂತೆ ಧರಿಸಬಹುದಾದ ಈ ಸಾಧನವನ್ನು 2013ರಲ್ಲಿ ಗೂಗಲ್ ಭಾರೀ ನಿರೀಕ್ಷೆಯಲ್ಲಿ ಬಿಡುಗಡೆ ಮಾಡಿತ್ತು. ಬಲಗಣ್ಣಿನ ಕನ್ನಡಕ ಭಾಗದ ಮೇಲೆ ಪುಟ್ಟ ಸಾಧನವೊಂದನ್ನು ಕೂರಿಸಲಾಗಿದ್ದು, ಇದರಿಂದ ಫೋಟೋ, ವಿಡಿಯೋ ರೆಕಾರ್ಡ್ ಮಾಡಬಹುದು. ಇಂಟರ್ನೆಟ್​ಗೆ ಕನೆಕ್ಟ್ ಆಗುವುದು ಹೀಗೆ ಸಾಕಷ್ಟು ಸಾಧ್ಯತೆಗಳು ಗೂಗಲ್ ಗ್ಲಾಸ್​ನಲ್ಲಿದ್ದವು. ಆದರೆ, ಇದು ಪೂರ್ಣ ವಿಫಲವಾಯಿತು. ಎರಡೇ ವರ್ಷದಲ್ಲಿ ಇದನ್ನು ಮುಚ್ಚಲಾಯಿತು.

ಇದನ್ನೂ ಓದಿ: ಕಾಲಜ್ಞಾನಿ ಗೂಗಲ್; ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು? ಗೂಗಲ್ ಫ್ಲೈಟ್ಸ್​ನಲ್ಲಿದೆ ಹೊಸ ಫೀಚರ್

ವಾಟ್ಸಾಪ್ ರೀತಿಯ ಮೆಸೇಜಿಂಗ್ ಆ್ಯಪ್ ಆದ ಗೂಗಲ್ ಆಲೋ, ಗೂಗಲ್ ಇನ್ಬಾಕ್ಸ್, ಗೂಗಲ್ ಹ್ಯಾಂಗೌಟ್ಸ್, ಗೂಗಲ್ ಪ್ಲೇ ಮ್ಯೂಸಿಕ್ ಇತ್ಯಾದಿ ಆ್ಯಪ್​ಗಳನ್ನು ಗೂಗಲ್ ಹೊರತಂದಿತಾದರೂ ಇವ್ಯಾವುವೂ ಕೂಡ ನಿರೀಕ್ಷಿತ ರೀತಿಯಲ್ಲಿ ನಿಲ್ಲಲಿಲ್ಲ.

Google 25th Anniversary, Know About Its Failed Products

ಗೂಗಲ್ ನೆಕ್ಸಸ್

ಗೂಗಲ್​ನ ಕೆಲ ವಿಫಲ ಉತ್ಪನ್ನಗಳನ್ನು ಗಮನಿಸಿದಾಗ, ಅವು ಅದಾಗಲೇ ಮಾರುಕಟ್ಟೆ ಹಿಡಿತ ಹೊಂದಿದ ಪ್ರತಿಸ್ಪರ್ಧಿಗಳ ಎದುರು ನಿಲ್ಲಲು ಸಾಧ್ಯವಾಗದೇ ಪತನಗೊಂಡಿದ್ದನು ಕಾಣಬಹುದು. ಹಾಗೆಯೇ, ಗೂಗಲ್ ಗ್ಲಾಸ್​ನಂಥ ಪ್ರಯೋಗಗಳು ಸರಿಯಾಗಿ ಪೂರ್ವಭಾವಿ ತಯಾರಿ ಇಲ್ಲದೇ ಮಾಡಲಾಗಿತ್ತು. ಹೀಗಾಗಿ ವಿಫಲವಾಗಿದ್ದವು.

(ಫೋಟೋ ಕೃಪೆ: startuptalky)

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್