Sundar Pichai: ಗೂಗಲ್ ಸಿಇಒ ಸುಂದರ್​ ಪಿಚೈ ಹೇಳಿಕೊಂಡಂತೆ ಕೊನೆ ಬಾರಿ ಕಣ್ಣೀರು ಹಾಕಿದ್ದು, ಬೆಜೋಸ್ ಬಗ್ಗೆ ಹೊಟ್ಟೆಕಿಚ್ಚು ಇತ್ಯಾದಿ

ಸುಂದರ್ ಪಿಚೈ - ಆಲ್ಪಾಬೆಟ್ ಮತ್ತು ಗೂಗಲ್​ ಕಂಪೆನಿಯ ಸಿಇಒ. ಅಂತರ್ಜಾಲ ಸ್ವಾತಂತ್ರ್ಯ, ಭವಿಷ್ಯದ ಆವಿಷ್ಕಾರಗಳು, ತೆರಿಗೆ ಪದ್ಧತಿ, ತಮ್ಮದೇ ಸ್ವಂತ ಟೆಕ್ ಹವ್ಯಾಸಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

Sundar Pichai: ಗೂಗಲ್ ಸಿಇಒ ಸುಂದರ್​ ಪಿಚೈ ಹೇಳಿಕೊಂಡಂತೆ ಕೊನೆ ಬಾರಿ ಕಣ್ಣೀರು ಹಾಕಿದ್ದು, ಬೆಜೋಸ್ ಬಗ್ಗೆ ಹೊಟ್ಟೆಕಿಚ್ಚು ಇತ್ಯಾದಿ
ಸುಂದರ್ ಪಿಚೈ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Jul 13, 2021 | 12:22 PM

ಪ್ರತಿ ಕ್ಷಣ ತಂತ್ರಜ್ಞಾನ, ಆವಿಷ್ಕಾರವನ್ನೇ ಧೇನಿಸುವ ವ್ಯಕ್ತಿಗೆ ಆ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಬಗ್ಗೆ ಎಂಥ ಅಭಿಪ್ರಾಯ ಇರುತ್ತದೆ? ವರ್ಷಕ್ಕೆ ನೂರಾರು ಕೋಟಿ ಸಂಬಳ, ತನಗಿರುವ ಹುದ್ದೆಯ ಮೂಲಕ ಪ್ರಭಾವವನ್ನು ಬೀರಬಲ್ಲಂಥ ಅವಕಾಶ ಇರುವ ವ್ಯಕ್ತಿಯಾಗಿ ವೈಯಕ್ತಿಕ ಬದುಕು ಹೇಗಿರುತ್ತದೆ? ಈ ಎರಡೂ ಒಬ್ಬರೇ ವ್ಯಕ್ತಿಯಲ್ಲಿದ್ದರೆ ಹೇಗಿರುತ್ತದೆ? ಆಲ್ಪಾಬೆಟ್ ಮತ್ತು ಗೂಗಲ್​ (Google) ಕಂಪೆನಿಯ ಸಿಇಒ ಸುಂದರ್ ಪಿಚೈ (Sundar Pichai) ಈ ಮೇಲೆ ತಿಳಿಸಿದಂಥ ಉದಾಹರಣೆಗೆ ಹೇಳ ಹೆಸರಿಟ್ಟವರು. ಬಿಬಿಸಿಯಿಂದ (BBC) ಸುಂದರ್ ಪಿಚೈ ಸಂದರ್ಶನವನ್ನು ಮಾಡಲಾಗಿದೆ. ಆ ಸಂದರ್ಭದಲ್ಲಿ ಅಂತರ್ಜಾಲ ಸ್ವಾತಂತ್ರ್ಯ, ಭವಿಷ್ಯದ ಆವಿಷ್ಕಾರಗಳು, ತೆರಿಗೆ ಪದ್ಧತಿ, ತಮ್ಮದೇ ಸ್ವಂತ ಟೆಕ್ ಹವ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ಜನರು ತಂತ್ರಜ್ಞಾನದ ಬಗ್ಗೆಯೇ ಆತಂಕಕ್ಕೆ ಒಳಗಾಗಿದ್ದಾರೆ. ಈಗಿನ ತಲೆಮಾರು ತಮ್ಮದೇ ಮಿತಿಯನ್ನು ಹಾಕಿಕೊಂಡು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ ಪಿಚೈ. ಈ ಸಂದರ್ಶನದ ಇಂಟರೆಸ್ಟಿಂಗ್ ಡೀಟೇಲ್ಸ್ ಇಲ್ಲಿದೆ.

1. ಮುಕ್ತ ಅಂತರ್ಜಾಲ ದಾಳಿಗೆ ಗುರಿಯಾಗುತ್ತಿದೆ ವಿಶ್ವದಾದ್ಯಂತ ಇರುವ ದೇಶಗಳಲ್ಲಿ ಮುಕ್ತ ಇಂಟರ್​ನೆಟ್​ ದಾಳಿಗೆ ಗುರಿಯಾಗುತ್ತಿದೆ. ಹಲವು ದೇಶಗಳು ಮಾಹಿತಿಗಳ ಹರಿವನ್ನು ನಿರ್ಬಂಧಿಸುತ್ತಿವೆ ಮತ್ತು ಈ ಮಾದರಿಯನ್ನು ಪದೇಪದೇ ಟೇಕಿಟ್ ಫಾರ್ ಗ್ರಾಂಟೆಡ್ ಅಂತ ತೆಗೆದುಕೊಳ್ಳುತ್ತಿದ್ದಾರೆ. ಚೀನಾದ ಹೆಸರನ್ನು ತೆಗೆದುಕೊಳ್ಳದೆ, ನಮ್ಮ ಯಾವುದೇ ಪ್ರಮುಖ ಉತ್ಪನ್ನಗಳು ಮತ್ತು ಸೇವೆಗಳು ಚೀನಾದಲ್ಲಿ ದೊರೆಯುತ್ತಿಲ್ಲ ಎಂದು ಹೇಳಿದ್ದಾರೆ.

2. ಮಕ್ಕಳು ಯೂಟ್ಯೂಬ್​ನಲ್ಲಿ ಸಮಯ ಕಳೆಯಬೇಕಾ ಅಥವಾ ಬೇಡವಾ ಈಗಿನ ತಲೆಮಾರು ತಂತ್ರಜ್ಞಾನ ಅಳವಡಿಕೆಯನ್ನು ಕಲಿಯುವ ಅಗತ್ಯ ಇದೆ. ಇದು ಅವರ ಜೀವನದ ಅತಿ ದೊಡ್ಡ ಭಾಗವಾಗಿದೆ. ಆದ್ದರಿಂದ ಮಿತಿಯನ್ನು ನಿರ್ಧರಿಸುವುದು ಅವರಿಗೇ ಬಿಟ್ಟಿದ್ದು. ಆದರೆ ನಾನು ಅಂದುಕೊಳ್ಳುವ ಪ್ರಕಾರ ಇದು ವೈಯಕ್ತಿಕ ಜವಾಬ್ದಾರಿ.

3. ತಂತ್ರಜ್ಞಾನವು ಮಕ್ಕಳು ಕ್ರಿಯೇಟಿವಿಟಿ ಮತ್ತು ಸಂಬಂಧ ವೃದ್ಧಿಸುವ ಸಾಮರ್ಥ್ಯ ನಾಶ ಮಾಡುತ್ತಿದೆಯಾ? ನನಗೆ ಅನಿಸುವ ಹಾಗೆ ಈ ಬಗ್ಗೆ ಚಿಂತೆ ಮಾಡಬೇಕು. ಮಾನಸಿಕ ಆರೋಗ್ಯದಂಥ ಕ್ಷೇತ್ರಗಳಲ್ಲಿ ತಜ್ಞರು ಇದ್ದಾರೆ ಎಂಬುದೇ ನಮ್ಮ ಪಾಲಿನ ಸಂತೋಷ. ಇದರ ಜತೆಗೆ ನಾನು ಹೇಳೋದು ಏನೆಂದರೆ, ಇತಿಹಾಸದ ಉದ್ದಕ್ಕೂ ನಾವು ತಂತ್ರಜ್ಞಾನದ ಬಗ್ಗೆ ಚಿಂತೆ ಮಾಡಿದ್ದೇವೆ.

4. ಜೆಫ್​ ಬೆಜೋಸ್​ರ ಬಾಹ್ಯಾಕಾಶ ಯಾನದ ಬಗ್ಗೆ ಏನು ಹೇಳಿದರು? ನನಗೂ ಬಾಹ್ಯಾಕಾಶದಿಂದ ನೋಡಿದಾಗ ಭೂಮಿ ಹೇಗೆ ಕಾಣಿಸುತ್ತೆ ಅಂತ ಕುತೂಹಲ ಇದೆ. ಈ ಬಗ್ಗೆ ಜೆಫ್​ ಬೆಜೋಸ್ ವಿಚಾರದಲ್ಲಿ ಸ್ವಲ್ಪ ಹೊಟ್ಟೆಕಿಚ್ಚಿದೆ.

5. ನೀವು ಭಾರತೀಯ ಅಂತ ಗುರುತಿಸಿಕೊಳ್ಳಲು ಇಷ್ಟಪಡುತ್ತೀರೋ ಅಥವಾ ಅಮೆರಿಕನ್ ಅಂತಲೋ? ನಾನೊಬ್ಬ ಅಮೆರಿಕ ನಾಗರಿಕ. ಆದರೆ ಭಾರತ ನನ್ನೊಳಗೆ ಆಳವಾಗಿ ಉಳಿದಿದೆ. ನಾನು ಇವತ್ತು ಏನಾಗಿದ್ದೇನೋ ಅದರ ದೊಡ್ಡ ಭಾಗವಾಗಿ ಭಾರತ ಇದೆ.

6. ಅಮೆರಿಕ ತೆರಿಗೆ ಪದ್ಧತಿ ಬಗ್ಗೆ ಏನನ್ನಿಸುತ್ತದ? ಕಳೆದ ಒಂದು ದಶಕದಲ್ಲಿ ನೋಡಿದರೆ ವಿಶ್ವದಲ್ಲಿ ಅತಿ ದೊಡ್ಡ ಪ್ರಮಾಣದ ತೆರಿಗೆ ಪಾವತಿದಾರರು ನಾವು. ಶೇ 20ಕ್ಕೂ ಹೆಚ್ಚು ತೆರಿಗೆ ಪಾವತಿ ಮಾಡ್ತೀವಿ. ನಮ್ಮ ಪ್ರಾಡಕ್ಟ್​ಗಳ ಮೂಲ ಇರುವ ಮತ್ತು ಅಭಿವೃದ್ಧಿ ಆಗಿರುವ ಅಮೆರಿಕದಲ್ಲಿ ನಮ್ಮ ಬಹುತೇಕ ತೆರಿಗೆಯನ್ನು ಪಾವತಿಸುತ್ತೇವೆ. ನನಗೆ ಅನಿಸುವಂತೆ ಉತ್ತಮ ಚರ್ಚೆ ಆಗಿದ್ದು, ನಾವು ಜಾಗತಿಕ ಒಇಸಿಡಿ ಚರ್ಚೆಯನ್ನು ಬೆಂಬಲಿಸಬೇಕು. ತೆರಿಗೆಯನ್ನು ಹಂಚಿಕೆ ಮಾಡುವ ಸರಿಯಾದ ಬಗೆ ಯಾವುದು ಎಂದು ಗುರುತಿಸಬೇಕು ಮತ್ತು ಇದು ಒಂದು ಕಂಪೆನಿಯು ಬಗೆಹರಿಸುವುದಕ್ಕೆ ಸಾಧ್ಯ ಇರುವಂಥದ್ದಲ್ಲ.

7. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ ಬಗ್ಗೆ ಏನನ್ನಿಸುತ್ತದೆ? ಮಾನವನ ಇತಿಹಾಸದಲ್ಲೇ ಅಭಿವೃದ್ಧಿಪಡಿಸಿದ ಮತ್ತು ಕೆಲಸ ಮಾಡುತ್ತಿರುವ ತುಂಬ ಗಹನವಾದ ತಂತ್ರಜ್ಞಾನ ಇದು. ನೀವು ಬೆಂಕಿ ಅಥವಾ ವಿದ್ಯುತ್ ಅಥವಾ ಇಂಟರ್ನೆಟ್ ಬಗ್ಗೆ ಯೋಚಿಸಿದರೆ, ಇದು ಕೂಡ ಹಾಗೇ. ಆದರೆ ನಾನು ಇದನ್ನು ಇನ್ನೂ ಹೆಚ್ಚು ಎಂದು ಭಾವಿಸುತ್ತೇನೆ.

8. ಕ್ವಾಂಟಮ್ ಕಂಪ್ಯೂಟಿಂಗ್ ಬಗ್ಗೆ ಏನು ಹೇಳುತ್ತೀರಿ? ಕ್ವಾಂಟಮ್ ಕಂಪ್ಯೂಟಿಂಗ್ ಎಲ್ಲ ಕಡೆಯೂ ಕೆಲಸಕ್ಕೆ ಬರಲ್ಲ. ಕೆಲವು ಸಂಗತಿಗಳಿಗೆ ನಾವು ಇವತ್ತು ಅನುಸರಿಸುತ್ತಿರುವ ಕಂಪ್ಯೂಟಿಂಗ್ ಇನ್ನಷ್ಟು ಉತ್ತಮ ಆಗುವ ಸಾಧ್ಯತೆ ಇದೆ. ಆದರೆ ಕೆಲವು ಸಂಗತಿಗಳಿಗೆ ಕ್ವಾಂಟಮ್ ಕಂಪ್ಯೂಟಿಂಗ್ ಹೊಸ ರೇಂಜ್​ನ ಸಲ್ಯೂಷನ್ ತೆರೆದಿಡುತ್ತದೆ.

9. ನೀವು ಕೊನೆಯದಾಗಿ ಕಣ್ಣೀರಿಟ್ಟಿದ್ದು ಯಾವಾಗ? ಕೊವಿಡ್​ನಿಂದ ಮೃತಪಟ್ಟವರ ದೇಹಗಳನ್ನು ಹೊತ್ತು ನಿಂತ ಟ್ರಕ್​ಗಳನ್ನು ವಿಶ್ವದಾದ್ಯಂತ ನೋಡಿದಾಗ ಮತ್ತು ಭಾರತದಲ್ಲಿ ಏನು ಆಗುತ್ತಿತ್ತು ಅದನ್ನು ನೋಡಿದಾಗ ಕಣ್ಣೀರು ಹಾಕಿದೆ.

10. ಅದ್ಭುತವಾದ ಕಂಪೆನಿ ಕಟ್ಟಿ ಬೆಳೆಸುವ ಆಶಯದೊಂದಿಗೆ ಹೆಜ್ಜೆ ಇಡುತ್ತಿರುವವರಿಗೆ ಸಲಹೆ ಏನು? ನನಗೆ ಯಾವಾಗಲೂ ಅನಿಸುತ್ತಲೇ ಇರುತ್ತದೆ, ಬುದ್ಧಿಯು ಹೇಳುವುದಕ್ಕಿಂತ ಆಚೆಗೆ ನೀವು ಏನನ್ನಾದರೂ ಮಾಡಬೇಕು. ಅದು ನಿಮ್ಮ ಹೃದಯಕ್ಕೆ ಸಂತೋಷ ಕೊಡುವಂಥದ್ದಾಗಿರಬೇಕು. ಇದೊಂದು ಪಯಣ. ಅದನ್ನು ಹುಡುಕಿಕೊಂಡಾಗ ನಿಮಗೇ ಗೊತ್ತಾಗುತ್ತದೆ. ಅದನ್ನು ಹುಡುಕಿಕೊಂಡಾಗ ಎಲ್ಲವೂ ವರ್ಕೌಟ್ ಆಗುವುದಕ್ಕೆ ಆರಂಭವಾಗುತ್ತದೆ.

(ಮಾಹಿತಿ ಕೃಪೆ: ಬಿಬಿಸಿ)

ಇದನ್ನೂ ಓದಿ: Sundar Pichai Birthday: ಗೂಗಲ್​ ಸಿಇಓ ಸುಂದರ್​ ಪಿಚೈ ಅವರ ನಿಜವಾದ ಹೆಸರೇನು ಗೊತ್ತಾ? ಪಿಚೈ ಕುರಿತಾದ ಅಪರೂಪದ 5 ಸಂಗತಿಗಳು ಇಲ್ಲಿವೆ

ಇದನ್ನೂ ಓದಿ: ಗೂಗಲ್​ ಉದ್ಯೋಗಿಗಳಿಗೆ ಪತ್ರ​ ಬರೆದ ಸುಂದರ್​ ಪಿಚೈ; ಆ ಇ-ಮೇಲ್​ನಲ್ಲೇನಿದೆ?

(Google and Alphabet CEO Sundar Pichai interview by BBC about technology, inventions and personal life. Here is the 10 interesting details)

Published On - 12:21 pm, Tue, 13 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ