Google Gemini: ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಬರುತ್ತಿದೆ ಗೂಗಲ್​​​ ಜೆಮಿನಿ

ಗೂಗಲ್​​​ ಅಧಿಕೃತವಾಗಿ Google BARD ಅನ್ನು ಪ್ರಾರಂಭಿಸಿದೆ. ಇದು AI ಚಾಟ್‌ಬಾಟ್ ಆಗಿದ್ದು, Microsoft ChatGPTನ ಹೊಸ BING ಬಳಕೆದಾರರಿಗೆ ಹಲವಾರು ವೈಶಿಷ್ಟತೆಗಳು ಇದು ನೀಡಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

Google Gemini: ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಬರುತ್ತಿದೆ ಗೂಗಲ್​​​ ಜೆಮಿನಿ
ಗೂಗಲ್​​​ ಜೆಮಿನಿ
Follow us
ಅಕ್ಷಯ್​ ಪಲ್ಲಮಜಲು​​
|

Updated on:Nov 21, 2023 | 4:07 PM

OpenAIಗೆ ಬಿಗ್​​​ ಫೈಟ್​​ ನೀಡಲು ಬರುತ್ತಿದೆ ಗೂಗಲ್​​​ನ ಜೆಮಿನಿ. ಪ್ರಸ್ತುತ, ಜಗತ್ತಿನ ಅನೇಕ ದೈತ್ಯ ಟೆಕ್​​​ಗಳಲ್ಲಿ ಶೀತಲ ಸಮರಗಳು ನಡೆಯುತ್ತಿದೆ. ಈ ಸಮಯದಲ್ಲಿ ಗೂಗಲ್,​​​ ಜೆಮಿನಿಯನ್ನು ಹೊರತಂದಿದೆ. ಕೆಲವು ವರ್ಷಗಳಿಂದ ಕೃತಕ ಬುದ್ಧಿಮತ್ತೆ (AI) ಜಗತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಇದಕ್ಕೆ ಸರಿಸಮವಾಗಿ ನಿಲ್ಲಲು ಗೂಗಲ್​​ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಇತ್ತಿಚೇಗಷ್ಟೇ OpenAI ಭಾರೀ ದೊಡ್ಡ ಗೊಂದಲವನ್ನು ಹುಟ್ಟು ಹಾಕಿತ್ತು. OpenAI ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿ ದೈತ್ಯ ಕಂಪನಿಗಳಿಗೆ ಶಾಕ್ ನೀಡಿತ್ತು. ಸಂಸ್ಥೆಯನ್ನು ಮುನ್ನಡೆಸಲು ಅವರು ಸಮರ್ಪಕರಲ್ಲ ಎಂಬುದು ಮೇಲ್ನೋಟಕ್ಕೆ ಕೊಟ್ಟಿರುವ ಕಾರಣ. ಇದೀಗ ಈ ಗೊಂದಲಗಳ ನಡುವೆ ಗೂಗಲ್​​ ಜೆಮಿನಿಯನ್ನು ಪರಿಚಯಿಸಿದೆ.

ಗೂಗಲ್​​​ ಅಧಿಕೃತವಾಗಿ Google BARD ಅನ್ನು ಪ್ರಾರಂಭಿಸಿದೆ. ಇದು AI ಚಾಟ್‌ಬಾಟ್ ಆಗಿದ್ದು, Microsoft ChatGPTನ ಹೊಸ BING ಬಳಕೆದಾರರಿಗೆ ಹಲವಾರು ವೈಶಿಷ್ಟತೆಗಳು ಇದು ನೀಡಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. Google BARD, Bing ಮತ್ತು ChatGPTಯೊಂದಿಗೆ ಸ್ಪರ್ಧಿಸಲು ಮುಂದಾಗಿದೆ.

ಗೂಗಲ್ ಜೆಮಿನಿ ಎಂದರೇನು?

ಗೂಗಲ್ ತನ್ನ​​​ ವ್ಯಾಪ್ತಿಯನ್ನು ವಿಸ್ತರಿಸಲು ಜೆಮಿನಿಯನ್ನು ಪರಿಚಯಸಲಿದೆ. Googleನ ಜೆಮಿನಿ ಭವಿಷ್ಯದ AIಗೆ ದೊಡ್ಡ ವೇದಿಕೆಯಾಗಿದೆ. ಇದು ಬಾರ್ಡ್ Google ನ Lagvent ಮಾಡ್ಯೂಲ್ PalM 2ನ್ನು ಆಧರಿಸಿದೆ. ಜೆಮಿನಿ ಮೂಲಕ ಗೂಗಲ್​​​ ಬಳಕೆದಾರರಿಗೆ ದೊಡ್ಡ ವೇದಿಕೆಯನ್ನು ನೀಡಲಿದೆ. ಹಾಗೂ ತಂತ್ರಜ್ಞಾನದಲ್ಲಿ ಹೊಸ ಸುವರ್ಣ ಯುಗವನ್ನು ಪ್ರಾರಂಭವಾಗಲಿದೆ. ಇದಕ್ಕಾಗಿ ಅನೇಕರು ಕಾಯುತ್ತಿದ್ದಾರೆ ಎಂದು ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಇದನ್ನೂ ಓದಿ:ChatGPT ಸೃಷ್ಟಿಕರ್ತ ಸ್ಯಾಮ್ ಆಲ್ಟ್‌ಮ್ಯಾನ್ ವಜಾ; OpenAI ಹಂಗಾಮಿ ಸಿಇಒ ಆಗಿ ಮೀರಾ ಮುರಾಟಿ ನೇಮಕ

ಜೆಮಿನಿ ChatGPTಗೆ ಸ್ಪರ್ಧೆ ನೀಡುತ್ತಾ?

ಜೆಮಿನಿ ಮಲ್ಟಿಮೋಡಲ್ ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಬಳಕೆದಾರರು ಒಂದೇ ವೇದಿಕೆಯಿಂದ ಏಕಕಾಲದಲ್ಲಿ ಅನೇಕ ಕೆಲಸಗಳನ್ನು ಮಾಡಬಹುದು. ಟೆಕ್ಸ್ಟ್​​​ ಕ್ರಿಯೇಟ್​​, ಕೋಡಿಂಗ್​​​, ಇಮೇಜ್​​ ಕ್ರಿಯೆಟ್​​, ರೀಡಿಂಗ್, ಇನ್ನು ಅನೇಕ ಸೌಲಭ್ಯಗಳು ಒಂದೇ ವೇದಿಕೆಯಲ್ಲಿ ಸಿಗುತ್ತದೆ. ಆದರೆ ChatGPT ಟೆಕ್ಸ್ಟ್​​​ ಕ್ರಿಯೇಟ್ ಮಾತ್ರ ಮಾಡಲು ಸಾಧ್ಯ, ಕೋಡಿಂಗ್​​​, ಇಮೇಜ್​​ ಕ್ರಿಯೆಟ್​​, ರೀಡಿಂಗ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Tue, 21 November 23