Sign In

By signing in or creating an account, you agree with Associated Broadcasting Company's Terms & Conditions and Privacy Policy.

Android: ಆಂಡ್ರಾಯ್ಡ್ ಸ್ಮಾರ್ಟ್​​ಫೋನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಸರ್ಕಾರದಿಂದ ಎಚ್ಚರಿಕೆ ಸಂದೇಶ

Smartphone Hack: ಆಂಡ್ರಾಯ್ಡ್ ಸ್ಮಾರ್ಟ್​​ಫೋನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ. ಸ್ಮಾರ್ಟ್​​ಫೋನ್​ನಲ್ಲಿ ಉಪಯೋಗಿಸುವ UNISOC ಚಿಪ್‌ಸೆಟ್​ನಲ್ಲಿ ದುರ್ಬಲತೆ ಕಂಡು ಬಂದಿದೆ ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ ಹೇಳಿದೆ.

Android: ಆಂಡ್ರಾಯ್ಡ್ ಸ್ಮಾರ್ಟ್​​ಫೋನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಸರ್ಕಾರದಿಂದ ಎಚ್ಚರಿಕೆ ಸಂದೇಶ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Vinay Bhat

Updated on:Jun 10, 2022 | 1:46 PM

ಎರಡು ದಿನಗಳ ಹಿಂದೆಯಷ್ಟೆ ಪ್ರಸಿದ್ಧ ವೆಬ್ ಬ್ರೌಸರ್​ಗಳಾದ ಗೂಗಲ್ ಕ್ರೋಮ್ (Google Chrome) ಮತ್ತು ಮೊಜಿಲ್ಲಾದಲ್ಲಿ (Mozilla Firefox) ಭದ್ರತಾ ಲೋಪವೊಂದು ಕಂಡುಬಂದ ಬಗ್ಗೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (CERT-In) ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಆಂಡ್ರಾಯ್ಡ್ ಸ್ಮಾರ್ಟ್​​ಫೋನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ. ಸ್ಮಾರ್ಟ್​​ಫೋನ್​ನಲ್ಲಿ ಉಪಯೋಗಿಸುವ UNISOC ಚಿಪ್‌ಸೆಟ್​ನಲ್ಲಿ ದುರ್ಬಲತೆ ಕಂಡು ಬಂದಿದೆ ಎಂದು ಹೇಳಿದೆ. UNISOC ಚಿಪ್‌ಸೆಟ್ ಆಧಾರಿತ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ಜನರಿಗೆ ಸರ್ಕಾರದ ಸೈಬರ್‌ಸೆಕ್ಯುರಿಟಿ ತಂಡ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

CERT-In ಪ್ರಕಾರ, UNISOC ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ದುರ್ಬಲತೆ ಕಂಡುಬಂದಿದೆ. ಇದರಿಂದ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸ ಬಹುದು ಮತ್ತು ಕೆಲವು ಸ್ಮಾರ್ಟ್​​ಫೋನ್​ಗಳನ್ನು ರಿಮೋಟ್ ಕಂಟ್ರೋಲ್ ಮೂಲಕ ಆಕ್ರಮಣ ಮಾಡಬಹುದು ಎಂದು ಹೇಳಿದೆ. ಇದು ಬಳಕೆದಾರರ ಸಂವಹನವನ್ನು ಕಡಿತಗೊಳಿಸುತ್ತದಂತೆ. ಇದರ ಜೊತೆಗೆ ಈ ದುರ್ಬಲತೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಅಲ್ಲ ಬದಲಾಗಿ ಮೋಡೆಮ್ ಫರ್ಮ್‌ವೇರ್‌ನಲ್ಲಿದೆ ಎಂದು ಸಂಸ್ಥೆ ಉಲ್ಲೇಖಿಸಿದೆ. ಇದರಿಂದ ಸೈಬರ್ ಕ್ರಿಮಿನಲ್​ಗಳು ಸೇವೆಯನ್ನು ಸ್ಥಗಿತ (DoS) ಗೊಳಿಸಲು ಅನುಮತಿಸುತ್ತದೆ.

Happy Birthday Sundar Pichai: ಸುಂದರ್ ಪಿಚೈಗೆ ಹುಟ್ಟುಹಬ್ಬದ ಸಂಭ್ರಮ: ಗೂಗಲ್ ಸಿಇಓ ಬಗ್ಗೆ ಅಚ್ಚರಿ ಸಂಗತಿಗಳು ಇಲ್ಲಿವೆ

ಇದನ್ನೂ ಓದಿ
Image
ಗುಡ್​ ನ್ಯೂಸ್! ಟ್ವಿಟರ್ ಪರಿಚಯಿಸಲಿದೆ ಹೊಸ ಶಾಪಿಂಗ್ ಆಪ್ಶನ್!
Image
Nothing Phone 1: ಟೆಕ್ ಮಾರುಕಟ್ಟೆಯನ್ನೇ ನಡುಗಿಸುತ್ತಿದೆ Nothing ಸ್ಮಾರ್ಟ್​​ಫೋನ್: ಹೊಸ ಕ್ರಾಂತಿ ಆರಂಭ?
Image
Moto G62 5G: ಬೆಲೆ ಬಹಿರಂಗ ಪಡಿಸದೆ ಹೊಸ ಫೋನ್ ರಿಲೀಸ್ ಮಾಡಿದ ಮೋಟೋ: ಇದರ ಫೀಚರ್ಸ್​​ ನೋಡಿ
Image
Google Chrome: ಗೂಗಲ್‌ ಕ್ರೋಮ್‌, ಮೊಜಿಲ್ಲಾ ಬಳಕೆದಾರರೇ ಗಮನಿಸಿ: ಸರ್ಕಾರದಿಂದ ಬಂದಿದೆ ಎಚ್ಚರಿಕೆ ಸಂದೇಶ

DoS ದಾಳಿಯು ಸೈಬರ್‌ ಸುರಕ್ಷತೆಯ ಬೆದರಿಕೆಯಾಗಿದ್ದು ಅದು ಕೋಡಿಂಗ್ ಸಾಧನ ಅಥವಾ ನೆಟ್‌ವರ್ಕ್ ಮೂಲಕ ಪ್ರವೇಶಿಸಲು ಸಾಧ್ಯವಾಗದಂತೆ ಮಾಡಲು ಪ್ರಯತ್ನಿಸಿದಾಗ ಸಂಭವಿಸುತ್ತದೆ. ಇದರರ್ಥ ನಿಮ್ಮ ಸ್ಮಾರ್ಟ್‌ಫೋನ್ DoS ದಾಳಿಗೆ ಒಳಗಾಗಿದ್ದರೆ ನಿಮಗೆ ಕರೆ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, DoS ದಾಳಿಯಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ವೈಯಕ್ತಿಕ ಮಾಹಿತಿ ಅಥವಾ ಯಾವುದೆ ನಷ್ಟ ಸಂಭವಿಸುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಹೆಚ್ಚುತ್ತಿರುವ ಹ್ಯಾಕರ್​​ಗಳು:

ಈಗಂತು ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಹ್ಯಾಕರ್ಸ್​​ ಉಪಟಳವು ಅಧಿಕವಾಗುತ್ತಿದೆ. ಸ್ಮಾರ್ಟ್​ಫೋನ್​​​ಗಳಲ್ಲಿ ಕೆಲವು ಭದ್ರತೆ ಇಲ್ಲದಿರುವ ಆ್ಯಪ್​​ಗಳ ಮೂಲಕ ಹ್ಯಾಕರ್ಸ್ ಕೈಯಾಡಿಸುತ್ತಾರೆ. ಬಳಕೆದಾರರ ಖಾಸಗಿ ಮಾಹಿತಿ ಎಗರಿಸುತ್ತಾರೆ. ಬಳಕೆದಾರನಿಗೆ ತಿಳಿಯದೆ ಕೈಚಳ ತೋರಿಸುತ್ತಾರೆ. ಹಾಗಾದರೆ ಬಳಕೆದಾರ ಸ್ಮಾರ್ಟ್​ಫೋನ್​ಗಳಿಗೆ ವೈರಸ್ ದಾಳಿಯಾದರೆ ಅಥವಾ ಹ್ಯಾಕ್​ ಆದರೆ ಅದನ್ನು ಪತ್ತೆ ಹಚ್ಚುವುದು ಹೇಗೆ?

ಸ್ಮಾರ್ಟ್​ಫೋನ್​ಗಳಿಗೆ ಆ್ಯಪ್​  ಇನ್​ಸ್ಟಾಲ್​ ಮಾಡುವ ಮೊದಲು ಅವುಗಳು ಅಧಿಕೃತ ಆ್ಯಪ್​​ಗಳೇ  ಎಂದು ಪರಿಶೀಲಿಸುವುದು ಮುಖ್ಯ. ಕೆಲವು ಆ್ಯಪ್​​ಗಳು ಮಾಲ್ವೇರ್​ಗಳನ್ನು ಹೊಂದಿರುತ್ತದೆ. ಹಾಗಾಗಿ ಡೌನ್ಲೋಡ್ ಮಾಡುವ ಮುನ್ನ ಎಚ್ಚರದಿಂದಿರಿ. ಅಂತೆಯೆ ಕೆಲವೊಮ್ಮೆ ಸ್ಮಾರ್ಟ್​ಫೋನ್​ನಲ್ಲಿ ಇದ್ದಕ್ಕಿಂದಂತೆಯೇ ಜಾಹೀರಾತು ಕಾಣಿಸಿಕೊಳ್ಳುತ್ತದೆ. ಯಾವುದೇ ಭಾಷೆಯ, ನಿಮಗೆ ಸಂಬಂಧವಿಲ್ಲದ ಜಾಹೀರಾತುಗಳ ಕಾಣಿಸಿಕೊಳ್ಳುತ್ತದೆ. ಇದುಕೂಡ ಹ್ಯಾಕರ್​ಗಳ ಕೆಲಸ. ಇನ್​ಸ್ಟಾಲ್​ ಮಾಡಿರುವ ಆ್ಯಪ್ ಐಕಾನ್​ಗಳು ಮರೆಯಾಗಬಹುದು. ಅಥವಾ ಡೌನ್ಲೋಡ್​ ಮಾಡಿದ ಆ್ಯಪ್ ಹೋಮ್ ಸ್ಟ್ರೀನ್​ನಲ್ಲಿ ಕಾಣಿಸದೇ ಇರಬಹುದು. ಇಂಟರ್​ನೆಟ್​​​​ ರೀಜಾರ್ಜ್​ ಮಾಡಿಸಿಕೊಂಡಿದ್ದರೆ ಅಗತ್ಯಕ್ಕಿಂತ ಹೆಚ್ಚಿನ ಡೇಟಾ ಬಳಕೆಯಾಗುತ್ತಿದೆಯಾ ಎಂದು ಗಮನವಹಿಸುವುದು ಮುಖ್ಯ. ಬಳಕೆದಾರನಿಗೆ ಅರಿವಿಲ್ಲ ಕೆಲವು ಆ್ಯಪ್​ಗಳು ಹೆಚ್ಚಿನ ಡೇಟಾವನ್ನು ಬಳಸಿಕೊಳ್ಳುತ್ತವೆ. ಈ ಮೂಲಕ ಹ್ಯಾಕರ್​ಗಳಿಂದ ನಿಮ್ಮನ್ನ ನೀವು ಕಾಪಾಡಿಕೊಳ್ಳಿ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:46 pm, Fri, 10 June 22

ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?