Best Smartphones: 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಬೊಂಬಾಟ್ ಸ್ಮಾರ್ಟ್​ಫೋನ್​ಗಳು ಇಲ್ಲಿವೆ ನೋಡಿ

Best Smartphones: 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಬೊಂಬಾಟ್ ಸ್ಮಾರ್ಟ್​ಫೋನ್​ಗಳು ಇಲ್ಲಿವೆ ನೋಡಿ
Smartphone Under 10K

Best Smartphones Under RS 10,000: ಭಾರತೀಯ ಮಾರುಕಟ್ಟೆಯಲ್ಲಿ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ದೊರಕುವ ಮತ್ತು ಆಕರ್ಷಕ ಫೀಚರ್​​ವುಳ್ಳ ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

TV9kannada Web Team

| Edited By: Vinay Bhat

Nov 12, 2021 | 2:09 PM

ಈಗ ನಾವೆಲ್ಲರೂ ಸ್ಮಾರ್ಟ್ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಸ್ಮಾರ್ಟ್‌ಫೋನ್‌ಗಳು (Smartphone) ಇಲ್ಲದ ನಮ್ಮ ಜೀವನವನ್ನು ಊಹಿಸಿಕೊಳ್ಳುವುದು ಕೂಡ ಬಹಳ ಕಷ್ಟ. ಹೀಗಾಗಿ ಎಲ್ಲರೂ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಬಯಸುತ್ತಾರೆ. ಆದರೆ ನಾವು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಮುಂದಾಗುವ ಸಂದರ್ಭದಲ್ಲಿ ನಾವು ಗಮನಿಸಬೇಕಾದ ಮುಖ್ಯವಾದ ವಿಚಾರ ಎಂದರೆ ಆ ಫೋನಿನ ಬೆಲೆ. ಅದರಲ್ಲೂ ಮಾರುಕಟ್ಟೆಯು ಅತ್ಯಂತ ಸೂಕ್ಷ್ಮವಾಗಿರುವಂತಹ ಭಾರತದಂತಹ ದೇಶಗಳಲ್ಲಿ ಬೆಲೆಯ ವಿಚಾರವು ಬಹಳಷ್ಟು ಮುಖ್ಯ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಇದರ ಜೊತೆಗೆ ಗ್ರಾಹಕರು ಕ್ಯಾಮೆರಾ (Camera), RAM​, ಬ್ಯಾಟರಿ ಆಧರಿಸಿ ಸ್ಮಾರ್ಟ್​ಫೋನ್​ ಖರೀದಿಸುತ್ತಾರೆ. ಅದರಂತೆ ಸದ್ಯ 10 ಸಾವಿರಕ್ಕಿಂತ (Under 10,000 Smartphone) ಕಡಿಮೆ ಬೆಲೆಗೆ ದೊರಕುವ ಮತ್ತು ಆಕರ್ಷಕ ಫೀಚರ್​​ವುಳ್ಳ ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Realme Narzo 30A: ಈ ಸ್ಮಾರ್ಟ್​ಫೋನ್​ 6.5-ಇಂಚಿನ HD+ ಡಿಸ್​ಪ್ಲೇ ಹೊಂದಿದ್ದು, ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G85 ಚಿಪ್‌ಸೆಟ್ ಒಳಗೊಂಡಿದೆ. 4GB RAM ಮತ್ತು 64GB ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆಯಲ್ಲಿ ಸಿಗಲಿದೆ. ಡ್ಯುಯಲ್-ಸಿಮ್ ಕಾರ್ಡ್‌ ಬೆಂಬಲಿಸುವ ಈ ಸ್ಮಾರ್ಟ್​ಫೋನ್​ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 13 ಮೆಗಾಪಿಕ್ಸೆಲ್  ಪ್ರೈಮರಿ  ಕ್ಯಾಮೆರಾವನ್ನು ಇದರಲ್ಲಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 6,000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 8,999 ರೂ ಆಗಿದೆ.

Micromax IN 2b: ಭಾರತೀಯ ಮೂಲದ ಮೈಕ್ರೋಮ್ಯಾಕ್ಸ್ IN 2b  ಸ್ಮಾರ್ಟ್​ಫೋನ್​ 10 ಸಾವಿರ ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಫೋನ್ ಆಗಿದೆ. ಇದು 6.25 ಇಂಚಿನ ಡಿಸ್​ಪ್ಲೇ ಹೊಂದಿದ್ದು, 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕರ್ ಪಡೆದುಕೊಂಡಿದೆ. ಈ ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಸೆನ್ಸಾರ್​ನ ಕ್ಯಾಮೆರಾ ಹೊಂದಿದ್ದು, 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ನೀಡಲಾಗುದೆ. ಇದರ ಬೆಲೆ ರೂ. 8,499 ರೂ. ಆಗಿದೆ.

ಮೋಟೋರೊಲಾ Moto E7 Plus: ಮೋಟೋರೊಲಾ ಕಂಪನಿಯ ಮೋಟೋ E7 ಪ್ಲಸ್ ಫೋನ್ ಬೆಲೆ ಕೇವಲ 8,999 ರೂ. ಆಗಿದೆ. ಇದು 6.5 ಇಂಚಿನ ಡಿಸ್​ಪ್ಲೇ ಹೊಂದಿದ್ದು, ಕ್ವಾಲ್ಕಂ ಸ್ನಾಪ್ಡ್ರಾಗನ್ 460 SoC ಪ್ರೊಸೆಸರ್​ನಿಂದ ಕೂಡಿದೆ. 8 ಮೆಗಾಫಿಕ್ಸೆಲ್​ ಸೆಲ್ಫೀ ಕ್ಯಾಮೆರಾ, 48 ಮೆಗಾಫಿಕ್ಸೆಲ್​ ಬ್ಯಾಕ್ ಕ್ಯಾಮೆರಾ ನೀಡಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿ ಪವರ್ ಕೂಡ ಇದೆ.

Samsung Galaxy F02s: ಸ್ಯಾಮ್‌ಸಂಗ್‌ನ ಈ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ 6.5 ಇಂಚಿನ HD+ Infinity-V ಡಿಸ್​​ಪ್ಲೇ ಹೊಂದಿದೆ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 450 SoC ಜೊತೆಗೆ 4GB RAM ಒಳಗೊಂಡಿದೆ, ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹೊಂದಿದೆ. ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ  ನೀಡಲಾಗಿದೆ. ಧೀರ್ಘ ಕಾಲ ಬ್ಯಾಟರಿಯಾಗಿ 6,000mAh ಬ್ಯಾಟರಿಯನ್ನು ನೀಡಲಾಗಿದೆ. ಇದರ ಬೆಲೆ 9,499 ರೂ ಆಗಿದೆ.

Nokia C20 Plus: ನೋಕಿಯಾ ಸಿ 20 ಪ್ಲಸ್ 4,950mAh ಬ್ಯಾಟರಿಯೊಂದಿಗೆ 6.5-ಇಂಚಿನ HD+ ಸ್ಕ್ರೀನ್ ಮತ್ತು ಆಕ್ಟಾ-ಕೋರ್ ಯುನಿಸೋಕ್ SC9863a SoC ಯನ್ನು ಹೊಂದಿದೆ. ಜೊತೆಗೆ 3GB RAM ಆಯ್ಕೆಯಲ್ಲಿ ಸಿಗುತ್ತಿದೆ. 8 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹೊಂದಿರುವ ಈ ಸ್ಮಾರ್ಟ್​ಫೋನ್​ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರ ಬೆಲೆ 9,999 ರೂ.

PUBG: Android ಮತ್ತು iPhone ಗಳಲ್ಲಿ PUBG ನ್ಯೂ ಸ್ಟೇಟ್ ಬಿಡುಗಡೆ ಮಾಡಲಾಗಿದೆ; ವೈಶಿಷ್ಟ್ಯತೆಗಳೇನು?

(Here is the 5 best phones to consider under Rs 10000 Redmi Realme Samsung)

Follow us on

Related Stories

Most Read Stories

Click on your DTH Provider to Add TV9 Kannada