Best Smartphones: 15,000 ರೂ. ಒಳಗೆ ಸಿಗುತ್ತಿರುವ 50MP ಕ್ಯಾಮೆರಾದ ಬೆಸ್ಟ್ ಸ್ಮಾರ್ಟ್​ಫೋನ್ಸ್ ಇಲ್ಲಿದೆ ನೋಡಿ

TV9kannada Web Team

TV9kannada Web Team | Edited By: Vinay Bhat

Updated on: Jan 23, 2023 | 3:14 PM

ಸದ್ಯ 15 ಸಾವಿರಕ್ಕಿಂತ (Under 15,000 Smartphone) ಕಡಿಮೆ ಬೆಲೆಗೆ ದೊರಕುವ 50 ಮೆಗಾಫಿಕ್ಸೆಲ್ ಕ್ಯಾಮೆರಾ ಇರುವ ಆಕರ್ಷಕ ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Best Smartphones: 15,000 ರೂ. ಒಳಗೆ ಸಿಗುತ್ತಿರುವ 50MP ಕ್ಯಾಮೆರಾದ ಬೆಸ್ಟ್ ಸ್ಮಾರ್ಟ್​ಫೋನ್ಸ್ ಇಲ್ಲಿದೆ ನೋಡಿ
Smartphones

ಭಾರತೀಯ ಸ್ಮಾರ್ಟ್​ಫೋನ್​ (Smartphone) ಮಾರುಕಟ್ಟೆಯಲ್ಲಿ ಈಗ ಬಜೆಟ್ ಬೆಲೆಯ ಮೊಬೈಲ್​ಗಳಿಗೆ ಎಲ್ಲಿಲ್ಲದ ಬೇಡಿಕೆ. ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಸ್ಮಾರ್ಟ್​ಫೋನ್​ಗಳು ದೇಶದಲ್ಲಿ ಬಿಡುಗಡೆ ಆಗುವುದು ಸಾಮಾನ್ಯವಾಗಿದೆ. ಈಗೀಗ ಪ್ರಸಿದ್ಧ ಮೊಬೈಲ್ ಕಂಪನಿಗಳು ಕ್ಯಾಮೆರಾ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸುತ್ತಿದೆ. 108, 200 ಮೆಗಾಫಿಕ್ಸೆಲ್ ಕ್ಯಾಮೆರಾಗಳ ಫೋನ್ ಒಂದುಕಡೆಯಾದರೆ, ಇತ್ತ ಕೆಲ ಕಂಪನಿಗಳು ಕಡಿಮೆ ಬೆಲೆಗೆವೇ ಆಕರ್ಷಕ ಕ್ಯಾಮೆರಾದ ಫೋನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅದರಂತೆ ಸದ್ಯ 15 ಸಾವಿರಕ್ಕಿಂತ (Under 15,000 Smartphone) ಕಡಿಮೆ ಬೆಲೆಗೆ ದೊರಕುವ 50 ಮೆಗಾಫಿಕ್ಸೆಲ್ ಕ್ಯಾಮೆರಾ ಇರುವ ಆಕರ್ಷಕ ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

iQOO Z6 Lite 5G: ಈ ಸ್ಮಾರ್ಟ್‌ಫೋನ್‌ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್​ನಿಂದ ಕೂಡಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ ISOCELL JN1 ಸೆನ್ಸಾರ್‌ ಹೊಂದಿದೆ. 16 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರ ಆರಂಭಿಕ ಬೆಲೆ 13,999 ರೂ.

ತಾಜಾ ಸುದ್ದಿ

Moto G62 5G: ಈ ಫೋನ್‌ನ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 14999 ರೂ. ಗೆ ಸೇಲ್ ಆಗುತ್ತಿದೆ. ಇದು ಕ್ವಾಲ್ಕಂ ಸ್ನಾಪ್​ಡ್ರಾಗನ್ 695 ಚಿಪ್‌ಸೆಟ್‌ನಿಂದ ಕಾರ್ಯನಿವರ್ಹಿಸುತ್ತಿದ್ದು, 6.55 ಇಂಚಿನ ಡಿಸ್‌ಪ್ಲೇ ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, ಮುಖ್ಯ ಕ್ಯಾಮೆರಾ 50MP ಸೆನ್ಸಾರ್ ಸಾಮರ್ಥ್ಯದಲ್ಲಿದೆ. 8MP ಅಲ್ಟ್ರಾ-ವೈಡ್ ಮತ್ತು 2MP ಮ್ಯಾಕ್ರೋ ಲೆನ್ಸ್ ನೀಡಲಾಗಿದೆ. 5000mAh ಬ್ಯಾಟರಿ ಇದೆ.

Reliance Jio: ಅಮೆಜಾನ್, ನೆಟ್​ಫ್ಲಿಕ್ಸ್​ ಫ್ರೀ ಆಗಿ ನೋಡಬೇಕಾ?: ಜಿಯೋದಲ್ಲಿದೆ ಧಮಾಕ ಪ್ಲಾನ್

Poco M5: ಈ ಫೋನಿನ 14499ರೂ., MediaTek Helio G99 ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತಿದ್ದು 6.58-ಇಂಚಿನ FHD+ ಡಿಸ್‌ಪ್ಲೇ ಹೊಂದಿದೆ. 50MP ಪ್ರಾಥಮಿಕ ಕ್ಯಾಮೆರಾ ಅಳವಡಿಸಲಾಗಿದ್ದು, ಅತ್ಯುತ್ತಮ ಫೋಟೋಗಳನ್ನು ಸೆರೆ ಹಿಡಿಯುತ್ತದೆ. ಜೊತೆಗೆ ಇದರಕ್ಕು ವಿಡಿಯೋಗ್ರಫಿ ಕೂಡ ಮಾಡಬಹುದು.

Samsung Galaxy F23 5G: ಈ ಸ್ಮಾರ್ಟ್​ಫೋನ್ 6.6-ಇಂಚಿನ FHD+ ಇನ್ಫಿನಿಟಿ U-ಡಿಸ್ ಪ್ಲೇ ಹೊಂದಿದ್ದು 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಇದು ಸ್ನಾಪ್‌ಡ್ರಾಗನ್ 750G ಪ್ರೊಸೆಸರ್ ಮತ್ತು 5000mAh ಬ್ಯಾಟರಿಯಿಂದ ಚಾಲಿತವಾಗಿದೆ. ಇದರ 4GB ಮೆಮೊರಿ ರೂಪಾಂತರಕ್ಕೆ 15,999 ರೂ. ಆದರೆ, ಫ್ಲಿಪ್‌ಕಾರ್ಟ್‌ನಲ್ಲಿ 13999 ರೂಪಾಯಿಗೆ ಸೇಲ್ ಕಾಣುತ್ತಿದೆ. 50MP ಪ್ರಾಥಮಿಕ, 8MP ಅಲ್ಟ್ರಾವೈಡ್ ಮತ್ತು 2MP ಮ್ಯಾಕ್ರೋ ಲೆನ್ಸ್ ಅನ್ನು ನೀಡಲಾಗಿದೆ.

Realme 9i 5G: ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ f/1.8 ಅಪರ್ಚರ್ ಲೆನ್ಸ್, ಪೋರ್ಟ್ರೇಟ್ ಶೂಟರ್ ಹಾಗೂ ಮಾಕ್ರೋ ಕ್ಯಾಮೆರಾ ಹೊಂದಿದೆ. 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ನೀಡಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು ಇದಕ್ಕೆ ಪೂರಕವಾಗಿ 18W ಕ್ವಿಕ್ ಚಾರ್ಜ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಈ ಫೋನಿನ ಬೆಲೆ 14,999 ರೂ.

ಇದನ್ನೂ ಓದಿ

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada