ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಖರೀದಿಸಿರುವ ಅನುಮಾನವಿದೆಯೇ? ಹೀಗೆ ಪರೀಕ್ಷಿಸಿಕೊಳ್ಳಿ

ಟೆಲಿಕಾಂ ಅನಾಲಿಟಿಕ್ಸ್​ ಫಾರ್ ಫ್ರಾಡ್​ ಮ್ಯಾನೇಜ್​ಮೆಂಟ್​ ಆ್ಯಂಡ್ ಕನ್​ಸ್ಯೂಮರ್​ ಪ್ರೊಟೆಕ್ಷನ್ (TAFCOP) ಮೂಲಕ ಸಿಮ್ ಕಾರ್ಡ್​ ಪರಿಶೀಲನೆಗೆ ಭಾರತೀಯ ದೂರಸಂಪರ್ಕ ಇಲಾಖೆ ಅವಕಾಶ ಕಲ್ಪಿಸಿದೆ. ಈ ವೆಬ್​ಸೈಟ್ ಮೂಲಕ ನಮ್ಮ ದಾಖಲೆಗಳನ್ನು ಬಳಸಿ ಬೇರೆ ಯಾರಾದರೂ ಸಿಮ್ ಖರೀದಿಸಿದ್ದಾರೆಯೇ ಎಂಬುದನ್ನು ತಿಳಿಯುವ ವಿಧಾನ ಹಾಗೂ ರಿಪೋರ್ಟ್ ಮಾಡುವ ಹಂತಗಳನ್ನು ಇಲ್ಲಿ ನೀಡಲಾಗಿದೆ.

ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಖರೀದಿಸಿರುವ ಅನುಮಾನವಿದೆಯೇ? ಹೀಗೆ ಪರೀಕ್ಷಿಸಿಕೊಳ್ಳಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Jun 01, 2023 | 9:40 AM

ನಕಲಿ ದಾಖಲೆಗಳನ್ನು ನೀಡಿ ಮೊಬೈಲ್ ಸಿಮ್ ಕಾರ್ಡ್ (Mobile Sim Card) ಪಡೆದು ದುಷ್ಕೃತ್ಯಗಳನ್ನು ಎಸಗುವ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಇದರಿಂದಾಗಿ ಕೆಲವೊಮ್ಮೆ ಅಮಾಯಕರು ತೊಂದರೆಗೆ ಸಿಲುಕಿಕೊಳ್ಳುವ ಸನ್ನಿವೇಶವೂ ಸೃಷ್ಟಿಯಾಗುತ್ತದೆ. ಹೆಚ್ಚಾಗಿ ನಕಲಿ ಸಿಮ್ (Fake Sim) ಬಳಸಿಕೊಂಡು ಆರ್ಥಿಕ ಅಪರಾಧ ಕೃತ್ಯಗಳನ್ನು ಎಸಗಲಾಗುತ್ತದೆ. ನಕಲಿ ಸಿಮ್ ಬಳಸಿಕೊಂಡು ಬ್ಯಾಂಕ್​ ಒಟಿಪಿಗಳು ಬರುವಂತೆ ಮಾಡಿ ಬ್ಯಾಂಕ್ ಖಾತೆಗಳಿಂದ ಹಣವನ್ನು ದೋಚುಂಥ ಕೃತ್ಯಗಳು ಆಗಾಗ ಅಲ್ಲಲ್ಲಿ ವರದಿಯಾಗುತ್ತವೆ. ಹಾಗಾದರೆ, ನಮ್ಮ ಹೆಸರಿನಲ್ಲಿ ಅಥವಾ ನಮ್ಮ ದಾಖಲೆಗಳ ನಕಲಿ ಪ್ರತಿಗಳನ್ನು ಸಲ್ಲಿಸಿ ಬೇರೆ ಯಾರಾದರೂ ಸಿಮ್ ಕಾರ್ಡ್ ಪಡೆದಿದ್ದರೆ ಅದನ್ನು ಪತ್ತೆಹಚ್ಚುವುದು ಹೇಗೆ? ಇದಕ್ಕೆ ಭಾರತೀಯ ದೂರಸಂಪರ್ಕ ಇಲಾಖೆ ಅವಕಾಶ ಕಲ್ಪಿಸಿದೆ.

ಟೆಲಿಕಾಂ ಅನಾಲಿಟಿಕ್ಸ್​ ಫಾರ್ ಫ್ರಾಡ್​ ಮ್ಯಾನೇಜ್​ಮೆಂಟ್​ ಆ್ಯಂಡ್ ಕನ್​ಸ್ಯೂಮರ್​ ಪ್ರೊಟೆಕ್ಷನ್ (TAFCOP) ಮೂಲಕ ಸಿಮ್ ಕಾರ್ಡ್​ ಪರಿಶೀಲನೆಗೆ ಭಾರತೀಯ ದೂರಸಂಪರ್ಕ ಇಲಾಖೆ ಅವಕಾಶ ಕಲ್ಪಿಸಿದೆ. ಈ ವೆಬ್​ಸೈಟ್ ಮೂಲಕ ನಮ್ಮ ದಾಖಲೆಗಳನ್ನು ಬಳಸಿ ಬೇರೆ ಯಾರಾದರೂ ಸಿಮ್ ಖರೀದಿಸಿದ್ದಾರೆಯೇ ಎಂಬುದನ್ನು ತಿಳಿಯುವ ವಿಧಾನ ಹಾಗೂ ರಿಪೋರ್ಟ್ ಮಾಡುವ ಹಂತಗಳನ್ನು ಇಲ್ಲಿ ನೀಡಲಾಗಿದೆ.

  1. ಕೇಂದ್ರ ಸರ್ಕಾರದ ಅಧಿಕೃತ ವೆಬ್​ಸೈಟ್ ಆಗಿರುವ ಸಂಚಾರ್​ಸಾಥಿಗೆ ಭೇಟಿ ನೀಡಿ.
  2. ಸಂಚಾರ್​ಸಾಥಿ ವೆಬ್​ಸೈಟ್​​ನ ಹೋಮ್​ ಪೇಜ್​ನಲ್ಲಿ Know your mobile connections TAFCOP ಎಂಬುದನ್ನು ಕ್ಲಿಕ್ ಮಾಡಿ
  3. ಅಥವಾ ನೇರವಾಗಿ ಈ ಲಿಂಕ್ ಕ್ಲಿಕ್ ಮಾಡಿ
  4. ನಂತರ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚಾ ನಮೂದಿಸಿ
  5. ನಿಮ್ಮ ಮೊಬೈಲ್​ಗೆ ಒಟಿಪಿ ಬರುತ್ತದೆ, ಅದನ್ನು ನಮೂದಿಸಿದ ಕೂಡಲೇ ಲಾಗಿನ್ ಆಗುತ್ತದೆ
  6. ನಿಮ್ಮ ಹೆಸರಿನ ದಾಖಲೆಯಲ್ಲಿ ಎಷ್ಟು ಸಿಮ್ ಖರೀದಿಸಲಾಗಿದೆ ಎಂಬುದು ಸಂಖ್ಯೆ ಸಹಿತ ಅಲ್ಲಿ ಕಾಣಿಸುತ್ತದೆ
  7. ಸಂಖ್ಯೆಗಳ ಎದುರಿಗೆ Not My Number, Not Required, Required ಎಂಬ ಮೂರು ಆಯ್ಕೆಗಳು ಕಾಣಿಸುತ್ತವೆ
  8. ಒಂದು ವೇಳೆ ನೀವು ಖರೀದಿ ಮಾಡದೇ ಇರುವ ಸಂಖ್ಯೆ ಯಾವುದಾದರೂ ಅಲ್ಲಿ ಕಾಣಿಸಿದರೆ Not My Number ಅಥವಾ Not Required ಆಯ್ಕೆಯನ್ನು ಕ್ಲಿಕ್ ಮಾಡಿ ರಿಪೋರ್ಟ್ ಮಾಡಿ

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ