ಗೂಗಲ್ ಸರ್ಚ್ ಫಲಿತಾಂಶದಿಂದ ಡೀಪ್‌ಫೇಕ್ ವಿಡಿಯೊ ತೆಗೆದುಹಾಕುವುದು ಹೇಗೆ?
ಜನರೇಟಿವ್ AI ಪರಿಕರಗಳ ಹೆಚ್ಚು ಬಳಕೆಯಿಂದಾಗಿ ಈ ರೀತಿಯ ವಿಡಿಯೊಗಳ ಸಂಖ್ಯೆಯು 2019 ರಿಂದ 2023 ರವರೆಗೆ 550% ರಷ್ಟು ಏರಿಕೆಯಾಗಿದೆ. ಇದರ ನಿಯಂತ್ರಣಕ್ಕಾಗಿ Google ಹುಡುಕಾಟದಿಂದ ಒಪ್ಪಿಗೆಯಿಲ್ಲದ ಡೀಪ್‌ಫೇಕ್ ವಿಷಯವನ್ನು ತೆಗೆದುಹಾಕಲು ಹೊಸ ಟೂಲ್ಸ್ ಪರಿಚಯಿಸಿದೆ. ಅಂತಹ ಹಾನಿಕಾರಕ ವಿಷಯವನ್ನು ತೆಗೆದುಹಾಕಲು ವಿನಂತಿಸಲು ನೀವು ಟೂಲ್ಸ್ ಹೇಗೆ ಬಳಸಬಹುದು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಡೀಪ್‌ಫೇಕ್ (Deepfake) ವಿಡಿಯೊ ತುಂಬಾ ಗಂಭೀರ ಸಮಸ್ಯೆ. ಇತ್ತೀಚಿನ ವರ್ಷಗಳಲ್ಲಿ ನಕಲಿ ಚಿತ್ರಗಳು ಮತ್ತು ವಿಡಿಯೊಗಳ ಸಂಖ್ಯೆ ಗಣನೀಯ ರೀತಿಯಲ್ಲಿ ಏರಿಕೆ ಕಂಡಿದೆ. ವಾಸ್ತವವಾಗಿ, ಹೋಮ್ ಸೆಕ್ಯುರಿಟಿ ಹೀರೋಸ್ ಪ್ರಕಾರ, ಆನ್‌ಲೈನ್‌ನಲ್ಲಿ ಎಲ್ಲಾ ಡೀಪ್‌ಫೇಕ್ ವಿಡಿಯೊಗಳಲ್ಲಿ ಡೀಪ್‌ಫೇಕ್ ಪೋರ್ನ್ 98% ರಷ್ಟಿದೆ. ಜನರೇಟಿವ್ AI ಪರಿಕರಗಳ ಹೆಚ್ಚು ಬಳಕೆಯಿಂದಾಗಿ ಈ ರೀತಿಯ ವಿಡಿಯೊಗಳ ಸಂಖ್ಯೆಯು 2019 ರಿಂದ 2023 ರವರೆಗೆ 550% ರಷ್ಟು ಏರಿಕೆಯಾಗಿದೆ. ಇದರ ನಿಯಂತ್ರಣಕ್ಕಾಗಿ ಕಾನೂನುಗಳು ಇದ್ದರೂ ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ Google ಕೂಡಾ ಒಂದು ಹೆಜ್ಜೆ ಮುಂದಿಟ್ಟಿದೆ. Google ಹುಡುಕಾಟದಿಂದ ಒಪ್ಪಿಗೆಯಿಲ್ಲದ ಡೀಪ್‌ಫೇಕ್ ವಿಷಯವನ್ನು ತೆಗೆದುಹಾಕಲು ಸಹಾಯ ಮಾಡಲು ಇದು ಹೊಸ ಟೂಲ್ಸ್ ಪರಿಚಯಿಸಿದೆ. ಅಂತಹ ಹಾನಿಕಾರಕ ವಿಷಯವನ್ನು ತೆಗೆದುಹಾಕಲು ವಿನಂತಿಸಲು ನೀವು ಟೂಲ್ಸ್ ಹೇಗೆ ಬಳಸಬಹುದು ಎಂಬುದರ ಕುರಿತು ಇಲ್ಲಿದೆ ಮಾಹಿತಿ. ನಿಮ್ಮ ನಗ್ನ ಚಿತ್ರಗಳು ಅಥವಾ ವೀಡಿಯೊಗಳು Google ಹುಡುಕಾಟ ಅಥವಾ ವೆಬ್‌ಪುಟದಲ್ಲಿ ಗೋಚರಿಸುತ್ತಿದ್ದರೆ, ಈ ವೆಬ್ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಗೂಗಲ್ ಗೆ ವಿನಂತಿ ಮಾಡಬಹುದು. ಮಕ್ಕಳ ಲೈಂಗಿಕ ಕಿರುಕುಳ/ನಿಂದನೆ ವಿಷಯವಾಗಿದ್ದರೆ ಅದನ್ನು ತೆಗೆದು ಹಾಕಲು ವಿನಂತಿ ಚಿತ್ರಣಕ್ಕಾಗಿ ಪ್ರತ್ಯೇಕ ಫಾರ್ಮ್ ಇದೆ, ಆದ್ದರಿಂದ ನೀವು ಡೀಪ್‌ಫೇಕ್ ವಿಷಯಕ್ಕಾಗಿ ಸರಿಯಾದ ಫಾರ್ಮ್ ಬಳಸುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಸೂಕ್ತವಾದ ಆಯ್ಕೆಯನ್ನು ಆರಿಸಿ ಫಾರ್ಮ್‌ನಲ್ಲಿ, “ವಿಷಯವು ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತೆ ತಪ್ಪಾಗಿ ಚಿತ್ರಿಸುತ್ತದೆ ಎಂದು ಹೇಳುವ ಆಯ್ಕೆಯನ್ನು ಆರಿಸಿ. (ಇದನ್ನು ಕೆಲವೊಮ್ಮೆ ‘ಡೀಪ್ ಫೇಕ್’ ಅಥವಾ ‘ಫೇಕ್ ಪೋರ್ನೋಗ್ರಫಿ’ ಎಂದು ಕರೆಯಲಾಗುತ್ತದೆ).” ನಿಮ್ಮ ವಿವರಗಳನ್ನು ಒದಗಿಸಿ ನಿಮ್ಮ ಹೆಸರು, ವಾಸಿಸುವ ದೇಶ ಮತ್ತು...