Gmail Features: ನೀವು ತಿಳಿಯಬೇಕಾದ 5 ಜಿಮೇಲ್ ಫೀಚರ್ಗಳು: ಕೆಲಸ ಸುಲಭ ಆಗುತ್ತೆ ನೋಡಿ
ಜಿಮೇಲ್ನಲ್ಲಿ ಕೆಲ ಅತಿ ಉಪಯುಕ್ತ ಸೌಲಭ್ಯಗಳು ಬಹುತೇಕ ಬಳಕೆದಾರರಿಗೆ ತಿಳಿದಿಲ್ಲ. ನಿಮ್ಮ ಕೆಲಸದ ವೇಗ, ಗುಣಮಟ್ಟ ಹೆಚ್ಚಿಸುವ ಮತ್ತು ಅನುಭವ ಉತ್ತಮಪಡಿಸುವ ಐದು ಉಪಯುಕ್ತ ಆಯ್ಕೆಗಳ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ.
ಜಗತ್ತಿನ ಅತಿ ಜನಪ್ರಿಯ ಇಮೇಲ್ ಸೇವೆ ಎನಿಸಿದೆ ಜಿಮೇಲ್ (Gmail). ವಿಶ್ವದೆಲ್ಲೆಡೆ ಈ ಸೇವೆಯನ್ನು ಜನರು ಬಳಸುತ್ತಿದ್ದಾರೆ. ಜಿಮೇಲ್ನಲ್ಲಿ ಕೆಲ ಅತಿ ಉಪಯುಕ್ತ ಸೌಲಭ್ಯಗಳು ಬಹುತೇಕ ಬಳಕೆದಾರರಿಗೆ ತಿಳಿದಿಲ್ಲ. ನಿಮ್ಮ ಕೆಲಸದ ವೇಗ, ಗುಣಮಟ್ಟ ಹೆಚ್ಚಿಸುವ ಮತ್ತು ಅನುಭವ ಉತ್ತಮಪಡಿಸುವ ಐದು ಉಪಯುಕ್ತ ಆಯ್ಕೆಗಳ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ.
1) ಸ್ಮಾರ್ಟ್ ಕಂಪೋಸ್ ನೀವು ಟೈಪ್ ಮಾಡಬಹುದಾದ ಮುಂದಿನ ಪದ ಅಥವಾ ವಾಕ್ಯವನ್ನು ಸ್ಮಾರ್ಟ್ ಕಂಪೋಸ್ ಊಹಿಸುತ್ತದೆ. ಕಂಪ್ಯೂಟರ್ ಕೀಬೋರ್ಡ್ನಲ್ಲಿ ಟ್ಯಾಬ್ ಕೀ ಮೂಲಕ ಅಥವಾ ಮೊಬೈಲ್ನಲ್ಲಿ ಸ್ಪೇಸ್ ಕೀ ಬಳಸುವ ಮೂಲಕ ಸ್ಮಾರ್ಟ್ ಕಂಪೋಸ್ ನೀಡಿರುವ ಆಯ್ಕೆಗಳನ್ನು ಬಳಸಬಹುದು. ಜಿಮೇಲ್ ಸೆಟಿಂಗ್ನಲ್ಲಿ ಜನರಲ್ ಟ್ಯಾಬ್ ಮೂಲಕ ನೀವು ರೈಟಿಂಗ್ ಸಜೆಷನ್ಸ್ ಅಂದರೆ ಸ್ಮಾರ್ಟ್ ಕಂಪೋಸ್ ಆಯ್ಕೆಯನ್ನು ಎನೇಬಲ್ ಮಾಡಿಕೊಳ್ಳಬಹುದು.
2) ಇಮೇಲ್ ಶೆಡ್ಯೂಲ್ ಯಾರಿಗಾದರೂ ನಿರ್ದಿಷ್ಟ ಅವಧಿಯಲ್ಲಿ ಇಮೇಲ್ ತಲುಪುವಂತೆ ಆಗಬೇಕು ಎಂಬುದು ನಿಮ್ಮ ಉದ್ದೇಶವಾಗಿದ್ದರೆ ಅದಕ್ಕೂ ಇದೀಗ ಜಿಮೇಲ್ನಲ್ಲಿ ಅವಕಾಶವಿದೆ. ಜಿಮೇಲ್ನಲ್ಲಿ ಶೆಡ್ಯೂಲ್ ಆಯ್ಕೆಯನ್ನು ನೀವು ಇದಕ್ಕಾಗಿ ಬಳಸಬಹುದು. ನಿಮ್ಮ ಕಂಟ್ಯೂಟರ್ನಲ್ಲಿ ಜಿಮೇಲ್ ಸೈಟ್ ಓಪನ್ ಮಾಡಿ ನೀವು ಬರೆಯಬೇಕಾಗಿರುವ ಒಕ್ಕಣೆಯನ್ನು ನಮೂದಿಸಿ. ನಂತರ ಅಲ್ಲಿ ಚಿಕ್ಕದಾಗಿ ಕಾಣುವ ಕೆಳಮುಖ ಬಾಣದ ಗುರುತು ಒತ್ತಿದರೆ ಅಲ್ಲಿ ಶೆಡ್ಯೂಲ್ ಸೆಂಡ್ (Schedule Send) ಆಯ್ಕೆ ಸಿಗುತ್ತದೆ. ನಂತರ ನಿಮಗೆ ಇಮೇಲ್ ಎಂದು ಮತ್ತು ಎಷ್ಟೊತ್ತಿಗೆ ಕಳಿಸಬೇಕು ಎಂಬ ವಿವರ ಕಾಣಿಸುತ್ತದೆ. ನಿಮಗೆ ಬೇಕಾದ ಆಯ್ಕೆಯನ್ನು ಬಳಸಿಕೊಳ್ಳಿ. ಆಂಡ್ರಾಯ್ಡ್ ಅಥವಾ ಐಫೋನ್ನಲ್ಲಿ ಜಿಮೇಲ್ ಆ್ಯಪ್ ಮೂಲಕವೂ ಈ ಆಯ್ಕೆ ಬಳಸಲು ಅವಕಾಶವಿದೆ. ಆ್ಯಪ್ನ ಬಲತುದಿಯಲ್ಲಿರುವ ಮೂರು ಚುಕ್ಕೆಗಳನ್ನು ಕ್ಲಿಕ್ ಮಾಡಿದರೆ ಡ್ರಾಪ್ಡೌನ್ ಮೆನುವಿನಲ್ಲಿ ಶೆಡ್ಯೂಲ್ ಸೆಂಡ್ ಆಯ್ಕೆ ಕಾಣಿಸುತ್ತದೆ.
3) ಬೇಗ ಮೆಸೇಜ್ ಕಳಿಸಿ ಜಿಮೇಲ್ ಮತ್ತೊಂದು ನೂತನ ಸುಧಾರಿತ ಆಯ್ಕೆಯೊಂದನ್ನು ಪರಿಚಯಿಸಿದೆ. ಈ ಆಯ್ಕೆಯನ್ನು ಎನೇಬಲ್ ಮಾಡಿಕೊಂಡ ನಂತರ ಯಾವುದೇ ಮೆಸೇಜ್ ಅನ್ನು ನೀವು ಆರ್ಕೈವ್ ಅಥವಾ ಡಿಲೀಟ್ ಮಾಡಿದರೆ ನೇರವಾಗಿ ಮುಂದಿನ ಅಥವಾ ಹಿಂದಿನ ಇಮೇಲ್ ನೀವು ಆ್ಯಕ್ಸೆಸ್ ಮಾಡುತ್ತೀರಿ. ನೀವು ಯಾವುದೇ ಜಿಮೇಲ್ನ ಡೆಸ್ಕ್ಟಾಪ್ ಮತ್ತು ಆಂಡ್ರಾಯ್ಡ್ ವರ್ಷನ್ನಲ್ಲಿ ಮಾತ್ರ ಈ ಆಯ್ಕೆ ಲಭ್ಯವಿದೆ. ಐಒಸ್ ಆ್ಯಪ್ನಲ್ಲಿ ಈ ಆಯ್ಕೆ ಲಭ್ಯವಿಲ್ಲ.
4) ಒಂದೇ ಪೇಜ್ನಲ್ಲಿ ಹೆಚ್ಚು ಇಮೇಲ್ ನೋಡಿ ನೀವು ಗಮನ ಕೊಡಬೇಕಾದ ಇಮೇಲ್ಗಳ ಸಂಖ್ಯೆ ಹೆಚ್ಚಾಗಿದ್ದಾಗ ಪದೇಪದೆ ರೀಡ್ ಮೋರ್ ಆಯ್ಕೆಯನ್ನು ಕ್ಲಿಕ್ ಮಾಡುತ್ತಿರಬೇಕಾಗುತ್ತದೆ. ಇದು ನಿಮಗೆ ಕಾಣಸಿಗಬೇಕಾದರೆ ನೀವು ಜಿಮೇಲ್ ವೆಬ್ಸೈಟ್ನ ಜನರಲ್ ಟ್ಯಾಬ್ ಸೆಟಿಂಗ್ನಲ್ಲಿ ಮ್ಯಾಕ್ಸಿಮಮ್ ಪೇಜ್ ಸೈಜ್ ಆಯ್ಕೆ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ನೀವು ಒಂದು ಪೇಜ್ನಲ್ಲಿ 100 ಇಮೇಲ್ ನೋಡುತ್ತೀರಿ. ಡಿಫಾಲ್ಟ್ ಸೆಟಿಂಗ್ನಲ್ಲಿ ಒಂದು ಪೇಜ್ಗೆ 50 ಇಮೇಲ್ಗಳು ಕಾಣಿಸುತ್ತವೆ.
5) ದಿನಾಂಕದ ಆಧಾರದ ಮೇಲೆ ಇಮೇಲ್ ನೋಡಿ ಹಳೆಯ ಇಮೇಲ್ ಹುಡುಕುವ ಅನಿವಾರ್ಯತೆ ಸೃಷ್ಟಿಯಾದರೆ ನಿಮ್ಮ ಹುಡುಕಾಟಕ್ಕೆ ದಿನಾಂಕವನ್ನು ಸೇರಿಸಿಕೊಳ್ಳಿ. ಉದಾಹರಣೆಗೆ Before 5/5/2020 ಅಥವಾ after: 5/15/2018 ಎಂದು ನಮೂದಿಸಿ ಇಮೇಲ್ಗಳನ್ನು ಹುಡುಕಿ. ಇದು ಹುಡುಕಾಟವನ್ನು ಸುಲಭ ಮತ್ತು ವೇಗವಾಗಿಸುತ್ತದೆ.
(Important Gmail features you need to know which helps to work better)
ಇದನ್ನೂ ಓದಿ: How To: ಗೂಗಲ್ ಮೀಟ್ನಲ್ಲಿ ಸರಾಗ ಸಂವಹನಕ್ಕೆ ಇಲ್ಲಿದೆ 5 ಟಿಪ್ಸ್
ಇದನ್ನೂ ಓದಿ: How To: ಗೂಗಲ್ ಫೋಟೋಸ್ ಸ್ಟೋರೇಜ್ ಸಮಸ್ಯೆಯೇ? ಸ್ಪೇಸ್ ಪಡೆಯಲು ಹೀಗೆ ಮಾಡಿ
Published On - 8:28 pm, Tue, 3 August 21