Indian Password: ಭಾರತೀಯರು 2023 ರಲ್ಲಿ ಹೆಚ್ಚಾಗಿ ಬಳಸಿರುವ ಪಾಸ್​ವರ್ಡ್ ಯಾವುದು ಗೊತ್ತೇ?

NordPass: ನಾರ್ಡ್‌ಪಾಸ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, 2023 ರಲ್ಲಿ ಭಾರತೀಯರು ಹೆಚ್ಚಾಗಿ "123456" ಪಾಸ್​ವರ್ಡ್​ ಅನ್ನು ಉಪಯೋಗಿಸಿದ್ದಾರೆ. ಭಾರತೀಯರು ಮಾತ್ರವಲ್ಲದೆ ಪ್ರಪಂಚದಾದ್ಯಂತ ಈ ಪಾಸ್​ವರ್ಡ್​ ಅನ್ನು ಹೆಚ್ಚಿನವರು ಬಳಸಿದ್ದಾರೆ.

Indian Password: ಭಾರತೀಯರು 2023 ರಲ್ಲಿ ಹೆಚ್ಚಾಗಿ ಬಳಸಿರುವ ಪಾಸ್​ವರ್ಡ್ ಯಾವುದು ಗೊತ್ತೇ?
Password
Follow us
|

Updated on:Nov 18, 2023 | 2:48 PM

ಇಂದು ಸ್ಮಾರ್ಟ್‌ಫೋನ್‌ (Smartphone), ಮೇಲ್‌ ಐಡಿಯಿಂದ ಹಿಡಿದು ಬ್ಯಾಂಕಿಂಗ್‌ ಆ್ಯಪ್‌ಗಳು, ಸಾಮಾಜಿಕ ಮಾಧ್ಯಮ ಖಾತೆಗಳು ಎಲ್ಲವೂ ಪಾಸ್‌ವರ್ಡ್‌ಗಳಿಂದ ಕೂಡಿದೆ. ಆದರೆ ಪಾಸ್​ವರ್ಡ್​ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಜಾಗರೂಕರಾಗಿರಿ ಎನ್ನುತ್ತಾರೆ ಟೆಕ್ ತಜ್ಞರು. ಪಾಸ್‌ವರ್ಡ್ ದರ್ಬಲವಾಗಿದ್ದರೆ, ಖಾತೆಗಳು ಹ್ಯಾಕ್ ಆಗುವ ಸಾಧ್ಯತೆಗಳಿವೆ. ಅದರಲ್ಲೂ ಬ್ಯಾಂಕ್​ಗಳಿಗೆ ಪಾಸ್​ವರ್ಡ್​ ಆಯ್ಕೆ ಮಾಡುವಾಗ ತುಂಬಾನೆ ಎಚ್ಚರದಿಂದ ಇರಬೇಕು. ಇದೀಗ ಪಾಸ್‌ವರ್ಡ್ ನಿರ್ವಹಣಾ ಪರಿಹಾರ ಕಂಪನಿ ನಾರ್ಡ್‌ಪಾಸ್ ಈ ಕುರಿತು ವರದಿಯನ್ನು ಬಿಡುಗಡೆ ಮಾಡಿದೆ.

ನಾರ್ಡ್‌ಪಾಸ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, 2023 ರಲ್ಲಿ ಭಾರತೀಯರು ಹೆಚ್ಚಾಗಿ “123456” ಪಾಸ್​ವರ್ಡ್​ ಅನ್ನು ಉಪಯೋಗಿಸಿದ್ದಾರೆ. ಭಾರತೀಯರು ಮಾತ್ರವಲ್ಲದೆ ಪ್ರಪಂಚದಾದ್ಯಂತ ಈ ಪಾಸ್​ವರ್ಡ್​ ಅನ್ನು ಹೆಚ್ಚಿನವರು ಬಳಸಿದ್ದಾರೆ. ಅಲ್ಲದೆ ಜನರು ಪಾಸ್​ವರ್ಡ್​ ಅನ್ನು ಆಯ್ಕೆ ಮಾಡುವಾಗ ದೇಶದ ಹೆಸರನ್ನು ಸಹ ಬಳಸುತ್ತಿದ್ದಾರೆ. ಭಾರತೀಯರು ಹೆಚ್ಚಾಗಿ ‘India@123’ ಪಾಸ್‌ವರ್ಡ್ ಅನ್ನು ಆರಿಸಿಕೊಳ್ಳುತ್ತಿದ್ದಾರೆ.

ಒಂದು ಸೆಕೆಂಡಿನಲ್ಲಿ 150 ಸಿನಿಮಾ ರವಾನಿಸುವ ಸಾಮರ್ಥ್ಯ; ವಿಶ್ವದ ಅತೀ ವೇಗದ ಇಂಟರ್ನೆಟ್ ಪ್ರಾರಂಭಿಸಿದ ಚೀನಾ

ಇದನ್ನೂ ಓದಿ
Image
ಭಾರತದಲ್ಲಿ ದಾಖಲೆ ಬರೆದ ರೆಡ್ಮಿ 12 ಸರಣಿ: ಮಾರಾಟವಾಗಿದ್ದು ಎಷ್ಟು ಫೋನ್?
Image
OpenAI ಹಂಗಾಮಿ ಸಿಇಒ ಆಗಿ ಮೀರಾ ಮುರಾಟಿ ನೇಮಕ
Image
ನೀವು ಸ್ಮಾರ್ಟ್​ಫೋನ್ ಅನ್ನು ಡಾರ್ಕ್ ಮೋಡ್‌ನಲ್ಲಿಟ್ಟು ಉಪಯೋಗಿಸುತ್ತೀರಾ?
Image
ಬ್ಲಾಕ್ ಫ್ರೈಡೇ ಅಮೆಜಾನ್ ಪ್ರೈಮ್ ಹಗರಣ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದಿರಿ

ಇವುಗಳ ಜೊತೆಗೆ ಈ ವರ್ಷ ಭಾರತದಲ್ಲಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್‌ಗಳು ‘ಪಾಸ್‌ವರ್ಡ್’, ‘ಪಾಸ್@123’ ಮತ್ತು ‘ಪಾಸ್‌ವರ್ಡ್@123’ ಎಂದು ಕಂಡುಬಂದಿದೆ. ಬಳಕೆದಾರರು ಯಾವ ರೀತಿಯ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಸಂಶೋಧಕರು ಪಾಸ್‌ವರ್ಡ್‌ಗಳ 6.6 TB ಡೇಟಾಬೇಸ್ ಅನ್ನು ವಿಶ್ಲೇಷಿಸಿದ್ದಾರೆ.

ಇಂತಹ ದುರ್ಬಲ ಪಾಸ್​ವರ್ಡ್​ಗಳು ಬಳಕೆದಾರರ ಸೈಬರ್ ಭದ್ರತೆಗೆ ಅಪಾಯವಾಗುತ್ತಿದೆ ಎನ್ನುತ್ತಾರೆ ಸಂಶೋಧಕರು. ಸೈಬರ್ ಕ್ರಿಮಿನಲ್‌ಗಳು ಫಿಶಿಂಗ್ ಮೇಲ್‌ಗಳ ಮೂಲಕ ಮೋಸಗೊಳಿಸುತ್ತಿದೆ ಎಂದು ನಾರ್ಡ್‌ಪಾಸ್ ಕಂಪನಿಯ ತೋಮಸ್ ಸ್ಮಲಾಕಿಸ್ ಹೇಳಿದ್ದಾರೆ.

ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್‌ಗಳಲ್ಲಿ ಸುಮಾರು 31 ಪ್ರತಿಶತವು ‘123456789’, ‘000000’ ಮತ್ತು ಅನೇಕ ಸರಣಿ ಸಂಖ್ಯೆಗಳನ್ನು ಬಳಸುತ್ತಿವೆ ಎಂದು ಕಂಡುಬಂದಿದೆ. ವರದಿಯ ಪ್ರಕಾರ, DayAdi Global ಪಟ್ಟಿಯಲ್ಲಿರುವ ಶೇಕಡಾ 70 ರಷ್ಟು ಪಾಸ್‌ವರ್ಡ್‌ಗಳನ್ನು ಒಂದು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಭೇದಿಸಬಹುದಂತೆ.

‘ಪಾಸ್ಕಿ’ ಎಂಬ ತಂತ್ರಜ್ಞಾನದ ಮೂಲಕ ಪಾಸ್​ವರ್ಡ್​ಗಳಿಗೆ ಭದ್ರತೆ ನೀಡಬಹುದು ಎನ್ನಲಾಗಿದೆ. ಈ ತಂತ್ರಜ್ಞಾನವು ದುರ್ಬಲ ಪಾಸ್‌ವರ್ಡ್‌ಗಳನ್ನು ತೊಡೆದುಹಾಕಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಈ ಹೊಸ ತಂತ್ರಜ್ಞಾನ ಲಭ್ಯವಾಗಲು ಇನ್ನಷ್ಟು ಸಮಯ ಹಿಡಿಯಲಿದೆ ಎಂದು ತೋಮಸ್ ಸ್ಮಲಾಕಿಸ್ ಹೇಳಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Sat, 18 November 23

ತಾಜಾ ಸುದ್ದಿ
Muharram: ಅಗ್ನಿಕುಂಡದಲ್ಲಿ‌ ಕಂಬಳಿ ಹಾಸಿ ನಮಾಜ್ ಮಾಡಿದ ಹಿಂದೂ ಯುವಕ
Muharram: ಅಗ್ನಿಕುಂಡದಲ್ಲಿ‌ ಕಂಬಳಿ ಹಾಸಿ ನಮಾಜ್ ಮಾಡಿದ ಹಿಂದೂ ಯುವಕ
ವಿರೋಧ ಪಕ್ಷದ ನಾಯಕರ ದಾಳಿಯಿಂದ ಸಿದ್ದರಾಮಯ್ಯ ವಿಚಲಿತರಾಗಿರುವುದು ಸ್ಪಷ್ಟ!
ವಿರೋಧ ಪಕ್ಷದ ನಾಯಕರ ದಾಳಿಯಿಂದ ಸಿದ್ದರಾಮಯ್ಯ ವಿಚಲಿತರಾಗಿರುವುದು ಸ್ಪಷ್ಟ!
ಸವಾಲುಗಳಿಗೆ ಉತ್ತರಿಸಬೇಕಿರುವ ಸಿಎಂ ಸದನದಲ್ಲಿರದಿದ್ದರೆ ಹೇಗೆ?ಯತ್ನಾಳ್
ಸವಾಲುಗಳಿಗೆ ಉತ್ತರಿಸಬೇಕಿರುವ ಸಿಎಂ ಸದನದಲ್ಲಿರದಿದ್ದರೆ ಹೇಗೆ?ಯತ್ನಾಳ್
ಮೊಹರಂ ವೇಳೆ ವಿಶಿಷ್ಟ ಆಚರಣೆ, ಸೀರೆ ತೊಟ್ಟ ಪುರುಷರು ನುಡಿತಾರೆ ಭವಿಷ್ಯ
ಮೊಹರಂ ವೇಳೆ ವಿಶಿಷ್ಟ ಆಚರಣೆ, ಸೀರೆ ತೊಟ್ಟ ಪುರುಷರು ನುಡಿತಾರೆ ಭವಿಷ್ಯ
ಪೋಕೋ C61 ಸ್ಮಾರ್ಟ್​ಫೋನ್ ಜತೆಗೆ 50GB ಏರ್​ಟೆಲ್ ಡೇಟಾ ಫ್ರೀ ಸಿಗುತ್ತೆ!
ಪೋಕೋ C61 ಸ್ಮಾರ್ಟ್​ಫೋನ್ ಜತೆಗೆ 50GB ಏರ್​ಟೆಲ್ ಡೇಟಾ ಫ್ರೀ ಸಿಗುತ್ತೆ!
ರೈತನಿಗೆ ಅಪಮಾನ: 7 ದಿನ ಜಿಟಿ ಮಾಲ್​ ಬಂದ್​​, ಸರ್ಕಾರ ಆದೇಶ
ರೈತನಿಗೆ ಅಪಮಾನ: 7 ದಿನ ಜಿಟಿ ಮಾಲ್​ ಬಂದ್​​, ಸರ್ಕಾರ ಆದೇಶ
ಜೈಲು ಸೇರಿರೋ ದರ್ಶನ್ ಹೆಸರನ್ನು ಹಾಳು ಮಾಡಲು ನಡೆದಿದೆ ಹುನ್ನಾರ?
ಜೈಲು ಸೇರಿರೋ ದರ್ಶನ್ ಹೆಸರನ್ನು ಹಾಳು ಮಾಡಲು ನಡೆದಿದೆ ಹುನ್ನಾರ?
ಅವಮಾನಗಳು ಮುಂದುವರಿದರೆ ರೈತರು ಬೆಂಗಳೂರಿಗೆ ಬರೋದನ್ನು ನಿಲ್ಲಿಸ್ತಾರೆ: ಶಾಸಕ
ಅವಮಾನಗಳು ಮುಂದುವರಿದರೆ ರೈತರು ಬೆಂಗಳೂರಿಗೆ ಬರೋದನ್ನು ನಿಲ್ಲಿಸ್ತಾರೆ: ಶಾಸಕ
ಕರ್ನಾಟಕ ಅಧಿವೇಶನ: ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ
ಕರ್ನಾಟಕ ಅಧಿವೇಶನ: ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ, ಕಾಣದಂತಾದ ಹೆಬ್ಬಾರೆ ಸೇತುವೆ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ, ಕಾಣದಂತಾದ ಹೆಬ್ಬಾರೆ ಸೇತುವೆ