Tech Tips: ನಿಮಗೆ ಇನ್​ಸ್ಟಾಗ್ರಾಮ್​ನಲ್ಲಿ ಬ್ಲೂ ಟಿಕ್ ಬೇಕೇ?: ವೇರಿಫೈಡ್‌ ಬ್ಯಾಡ್ಜ್ ಪಡೆಯಲು ಇಲ್ಲಿದೆ ಹೊಸ ಟ್ರಿಕ್

|

Updated on: Feb 16, 2023 | 4:45 PM

Instagram Blue Tick: ಸಾಕಷ್ಟು ಪ್ರಸಿದ್ಧಿ ಪಡೆದಿರುವ ಇನ್​ಸ್ಟಾಗ್ರಾಮ್​ನಲ್ಲಿ ಒಬ್ಬರ ಅಕೌಂಟ್ ಬ್ಲೂ ಟಿಕ್ ಇದ್ದರೆ ಅದಕ್ಕೊಂದು ವಿಶೇಷ ಗೌರವ ಎಂದೇ ಹೇಳಬಹುದು. ಹಾಗಾದರೆ ಇನ್​​ಸ್ಟಾದಲ್ಲಿ ಬ್ಲೂ ಟಿಕ್‌ (Blue Tick) ಬ್ಯಾಡ್ಜ್ ಪಡೆಯುವುದು ಹೇಗೆ?.

Tech Tips: ನಿಮಗೆ ಇನ್​ಸ್ಟಾಗ್ರಾಮ್​ನಲ್ಲಿ ಬ್ಲೂ ಟಿಕ್ ಬೇಕೇ?: ವೇರಿಫೈಡ್‌ ಬ್ಯಾಡ್ಜ್ ಪಡೆಯಲು ಇಲ್ಲಿದೆ ಹೊಸ ಟ್ರಿಕ್
Instagram
Follow us on

ಸಾಮಾಜಿಕ ಜಾಲತಾಣಗಳು ಇಂದು ಸಾಕಷ್ಟು ಬದಲಾವಣೆ ಕಂಡಿದ್ದು ಈಗ ಮೊದಲಿನಂತಿಲ್ಲ. ಫೇಸ್​ಬುಕ್, ಟ್ವಿಟರ್ ಹಾಗೂ ವಾಟ್ಸ್​ಆ್ಯಪ್ (WhatsApp) ಅನೇಕ ರೀತಿಯಲ್ಲಿ ಬಳಕೆದಾರರಿಗೆ ಸಹಾಯ ಮಾಡುತ್ತಿದೆ. ಇವುಗಳ ಜೊತೆಗೆ ಮತ್ತೊಂದು ಪ್ರಸಿದ್ಧ ಜಾಲತಾಣ ಇನ್​ಸ್ಟಾಗ್ರಾಮ್ (Instagram) ಕೂಡ ಹಿಂದೆ ಬಿದ್ದಿಲ್ಲ. ತಿಂಗಳಿಗೆ ಬಿಲಿಯನ್​ಗೂ ಅಧಿಕ ಆ್ಯಕ್ಟಿವ್ ಬಳಕೆದಾರರನ್ನು ಹೊಂದಿರುವ ಇನ್​ಸ್ಟಾಗ್ರಾಮ್​ ಈಗ ಕೇವಲ ಫೋಟೋ- ವಿಡಿಯೋ ಹಂಚಿಕೊಳ್ಳಲು ಮಾತ್ರ ಉಳಿದಿಲ್ಲ. ಬದಲಾಗಿ ದೊಡ್ಡ ವ್ಯಾಪಾರದ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಹೀಗೆ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಇನ್​ಸ್ಟಾಗ್ರಾಮ್​ನಲ್ಲಿ ಒಬ್ಬರ ಅಕೌಂಟ್ ಬ್ಲೂ ಟಿಕ್ ಇದ್ದರೆ ಅದಕ್ಕೊಂದು ವಿಶೇಷ ಗೌರವ ಎಂದೇ ಹೇಳಬಹುದು. ಹಾಗಾದರೆ ಇನ್​​ಸ್ಟಾದಲ್ಲಿ ಬ್ಲೂ ಟಿಕ್‌ (Blue Tick) ಬ್ಯಾಡ್ಜ್ ಪಡೆಯುವುದು ಹೇಗೆ?.

ಇನ್​ಸ್ಟಾಗ್ರಾಮ್​ನಲ್ಲಿ ಆಟೋಮ್ಯಾಟಿಕ್ ಆಗಿ ಬ್ಲೂ ಟಿಕ್ ಮಾರ್ಕ್ ಆಯ್ಕೆಗಳಿಲ್ಲ. ಬದಲಿಗೆ ಬಳಕೆದಾರರು ಕೆಲವು ವೈಯಕ್ತಿಕ ದಾಖಲೆಗಳ ವಿವರಗಳನ್ನು ನಮೋದಿಸಿ ಇದನ್ನು ಪಡೆದುಕೊಳ್ಳಬಹುದು. ಇದನ್ನೆಲ್ಲಾ ಪರಿಶೀಲಿಸಿದ ನಂತರ ಇನ್​​ಸ್ಟಾಗ್ರಾಮ್ ಬ್ಲೂ ಟಿಕ್ ನೀಡುತ್ತದೆ. ಇದನ್ನು ಪರಿಶೀಲನೆ ಬ್ಯಾಡ್ಜ್ ಎಂದು ಕರೆಯಲಾಗುತ್ತದೆ. ಹಾಗಾದರೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಶೀಲನೆ ಬ್ಯಾಡ್ಜ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡೋಣ.

Tech Tips: ನಿಮಗೆ ಇನ್​ಸ್ಟಾಗ್ರಾಮ್​ನಲ್ಲಿ ಫಾಲೋವರ್ಸ್ ಕಡಿಮೆಯಿದ್ದರೆ ಈ ಟ್ರಿಕ್ ಫಾಲೋ ಮಾಡಿ ನೋಡಿ

ಇದನ್ನೂ ಓದಿ
Cyber Swachhta Kendra: ಸೈಬರ್ ಸ್ವಚ್ಛತಾ ಕೇಂದ್ರದಿಂದ ನಿಮಗೂ ಬಂದಿರಬಹುದು ಈ ಮೆಸೇಜ್: ನಿರ್ಲಕ್ಷ್ಯ ಮಾಡದಿರಿ
Fire-Boltt Quantum: ಬ್ಲೂಟೂತ್ ಕಾಲಿಂಗ್ ಇರುವ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್ ಬಿಡುಗಡೆ
Nokia X30 5G: ಭಾರತದಲ್ಲಿ ಫೆಬ್ರವರಿ 20ರಿಂದ ಸೇಲ್ ಆರಂಭ; ದರ ಎಷ್ಟು?
SmokeMon: ಸಿಗರೇಟ್ ಪ್ರಿಯರ ಪ್ರತಿಹಂತವನ್ನು ಟ್ರ್ಯಾಕ್ ಮಾಡುತ್ತದೆ ಸ್ಮಾರ್ಟ್ ನೆಕ್ಲೇಸ್‌, ಧೂಮಪಾನದಿಂದ ದೂರ ಉಳಿಯಲು ಇದು ಉತ್ತಮ ಸಾಧನ
  • ಮೊದಲಿಗೆ ಇನ್​ಸ್ಟಾಗ್ರಾಮ್ ಆ್ಯಪ್ ಅನ್ನು ತೆರೆದು ಸ್ಕ್ರೀನ್‌ ಕೆಳಗಿನ ಬಲಭಾಗದಲ್ಲಿರುವ ಪ್ರೊಫೈಲ್ ಚಿತ್ರದ ಐಕಾನ್ ಮೇಲೆ ಟ್ಯಾಪ್ ಮಾಡಿ.
  • ಈಗ ಮೇಲಿನ ಬಲ ಮೂಲೆಯಲ್ಲಿರುವ ಹ್ಯಾಂಬರ್ಗರ್ ಮೆನುವನ್ನು ಸೆಲೆಕ್ಟ್ ಮಾಡಿ.
  • ನಂತರ ಅಲ್ಲಿ ಕಾಣಿಸುವ ಸೆಟ್ಟಿಂಗ್‌ಗಳನ್ನು ಕ್ಲಿಕ್ ಮಾಡಬೇಕಾಗುತ್ತದೆ.
  • ನೀವು ಈಗ ಮತ್ತೊಮ್ಮೆ ಖಾತೆಯನ್ನು ಟ್ಯಾಪ್ ಮಾಡಬೇಕಾಗುತ್ತದೆ ಮತ್ತು ನಂತರ ವಿನಂತಿ ಪರಿಶೀಲನೆಯನ್ನು ಟ್ಯಾಪ್ ಮಾಡಿ.
  • ಇಲ್ಲಿ ನಿಮ್ಮ ಪೂರ್ಣ ಹೆಸರು ಮತ್ತು ಫೋಟೋ ID ನೀಡಿ. ಉದಾಹರಣೆಗೆ, ನೀವು ಸರ್ಕಾರ ನೀಡಿದ ಫೋಟೋ ಐಡಿ ಅಥವಾ ಅಧಿಕೃತ ವ್ಯಾಪಾರ ದಾಖಲೆಗಳನ್ನು ಒದಗಿಸಬಹುದು.
  • ಮುಂದಿನ ಹಂತಗಳನ್ನು ಪೂರ್ಣಗೊಳಿಸಲು ಪರದೆಯ ಮೇಲ್ಭಾಗದಲ್ಲಿರುವ ನಿರ್ದೇಶನಗಳನ್ನು ಅನುಸರಿಸಿ.

ಇನ್​​ಸ್ಟಾದಲ್ಲಿ ಬ್ಲೂಟಿಕ್‌ಗಾಗಿ ನೀವು ಈ ರೀತಿ ವಿನಂತಿಸಬಹುದು. ಹಾಗಂತ ನೀವು ಕೇಳುವಷ್ಟು ಬಾರಿ ನೀಲಿ ಟಿಕ್ ಬರುತ್ತದೆ ಎಂದು ಹೇಳುವುದು ಕಷ್ಟ. ಸಂಪೂರ್ಣ ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಂಡರೂ ಸಹ, ನಿಮ್ಮ ವಿನಂತಿಯ ರದ್ದತಿಗೆ ಇತರ ಕಾರಣಗಳೂ ಇರಬಹುದು. ಇದರ ಜೊತೆಗೆ ಬಳಕೆದಾರರು ಒಂದು ಸಮಯದಲ್ಲಿ ಒಂದು ವಿನಂತಿಯನ್ನು ಮಾತ್ರ ಸಲ್ಲಿಸಬಹುದು.

Tech Tips: ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ, ರೀಲ್ಸ್ ಎಷ್ಟು ಗಂಟೆಗೆ ಹಾಕಿದರೆ ಹೆಚ್ಚು ಲೈಕ್ಸ್ ಬರುತ್ತೆ?: ಇಲ್ಲಿದೆ ನೋಡಿ

ನಿಮ್ಮ ಖಾತೆಯನ್ನು ಪರಿಶೀಲಿಸಿದರೆ, ಅಲೌಂಟ್​ನಲ್ಲಿ ಬಳಕೆದಾರ ಹೆಸರನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ. ನೀವು ಅದನ್ನು ಮಾಡಿದರೂ, ಪರಿಶೀಲನೆ ಬ್ಯಾಡ್ಜ್ ಅನ್ನು ಬೇರೆ ಖಾತೆಗೆ ವರ್ಗಾಯಿಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಎಲ್ಲಾದರು ತಪ್ಪು ಮಾಹಿತಿಯೊಂದಿಗೆ ವೆರಿಫಿಕೇಶನ್ ಬ್ಯಾಡ್ಜ್ ಪಡೆದರೆ, ಇನ್‌ಸ್ಟಾಗ್ರಾಮ್ ಅದರ ಬಗ್ಗೆ ತಿಳಿದ ತಕ್ಷಣ ಬ್ಲೂಟಿಕ್ ಅನ್ನು ತೆಗೆದುಹಾಕಿ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತದೆ.

ಇನ್ನೊಂದು ಪ್ರಮುಖ ಅಂಶವೆಂದರೆ, ಇನ್​ಸ್ಟಾಗ್ರಾಮ್ ಬ್ಲೂ ಟಿಕ್ ನೀಡುವ ಮೊದಲು ನಿಮ್ಮ ಖಾತೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಿದೆ. ನಿಮ್ಮ ಖಾತೆಯ ಹಿಂದಿನ ಹಿಸ್ಟರಿ, ಎಷ್ಟು ಫಾಲೋವರ್ಸ್ ಇದ್ದಾರೆ ಜೊತೆಗೆ ಅತಿ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ ಖಾತೆ ಮತ್ತು ಸದಾ ಸಕ್ರೀಯವಾಗಿರುವ ಖಾತೆಗೆ ಮಾತ್ರ ಈ ಬ್ಲೂ ಟಿಕ್​ ದೊರೆಯುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ