Instagram Down: ಇನ್ಸ್ಟಾಗ್ರಾಂ ಸರ್ವರ್ ಡೌನ್; ನಿಮಗೂ ಮೆಸೇಜ್, ವಿಡಿಯೋ ಅಪ್ಲೋಡ್ ಆಗುತ್ತಿಲ್ಲವೇ?
ಇಂದು ಸಂಜೆಯಿಂದ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಲು, ಮೆಸೇಜ್ ಕಳುಹಿಸಲು ಸಾಧ್ಯವಾಗದೆ ಲಕ್ಷಾಂತರ ಬಳಕೆದಾರರು ಪರದಾಡುತ್ತಿದ್ದಾರೆ. ಇನ್ಸ್ಟಾಗ್ರಾಂ ಸ್ಥಗಿತಗೊಂಡ ನಂತರ, ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ರಿಪೋರ್ಟ್ಗಳನ್ನು ಸಲ್ಲಿಸಲಾಗಿದೆ. ಎಕ್ಸ್ನಲ್ಲಿ ಇನ್ಸ್ಟಾಗ್ರಾಂ ಡೌನ್ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ನಲ್ಲಿದೆ.
ಬಹಳ ಪ್ರಸಿದ್ಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿರುವ ಇನ್ಸ್ಟಾಗ್ರಾಂ ಸರ್ವರ್ ಡೌನ್ ಆಗಿದೆ. ಇದರಿಂದ ಇನ್ಸ್ಟಾಗ್ರಾಂ ಬಳಕೆದಾರರು ಮೆಸೇಜ್ ಕಳುಹಿಸಲು, ವಿಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡಲಾಗದೆ ಪರದಾಡುತ್ತಿದ್ದಾರೆ. ಇನ್ನು ಕೆಲವರ ಇನ್ಸ್ಟಾಗ್ರಾಂ ಖಾತೆ ಇದ್ದಕ್ಕಿದ್ದಂತೆ ಲಾಗೌಟ್ ಆಗಿದೆ. ಇದಕ್ಕೆ ತಾಂತ್ರಿಕ ಸಮಸ್ಯೆಯೇ ಕಾರಣ ಎನ್ನಲಾಗಿದ್ದು, ಜಗತ್ತಿನಾದ್ಯಂತ ಹಲವು ಇನ್ಸ್ಟಾಗ್ರಾಂ ಬಳಕೆದಾರರು ಇಂದು ಸಂಜೆಯಿಂದ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ, ನೀವು ಆತಂಕಪಡಬೇಕಾದ ಅಗತ್ಯವಿಲ್ಲ.
ಇಂದು ಸಂಜೆ ಸುಮಾರು 5.14ಕ್ಕೆ ಇನ್ಸ್ಟಾಗ್ರಾಂ ಸರ್ವರ್ ಡೌನ್ ಆಯಿತು. ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ರಿಪೋರ್ಟ್ ಸಲ್ಲಿಸಲಾಗಿದೆ. ಇದು ಸಂಜೆಯ ವೇಳೆಗೆ ಇನ್ಸ್ಟಾಗ್ರಾಂ ಸ್ಥಗಿತಗೊಂಡ ನಂತರ ಫೋಟೋ, ವಿಡಿಯೋ, ಸ್ಟೋರಿ ಅಪ್ಲೋಡ್ ಮಾಡಲಾಗದೆ ನೆಟ್ಟಿಗರು ಪರದಾಡಿದ್ದರು. ಎಲ್ಲರಿಗೂ ಇದೇ ರೀತಿಯ ಸಮಸ್ಯೆಯಾಗಿದೆಯೇ ಎಂದು ತಿಳಿದುಕೊಳ್ಳಲು ನೆಟ್ಟಿಗರು ಎಕ್ಸ್ ಮೂಲಕ ಪ್ರತಿಕ್ರಿಯೆ ಕೇಳಿದ್ದರು.
Everyone coming to Twitter to check if Instagram is down.#instagram #instagramdown pic.twitter.com/eTkKqi0RtB
— Lankesh👹 (@LankaaPatiRavan) October 29, 2024
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ದುರ್ಗಾ ಪೂಜೆಯ ಪೋಸ್ಟ್; ಹೆಂಡತಿ, ಅತ್ತೆಯನ್ನು ಕಡಿದು ಕೊಂದ ಪತಿ
ಹೀಗಾಗಿ, ಎಕ್ಸ್ನಲ್ಲಿ ಇನ್ಸ್ಟಾಗ್ರಾಂ ಡೌನ್ ಎಂಬ ಪದ ಟ್ರೆಂಡಿಂಗ್ನಲ್ಲಿದೆ. ಸದ್ಯಕ್ಕೆ ಇನ್ಸ್ಟಾಗ್ರಾಂ ತಾಂತ್ರಿಕ ಸಮಸ್ಯೆ ಬಗೆಹರಿದಿದೆ ಎನ್ನಲಾಗುತ್ತಿದೆ. ಆದರೆ, ಇನ್‌ಸ್ಟಾಗ್ರಾಮ್ ಅಥವಾ ಅದರ ಮೂಲ ಕಂಪನಿಯಾದ ಮೆಟಾದಿಂದ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ತಾಂತ್ರಿಕ ತೊಂದರೆಗಳಿಗೆ ಕಾರಣ ತಿಳಿದಿಲ್ಲ.
Me waiting for the message to get delivered….#instagram #instagramdown pic.twitter.com/BzLKaeTbBN
— Nameet Garde (@namhitman) October 29, 2024
ಇನ್‌ಸ್ಟಾಗ್ರಾಮ್ ಸ್ಟೇಟಸ್ ಪೇಜ್ ಮತ್ತು ಡೌನ್‌ಡೆಕ್ಟರ್ ಅನ್ನು ಔಟ್‌ಟೇಜ್‌ನ ಅಪ್‌ಡೇಟ್‌ಗಳಿಗಾಗಿ ಪರಿಶೀಲಿಸಲು ಬಳಕೆದಾರರಿಗೆ ಸೂಚಿಸಲಾಗಿದೆ. ಈ ಮಧ್ಯೆ, ಅನೇಕರು ಸಂಪರ್ಕದಲ್ಲಿರಲು ಪರ್ಯಾಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ತಿರುಗುತ್ತಿದ್ದಾರೆ.
ಇನ್ನಷ್ಟು ಟೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ