ಚೀನಾದಲ್ಲಿ Insta, FB, ಯೂಟ್ಯೂಬ್ ನಿಷೇಧ: ಇದರ ಬದಲು ಯಾವ ಆ್ಯಪ್ ಯೂಸ್ ಮಾಡ್ತಾರೆ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 21, 2024 | 10:39 AM

ಜುಲೈ 2009 ರಲ್ಲಿ, ಪಶ್ಚಿಮ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ನಡೆದ ದಬ್ಬಾಳಿಕೆಯ ನಂತರ ಚೀನಾ ಸರ್ಕಾರವು ಫೇಸ್‌ಬುಕ್ ಮತ್ತು ಟ್ವಿಟರ್ (ಈಗ ಎಕ್ಸ್) ಮತ್ತು ಗೂಗಲ್‌ನ ಸೇವೆಗಳನ್ನು ನಿರ್ಬಂಧಿಸಿತು. ಹಾಗಾದರೆ, ಸದ್ಯ ಚೀನಾದಲ್ಲಿ ಯೂಟ್ಯೂಬ್ ಬದಲಿಗೆ ಯಾವ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲಾಗುತ್ತದೆ?. ಅಲ್ಲಿನ ಜನರು ಯಾವ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಾರೆ?. ಈ ಕುರಿತ ಸಂಪೂರ್ಣ ವಿವರಗಳು ಇಲ್ಲಿದೆ ಓದಿ.

ಚೀನಾದಲ್ಲಿ Insta, FB, ಯೂಟ್ಯೂಬ್ ನಿಷೇಧ: ಇದರ ಬದಲು ಯಾವ ಆ್ಯಪ್ ಯೂಸ್ ಮಾಡ್ತಾರೆ ನೋಡಿ
ಸಾಂದರ್ಭಿಕ ಚಿತ್ರ
Follow us on

ಚೈನೀಸ್ ಜನರು ಇನ್​ಸ್ಟಾಗ್ರಾಮ್, ಫೇಸ್​ಬುಕ್ ಅಥವಾ ಯೂಟ್ಯೂಬ್ ಅನ್ನು ಬಳಸುವುದಿಲ್ಲ. ಚೀನಾ ಈ ಅಪ್ಲಿಕೇಶನ್‌ಗಳನ್ನು ಬಹಳ ಹಿಂದೆಯೇ ನಿಷೇಧಿಸಿದೆ. ಹಾಗಾದರೆ ಚೀನೀ ಜನರು ಯಾವ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಗೊತ್ತೇ?. ಇನ್​ಸ್ಟಾ, ಎಫ್​ಬಿ, ವಾಟ್ಸ್​ಆ್ಯಪ್, ಯೂಟ್ಯೂಬ್ ಈ ಎಲ್ಲಾ ಅಪ್ಲಿಕೇಶನ್‌ಗಳು ಅಮೆರಿಕದಿಂದ ಬಂದವು. ಇದು ಪ್ರಪಂಚದಾದ್ಯಂತ ಬಳಸಲ್ಪಡುತ್ತದೆ. ಆದರೆ ಚೀನಾ ಈ ಪ್ಲಾಟ್‌ಫಾರ್ಮ್‌ಗಳ ಬದಲಿಗೆ ತನ್ನದೇ ಆದ ಅಪ್ಲಿಕೇಶನ್‌ಗಳನ್ನು (ಆವೃತ್ತಿಗಳನ್ನು) ಹೊಂದಿದೆ.

ಚೀನಾದಲ್ಲಿ ಯೂಟ್ಯೂಬ್ ಬದಲಿಗೆ ಯಾವ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲಾಗುತ್ತದೆ?. ಅಲ್ಲಿನ ಜನರು ಯಾವ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಾರೆ?. ಈ ಕುರಿತ ಸಂಪೂರ್ಣ ವಿವರಗಳು ಇಲ್ಲಿದೆ ಓದಿ. ಚೀನಾದಲ್ಲಿ, ಯೂಟ್ಯೂಬ್​​ನ ಪರ್ಯಾಯ ಆವೃತ್ತಿ ಅಥವಾ ಯೂಟ್ಯೂಬ್ ನ ವಿಭಿನ್ನ ಆವೃತ್ತಿಯನ್ನು ಬಳಸಲಾಗುತ್ತದೆ. ಇದರಲ್ಲಿ ವೀಚಾಟ್ (WeChat), Xiaohongshu (Little Red Book), Douyin, Weibo, QQ, Youku ಮತ್ತು BiliBili ಅನ್ನು ಬಳಸಲಾಗುತ್ತದೆ.

ಇವು ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆಗಳಾಗಿವೆ:

ನಾವು ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಕುರಿತು ಮಾತನಾಡಿದರೆ, ಯೂಟ್ಯೂಬ್ ಬದಲಿಗೆ Youku Tudou ಅನ್ನು ಬಳಸಲಾಗುತ್ತದೆ. ಡೌಯಿನ್ ಟಿಕ್‌ಟಾಕ್‌ನ ಆವೃತ್ತಿಯಾಗಿದೆ. ಚೀನಾದಲ್ಲಿ, ಗೂಗಲ್ ಬದಲಿಗೆ Baidu Tieba ಸರ್ಚ್ ಎಂಜಿನ್ ಫೋರಮ್ ಅನ್ನು ಬಳಸಲಾಗುತ್ತದೆ. Quora ಬದಲಿಗೆ Zhihu ಇದೆ. ಇನ್​ಸ್ಟಾಗ್ರಾಮ್ ಬದಲಿಗೆ Xiaohongshu ಅನ್ನು ಬಳಸಲಾಗುತ್ತದೆ.

ಚೀನಾದಲ್ಲಿ ಟ್ವಿಟ್ಟರ್ ಅಥವಾ ಎಕ್ಸ್(X) ಇಲ್ಲ:

ವರದಿಗಳ ಪ್ರಕಾರ, ವೈಬೋ ಚೀನಾದ ಅತ್ಯಂತ ಜನಪ್ರಿಯ ಸೈಟ್‌ಗಳಲ್ಲಿ ಒಂದಾಗಿದೆ. ಇದನ್ನು ಚೀನಾದ ಟ್ವಿಟರ್ (X) ಎಂದು ಪರಿಗಣಿಸಲಾಗಿದೆ. ಇದನ್ನು ಸಾಮಾನ್ಯವಾಗಿ WeChat ನಂತೆ ಬಳಸಲಾಗುತ್ತದೆ.

ಭಾರತದಲ್ಲಿ ವಾಟ್ಸ್​ಆ್ಯಪ್​, ಚೀನಾದಲ್ಲಿ ಏನು?:

ಭಾರತದಲ್ಲಿ ವಾಟ್ಸ್​ಆ್ಯಪ್​ ಸಾಕಷ್ಟು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ಆಗಿದೆ. ತ್ವರಿತ ಸಂದೇಶ ಕಳುಹಿಸುವ ಈ ಅಪ್ಲಿಕೇಶನ್‌ ಭಾರತೀಯರ ದೈನಂದಿನ ಜೀವನದ ಒಂದು ಭಾಗವಾಗಿದೆ. ಇದನ್ನು ಶಾಲೆಗಳು, ಕಾಲೇಜುಗಳು ಮತ್ತು ಕಚೇರಿಗಳಲ್ಲಿ ಬಳಸಲಾಗುತ್ತದೆ. ಆದರೆ ಚೀನಾದಲ್ಲಿ ವಾಟ್ಸ್​ಆ್ಯಪ್​ ಬಳಸುತ್ತಿಲ್ಲ. WeChat, QQ, Vcom, DingTalk ಮತ್ತು Feishu ನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗಳನ್ನು ಅಲ್ಲಿ ಬಳಸಲಾಗುತ್ತದೆ. ಈ ಅಪ್ಲಿಕೇಶನ್‌ಗಳು ಚೀನಾದಲ್ಲಿ ವ್ಯಾಪಾರ ಅಥವಾ ದೈನಂದಿನ ಸಂದೇಶ ಕಳುಹಿಸುವಿಕೆಯ ಅತ್ಯಗತ್ಯ ಭಾಗವಾಗಿದೆ.

ಇದನ್ನೂ ಓದಿ: ಇನ್ನುಂದೆ ಜಿಯೋ, ಏರ್ಟೆಲ್, ವಿ, BSNL ಸಂಖ್ಯೆಗಳಿಗೆ ಕರೆ ಮಾಡಿದಾಗ ಕಾಲರ್ ಟ್ಯೂನ್ ಕೇಳುತ್ತದೆ: DoT ಹೊಸ ಆದೇಶ

ಈ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಚೀನಾ ಏಕೆ ನಿಷೇಧಿಸಿತು?:

ಜುಲೈ 2009 ರಲ್ಲಿ, ಪಶ್ಚಿಮ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ನಡೆದ ದಬ್ಬಾಳಿಕೆಯ ನಂತರ ಚೀನಾ ಸರ್ಕಾರವು ಫೇಸ್‌ಬುಕ್ ಮತ್ತು ಟ್ವಿಟರ್ (ಈಗ ಎಕ್ಸ್) ಮತ್ತು ಗೂಗಲ್‌ನ ಸೇವೆಗಳನ್ನು ನಿರ್ಬಂಧಿಸಿತು. ಕ್ಸಿನ್‌ಜಿಯಾಂಗ್ ಚೀನಾದ ವಿಶೇಷ ಸ್ವಾಯತ್ತ ಪ್ರದೇಶವಾಗಿದೆ. ಉಯಿಘರ್ ಮುಸ್ಲಿಮರು ಇಲ್ಲಿ ಬಹುಸಂಖ್ಯಾತರು. ಚೀನಾದ ಜನರ ನಡುವಿನ ಸಂವಹನವನ್ನು ಮಿತಿಗೊಳಿಸುವುದು ಈ ಕ್ರಿಯೆಯ ಉದ್ದೇಶವಾಗಿತ್ತು. ಇದರಿಂದ ಜನರು ಇಂಟರ್ನೆಟ್ ಮೂಲಕ ಪರಸ್ಪರ ಸಂಪರ್ಕಿಸಲು ಸಾಧ್ಯವಿಲ್ಲ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ