Joker malware in Google play store: ಜೋಕರ್ ಮಾಲ್ವೇರ್ ಇರುವ ಈ 8 ಆ್ಯಪ್ ಬಗ್ಗೆ ಎಚ್ಚರಿಕೆಯಿಂದಿರಿ
ಜೋಕರ್ ಮಾಲ್ವೇರ್ನಿಂದ ಗೂಗಲ್ ಪ್ಲೇ ಸ್ಟೋರ್ನ ಈ ಎಂಟು ಆ್ಯಪ್ಗಳ ಮೇಲೆ ಪರಿಣಾಮ ಆಗಿದೆ. ಆದ್ದರಿಂದ ಒಂದು ವೇಳೆ ನೀವು ಆಂಡ್ರಾಯಿಡ್ ಬಳಕೆದಾರರಾಗಿದ್ದಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸಿ.
ಗೂಗಲ್ ಪ್ಲೇ ಸ್ಟೋರ್ ಕೆಲವು ಅಪ್ಲಿಕೇಷನ್ಗಳು ಜೋಕರ್ ಮಾಲ್ವೇರ್ನೊಂದಿಗೆ ಕಂಡುಬಂದಿವೆ. ಅಪ್ಲಿಕೇಷನ್ಗಳ ಮೂಲಕವಾಗಿ ಈ ಮಾಲ್ವೇರ್ಗಳು ಬಳಕೆದಾರರ ಸಾಧನದಲ್ಲಿ ನುಸುಳುತ್ತವೆ. ಆ ನಂತರ ರಹಸ್ಯವಾಗಿ ಡೇಟಾ ಸಂಗ್ರಹಿಸಿ ಮತ್ತು ಅದಾದ ಮೇಲೆ ಆ ಬಳಕೆದಾರರ ಪ್ರೀಮಿಯಂ ಸಬ್ಸ್ಕ್ರಿಪ್ಷನ್ಸ್ಗೆ ಅವರ ತಿಳಿವಳಿಕೆ ಅಥವಾ ಒಪ್ಪಿಗೆ ಇಲ್ಲದೆ ಸಬ್ಸ್ಕ್ರೈಬ್ ಮಾಡಲಾಗುತ್ತದೆ. ಜೋಕರ್ ಟ್ರೋಜನ್ ಮಾಲ್ವೇರ್ ಗೂಗಲ್ ಪ್ಲೇ ಸ್ಟೋರ್ ಅಪ್ಲಿಕೇಷನ್ಗಳಲ್ಲಿ ಕಳೆದ ಮೂರು ವರ್ಷಗಳಿಂದ ಕಂಡುಬಂದಿದೆ.ಈಚೆಗೆ ಕ್ವಿಕ್ ಹೀಲ್ ಸೆಕ್ಯೂರಿಟಿ ಲ್ಯಾಬ್ಸ್ನಿಂದ 8 ಜೋಕರ್ ಮಾಲ್ವೇರ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಕಂಡುಬಂದಿದೆ. ಈ ಎಂಟು ಅಪ್ಲಿಕೇಷನ್ಗಳು ಗೂಗಲ್ಗೆ ವರದಿ ಮಾಡಿವೆ ಮತ್ತು ಟೆಕ್ ದೈತ್ಯ ಕಂಪೆನಿಯು ತನ್ನ ಸ್ಟೋರ್ನಿಂದ ಎಲ್ಲ ಅಪ್ಲಿಕೇಷನ್ ಅನ್ನು ತೆಗೆದಿದೆ.
ಆ ಎಂಟು ಅಪ್ಲಿಕೇಷನ್ಗಳು ಯಾವುವು ಎಂಬುದರ ವಿವರ ಇಲ್ಲಿದೆ. ಒಂದು ವೇಳೆ ಈ ಎಂಟು ಆ್ಯಪ್ ನಿಮ್ಮ ಆಂಡ್ರಾಯಿಡ್ ಸಾಧನದಲ್ಲಿ ಇದ್ದರೆ ತಕ್ಷಣವೇ ತೆಗೆದುಹಾಕಬೇಕು.1.Auxiliary Message, 2. Fast Magic SMS, 3. Free CamScanner, 4. Super Message, 5. Element Scanner, 6. Go Messages, 7. Travel Wallpapers, 8. Super SMS ಇವೇ ಆ ಎಂಟು ಆ್ಯಪ್ಗಳು. ಜೋಕರ್ ಟ್ರೋಜನ್ ಸಂತ್ರಸ್ತರ ಸಾಧನದ ಎಸ್ಸೆಮ್ಮೆಸ್ ಸಂದೇಶಗಳು, ಕಾಂಟ್ಯಾಕ್ಟ್ ಲಿಸ್ಟ್, ಸಾಧನದ ಮಾಹಿತಿಯನ್ನು ಕಳುವು ಮಾಡುತ್ತವೆ. ಆ ನಂತರ ಟ್ರೋಜನ್ನಿಂದ ಜಾಹೀರಾತು ವೆಬ್ಸೈಟ್ಗಳ ಜತೆಗೆ ಇಂಟರ್ ಆಕ್ಟ್ ಮಾಡುತ್ತದೆ ಮತ್ತು ಸಂತ್ರಸ್ತರ ತಿಳಿವಳಿಕೆಗೆ ಬಾರದಂತೆ ಪ್ರೀಮಿಯಂ ಸರ್ವೀಸ್ಗಳಿಗೆ ಸಬ್ಸ್ಕ್ರೈಬ್ ಮಾಡಲಾಗುತ್ತದೆ.
ಕ್ವಿಕ್ ಹೀಲ್ ವರದಿ ಪ್ರಕಾರ, ಒಂದು ಸಲ ಫೋನ್ನಲ್ಲಿ ಇದನ್ನು ಆರಂಭಿಸಿದ ಮೇಲೆ ಈ ಅಪ್ಲಿಕೇಷನ್ಗಳು ನೋಟಿಫಿಕೇಷನ್ ಆಕ್ಸೆಸ್ಗೆ ಅನುಮತಿ ಕೇಳುತ್ತವೆ. ನೋಟಿಫಿಕೇಷನ್ ಡೇಟಾ ಪಡೆಯಲು ಇದನ್ನು ಬಳಸಲಾಗುತ್ತದೆ. ಆ ನಂತರ ನೋಟಿಫಿಕೇಷನ್ ಡೇಟಾ ಮೂಲಕ ಎಸ್ಸೆಮ್ಮೆಸ್ ಡೇಟಾ ಪಡೆಯುತ್ತದೆ. ಕಾಂಟ್ಯಾಕ್ಟ್ಸ್ ಸಂಪರ್ಕ ಕೇಳುತ್ತದೆ. ಯಾವಾಗ ಅದನ್ನು ನೀಡಲಾಗುತ್ತದೋ ಆ್ಯಪ್ ಫೋನ್ ಕರೆ ಅನುಮತಿಯನ್ನು ನಿರ್ವಹಿಸುತ್ತದೆ. ಅದಾದ ಮೇಲೆ, ಬಳಕೆದಾರರ ಕಣ್ಣಿಗೆ ಕಾಣುದಂತೆ ತನ್ನ ಕೆಲಸಗಳನ್ನು ಮುಂದುವರಿಸುತ್ತದೆ.
ಸೈಬರ್ ಸೆಕ್ಯೂರಿಟಿ ಕಂಪೆನಿಗಳು ತಿಳಿಸುವಂತೆ ಮಾಲ್ವೇರ್ ಅಪ್ಲಿಕೇಷನ್ಗಳನ್ನು ಗೂಗಲ್ ಪ್ಲೇ ಸ್ಟೋರ್ನ ಸ್ಕ್ಯಾನರ್ಸ್ ಅಪ್ಲಿಕೇಷನ್, ವಾಲ್ಪೇಪರ್ ಅಪ್ಲಿಕೇಷನ್ಸ್, ಮೆಸೇಜ್ ಅಪ್ಲಿಕೇಷನ್ಗಳ ಮೂಲಕ ಹಬ್ಬಿಸುತ್ತಿದ್ದಾರೆ. ಈ ಬಗೆಯ ಅಪ್ಲಿಕೇಷನ್ಗಳು ಬಹಳ ಬೇಗ ಗುರಿ ಆಗುತ್ತವೆ. ಇಂಥ ಅಪ್ಲಿಕೇಷನ್ಗಳನ್ನು ಬಳಸದಂತೆ ಸಲಹೆ ನೀಡಲಾಗಿದೆ ಮತ್ತು ಯಾವುದು ನಂಬಿಕೆಗೆ ಅರ್ಹವೋ ಅಂಥದ್ದು ಬಳಸಲು ತಿಳಿಸಲಾಗಿದೆ.
ಇದನ್ನೂ ಓದಿ: Android Smart Phones: ಆಂಡ್ರಾಯಿಡ್ ಸ್ಮಾರ್ಟ್ಫೋನ್ ಬಳಕೆದಾರರು ತಪ್ಪಿಸಬೇಕಾದ 15 ತಪ್ಪುಗಳಿವು
(Joker malware found in Google play store these 8 applications. Here is the details)