Meta: ಫೇಸ್​ಬುಕ್ ಕಂಪನಿಯ ಹೊಸ ಹೆಸರು ಘೋಷಣೆ ಮಾಡಿದ ಮಾರ್ಕ್ ಜುಕರ್‌ಬರ್ಗ್

Facebook Name Change: ಫೇಸ್‌ಬುಕ್ ತನ್ನ ಸ್ವಂತ ಫೇಸ್‌ಬುಕ್ ಮೆಟಾವರ್ಸ್ ಅನ್ನು ನಿರ್ಮಿಸುವ ಯೋಜನೆಯನ್ನು ಕಳೆದ ತಿಂಗಳು ಮೊದಲು ಬಹಿರಂಗಪಡಿಸಿತ್ತು. ಮೆಟಾವರ್ಸ್ ಪದವನ್ನು ಡಿಜಿಟಲ್ ಜಗತ್ತಿನಲ್ಲಿ ವರ್ಚುವಲ್, ಸಂವಾದಾತ್ಮಕ ಜಾಗವನ್ನು ವಿವರಿಸಲು ಬಳಸಲಾಗುತ್ತದೆ.

Meta: ಫೇಸ್​ಬುಕ್ ಕಂಪನಿಯ ಹೊಸ ಹೆಸರು ಘೋಷಣೆ ಮಾಡಿದ ಮಾರ್ಕ್ ಜುಕರ್‌ಬರ್ಗ್
Facebook Name Meta
Follow us
TV9 Web
| Updated By: Vinay Bhat

Updated on: Oct 29, 2021 | 8:13 AM

ಫೇಸ್‌ಬುಕ್ (Facebook) ಕಾರ್ಪೊರೇಟ್ ಕಂಪನಿಯ ಹೆಸರನ್ನು ಗುರುವಾರ ಬದಲಾವಣೆ ಮಾಡಿದೆ. ಫೇಸ್‌ಬುಕ್‌ನ ಮಾತೃಸಂಸ್ಥೆಯ ಹೆಸರನ್ನು ‘ಮೆಟಾ’ (Meta) ಎಂದು ಬದಲಾಯಿಸಲಾಗಿದೆ ಎಂದು ಫೇಸ್‌ಬುಕ್‌ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು ಡೆವಲಪರ್‌ಗಳ ವಾರ್ಷಿಕ ಸಮ್ಮೇಳನದಲ್ಲಿ ಘೋಷಣೆ ಮಾಡಿದ್ದಾರೆ. ಮೆಟಾ ಸಾಮಾಜಿಕ ಜಾಲತಾಣವನ್ನು (Social Media) ಇನ್ನೊಂದು ಹಂತಕ್ಕೆ ಒಯ್ಯಲಿದೆ ಎಂದಿರುವ ಇವರು ಸಾಮಾಜಿಕ ವಿಷಯಗಳ ಜೊತೆಗಿನ ಜಂಜಾಟಗಳಿಂದ ಸಾಕಷ್ಟು ಕಲಿತಿದ್ದೇವೆ. ನಾವು ಕಲಿತಿದ್ದು ಹೊಸ ಅಧ್ಯಾಯ ರೂಪಿಸಲು ನೆರವಾಗಲಿದೆ. ಇದರಲ್ಲಿ ನಮ್ಮ ಅಪ್ಲಿಕೇಷನ್‌ಗಳು ಹಾಗೂ ಅವರು ಬ್ರಾಂಡ್‌ಗಳು ಬದಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಫೇಸ್‌ಬುಕ್ ಅನ್ನು ಈಗ ಮೆಟಾ (Facebook New Name Meta) ಎಂದು ಕರೆಯಲಾಗುತ್ತದೆ. ಈ ಹೆಸರನ್ನು ಫೇಸ್‌ಬುಕ್‌ನ ಮಾಜಿ ಸಿವಿಕ್ ಇಂಟೆಗ್ರಿಟಿ ಮುಖ್ಯಸ್ಥ ಸಮಿದ್ ಚಕ್ರವರ್ತಿ ಸೂಚಿಸಿದ್ದಾರೆ. meta.com ಪ್ರಸ್ತುತ meta.org ಗೆ ಮರುನಿರ್ದೇಶಿಸುತ್ತದೆ, ಇದು ಚಾನ್ ಜುಕರ್‌ಬರ್ಗ್ ಇನಿಶಿಯೇಟಿವ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಬಯೋಮೆಡಿಕಲ್ ಸಂಶೋಧನಾ ಅನ್ವೇಷಣೆ ಸಾಧನವಾಗಿದೆ ಎಂದು ತಿಳಿದುಬಂದಿದೆ.

‘ಜನ ಸಾಮಾನ್ಯರ ಮಧ್ಯೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ರೂಪಿಸುವ ಕಂಪನಿ ನಮ್ಮದಾಗಿದ್ದು, ಈ ಕಾಯಕದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದೇ ಕಾರಣಕ್ಕೆ ನಮ್ಮ ಕಂಪನಿ ಜನರ ಸಂಪರ್ಕದ ಕೇಂದ್ರವಾಗಿದೆ. ನಾವೆಲ್ಲರೂ ಒಟ್ಟಾಗಿ ಬೃಹತ್‌ ಪ್ರಮಾಣದ ಆರ್ಥಿಕತೆಯನ್ನು ಸೃಷ್ಟಿಸಬಹುದು. ಅಲ್ಲದೆ ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್‌ 100 ಕೋಟಿ ಜನರನ್ನು ತಲುಪಲಿದೆ’ ಎಂದು ಜುಕರ್‌ಬರ್ಗ್ ಹೇಳಿದ್ದಾರೆ.

ಫೇಸ್‌ಬುಕ್ ತನ್ನ ಸ್ವಂತ ಫೇಸ್‌ಬುಕ್ ಮೆಟಾವರ್ಸ್ ಅನ್ನು ನಿರ್ಮಿಸುವ ಯೋಜನೆಯನ್ನು ಕಳೆದ ತಿಂಗಳು ಮೊದಲು ಬಹಿರಂಗಪಡಿಸಿತ್ತು. ಮೆಟಾವರ್ಸ್ ಪದವನ್ನು ಡಿಜಿಟಲ್ ಜಗತ್ತಿನಲ್ಲಿ ವರ್ಚುವಲ್, ಸಂವಾದಾತ್ಮಕ ಜಾಗವನ್ನು ವಿವರಿಸಲು ಬಳಸಲಾಗುತ್ತದೆ. ಮೆಟಾವರ್ಸ್ ವಾಸ್ತವವಾಗಿ ವರ್ಚುವಲ್ ಜಗತ್ತು, ಅಲ್ಲಿ ಒಬ್ಬ ವ್ಯಕ್ತಿಯು ಭೌತಿಕವಾಗಿ ಇಲ್ಲದಿದ್ದರೂ ಸಹ ಅಸ್ತಿತ್ವದಲ್ಲಿರಬಹುದು. ಇದಕ್ಕಾಗಿ ವರ್ಚುವಲ್ ರಿಯಾಲಿಟಿ ಅನ್ನು ಬಳಸಲಾಗುತ್ತದೆ.

ಮೆಟಾವರ್ಸ್ ಎಂದರೇನು?: ನೈಜ ಪ್ರಪಂಚದಿಂದ ತಪ್ಪಿಸಿಕೊಳ್ಳುವ ವರ್ಚ್ಯುವಲ್ ಪ್ರಪಂಚದ ಜನರನ್ನು ಉದ್ದೇಶಿಸಿ ಅಮೆರಿಕದ ಕಾದಂಬರಿಕಾರ ನೀಲ್ ಸ್ಟೆಫನ್ಸನ್ ಅವರು ಮೆಟಾವರ್ಸ್ ಎಂಬ ಪದವನ್ನು ಮೊದಲ ಬಾರಿಗೆ ಬಳಕೆ ಮಾಡಿದ್ದರು. ಕಂಪನಿಯನ್ನು ಮರುನಾಮಕರಣ ಮಾಡಿಕೊಳ್ಳುವ ಮೂಲಕ ಫೇಸ್‌ಬುಕ್ ಕಂಪನಿಯೂ ಬೇರೆ ಆ್ಯಪ್‌ಗಳ ರೀತಿ ಮಾತೃ ಸಂಸ್ಥೆಯೊಂದರ ಅಧೀನದಲ್ಲಿ ಕೆಲಸ ಮಾಡಲಿದೆ. ಈ ಮಾತೃ ಸಂಸ್ಥೆಯ ಅಧೀನದಲ್ಲಿ ಫೇಸ್‌ಬುಕ್, ಇನ್​ಸ್ಟಾಗ್ರಾಮ್, ವಾಟ್ಸ್​ಆ್ಯಪ್ ಸೇರಿದಂತೆ ಇತರ ಕಂಪನಿಗಳು ಕೆಲಸ ಮಾಡಲಿವೆ.

Mi 11X Pro: 108MP ಕ್ಯಾಮೆರಾದ Mi 11X Pro ಸ್ಮಾರ್ಟ್​ಫೋನ್ ಬೆಲೆಯಲ್ಲಿ ಇಷ್ಟೊಂದು ಕಡಿತವೇ?: ಇದು ದೀಪಾವಳಿ ಆಫರ್

(Meta Facebook chief Mark Zuckerberg announced the parent company name is being changed to Meta)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್