Tech Tips: ತಪ್ಪಿಯೂ ಹೀಗೆ ಮಾಡಬೇಡಿ: ನಿಮ್ಮ ಸ್ಮಾರ್ಟ್​ಫೋನ್ ಬ್ಲಾಸ್ಟ್ ಆಗಬಹುದು: ಎಚ್ಚರ

| Updated By: Vinay Bhat

Updated on: Nov 18, 2022 | 2:22 PM

ಮೊಬೈಲ್ ಸ್ಪೋಟಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿರುವುದೇ ಭಾರತದಲ್ಲಿ. ಇದಕ್ಕೆ ಅನೇಕ ಕಾರಣಗಳಿವೆ. ಹಾಗಾದರೆ, ನಿಮ್ಮ ಮೊಬೈಲ್ ಅನ್ನು ಬ್ಲಾಸ್ಟ್ ಆಗದಂತೆ ಹೇಗೆ ಎಚ್ಚರಬಹಿಸುವುದು?, ಇಲ್ಲಿದೆ ನೋಡಿ ಟಿಪ್ಸ್.

Tech Tips: ತಪ್ಪಿಯೂ ಹೀಗೆ ಮಾಡಬೇಡಿ: ನಿಮ್ಮ ಸ್ಮಾರ್ಟ್​ಫೋನ್ ಬ್ಲಾಸ್ಟ್ ಆಗಬಹುದು: ಎಚ್ಚರ
Mobile Blast
Follow us on

Tech Tips and Tricks: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್​ಫೋನ್​ಗಳು ಸ್ಪೋಟವಾಗುತ್ತಿರುವ (Mobile Blast) ಸುದ್ದಿ ಹೆಚ್ಚಾಗುತ್ತಿವೆ. ಭಾರತದಲ್ಲೇ ಈರೀತಿಯ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿರುವುದು. ಇದರಿಂದ ಜೋಬಿನೊಳಗಡೆ ಫೋನ್ ಇಟ್ಟುಕೊಳ್ಳು ಭಯ ಪಡುವಂತಾಗಿದೆ. ಯಾವ ಕ್ಷಣದಲ್ಲಿ ನನ್ನ ಮೊಬೈಲ್ ಕೂಡ ಬ್ಲಾಸ್ಟ್ ಆಗಿ ಬಿಡುತ್ತದೆಯೂ, ನನ್ನ ಫೊನ್ ಬ್ಲಾಸ್ಟ್ ಆದರೆ ಏನು ಕಥೆ? ಎಂಬ ಭಯ ಕಾಡುತ್ತಿರುತ್ತದೆ. ಮೊಬೈಲ್​ಗಳು ಹಾಗೆ ಸುಮ್ಮನೆ ಬ್ಲಾಸ್ಟ್ ಆಗುವುದಿಲ್ಲ. ಅದೆ ಹಿಂದೆ ಬೇರೆ ಕಾರಣವಿರುತ್ತದೆ. ಹಾಗಾದ್ರೆ ಯಾವುದೇ ಸ್ಮಾರ್ಟ್‌ಫೋನ್‌ (Smartphone) ಬ್ಲಾಸ್ಟ್ ಆಗುವ ಮುನ್ನ ಅದರ ಲಕ್ಷಣಗಳು ಯಾವುವು? ಮತ್ತು ನಾವು ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗದಂತೆ ಹೇಗೆ ಎಚ್ಚರ ವಹಿಸಬೇಕು ಎಂಬುದನ್ನು ನೋಡೋಣ.

ನಿಮ್ಮ ಫೋನ್‌ನ ಬ್ಯಾಟರಿ ಬೇಗನೆ ಬಿಸಿಯಾಗುತ್ತಿದ್ದರೆ, ಅಥವಾ ನಿಮ್ಮ ಫೋನ್ ಹಿಂಬಾಗದಲ್ಲಿ ಬ್ಯಾಟರಿ ಊದಿಕೊಂಡಂತೆ ಕಾಣಿಸಿದರೆ ಅಂತಹ ಬ್ಯಾಟರಿಯನ್ನು ಕೂಡಲೇ ಬದಲಾಯಿಸಿಬಿಡಿ. ಏಕೆಂದರೆ, ಬ್ಯಾಟರಿ ಒಳಗಿನ ಸೆಲ್ಟ್ ತೀರ್ವತೆಯಿಂದ ಅದು ಯಾವಾಗ ಬೇಕಾದರು ಸ್ಪೋಟಗೊಳ್ಳಬಹುದು. ಹೆಚ್ಚಿನ ಮೊಬೈಲ್ ಸ್ಪೋಟಗೊಳ್ಳಲು ಮುಖ್ಯ ಕಾರಣ ಇದುವೇ ಆಗಿರುತ್ತದೆ.

ನಿಮ್ಮ ಫೋನ್‌ನಲ್ಲಿ ನೀಡಿರುವ ಚಾರ್ಜರ್ ಬಿಟ್ಟು ಇತರೆ ಚಾರ್ಜರ್ ಬಳಕೆ ಮಾಡಿದರೆ ಸ್ಮಾರ್ಟ್‌ಪೋನ್‌ಗಳು ಸ್ಪೋಟಗೊಳ್ಳುವ ಅವಕಾಶಗಳೇ ಹೆಚ್ಚು. ಒಂದು ಫೋನ್‌ಗೂ ಮತ್ತು ಇನ್ನೊಂದು ಫೋನ್‌ ಚಾರ್ಜಿಂಗ್ ಸ್ಟ್ರೆಂತ್ ಬದಲಾಗಿರುತ್ತದೆ. ಹೆಚ್ಚು ಚಾರ್ಜ್ ಪ್ರವಹಿಸುವ ಚಾರ್ಜರ್‌ನಿಂದ ಫೋನ್ ಸ್ಪೋಟಗೊಳ್ಳುವ ಸಾಧ್ಯತೆಯಿರುತ್ತದೆ. ಈಗಂತು 200W ವರೆಗಿನ ಚಾರ್ಜರ್ ಮಾರುಕಟ್ಟೆಯಲ್ಲಿದೆ. ಇದು ನಿಮ್ಮ ಮೊಬೈಲ್​ಗೆ ಸಪೋರ್ಟ್ ಮಾಡುತ್ತದೆ ನಿಜ. ಆದರೆ, ಆ ವೇಗವನ್ನು ತಡೆದುಕೊಳ್ಳುವ ಶಕ್ತಿ ನಿಮ್ಮ ಮೊಬೈಲ್ ಬ್ಯಾಟರಿಗೆ ಇದೆಯೇ ಎಂಬುದನ್ನು ಪರಿಶೀಲಿಸಿ.

ಇದನ್ನೂ ಓದಿ
RIP Twitter: ಮುಳುಗುತ್ತಿದೆ ಟ್ವಿಟ್ಟರ್​: ನೌಕರರ ಸಾಮೂಹಿಕ ರಾಜೀನಾಮೆ: ಕಚೇರಿಗಳು ತಾತ್ಕಾಲಿಕ ಬಂದ್
Realme 10 Pro: ರಿಯಲ್ ಮಿಯಿಂದ ಒಂದಲ್ಲ ಎರಡು 108MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
Meta India Head: ಭಾರತದಲ್ಲಿ ಸಂಧ್ಯಾ ದೇವನಾಥನ್​ಗೆ ಮೆಟಾ ಚುಕ್ಕಾಣಿ; ಆದಾಯ ವೃದ್ಧಿಯತ್ತ ಚಿತ್ತ
Oppo A1 Pro 5G: ಒಪ್ಪೋದಿಂದ 108MP ಕ್ಯಾಮೆರಾದ ಚೊಚ್ಚಲ ಸ್ಮಾರ್ಟ್​ಫೋನ್ ಬಿಡುಗಡೆ: ಯಾವುದು?, ಬೆಲೆ ಎಷ್ಟು?

ಇನ್ನೂ ಅತೀ ಹೆಚ್ಚು ಘಂಟೆಗಳ ಕಾಲ ಮೊಬೈಲ್ ಅನ್ನು ಚಾರ್ಜ್​ಗೆ ಹಾಕಿಡುವ ಅಭ್ಯಾಸ ಇದ್ದರೆ ಇಂದಿನಿಂದಲೇ ಬಿಟ್ಟುಬಿಡಿ. ನಿಮ್ಮ ಫೋನ್ ಶೇಕಡಾ 90 ರಷ್ಟು ಚಾರ್ಜ್ ಆದ ಕೂಡಲೇ ಅನ್ ಪ್ಲಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.

ಅಂತೆಯೆ ನೇರವಾಗಿ ಸೂರ್ಯನ ಕಿರಣಗಳು ಬೀಳುವ ಜಾಗದಲ್ಲಿ ಫೋನನ್ನು ಇಟ್ಟು, ಚಾರ್ಜ್ ಮಾಡಬೇಡಿ. ಅಥವಾ ಬಿಸಿಯಾಗಿರುವ ಜಾಗಗಳು ಉದಾಹರಣೆಗೆ ಕಾರಿನ ಡ್ಯಾಶ್ ಬೋರ್ಡ್ ಬಳಿ ಇಟ್ಟು ಹೆಚ್ಚು ಘಂಟೆಗಳ ಕಾಲ ಮೊಬೈಲ್ ಚಾರ್ಜ್ ಮಾಡಬೇಡಿ. ಹೆಚ್ಚು ಬಿಸಿ ಇರುವ ಜಾಗದಲ್ಲಿ ಮೊಬೈಲ್ ಇಡುವುದು ಕೂಡ ಅಪಾಯ.

ಮೊಬೈಲ್ ಫೋನುಗಳು ಸಾಮಾನ್ಯವಾಗಿ ಸಹಿಸಿಕೊಳ್ಳುವುದು ಕೇವಲ 0 ಯಿಂದ 45 ಡಿಗ್ರಿ ಸೆಂಟಿಗ್ರೇಡ್ ನ ತಾಪವನ್ನು ಮಾತ್ರ. ಜಾಗರೂಕತೆ ಮಾರ್ಗಗಳಲ್ಲಿ ಪ್ರಮುಖವಾದ ವಿಚಾರವೆಂದರೆ ಪವರ್ ಸ್ಟ್ರಿಪ್ ಗಳನ್ನು ಬಳಸಿ ಅಥವಾ ಎಕ್ಸ್ ಟೆಷನ್ ಕಾರ್ಡ್ ಗಳನ್ನುಬಳಸಿ ಮೊಬೈಲ್ ಚಾರ್ಜ್ ಮಾಡಬೇಡಿ. ಯಾವುದೇ ಡಿವೈಸ್ ಆಗಿರಲಿ, ಅದರಲ್ಲಿರುವ ಯಾವುದೇ ಒಂದು ಕಾರ್ಡ್ ಎಫೆಕ್ಟ್ ಗೆ ಒಳಗಾದರೂ, ನಿಮ್ಮ ಸ್ಮಾರ್ಟ್​ಫೋನ್​ಗೂ ಡ್ಯಾಮೇಜ್ ತಂದೊಡ್ಡುತ್ತದೆ. ಮುಖ್ಯವಾಗಿ ನಿಮ್ಮ ಸ್ಮಾರ್ಟ್​ಫೋನನ್ನು ಹೆಚ್ಚಿನ ತಾಪಮಾನ ಇರುವ ಜಾಗದಲ್ಲಿ ಇಡಬೇಡಿ ಜೊತೆಗೆ ಮೊಬೈಲ್ ಬಿಸಿ ಆಗುವಂತಹ ಕೆಲಸವನ್ನು ಆದಷ್ಟು ಕಡಿಮೆ ಮಾಡಿ.

Published On - 2:22 pm, Fri, 18 November 22