World’s First Mobile Phone: ಇದುವೇ ನೋಡಿ ವಿಶ್ವದ ಮೊಟ್ಟ ಮೊದಲ ಮೊಬೈಲ್ ಫೋನ್: ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇತ್ತು?

ನೀವು ವಿಶ್ವದ ಮೊಟ್ಟ ಮೊದಲ ಮೊಬೈಲ್ ಬಗ್ಗೆ ಕೇಳಿದ್ದೀರಾ?, ಇದು ದಶಕಗಳ ಹಿಂದೆ ದಾಖಲೆ ಬೆಲೆಗೆ ಮಾರಾಟವಾಗಿತ್ತು ಎಂಬ ಸುದ್ದಿ ಗೊತ್ತೇ?. ಈ ಪ್ರಪಂಚದಲ್ಲಿ ಮೊಟ್ಟಮೊದಲ ಬಾರಿಗೆ ಮೊಬೈಲ್‌ ಅನ್ನು ಅಭಿವೃದ್ದಿಗೊಳಿಸಿದ್ದು ಮೋಟೋರೊಲಾ ಕಂಪನಿ.

World’s First Mobile Phone: ಇದುವೇ ನೋಡಿ ವಿಶ್ವದ ಮೊಟ್ಟ ಮೊದಲ ಮೊಬೈಲ್ ಫೋನ್: ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇತ್ತು?
World’s first mobile phone
Follow us
|

Updated on: Feb 18, 2023 | 6:50 PM

70, 80ರ ದಶಕದಲ್ಲಿ ತಂತ್ರಜ್ಞಾನ (Technology) ಇಂದಿನ ರೀತಿಯಲ್ಲಿ ಇರಲಿಲ್ಲ. ಅಂದು ದುಬಾರಿಯಾಗಿದ್ದ ಟೆಕ್ ಜಗತ್ತು ಇಂದು ಅತ್ಯಂತ ಅಗ್ಗವಾಗಿದೆ. ಕೈಗೆಟಕುವ ದರಕ್ಕೆ ಗ್ಯಾಜೆಟ್ಸ್​ ಲಭ್ಯವಿದ್ದು ಇವುಗಳು ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಇದರಲ್ಲಿ ಮೊಬೈಲ್ ಫೋನ್ (Mobile Phone) ಕೂಡ ಒಂದು. ಮೊಟ್ಟ ಮೊದಲ ಮೊಬೈಲ್ ಬಂದಾಗ ಅದರ ಬೆಲೆ ತುಂಬಾ ದುಬಾರಿಯಾಗಿತ್ತು ಹಾಗೂ ಸಾಕಷ್ಟು ದೊಡ್ಡದಾಗಿತ್ತು. ಆದರೀಗ ಅತ್ಯಂತ ಕಡಿಮೆ ಬೆಲೆಗೆ ವಾವ್ ಎನಿಸುವ ಫೀಚರ್​ಗಳ (Feature) ಫೋನ್ ಮಾರುಕಟ್ಟೆಯಲ್ಲಿದೆ. ಅಂದಿನ ಕಾಲದಲ್ಲಿ ಮೊಬೈಲ್ ಫೋನ್ ನಿಂದ ದೂರದವರ ಜೊತೆ ಮಾತನಾಡುವುದೇ ಒಂದು ದೊಡ್ಡ ಕ್ರೇಜ್. ಒಬ್ಬರ ಜೊತೆ ಮೊಬೈಲ್ ಫೋನ್ ಇದೆ ಎಂದಾದರೆ ಆತ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಗುರುತಿಸಲಾಗಿತ್ತು. ಇಂದು ಮೊಬೈಲ್‌ಗಳು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಮತ್ತು ಬಡವರಿಂದ ಶ್ರೀಮಂತರವರೆಗೆ ಎಲ್ಲರ ಕೈಯಲ್ಲಿದೆ.

ಮೊಬೈಲ್ ಫೋನ್‌ನಿಂದ ಹಿಡಿದು ಸ್ಮಾರ್ಟ್‌ಫೋನ್‌ ವರರೆಗಿನ ಪಯಣ ತುಂಬಾ ಆಸಕ್ತಿದಾಯಕವಾಗಿದೆ. ನೀವು ವಿಶ್ವದ ಮೊಟ್ಟ ಮೊದಲ ಮೊಬೈಲ್ ಬಗ್ಗೆ ಕೇಳಿದ್ದೀರಾ?, ಇದು ದಶಕಗಳ ಹಿಂದೆ ದಾಖಲೆ ಬೆಲೆಗೆ ಮಾರಾಟವಾಗಿತ್ತು ಎಂಬ ಸುದ್ದಿ ಗೊತ್ತೇ?. ಈ ಪ್ರಪಂಚದಲ್ಲಿ ಮೊಟ್ಟಮೊದಲ ಬಾರಿಗೆ ಮೊಬೈಲ್‌ ಅನ್ನು ಅಭಿವೃದ್ದಿಗೊಳಿಸಿದ್ದು ಮೋಟೋರೊಲಾ ಕಂಪನಿ. ಇದರಲ್ಲಿ ಕರೆ ಮಾಡಿದ್ದು ಸಹ ಮೋಟೋ ಸಂಶೋಧಕ ಮತ್ತು ಕಾರ್ಯನಿರ್ವಾಹಕರಾದ ಮಾರ್ಟಿನ್‌ ಕೂಪರ್. ಅದು ಪ್ರಪಂಚದ ಮೊಟ್ಟ ಮೊದಲ ಕರೆ ಆಗಿತ್ತು.

Tech Tips: ಇಂಟರ್ನೆಟ್‌ ಕನೆಕ್ಷನ್ ಇಲ್ಲದಿದ್ದರೂ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್‌ ಸೆಂಡ್ ಮಾಡಬಹುದು: ಇಲ್ಲಿದೆ ನೋಡಿ ಟ್ರಿಕ್

ಇದನ್ನೂ ಓದಿ
Image
Best Smartphone: ಕೇವಲ 10,000 ರೂ. ಒಳಗೆ ಆಕರ್ಷಕ ಸ್ಮಾರ್ಟ್​ಫೋನ್​ ಬೇಕೇ?: ಇಲ್ಲಿದೆ ನೋಡಿ ಟಾಪ್ 5 ಮೊಬೈಲ್
Image
Cyber Crime: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೈಬರ್ ಕ್ರೈಮ್: ಹಣ ಕಳೆದುಕೊಂಡರೆ ತಕ್ಷಣ ಈ ನಂಬರ್​ಗೆ ಕರೆ ಮಾಡಿ
Image
Best Smartphones: ಕೇವಲ 20,000 ರೂ. ಒಳಗೆ ಸಿಗುತ್ತಿದೆ ಬಿಗ್ ಬ್ಯಾಟರಿಯ ಈ ಬೆಸ್ಟ್ ಸ್ಮಾರ್ಟ್​ಫೋನ್​ಗಳು
Image
Tech Tips: ವಾಟ್ಸ್ಆ್ಯಪ್​ನಲ್ಲಿ ನಂಬರ್ ಬದಲಾಯಿಸುವಾಗ ಚಾಟ್ ಡಿಲೀಟ್ ಆಗದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

ಮಾರ್ಟಿನ್ ಕೂಪರ್ ಅವರು 1970 ರ ದಶಕದಲ್ಲಿ ಮೋಟೋರೊಲಾ ಕಂಪನಿ ಸೇರಿದರು. ನಂತರ 1973 ರಲ್ಲಿ ಮೊಟ್ಟ ಮೊದಲ ಮೊಬೈಲ್ ಫೊನ್ ತಯಾರಿಸಿದರು. ವಿಶ್ವದ ಮೊದಲ ಮೊಬೈಲ್ ಫೋನ್ ಅಮೆರಿಕದಲ್ಲಿ ಮಾರಾಟವಾಯಿತು. ಅದು 1983ರಲ್ಲಿ. ಅತ್ಯಂತ ಅಚ್ಚರಿ ವಿಷಯ ಅಂದ್ರೆ ಈ ಫೋನ್ 23cm ಉದ್ದ ಮತ್ತು 1.1 ಕೆಜಿ ತೂಕ ಇತ್ತು. ಇದರ ಬೆಲೆ ಸುಮಾರು 4 ಸಾವಿರ ಡಾಲರ್. ಅಂದರೆ ಇಂದಿನ ಕಾಲದಲ್ಲಿ ಬರೋಬ್ಬರಿ 2.5 ಲಕ್ಷ ರೂಪಾಯಿ. ಇದಕ್ಕೆ ‘Motorola DynaTAC’ ಎಂದು ಹೆಸರಿಡಲಾಗಿತ್ತು. ನ್ಯೂಜರ್ಸಿಯ ಬೆಲ್‌ ಲ್ಯಾಬ್ಸ್‌ಗೆ ಮೊದಲ ಕರೆ ಮಾಡಲಾಗಿತ್ತು.

ಮಾರ್ಟಿನ್‌ ಕೂಪರ್‌ ಅವರು ತಮ್ಮ ಮೊದಲ ಡಿವೈಸ್ ಅನ್ನು ಹೊರತರಲು ಪೇಟೆಂಟ್‌ ಸಹ ಪಡೆದು ವಿನ್ಯಾಸಕಾರಾದ ರುಡಿ ಕ್ರೊಲಾಪ್ಪ್ ಜೊತೆಗೆ ಕಾರ್ಯನಿರ್ವಹಿಸಿದ್ದರು. ಅವರಿಬ್ಬರು ಸೇರಿ DynaTAC (Dynamic Adaptive Total Area Coverage) ಫೋನ್‌ ಅನ್ನು ಅಭಿವೃದ್ದಿ ಪಡಿಸಿದ್ದರು. ಇದು ಸಂಪೂರ್ಣ ಚಾರ್ಜ್‌ ಹೊಂದಲು 10 ಗಂಟೆಗಳ ಸಮಯ ಬೇಕಿತ್ತು. ಆದರೆ ಬಳಕೆ ಆಗುತ್ತಿದ್ದದ್ದು ಮಾತ್ರ ಕೇವಲ 35 ನಿಮಿಷಗಳು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್