Netflix: ಭಾರತದ ಬಳಕೆದಾರರಿಗೆ ನೆಟ್​ಫ್ಲಿಕ್ಸ್​ನಿಂದ ಶಾಕ್: ಇನ್ನುಂದೆ ಪಾಸ್​ವರ್ಡ್ ಹಂಚಿಕೊಳ್ಳಲು ಸಾಧ್ಯವಿಲ್ಲ

|

Updated on: Jul 20, 2023 | 12:19 PM

ಪ್ರಸಿದ್ಧ OTT ಪ್ಲಾಟ್‌ಫಾರ್ಮ್ ನೆಟ್​ಫ್ಲಿಕ್ಸ್, ಪಾಸ್​ವರ್ಡ್ ಶೇರಿಂಗ್ (Password Sharing) ಆಯ್ಕೆಯನ್ನು ನಿರ್ಬಂಧಿಸಿದೆ. ಅಂದರೆ ಇನ್ನುಂದೆ ಒಬ್ಬರ ಪಾಸ್​​ವರ್ಡ್ ಬಳಸಿಕೊಂಡು ಇನ್ನೊಬ್ಬರು ನೆಟ್​​ಫ್ಲಿಕ್ಸ್ ನೋಡಲು ಸಾಧ್ಯವಿಲ್ಲ.

Netflix: ಭಾರತದ ಬಳಕೆದಾರರಿಗೆ ನೆಟ್​ಫ್ಲಿಕ್ಸ್​ನಿಂದ ಶಾಕ್: ಇನ್ನುಂದೆ ಪಾಸ್​ವರ್ಡ್ ಹಂಚಿಕೊಳ್ಳಲು ಸಾಧ್ಯವಿಲ್ಲ
NetFlix
Follow us on

ಭಾರತದಲ್ಲಿ ಹೆಚ್ಚಿನವರು ನೆಟ್‌ಫ್ಲಿಕ್ಸ್ (Netflix) ಉಪಯೋಗಿಸುವುದು ಹೇಗೆಂದರೆ, ಒಬ್ಬರು ಖಾತೆ ತೆರೆದು ಪಾವತಿಸುತ್ತಾರೆ ನಂತರ ಆ ಖಾತೆಯನ್ನು ಇತರರು ಬಳಸುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ ಭಾರತದಲ್ಲಿ ಹೆಚ್ಚು ಜನಪ್ರಿಯ ಆಗಲು ಮುಖ್ಯ ಕಾರಣವೇ ಇದು. ಆದರೀಗ, ನೆಟ್‌ಫ್ಲಿಕ್ಸ್ ದೊಡ್ಡ ಬದಲಾವಣೆ ತಂದಿದೆ. ಪ್ರಸಿದ್ಧ OTT ಪ್ಲಾಟ್‌ಫಾರ್ಮ್, ಪಾಸ್​ವರ್ಡ್ ಶೇರಿಂಗ್ (Password Sharing) ಆಯ್ಕೆಯನ್ನು ನಿರ್ಬಂಧಿಸಿದೆ. ಅಂದರೆ ಇನ್ನುಂದೆ ಒಬ್ಬರ ಪಾಸ್​​ವರ್ಡ್ ಬಳಸಿಕೊಂಡು ಇನ್ನೊಬ್ಬರು ನೆಟ್​​ಫ್ಲಿಕ್ಸ್ ನೋಡಲು ಸಾಧ್ಯವಿಲ್ಲ.

ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರ ಇಮೇಲ್​ಗೆ ಮೆಸೇಜ್ ಕಳುಹಿಸಿದ್ದು, ಈಗ ನಿಮ್ಮ ಖಾತೆಯು ನಿಮಗೆ ಮತ್ತು ನಿಮ್ಮ ಮನೆಯ ಸದಸ್ಯರಿಗೆ ಮಾತ್ರ ಎಂದು ಹೇಳಿದೆ. ಬಳಕೆದಾರರು ಮನೆಯಲ್ಲಿ ಇರುವಾಗ, ಪ್ರಯಾಣದಲ್ಲಿರುವಾಗ ಅಥವಾ ರಜಾದಿನಗಳಲ್ಲಿ ನೆಟ್‌ಫ್ಲಿಕ್ಸ್ ಅನ್ನು ಬಳಸಬಹುದು ಮತ್ತು ಪ್ರೊಫೈಲ್ ವರ್ಗಾವಣೆ ಲಾಭವನ್ನು ಪಡೆಯಬಹುದು ಎಂದು ಹೇಳಿದೆ. ಮನೆಯ ಹೊರಗಿನವರು ಯಾರಾದರೂ ನಿಮ್ಮ ಖಾತೆಯನ್ನು ಬಳಸುತ್ತಿದ್ದರೆ, ಅವರು ತಮ್ಮ ಪ್ರೊಫೈಲ್ ಅನ್ನು ಹೊಸ ಖಾತೆಗೆ ವರ್ಗಾಯಿಸಬೇಕು (ಇದಕ್ಕಾಗಿ ಅವರು ಪಾವತಿಸಬೇಕಾಗುತ್ತದೆ), ಮತ್ತು ಅವರ ಪಾಸ್‌ವರ್ಡ್ ಅನ್ನು ಬದಲಾಯಿಸಲು ಪರಿಗಣಿಸಬೇಕು ಎಂದು ಹೇಳಿದೆ.

Lenovo Tab M10 5G: ಲೆನೋವೊ ಕಂಪನಿ ಪರಿಚಯಿಸಿದೆ ಹೊಸ ಟ್ಯಾಬ್, ಬೆಲೆ ಎಷ್ಟು ನೋಡಿ..

ಇದನ್ನೂ ಓದಿ
Realme C53: ಭಾರತಕ್ಕೆ ಬಂತು 108MP ಕ್ಯಾಮೆರಾದ ಹೊಸ ರಿಯಲ್ ಮಿ C53 ಫೋನ್: ಬೆಲೆ ಕೇವಲ …
Apple MacBook M3: ಬರುತ್ತಿದೆ ಹೊಸ ಸರಣಿಯ ಆ್ಯಪಲ್ ಮ್ಯಾಕ್​ಬುಕ್
Infinix GT 10 Pro: ನಥಿಂಗ್ ಫೋನ್ ವಿನ್ಯಾಸ ಕಾಪಿ ಮಾಡಿತೇ ಇನ್ಫಿನಿಕ್ಸ್ ಫೋನ್?
Honor MagicPad 13: ಆ್ಯಪಲ್ ಐಪ್ಯಾಡ್​ಗೆ ಸ್ಪರ್ಧೆ ಒಡ್ಡುತ್ತಿದೆ ಹೊಸ ಹಾನರ್ ಮ್ಯಾಜಿಕ್​ಪ್ಯಾಡ್

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನೆಟ್​ಫ್ಲಿಕ್ಸ್, “ಇಂದಿನಿಂದ, ಭಾರತದಲ್ಲಿ ತಮ್ಮ ಮನೆಯ ಸದಸ್ಯರನ್ನು ಬಿಟ್ಟು ಹೊರಗಡೆ ನೆಟ್‌ಫ್ಲಿಕ್ಸ್ ಅನ್ನು ಹಂಚಿಕೊಳ್ಳುತ್ತಿರುವ ಸದಸ್ಯರಿಗೆ ನಾವು ಈ ಇಮೇಲ್ ಅನ್ನು ಕಳುಹಿಸುತ್ತೇವೆ. ನೆಟ್‌ಫ್ಲಿಕ್ಸ್ ಖಾತೆಯನ್ನು ಒಂದು ಮನೆಯವರು ಬಳಸುತ್ತಾರೆ. ಆ ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರು ಎಲ್ಲಿದ್ದರೂ ನೆಟ್‌ಫ್ಲಿಕ್ಸ್ ಅನ್ನು ಬಳಸಬಹುದು. ನಮ್ಮ ಸದಸ್ಯರಿಗೆ ಅನೇಕ ಮನರಂಜನಾ ಆಯ್ಕೆಗಳಿವೆ ಎಂಬುದು ನಮಗೆ ತಿಳಿದಿದೆ. ನಾವು ವಿವಿಧ ರೀತಿಯ ಹೊಸ ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ಹೆಚ್ಚು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ. ನಿಮ್ಮ ಅಭಿರುಚಿ, ಭಾಷೆ ಮತ್ತು ನೀವು ಯಾರೊಂದಿಗೆ ವೀಕ್ಷಿಸುತ್ತಿದ್ದರೂ ಅವರಿಗೆ ಇಷ್ಟವಾಗುವಂತೆ ಯಾವಾಗಲೂ ತೃಪ್ತಿಕರವಾದೂದನ್ನು ನೀಡುತ್ತಾ ಇರುತ್ತೇವೆ,” ಎಂದು ಹೇಳಿದೆ.

ನೆಟ್‌ಫ್ಲಿಕ್ಸ್ ಬಳಕೆದಾರರು ಏನು ಮಾಡಬೇಕು?

ಬಳಕೆದಾರರು ತಮ್ಮ ಖಾತೆಯ ಭದ್ರತೆ ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳಿಗೆ ಭೇಟಿ ನೀಡುವ ಮೂಲಕ ಮತ್ತು ‘ಮ್ಯಾನೇಜ್ ಆ್ಯಕ್ಸಿಸ್-ಡಿವೈಸ್’ ಆಯ್ಕೆಯನ್ನು ಆರಿಸುವ ಮೂಲಕ ತಮ್ಮ ಖಾತೆಗೆ ಯಾರು ಲಾಗ್ ಇನ್ ಆಗಿದ್ದಾರೆ ಎಂಬುದನ್ನು ಮೊದಲು ಪರಿಶೀಲಿಸಬೇಕು. ನಂತರ, ಬಳಕೆದಾರರು ‘ಪ್ರವೇಶವನ್ನು ಹೊಂದಿರದ’ ಸಾಧನಗಳಿಂದ ಸೈನ್ ಔಟ್ ಮಾಡಬೇಕು ಮತ್ತು ಪಾಸ್‌ವರ್ಡ್‌ಗಳನ್ನು ಬದಲಾಯಿಸಬೇಕು.

ಭಾರತದಲ್ಲಿ ಇಂದು ಈ ಮಹತ್ವದ ನಿರ್ಧಾರವನ್ನು ನೆಟ್​ಫ್ಲಿಕ್ಸ್ ತೆಗೆದುಕೊಂಡಿದೆ. ಆದರೆ, ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಬ್ರಿಟನ್, ಜರ್ಮನಿ, ಸಿಂಗಾಪುರ್, ಆಸ್ಟ್ರೇಲಿಯಾ, ಮೆಕ್ಸಿಕೋ ಮತ್ತು ಬ್ರೆಜಿಲ್‌ ಸೇರಿದಂತೆ 100 ಕ್ಕೂ ಅಧಿಕ ದೇಶಗಳಲ್ಲಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಹಂಚಿಕೆಯ ಮೇಲೆ ಮೇ ತಿಂಗಳಲ್ಲೇ ನಿರ್ಬಂಧ ಹೇರಿತ್ತು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ