ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗೂ ಸೈ ಮಿಡ್ ರೇಂಜ್ ಮೊಬೈಲ್ಗೂ ರೆಡಿ ಎಂಬಂತೆ ಆಕರ್ಷಕ ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ವಿಶೇಷ ಸ್ಥಾನ ಸಂಪಾದಿಸಿರುವ ಒಪ್ಪೋ (Oppo) ಸಂಸ್ಥೆಗೆ A ಸರಣಿಯ ಫೋನ್ಗಳು ಹೆಚ್ಚಿನ ಹೆಸರು ತಂದುಕೊಟ್ಟಿದೆ. ಇದೇ ಸರಣಿಯಲ್ಲಿ ಈ ವರ್ಷದ ಆರಂಭದಲ್ಲಿ ಒಪ್ಪೋ ಸಂಸ್ಥೆ ಒಪ್ಪೋ ಎ16ಕೆ (Oppo A16K) ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತ್ತು. ಬಜೆಟ್ ಬೆಲೆಯ ಈ ಫೋನ್ ದರದಲ್ಲಿ ಇದೀಗ ಭರ್ಜರಿ ಇಳಿಕೆ ಕಂಡು ಬಂದಿದೆ. ಈ ಸ್ಮಾರ್ಟ್ಫೋನ್ (Smartphone) ಆಕ್ಟಾ ಕೋರ್ ಮೀಡಿಯಾಟೆಕ್ ಹೆಲಿಯೊ G35 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಸಿಂಗಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಹೊಂದಿದೆ. ಹಾಗಾದ್ರೆ ಇದರ ನೂತನ ಬೆಲೆ ಎಷ್ಟು?, ಏನೆಲ್ಲ ಫೀಚರ್ಗಳಿವೆ ಎಂಬುದನ್ನು ನೋಡೋಣ.
- ಒಪ್ಪೋ A16K ಸ್ಮಾರ್ಟ್ಫೋನ್ 3GB + 32GB ಮತ್ತು 4GB + 64GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯನ್ನು ಹೊಂದಿದೆ. ಸದ್ಯ ಈ ಎರಡೂ ವೇರಿಯಂಟ್ಗಳ ಬೆಲೆಯಲ್ಲಿ ಕಡಿತ ಆಗಿದೆ. 3GB + 32 GB ವೇರಿಯಂಟ್ ಬೆಲೆಯಲ್ಲಿ 1000 ರೂ. ಹಾಗೂ 4GB + 64 GB ವೇರಿಯಂಟ್ ಬೆಲೆಯಲ್ಲಿ 500 ರೂ. ಗಳ ಇಳಿಕೆ ಆಗಿದೆ.
- ಕಡಿತಗೊಂಡ ನಂತರ 3GB + 32GB ವೇರಿಯಂಟ್ ಬೆಲೆಯು 9,490 ರೂ. ಆಗಿದೆ. ಹಾಗೆಯೇ 4GB + 64 GB ಸ್ಟೋರೇಜ್ ವೇರಿಯಂಟ್ ಹೊಸ ಬೆಲೆಯು 10,490 ರೂ. ಗಳು ಆಗಿದೆ. ಹೊಸ ಬೆಲೆಗಳು ಅಧಿಕೃತ ಕಂಪನಿಯ ವೆಬ್ಸೈಟ್ ನಲ್ಲಿ ಕಾಣಿಸಿವೆ. ಈ ಫೋನ್ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ಲಭ್ಯವಿದೆ.
- ಒಪ್ಪೋ A16K ಸ್ಮಾರ್ಟ್ಫೋನ್ 1,600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.52 ಇಂಚಿನ HD + ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ IPS LCD ಡಿಸ್ಪ್ಲೇ ಆಗಿದ್ದು, 60Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ.
- ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್ ಬಲ ವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ Color OS 11.1 Lite ಜೊತೆಗೆ ಕಾರ್ಯ ನಿರ್ವಹಿಸುತ್ತದೆ. ಮೈಕ್ರೊ SD ಕಾರ್ಡ್ ಬೆಂಬಲದೊಂದಿಗೆ 256 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.
- 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಅಲ್ಲದೆ ಇದು 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
- ಒಪ್ಪೋ A16K ಸ್ಮಾರ್ಟ್ಫೋನ್ 4,230 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಇದು 5V/ 2A ಚಾರ್ಜಿಂಗ್ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್ v5, 3.5 mm ಹೆಡ್ಫೋನ್ ಜ್ಯಾಕ್, GPS ಮತ್ತು USB ಟೈಪ್ ಸಿ ಪೋರ್ಟ್ ಸೇರಿವೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ