AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pink WhatsApp: ಎರಡು ವರ್ಷಗಳ ಬಳಿಕ ಮತ್ತೆ ಬಂದ ಪಿಂಕ್ ವಾಟ್ಸ್​ಆ್ಯಪ್: ತಪ್ಪಿಯೂ ಆ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ

ಪಿಂಕ್ ವಾಟ್ಸ್​ಆ್ಯಪ್​ನಲ್ಲಿ ಹಲವು ರೀತಿಯ ವೈಶಿಷ್ಟ್ಯಗಳಿವೆ ಎಂಬ ಸಂದೇಶಗಳೊಂದಿಗೆ ನಕಲಿ ಲಿಂಕ್​ವೊಂದು ವಾಟ್ಸ್​ಆ್ಯಪ್​ಗೆ ಬರುತ್ತಿದೆ. ಇದು ಹೆಚ್ಚಾಗಿ ಗ್ರೂಪ್​ಗಳಲ್ಲಿ ಬರುತ್ತಿದ್ದು, ಸಹಜವೆಂಬಂತೇ ಜನರು ಕ್ಲಿಕ್​ ಮಾಡಿ ಪೇಚಿಗೆ ಸಿಲುಕುತ್ತಿದ್ದಾರೆ.

Pink WhatsApp: ಎರಡು ವರ್ಷಗಳ ಬಳಿಕ ಮತ್ತೆ ಬಂದ ಪಿಂಕ್ ವಾಟ್ಸ್​ಆ್ಯಪ್: ತಪ್ಪಿಯೂ ಆ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
Pink WhatsApp
Vinay Bhat
|

Updated on: Jun 23, 2023 | 12:05 PM

Share

ಎರಡು ವರ್ಷಗಳ ಹಿಂದೆ ಅಂದರೆ 2021 ರಲ್ಲಿ ಪಿಂಕ್ ವಾಟ್ಸ್​ಆ್ಯಪ್ (Pink WhatsApp) ಎಂಬ ಶಬ್ದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ವಾಟ್ಸ್​ಆ್ಯಪ್ ಬಳಕೆದಾರರಿಗೆ ಲಿಂಕ್​ವೊಂದು ಬರುತ್ತದೆ. ಇದರಲ್ಲಿ ”ಇದು ವಾಟ್ಸ್​ಆ್ಯಪ್​ನ ಹೊಸ ಆವೃತ್ತಿ, ಇದರಲ್ಲಿ ಅನೇಕ ವಿಶೇಷ ಫೀಚರ್​ಗಳಿವೆ (Features). ಕೂಡಲೇ ಡೌನ್​ಲೋಡ್ ಮಾಡಿ” ಎಂಬ ಮೆಸೇಜ್ ಕೂಡ ಇರುತ್ತದೆ. ಇದನ್ನು ನಂಬಿ ಕ್ಲಿಕ್ ಮಾಡಿದರೆ ನಿಮ್ಮ ಫೋನ್​ಗೆ ವೈರಸ್ ಅಟ್ಯಾಕ್ ಆಗಿ, ಹ್ಯಾಕ್ ಆಗುತ್ತದೆ. ಎರಡು ವರ್ಷಗಳ ಹಿಂದೆ ಈ ಲಿಂಕ್ ತೆರೆದು ಮೋಸ ಹೋದವರು ಅನೇಕರಿದ್ದಾರೆ. ಇದೀಗ ಇದೇ ಪಿಂಕ್ ವಾಟ್ಸ್​ಆ್ಯಪ್ ಮತ್ತೆ ಬಂದಿದೆ. ಈ ಬಗ್ಗೆ ಮುಂಬೈ ಪೊಲೀಸರು (Mumbai Police) ನಾಗರಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ವರದಿಯೊಂದರ ಪ್ರಕಾರ, ಹ್ಯಾಕರ್​ಗಳು ಸೈಬರ್ ವಂಚನೆಗಾಗಿ ತಮ್ಮ ವೆಬ್‌ನಲ್ಲಿ ವಿವಿಧ ಹೊಸ ತಂತ್ರಗಳೊಂದಿಗೆ ಬಂದಿದ್ದಾರೆ. ಬಳಕೆದಾರರು ಅಂತಹ ವಂಚನೆಗಳ ಬಗ್ಗೆ ಜಾಗೃತರಾಗಿರಬೇಕು, ಜಾಗರೂಕರಾಗಿರಬೇಕು ಮತ್ತು ಗಮನಹರಿಸಬೇಕು. ಡಿಜಿಟಲ್ ಯುಗದಲ್ಲಿಯೂ ಸುರಕ್ಷಿತವಾಗಿರುವುದು ಅವಶ್ಯಕ. ಎಲ್ಲವನ್ನೂ ನೋಡಿದ ತಕ್ಷಣ ಫೋನ್‌ನಲ್ಲಿ ಡೌನ್‌ಲೋಡ್ ಮಾಡಬಾರದು,” ಎಂದು ಪಿಂಕ್ ವಾಟ್ಸ್​ಆ್ಯಪ್ ಹಗರಣದ ಕುರಿತು ಎಚ್ಚರಿಕೆ ನೀಡಿದ್ದಾರೆ.

iQoo Neo 7 Pro: ಗೇಮಿಂಗ್ ಪ್ರಿಯರಿಗೆ ಬೆಸ್ಟ್ ಚಾಯ್ಸ್ ಸ್ಮಾರ್ಟ್​ಫೋನ್ ಐಕ್ಯೂ ನಿಯೋ

ಇದನ್ನೂ ಓದಿ
Image
Fridge Door: ಫ್ರಿಡ್ಜ್ ಡೋರ್​ನ ರಬ್ಬರ್​ನಲ್ಲಿ ಕೊಳೆ ಇದ್ದರೆ ಈ ಸರಳ ವಿಧಾನದಿಂದ ನಿಮಿಷಗಳಲ್ಲಿ ಕ್ಲೀನ್ ಮಾಡಿ
Image
SnapChat: ಬೆಂಗಳೂರಿನಲ್ಲಿ ಹೆಚ್ಚು ಬಳಕೆಯಾಗುವ ಅಡ್ಡ ಹೆಸರುಗಳನ್ನು ಬಿಡುಗಡೆ ಮಾಡಿದ ಸ್ನ್ಯಾಪ್ ಚಾಟ್
Image
Nothing Phone 2: ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ ಹೊಸ ನಥಿಂಗ್ ಫೋನ್
Image
Fire-Boltt Ultimate: ಕ್ರೇಜಿ ಫೀಚರ್ಸ್ ಜತೆಗೆ ₹1,999ಕ್ಕೆ ಲಭ್ಯ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್

ಪಿಂಕ್ ವಾಟ್ಸ್​ಆ್ಯಪ್ ಹಗರಣ ಎಂದರೇನು?:

ಮುಂಬೈ ಪೊಲೀಸರ ಪ್ರಕಾರ, ”ಪಿಂಕ್ ವಾಟ್ಸ್​ಆ್ಯಪ್​ನಲ್ಲಿ ಹಲವು ರೀತಿಯ ವೈಶಿಷ್ಟ್ಯಗಳಿವೆ ಎಂಬ ಸಂದೇಶಗಳೊಂದಿಗೆ ನಕಲಿ ಲಿಂಕ್​ವೊಂದು ವಾಟ್ಸ್​ಆ್ಯಪ್​ಗೆ ಬರುತ್ತಿದೆ. ಇದು ಹೆಚ್ಚಾಗಿ ಗ್ರೂಪ್​ಗಳಲ್ಲಿ ಬರುತ್ತಿದ್ದು, ಸಹಜವೆಂಬಂತೇ ಜನರು ಕ್ಲಿಕ್​ ಮಾಡಿ ಪೇಚಿಗೆ ಸಿಲುಕುತ್ತಿದ್ದಾರೆ. ಇದು ಫಿಶಿಂಗ್ ಲಿಂಕ್ ಆಗಿದ್ದು, ಬಳಕೆದಾರರು ತಮ್ಮ ಮೊಬೈಲ್ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಮೊಬೈಲ್ ಕೂಡ ಹ್ಯಾಕ್ ಆಗುತ್ತಿದೆ. ಇದರಿಂದಾಗಿ ಎಲ್ಲಾ ಮೊಬೈಲ್ ಡೇಟಾ ಹ್ಯಾಕರ್​ಗಳ ಕೈ ಸೇರುತ್ತಿದೆ. ಇದಕ್ಕೆ ನೀವು ಯಾವುದೇ ರೀತಿಯ OTP ಅನ್ನು ಪಡೆಯುವುದಿಲ್ಲ. ವಂಚಕರು ಈ ಮೂಲಕ ಫೋನ್ ಡೇಟಾವನ್ನು ಸುಲಭವಾಗಿ ಪ್ರವೇಶಿಸಬಹುದು. ನಂತರ ನಿಮ್ಮ ವೈಯಕ್ತಿಕ ವಿಡಿಯೋ, ಫೋಟೋ, ಬ್ಯಾಂಕ್ ಖಾತೆ ಎಲ್ಲ ಮಾಹಿತಿ ದೋಚುತ್ತಾರೆ,” ಎಂದು ಹೇಳಿದ್ದಾರೆ.

ನೀವು ಈಗಾಗಲೇ ಪಿಂಕ್ ವಾಟ್ಸ್​ಆ್ಯಪ್ ಡೌನ್‌ಲೋಡ್ ಮಾಡಿದ್ದೀರ?:

ನೀವು ಈಗಾಗಲೇ ಪಿಂಕ್ ವಾಟ್ಸ್​ಆ್ಯಪ್ ಡೌನ್‌ಲೋಡ್ ಮಾಡಿದ್ದರೆ ಅದನ್ನು ತಕ್ಷಣವೇ ಅನ್​ಇನ್​ಸ್ಟಾಲ್ ಮಾಡುವಂತೆ ಮುಂಬೈ ಪೊಲೀಸರು ಬಳಕೆದಾರರನ್ನು ಒತ್ತಾಯಿಸಿದ್ದಾರೆ. ಅಧಿಕೃತ ಆ್ಯಪ್​ ಸ್ಟೋರ್ ಆಗಿರುವ ಗೂಗಲ್​ ಪ್ಲೇ ಸ್ಟೋರ್ ಅಥವಾ ಆ್ಯಪಲ್​ ಆ್ಯಪ್​ಸ್ಟೋರ್​ಗಳಲ್ಲಿ ಇರುವ ಆ್ಯಪ್​ಗಳನ್ನು ಮಾತ್ರ ಡೌನ್​ಲೋಡ್ ಮಾಡಿಕೊಳ್ಳಬೇಕು. ಉಳಿದಂತೆ ಯಾವುದೇ ಲಿಂಕ್ ಮೂಲಕ ಹೋಗಿ ಆ್ಯಪ್​ಗಳನ್ನು ಡೌನ್​​ಲೋಡ್ ಮಾಡಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ