5G Internet Launch: ಅ. 1ರಿಂದ ಭಾರತದಲ್ಲಿ 5G ಸೇವೆ ಆರಂಭ: ಪ್ರಧಾನಿ ಮೋದಿಯಿಂದ ಚಾಲನೆ

5G Rollout in India: ಆರಂಭದಲ್ಲಿ ಆಯ್ದ ಕೆಲ ಮೆಟ್ರೋ ನಗರಗಳಲ್ಲಿ ಮಾತ್ರ 5ಜಿ ಸೇವೆ ಸಿಗಲಿದೆ. ಮುಂದಿನ ಕೆಲವರ್ಷಗಳಲ್ಲಿ ಗ್ರಾಮೀಣ ಭಾಗಗಳಲ್ಲೂ 5ಜಿ ದೊರಕಲಿದೆಯಂತೆ. ಮೂಲಗಳ ಪ್ರಕಾರ ಮೊದಲ ಭಾಗವಾಗಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗುತ್ತಿದೆ.

5G Internet Launch: ಅ. 1ರಿಂದ ಭಾರತದಲ್ಲಿ 5G ಸೇವೆ ಆರಂಭ: ಪ್ರಧಾನಿ ಮೋದಿಯಿಂದ ಚಾಲನೆ
5ಜಿ ಸೇವೆ (ಪ್ರಾತಿನಿಧಿಕ ಚಿತ್ರ)
TV9kannada Web Team

| Edited By: Vinay Bhat

Sep 24, 2022 | 2:36 PM

ಭಾರತದಲ್ಲಿ ಬಹುನಿರೀಕ್ಷಿತ 5ಜಿ ಸೇವೆ (5G Service) ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು ಅಕ್ಟೋಬರ್ 1 ರಂದು ನಡೆಯಲಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌ (Mobile Congress) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿದ್ದಾರೆ. ಆರಂಭದಲ್ಲಿ ಆಯ್ದ ಕೆಲ ಮೆಟ್ರೋ ನಗರಗಳಲ್ಲಿ ಮಾತ್ರ 5ಜಿ ಸೇವೆ ಸಿಗಲಿದೆ. ಮುಂದಿನ ಕೆಲವರ್ಷಗಳಲ್ಲಿ ಗ್ರಾಮೀಣ ಭಾಗಗಳಲ್ಲೂ 5ಜಿ ದೊರಕಲಿದೆಯಂತೆ. ಮೂಲಗಳ ಪ್ರಕಾರ ಮೊದಲ ಭಾಗವಾಗಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗುತ್ತಿದೆ. ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‍ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೊದಲ ಹಂತದ 5ಜಿ ಸೇವೆ ಆರಂಭವಾಗಲಿದೆ. ಈ ನಗರಗಳಲ್ಲಿ ಆಯ್ದ ಕೆಲ ಪ್ರದೇಶಗಳಲ್ಲಿ ಜನರಿಗೆ 5ಜಿ ಸೇವೆ ದೊರಕುವ ಸಾಧ್ಯತೆ ಇದೆ.

ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC), ದೂರಸಂಪರ್ಕ ಇಲಾಖೆ (DoT) ಮತ್ತು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (COAI) ಜಂಟಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಇದರಲ್ಲಿ 5ಜಿ ಲಾಂಚ್ ಆಗಲಿದೆ.

5G 2030 ರ ವೇಳೆಗೆ ಭಾರತದಲ್ಲಿ ಒಟ್ಟು ಸಂಪರ್ಕಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದಾಗಿರುತ್ತದೆ ಎಂದು ಅಂದಾಜಿಸಲಾಗಿದೆ. 2G ಮತ್ತು 3G ಯ ಪಾಲು ಶೇಕಡಾ 10 ಕ್ಕಿಂತ ಕಡಿಮೆಯಿರುತ್ತದೆ ಎಂದು GSMA (ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್ ಕಮ್ಯುನಿಕೇಷನ್ಸ್) ವರದಿ ಹೇಳಿದೆ. ಅಲ್ಲದೆ 5G ತಂತ್ರಜ್ಞಾನವು ಭಾರತಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದು 2023 ಮತ್ತು 2040 ರ ನಡುವೆ ಭಾರತೀಯ ಆರ್ಥಿಕತೆಗೆ ₹ 36.4 ಟ್ರಿಲಿಯನ್ ($455 ಶತಕೋಟಿ) ಪ್ರಯೋಜನವನ್ನು ನೀಡುವ ಸಾಧ್ಯತೆಯಿದೆ ಎಂದು ಮೊಬೈಲ್ ನೆಟ್‌ವರ್ಕ್ ಆಪರೇಟರ್‌ಗಳನ್ನು ಪ್ರತಿನಿಧಿಸುವ ಜಾಗತಿಕ ಉದ್ಯಮ ಸಂಸ್ಥೆಯ ಇತ್ತೀಚಿಗೆ ವರದಿ ಮಾಡಿತ್ತು.

2030ಕ್ಕೆ ಭಾರತದಲ್ಲಿ 6G:

ಇದನ್ನೂ ಓದಿ

5G ಲಾಂಚ್​ಗೆ ಸಿದ್ಧತೆ ನಡೆಯುತ್ತಿರುವಾಗಲೇ 6ಜಿ ಸೇವೆ ಕೂಡ ಘೋಷಣೆ ಆಗಿದೆ. ಇತ್ತೀಚೆಗಷ್ಟೆ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022 ರ ಗ್ರ್ಯಾಂಡ್ ಫಿನಾಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2030ರ ಒಳಗಾಗಿ 6ಜಿ ಸೇವೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ತಂತ್ರಜ್ಞಾನಗಳ ಬೆಳವಣಿಗೆ ಸಾಕಷ್ಟು ವೇಗವಾಗಿ ನಡೆಯುತ್ತಿದೆ. ಈಗಾಗಲೇ ಡ್ರೋನ್​ಗಳನ್ನು ಕೃಷಿ ಮತ್ತು ಆರೋಗ್ಯ ವಿಭಾಗದಲ್ಲಿ ಬಳಕೆ ಮಾಡಲಾಗುತ್ತಿದೆ. ದೇಶದಲ್ಲಿ ಗೇಮಿಂಗ್ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯಿಂದ ಯುವ ಸಮೂಹಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada