ಪ್ರಯಾಣ ಮಾಡುವಾಗ, ನಾವು ಸಾಮಾನ್ಯವಾಗಿ ಫೋನ್ ಚಾರ್ಜ್ ಮಾಡಲು ಬಸ್ ನಿಲ್ದಾಣಗಳಲ್ಲಿ ಅಥವಾ ರೈಲ್ವೆ ನಿಲ್ದಾಣಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಬಳಸುತ್ತೇವೆ. ಹೀಗೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಸೈಬರ್ ಕ್ರಿಮಿನಲ್ಗಳು (Cyber Crime) ಇದಕ್ಕಾಗಿ ಕಾದು ಕುಳಿತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನೀಡಲಾಗಿರುವ ಚಾರ್ಜಿಂಗ್ ಪಾಯಿಂಟ್‌ಗಳ ಮೂಲಕ ಚಾರ್ಜ್ ಮಾಡಿದರೆ ಸೈಬರ್ ಅಪರಾಧಿಗಳು ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಡೇಟಾವನ್ನು ಕದಿಯುವ ಅಪಾಯವಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಸಿದೆ. ಇದರೊಂದಿಗೆ ಬ್ಯಾಂಕಿಂಗ್ ವಿವರಗಳು ಕೂಡ ಸೈಬರ್ ಕ್ರಿಮಿನಲ್ಗಳ ಕೈ ಸೇರುವ ಸಾಧ್ಯತೆ ಇದೆ ಎಂದಿದೆ.
ಫೋನ್ ಚಾರ್ಜಿಂಗ್ ಮೂಲಕ ಮಾಡುವ ಈ ಹ್ಯಾಕಿಂಗ್ ಅನ್ನು ಜ್ಯೂಸ್ ಜಾಕಿಂಗ್ ಎಂದೂ ಕರೆಯುತ್ತಾರೆ. ಇದಕ್ಕಾಗಿ ಸೈಬರ್ ಅಪರಾಧಿಗಳು ವಿಶೇಷ ಸಾಧನವನ್ನು ಚಾರ್ಜಿಂಗ್ ಪಾಯಿಂಟ್‌ನಲ್ಲಿ ಅಳವಡಿಸುತ್ತಿದ್ದಾರೆ. ನೀವು ಯುಎಸ್‌ಬಿ ಕೇಬಲ್ ಅನ್ನು ಪ್ಲಗ್ ಮಾಡಿದ ತಕ್ಷಣ, ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಡೇಟಾ ಹ್ಯಾಕರ್ಗಳಿಗೆ ವರ್ಗಾವಣೆಯಾಗುತ್ತದೆ.
ಪ್ರೀಮಿಯಂ ಡಿಸೈನ್ನ ವಿವೋ V29e ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆ: ಕೂಡಲೇ ಖರೀದಿಸಿ
ಹೀಗೆ ಚಾರ್ಜ್ ಮಾಡಲು ನೀವು ಹೊರಟರೆ, ನಿಮ್ಮ ಫೋನ್‌ನ ವೈಯಕ್ತಿಕ ಫೋಟೋಗಳು, ವಿಡಿಯೋಗಳು ಮತ್ತು ಬ್ಯಾಂಕಿಂಗ್ ವಿವರಗಳು ಸೈಬರ್ ಅಪರಾಧಿಗಳ ಕೈಗೆ ಸೇರುತ್ತವೆ. ಇದರೊಂದಿಗೆ, ನಿಮ್ಮ ಖಾತೆಯಲ್ಲಿರುವ ಹಣವನ್ನು ದೋಚಬಹುದು. ಈ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು, ಸಾರ್ವಜನಿಕ ಸ್ಥಳಗಳಲ್ಲಿರುವ ಚಾರ್ಜಿಂಗ್ ಸ್ಲಾಟ್ಗಳನ್ನು ಎಂದಿಗೂ ಬಳಸಬೇಡಿ. ಇಲ್ಲದಿದ್ದರೆ ನೀವು ನಿಮ್ಮದೆ ಅಡಾಪ್ಟರ್‌ನೊಂದಿಗೆ ನೇರವಾಗಿ ಚಾರ್ಜ್ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಯುಎಸ್‌ಬಿ ಪೋರ್ಟ್ ಮೂಲಕ ನೇರವಾಗಿ ಚಾರ್ಜ್ ಮಾಡಬಾರದು.
ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ಘಟನೆಯು ಯಾರಿಗಾದರೂ ಸಂಭವಿಸಿದರೆ, ಅಂತಹ ವ್ಯಕ್ತಿಯು ತಡಮಾಡದೆ ತಕ್ಷಣವೇ ಸರ್ಕಾರದ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಬೇಕು. ಕರೆ ಮಾಡಿದ ನಂತರ, ನಿಮಗೆ ಸಂಭವಿಸಿದ ಘಟನೆಯ ಬಗ್ಗೆ ತಿಳಿಸುವ ಮೂಲಕ ದೂರು ನೀಡಿ.
6,000mAh ಬ್ಯಾಟರಿಯ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಬಿಡುಗಡೆ: ಬೆಲೆ 15,999 ರೂ.
ಸಹಾಯವಾಣಿ ಸಂಖ್ಯೆಯನ್ನು ಹೊರತುಪಡಿಸಿ ನೀವು ದೂರು ನೀಡಲು ಇನ್ನೊಂದು ಆಯ್ಕೆಯನ್ನು ಸಹ ಆಯ್ಕೆ ಮಾಡಬಹುದು. https://cybercrime.gov.in/ ಗೆ ಭೇಟಿ ನೀಡುವ ಮೂಲಕ ನೀವು ಆನ್‌ಲೈನ್‌ನಲ್ಲಿ ದೂರು ಸಲ್ಲಿಸಬಹುದು. ಇಂದು ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಸುಮಾರು 5000 ದೂರುಗಳು ಪ್ರತಿದಿನ ದಾಖಲಾಗುತ್ತವೆ. ವಂಚಕರು ಇದುವರೆಗೆ 9 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿಪಶು ಮಾಡಿದ್ದಾರೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ