Jio vs Airtel: ಪ್ರತಿದಿನ 2GB ಡೇಟಾ: ಇದು ಜಿಯೋ-ಏರ್ಟೆಲ್​ನ ಧಮಾಕ ಆಫರ್

ಜಿಯೋ ಹಾಗೂ ಏರ್ಟೆಲ್ ಟೆಲಿಕಾಂನಲ್ಲಿ ಮುಖ್ಯವಾಗಿ ದಿನಕ್ಕೆ 2GB ಡೇಟಾ ಪ್ಲಾನ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ, ಉಚಿತ ಎಸ್​ಎಮ್​ಎಸ್, ಓಟಿಟಿ ಆಫರ್ ಕೂಡ ಇದೆ.

Jio vs Airtel: ಪ್ರತಿದಿನ 2GB ಡೇಟಾ: ಇದು ಜಿಯೋ-ಏರ್ಟೆಲ್​ನ ಧಮಾಕ ಆಫರ್
Airtel and JIO
TV9kannada Web Team

| Edited By: Vinay Bhat

Nov 24, 2022 | 3:44 PM

ದೇಶದ ಟೆಲಿಕಾಂ (Telecom) ವಲಯದಲ್ಲಿ ಜಿಯೋ, ಏರ್ಟೆಲ್ ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಇದೀಗ 5G ಸೇವೆ ನೀಡುವುದರಲ್ಲಿ ಕಂಪನಿ ಬ್ಯುಸಿಯಾಗಿದೆ. ಇದರ ನಡುವೆ ಜಿಯೋವನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟಕ್ಕೇರಲು ಏರ್ಟೆಲ್ ಹಾಗೂ ವಿ ಹರಸಾಹಸ ಪಡುತ್ತಿದೆ. ಮಧ್ಯಮ ಗ್ರಾಹಕರಿಗೆಂದೇ ಈ ಟೆಲಿಕಾಂ ಕಂಪನಿಗಳು ಆಕರ್ಷಕವಾದ ಪ್ರಿಪೇಯ್ಡ್ ಯೋಜನೆಗಳನ್ನು (Prepaid Plans) ಕೂಡ ನೀಡಿದೆ. ಇದರಲ್ಲಿ ಮುಖ್ಯವಾಗಿ ದಿನಕ್ಕೆ 2GB ಡೇಟಾ ಪ್ಲಾನ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ, ಉಚಿತ ಎಸ್​ಎಮ್​ಎಸ್, ಓಟಿಟಿ ಆಫರ್ ಕೂಡ ಇದೆ. ಹಾಗಾದರೆ ಜಿಯೋ, ಏರ್ಟೆಲ್​ನ 2GB ಡೇಟಾದ ಅತ್ಯುತ್ತಮ ಯೋಜನೆಗಳು ಯಾವುದು ಎಂಬುದನ್ನು ನೋಡೋಣ.

ಜಿಯೋ 2GB ಡೇಟಾ ಪ್ಲಾನ್:

ರೂ. 249: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟಾರೆಯಾಗಿ 46GB ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 23 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.

ರೂ. 299: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟಾರೆಯಾಗಿ 56GB ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.

ರೂ. 533: ಈ ಪ್ಲಾನ್​ನಲ್ಲಿ ಕೂಡ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟಾರೆಯಾಗಿ 112GB ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 56 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.

ರೂ. 719: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟಾರೆಯಾಗಿ 168GB ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 84 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.

ರೂ. 2879: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟಾರೆಯಾಗಿ 730GB ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 365 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜಿಯೋ ಆ್ಯಪ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.

ಏರ್ಟೆಲ್ 2GB ಡೇಟಾ ಪ್ಲಾನ್:

ರೂ. 319: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್​ಎಮ್​ಎಸ್​ ಫ್ರೀ ಇದೆ. ಇದು ಒಂದು ತಿಂಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.

ರೂ. 359: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.

ರೂ. 399: ಈ ಪ್ಲಾನ್​ನಲ್ಲಿ ದಿನಕ್ಕೆ 2.5GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ.

ರೂ. 499: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ಒಂದು ವರ್ಷದ ಡಿಸ್ನಿ+ ಹಾಟ್​ಸ್ಟಾರ್ ಮೊಬೈಲ್ ವರ್ಷನ್ ಚಂದಾದಾರಿಕೆ ಸಿಗುತ್ತದೆ.

ರೂ. 549: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 56 ದಿನಗಳ ವ್ಯಾಲಿಡಿಯನ್ನು ಹೊಂದಿದೆ.

ರೂ. 839: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 84 ದಿನಗಳ ವ್ಯಾಲಿಡಿಯನ್ನು ಹೊಂದಿದೆ.

ರೂ. 2,999: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 365 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಮೊಬೈಲ್ ವರ್ಷನ್ ಚಂದಾದಾರಿಕೆ ಸಿಗುತ್ತದೆ.

ಇದನ್ನೂ ಓದಿ

ರೂ. 3,259: ಈ ಪ್ಲಾನ್​ನಲ್ಲಿ ದಿನಕ್ಕೆ 2.5GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 365 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ ಹಾಟ್​ಸ್ಟಾರ್ ಮೊಬೈಲ್ ವರ್ಷನ್ ಚಂದಾದಾರಿಕೆ ಸಿಗುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada