Reliance Jio: ರಿಲಯನ್ಸ್ ಜಿಯೋದಿಂದ ಉಚಿತ ನೆಟ್​ಫ್ಲಿಕ್ಸ್​ ಚಂದಾದಾರಿಕೆ: ಈ ಆಫರ್ ಮಿಸ್ ಮಾಡ್ಬೇಡಿ

Netflix subscription: ಪ್ರಮುಖವಾಗಿ ಜಿಯೋ ಬಳಿ ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ+ಹಾಟ್‌ಸ್ಟಾರ್ ಪ್ಯಾಕೇಜ್‌ಗಳೊಂದಿಗೆ ಡೇಟಾವನ್ನು ನೀಡುವ ಅಗ್ಗದ ಯೋಜನೆಗಳಿವೆ. ಈ ಪ್ರಯೋಜನಗಳು ಹೆಚ್ಚಿನ ವೇಗದ ಡೇಟಾ ಮತ್ತು ವಿವಿಧ ಒಟಿಟಿ (OTT) ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಒಳಗೊಂಡಿವೆ.

Reliance Jio: ರಿಲಯನ್ಸ್ ಜಿಯೋದಿಂದ ಉಚಿತ ನೆಟ್​ಫ್ಲಿಕ್ಸ್​ ಚಂದಾದಾರಿಕೆ: ಈ ಆಫರ್ ಮಿಸ್ ಮಾಡ್ಬೇಡಿ
JIO and Netflix
TV9kannada Web Team

| Edited By: Vinay Bhat

Jul 05, 2022 | 2:28 PM

ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance JIO) ತನ್ನ ಗ್ರಾಹಕರನ್ನು ಸೆಳೆಯಲು ಈಗಾಗಲೇ ಸಾಕಷ್ಟು ಅಗ್ಗದ ಪ್ಲಾನ್​ಗಳನ್ನು ಜಾರಿಗೆ ತಂದಿದೆ. ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಬಂದಾಗಿನಿಂದ ಬೆಲೆ ಯುದ್ಧ ನಡೆಯುತ್ತಲೇ ಇದ್ದು, ಈಗಲೂ ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆ ಮುಂದುವರೆದಿದೆ. ಪ್ರಮುಖವಾಗಿ ಜಿಯೋ ಬಳಿ ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ+ಹಾಟ್‌ಸ್ಟಾರ್ ಪ್ಯಾಕೇಜ್‌ಗಳೊಂದಿಗೆ ಡೇಟಾವನ್ನು ನೀಡುವ ಅಗ್ಗದ ಯೋಜನೆಗಳಿವೆ. ಪ್ರಿಪೇಯ್ಡ್ ಯೋಜನೆಗಳಿಗೆ ಹೋಲಿಸಿಕೊಂಡರೆ ಪೋಸ್ಟ್‌ಪೇಯ್ಡ್ (Postpaid) ಚಂದಾದಾರರಿಗೆ ಅತ್ಯುತ್ತಮ ಕೊಡುಗೆಗಳನ್ನು ಜಿಯೋ ಒದಗಿಸುತ್ತಿದೆ. ಈ ಪ್ರಯೋಜನಗಳು ಹೆಚ್ಚಿನ ವೇಗದ ಡೇಟಾ ಮತ್ತು ವಿವಿಧ ಒಟಿಟಿ (OTT) ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಒಳಗೊಂಡಿವೆ. ಹಾಗಾದರೆ ಜನಪ್ರಿಯ ಜಿಯೋ ಪೋಸ್ಟ್‌ಪೇಯ್ಡ್ ಯೋಜನೆಗಳ ಪಟ್ಟಿ ಇಲ್ಲಿದೆ.

ಜಿಯೋ ಪೋಸ್ಟ್ ಪೇಯ್ಡ್ ಪ್ಲಾನ್​ನಲ್ಲಿ 399 ರೂಪಾಯಿ ಅಗ್ಗದ ಯೋಜನೆಯಾಗಿದೆ. ಈ ಯೋಜನೆಯಲ್ಲಿ  ಎಲ್ಲಾ ಮೂರು ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಂ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಉಚಿತವಾಗಿ ಸಿಗುತ್ತದೆ. ಈ ಯೋಜನೆಯು 75GB ಡೇಟಾದೊಂದಿಗೆ 200GB ಗರಿಷ್ಠ ಡೇಟಾ ರೋಲ್ಓವರ್ ನೀಡುತ್ತದೆ. 75GB ಡೇಟಾ ಮಿತಿ ದಾಟಿದ ನಂತರ, ಬಳಕೆದಾರರು 10 ರೂಪಾಯಿ GB ದರದಲ್ಲಿ ಡೇಟಾವನ್ನು ಖರೀದಿಸಬೇಕಾಗುತ್ತದೆ. ಅಲ್ಲದೆ ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್ ನೀಡುತ್ತದೆ.

Xiaomi 12S series: ಒಂದಲ್ಲ ಎರಡಲ್ಲ ಬರೋಬ್ಬರಿ 4 ಸ್ಮಾರ್ಟ್​​ಫೋನ್ ಬಿಡುಗಡೆ ಮಾಡಿದ ಶವೋಮಿ: ಯಾವುವು?, ಬೆಲೆ ಎಷ್ಟು?

ಇನ್ನು 599 ರೂ. ಪೋಸ್ಟ್ ಪೇಯ್ಡ್ ಯೋಜಯುನೆ ಬಿಲ್ಲಿಂಗ್ ಸೈಕಲ್‌ನಲ್ಲಿ ಗರಿಷ್ಠ 100GB ಡೇಟಾವನ್ನು ಮತ್ತು 200GB ಯ ಗರಿಷ್ಠ ಡೇಟಾ ರೋಲ್‌ಓವರ್ ಅನ್ನು ನೀಡುತ್ತದೆ. ನೀಡಿರುವ ಮಿತಿಯು ಮುಗಿದ ನಂತರ ಬಳಕೆದಾರರಿಗೆ ಪ್ರತಿ GB ಗೆ 10 ರೂ. ಶುಲ್ಕ ವಿಧಿಸಲಾಗುತ್ತದೆ. ಇದಲ್ಲದೆ, JioPostpaid ಸಂಪರ್ಕವನ್ನು ಬಳಸಿಕೊಂಡು ಹೆಚ್ಚುವರಿ ಕುಟುಂಬದ ಸದಸ್ಯರೊಂದಿಗೆ (ಒಬ್ಬರು) ಯೋಜನೆಯನ್ನು ಹಂಚಿಕೊಳ್ಳಬಹುದು. ಈ ಯೋಜನೆ ಕೂಡ ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಂ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಎಲ್ಲಾ ಮೂರು ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ.

799 ರೂ. ಯೋಜನೆಯು ಪ್ರತಿ ಬಿಲ್ಲಿಂಗ್ ಸೈಕಲ್‌ಗೆ ಗರಿಷ್ಠ 150GB ಡೇಟಾವನ್ನು ಒದಗಿಸುತ್ತದೆ ಮತ್ತು 200GB ಡೇಟಾ ರೋಲ್‌ಓವರ್ ಅನ್ನು ಸಹ ಒದಗಿಸುತ್ತದೆ. ಯೋಜನೆಯ ಪ್ರಯೋಜನಗಳನ್ನು ಕುಟುಂಬ ಯೋಜನೆಯ ಅಡಿಯಲ್ಲಿ 2 ಹೆಚ್ಚುವರಿ ಪೋಸ್ಟ್‌ಪೇಯ್ಡ್ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬಹುದು. ಈ ಯೋಜನೆ ಕೂಡ ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಂ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಎಲ್ಲಾ ಮೂರು ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ.

ಕೊನೆಯದಾಗಿ 999 ರೂ. ಯೋಜನೆಯು ಪ್ರತಿ ಬಿಲ್ಲಿಂಗ್ ಸೈಕಲ್‌ಗೆ ಗರಿಷ್ಠ 200GB ನೀಡುತ್ತದೆ ಮತ್ತು ಕುಟುಂಬ ಯೋಜನೆಯಡಿಯಲ್ಲಿ 3 ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ನೀಡುತ್ತದೆ. ಗರಿಷ್ಠ ಡೇಟಾ ರೋಲ್‌ಓವರ್ 500GB ಆಗಿದೆ.ಈ ಯೋಜನೆ ಕೂಡ ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಂ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಎಲ್ಲಾ ಮೂರು ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ನೀಡುತ್ತದೆ.

ಇದನ್ನೂ ಓದಿ

Infinix Note 12 5G: ಬಜೆಟ್ ಬೆಲೆಯ ಸ್ಮಾರ್ಟ್​​ಫೋನ್ ಕಿಂಗ್ ಇನ್ಫಿನಿಕ್ಸ್​ನಿಂದ ನೋಟ್‌ 12 5G ಬಿಡುಗಡೆಗೆ ಸಿದ್ಧತೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada