ಮನಸ್ಸನ್ನು ನಿಯಂತ್ರಿಸುತ್ತೆ ಈ ರಿಮೋಟ್ ಮೈಂಡ್ ಕಂಟ್ರೋಲ್ ತಂತ್ರಜ್ಞಾನ
ದಕ್ಷಿಣ ಕೊರಿಯಾದ ಇನ್‌ಸ್ಟಿಟ್ಯೂಟ್ ಫಾರ್ ಬೇಸಿಕ್ ಸೈನ್ಸ್ (IBS) ನ ಸಂಶೋಧಕರು ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಕಾಂತೀಯ ಕ್ಷೇತ್ರಗಳನ್ನು ಬಳಸಿಕೊಂಡು ದೂರದಿಂದಲೇ ಮೆದುಳನ್ನು ನಿರ್ವಹಿಸುತ್ತದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನೋಡಲು ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದೆ. ಇಲಿಗಳ ಮೇಲೆ ಹಸಿವು ಕಡಿಮೆ ಮಾಡುವಂಥಾ ಪ್ರಯೋಗ ಮಾಡಲಾಯಿತು.ಈ ಪ್ರಯೋಗದಲ್ಲಿ ಏನೇನಾಯ್ತು? ಮುಂದೆ ಓದಿ...

ತಂತ್ರಜ್ಞಾನದಲ್ಲಿ ಹೊಸ ಬೆಳವಣಿಗೆಗಳು ಆಗುತ್ತಲೇ ಇರುತ್ತವೆ. ಇಂಥಾ ಹೊಸತು ಆವಿಷ್ಕಾರಕ್ಕೆ ಹೊಸ ಸೇರ್ಪಡೆ, ಮನಸ್ಸನ್ನು ನಿಯಂತ್ರಿಸಬಲ್ಲ ತಂತ್ರಜ್ಞಾನ. ಹೌದು, ದಕ್ಷಿಣ ಕೊರಿಯಾದಲ್ಲಿ ಮನಸ್ಸನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವಿರುವ ರಿಮೋಟ್ ಮೈಂಡ್ ಕಂಟ್ರೋಲ್ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಕೊರಿಯಾದ ಇನ್‌ಸ್ಟಿಟ್ಯೂಟ್ ಫಾರ್ ಬೇಸಿಕ್ ಸೈನ್ಸ್ (IBS) ನ ಸಂಶೋಧಕರು ಈ ಹಾರ್ಡ್‌ವೇರ್ ಅಭಿವೃದ್ಧಿಪಡಿಸಿದ್ದಾರೆ. ಇದು ಕಾಂತೀಯ ಕ್ಷೇತ್ರಗಳನ್ನು ಬಳಸಿಕೊಂಡು ದೂರದಿಂದಲೇ ಮೆದುಳನ್ನು ನಿರ್ವಹಿಸುತ್ತದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನೋಡಲು ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದೆ. ಇಲಿಗಳ ಮೇಲೆ ಹಸಿವು ಕಡಿಮೆ ಮಾಡುವಂಥಾ ಪ್ರಯೋಗ ಮಾಡಲಾಯಿತು. ಹೀಗೆ ಪ್ರಯೋಗ ಮಾಡಿದಾಗ ಅವುಗಳ ದೇಹದ ತೂಕದಲ್ಲಿ ಶೇ 10 ಅಂದರೆ 4.3 ಗ್ರಾಂ ನಷ್ಟವಾಗಿದೆ ಎಂದಿದ್ದಾರೆ ವಿಜ್ಞಾನಿಗಳು. ಕಾಂತೀಯ ಕ್ಷೇತ್ರಗಳನ್ನು ಬಳಸಿಕೊಂಡು ನಿರ್ದಿಷ್ಟ ಮೆದುಳಿನ ಪ್ರದೇಶಗಳನ್ನು ಮುಕ್ತವಾಗಿ ನಿಯಂತ್ರಿಸುವ ವಿಶ್ವದ ಮೊದಲ ತಂತ್ರಜ್ಞಾನ ಇದಾಗಿದೆ ಎಂದು ರಸಾಯನಶಾಸ್ತ್ರ ಮತ್ತು ನ್ಯಾನೊಮೆಡಿಸಿನ್ ಪ್ರಾಧ್ಯಾಪಕರರು ಹೇಳಿದ್ದಾರೆ. ದಕ್ಷಿಣ ಕೊರಿಯಾದ IBS ಸೆಂಟರ್ ಫಾರ್ ನ್ಯಾನೊಮೆಡಿಸಿನ್‌ನ ನಿರ್ದೇಶಕರಾಗಿರುವ ಸಂಶೋಧಕ, ಡಾ ಚಿಯೋನ್ ಜಿನ್ವೂ, ಹೊಸ ಹಾರ್ಡ್‌ವೇರ್ ಅನ್ನು ವಿವಿಧ ಆರೋಗ್ಯ ಅಪ್ಲಿಕೇಶನ್‌ಗಳಿಗೆ ಬಳಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. “ಮೆದುಳಿನ ಕಾರ್ಯಗಳು, ಅತ್ಯಾಧುನಿಕ ಕೃತಕ ನರಗಳ ಜಾಲಗಳು, ಟುವೇ ಮೆದುಳಿನ-ಕಂಪ್ಯೂಟರ್ ಇಂಟರ್ಫೇಸ್ ತಂತ್ರಜ್ಞಾನಗಳು ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಿಗೆ ಹೊಸ ಚಿಕಿತ್ಸೆಗಳನ್ನು ಅರ್ಥಮಾಡಿಕೊಳ್ಳಲು ಸಂಶೋಧನೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದಿದ್ದಾರೆ ಡಾ ಚಿಯೋನ್. ಆದರೆ ರಿಮೋಟ್ ಮೈಂಡ್ ಕಂಟ್ರೋಲ್‌ನ ವೈಜ್ಞಾನಿಕ ಕಾಲ್ಪನಿಕ ಗುಣಮಟ್ಟದ ಹೊರತಾಗಿಯೂ, ದಶಕಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕಾಂತೀಯ ಕ್ಷೇತ್ರ (ಮ್ಯಾಗ್ನೆಟಿಕ್ ಫೀಲ್ಡ್‌ಗಳನ್ನು) ಯಶಸ್ವಿಯಾಗಿ...