ಒಳಚರಂಡಿ ಸ್ವಚ್ಛತೆಗೆ ರೋಬಾಟ್ ಯಂತ್ರ ಬಳಕೆ: ಮೈಸೂರು ಪಾಲಿಕೆಯ ನೂತನ ಪ್ರಯತ್ನಕ್ಕೆ ಜೈ ಜೈ

ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ಈ ರೋಬೋಟ್ ಬಹಳ ಉಪಯುಕ್ತವಾಗಲಿದ್ದು, ಕಾರ್ಮಿಕರ ಅನಾರೋಗ್ಯ, ಅವಘಡಗಳ ತಪ್ಪಿಸಲು ಇದು ಸಹಾಯಕಾರಿಯಾಗಲಿದೆ ಹಾಗೂ ಈ ಯಂತ್ರ ಅಳವಡಿಕೆಯಿಂದ ಸ್ವಚ್ಛತೆ ಯಲ್ಲಿ ಮತ್ತೊಂದು ಹೆಜ್ಜೆ ನಾವು ಮುಂದೆಸಾಗುತ್ತೇವೆ ಎಂದು ಪಾಲಿಕೆ ಆಯುಕ್ತ ಗುರುದತ್ತ್ ಹೆಗ್ಡೆ ಹೇಳಿದರು.

  • TV9 Web Team
  • Published On - 13:01 PM, 29 Jan 2021
ಒಳಚರಂಡಿ ಸ್ವಚ್ಛತೆಗೆ ರೋಬಾಟ್ ಯಂತ್ರ ಬಳಕೆ: ಮೈಸೂರು ಪಾಲಿಕೆಯ ನೂತನ ಪ್ರಯತ್ನಕ್ಕೆ ಜೈ ಜೈ
ಬ್ಯಾಂಡಿಕೂಟ್ ರೋಬೊಟ್

ಮೈಸೂರು: ಒಳಚರಂಡಿ ಸ್ವಚ್ಛಗೊಳಿಸುವಾಗ ಅಮಾಯಕ ಜೀವಗಳು ಪ್ರಾಣ ಕಳೆದುಕೊಳ್ಳುವುದು ಆಗಾಗ್ಗೆ ನಡೆಯುತ್ತಲೇ ಇದೆ. ನಿನ್ನೆಯಷ್ಟೇ ಕಲಬುರ್ಗಿ ನಗರದಲ್ಲಿ ಇಂತಹ ದುರಂತ ಸಂಭವಿಸಿ, ಇಬ್ಬರು ಪ್ರಾಣ ತೆತ್ತಿದ್ದಾರೆ. ಇದಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ಮೈಸೂರು ನಗರ ಪಾಲಿಕೆಯು ಕಾಲಕ್ಕೆ ತಕ್ಕಂತೆ ಹೊಸ ವಿಧಾನಕ್ಕೆ ಮೊರೆಹೋಗಿದೆ.  ಈ ವಿಧಾನ ಯಶಸ್ವಿಯಾದರೆ ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕವರ್ಗ ನಿಟ್ಟುಸಿರುಬಿಡಬಹುದು.

ತಾಜಾ ಬೆಳವಣಿಗೆಯಲ್ಲಿ ಮೈಸೂರು ನಗರ ಪಾಲಿಕೆಯು ಒಳಚರಂಡಿ ಸ್ವಚ್ಛಗೊಳಿಸಲು ರೋಬಾಟ್ ಯಂತ್ರವನ್ನು ಅಳವಡಿಸಲು ಮುಂದಾಗಿದ್ದು, ಶೀಘ್ರದಲ್ಲೇ ಬ್ಯಾಂಡಿಕೂಟ್ ರೋಬಾಟ್​ಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ.

ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಈ ರೋಬಾಟ್ ಬಹಳ ಉಪಯುಕ್ತವಾಗಲಿದ್ದು, ಕಾರ್ಮಿಕರ ಅನಾರೋಗ್ಯ, ಅವಘಡಗಳ ತಪ್ಪಿಸಲು ಇದು ಸಹಾಯಕಾರಿಯಾಗಲಿದೆ ಹಾಗೂ ಈ ಯಂತ್ರ ಅಳವಡಿಕೆಯಿಂದ ಸ್ವಚ್ಛತೆ ಯಲ್ಲಿ ಮತ್ತೊಂದು ಹೆಜ್ಜೆ ನಾವು ಮುಂದೆಸಾಗುತ್ತೇವೆ ಎಂದು ಪಾಲಿಕೆ ಆಯುಕ್ತ ಗುರುದತ್ತ್ ಹೆಗ್ಡೆ ಹೇಳಿದರು.

robobot drinage 1

ಒಳಚರಂಡಿ ಸ್ವಚ್ಛಗೊಳಿಸಲು ರೊಬೋಟ್ ಯಂತ್ರ

ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮೈಸೂರು ಪಾಲಿಕೆ ರಾಜ್ಯದಲ್ಲೇ ಮೊದಲ ಬಾರಿಗೆ ಈ ವಿನೂತನ ಪ್ರಯತ್ನಕ್ಕೆ ಸಜ್ಜಾಗಿದ್ದು, ಬ್ಯಾಂಡಿಕೂಟ್ ರೋಬೊಟ್ ಖರೀದಿ ಮಾಡಿದೆ. ಶೀಘ್ರದಲ್ಲೇ ನಗರದ ಒಳಚರಂಡಿ ಸ್ವಚ್ಛತೆ ರೊಬೋಟ್ ಬಳಕೆಯಾಗಲಿದ್ದು, ನಗರಾಭಿವೃದ್ಧಿ ಸಚಿವರಿಂದ ಯಂತ್ರಕ್ಕೆ ಚಾಲನೆ ಸಿಗಲಿದೆ ಎಂದು ಪಾಲಿಕೆ ಆಯುಕ್ತ ಗುರುದತ್ತ್ ಹೆಗ್ಡೆ ಮಾಹಿತಿ ನೀಡಿದ್ದಾರೆ.

robobot drinage 2

ಒಳಚರಂಡಿ ಸ್ವಚ್ಛಗೊಳಿಸಲು ಮೈಸೂರು ಪಾಲಿಕೆ ನೂತನ ಪ್ರಯತ್ನ

ಮ್ಯಾನ್​ಹೋಲ್ ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಗುತ್ತಿಗೆ ಕಾರ್ಮಿಕರ ಸಾವು