ಇನ್ನುಮುಂದೆ ಕಳೆದುಹೋದ ಮೊಬೈಲ್ ಫೋನ್ ಹುಡುಕುವುದು ಸುಲಭ, ಭಾರತದಲ್ಲಿ ಸಂಚಾರ ಸಾಥಿ (Sanchar Saathi) ಪೋರ್ಟಲ್ ಪ್ರಾರಂಭಿಸಲಾಗಿದ್ದು, ಕಳೆದು ಹೋದ ಮೊಬೈಲ್ ಬಗ್ಗೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ದೇಶದ ಯಾವುದೇ ಮೂಲೆಯಲ್ಲಿ ನಿಮ್ಮ ಮೊಬೈಲ್ ಫೋನ್ ಕಳೆದುಹೋದರೆ ಅಥವಾ ಕಳ್ಳತನವಾಗಿದ್ದರೆ, ಅದನ್ನು ಕಂಡುಹಿಡಿಯಲು ಸರ್ಕಾರದ ಸಂಚಾರ ಸಾಥಿ ಪೋರ್ಟಲ್ ನಿಮಗೆ ಸಹಾಯ ಮಾಡುತ್ತದೆ. ಈ ಪೋರ್ಟಲ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಿದ್ದಾರೆ. ಈ ಪೋರ್ಟಲ್‌ನ ವಿಶೇಷತೆಯೆಂದರೆ ಇದನ್ನು ಹಿಂದಿ, ಇಂಗ್ಲಿಷ್ ಮತ್ತು ದೇಶದ ಎಲ್ಲಾ ಭಾಷೆಗಳಲ್ಲಿ ಬಳಸಬಹುದು.
ಸಂಚಾರ ಸಾಥಿ ಪೋರ್ಟಲ್ ಸಿಇಐಆರ್ ನೋ ಯುವರ್ ಮೊಬೈಲ್ ಮತ್ತು ಎಎಸ್ಟಿಆರ್ಗಳನ್ನು ಒಳಗೊಂಡಿದೆ. ಸಿಇಐಆರ್ ಆರಂಭಿಕ ಪ್ರಾಜೆಕ್ಟ್ ಆಗಿದ್ದು, ಟೆಲಿಕಾಂ ಸಚಿವಾಲಯವು ದೇಶದ ಕೆಲವು ಟೆಲಿಕಾಂ ಸರ್ಕಲ್ಗಳಲ್ಲಿ ಆರಂಭಿಸಿದೆ. ಈ ಪೋರ್ಟಲ್ , ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಆ್ಯಂಡ್ ಕನ್ಸೂಮರ್ ಪ್ರೊಟೆಕ್ಷನ್ ಮತ್ತೊಂದು ಮಾದರಿಯನ್ನು ಒಳಗೊಂಡಿದೆ.
ಮತ್ತಷ್ಟು ಓದಿ: Tech Tips: ಇನ್ನುಂದೆ ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ: ಸರ್ಕಾರ ನಿಮ್ಮ ಮೊಬೈಲ್ ಹುಡುಕಿ ಕೊಡುತ್ತೆ
ಕಳೆದು ಹೋದ ಅಥವಾ ಕಳ್ಳತನವಾದ ಮೊಬೈಲ್ ಫೋನ್ಗಳನ್ನು ಮರಳಿ ಪಡೆಯಲು ಸಿಇಐಆರ್ ನೆರವು ಒದಗಿಸಲಿದೆ. ಕಳೆದುಹೋದ ಅಥವಾ ಕಳ್ಳತನ ಮಾಡಲಾದ ಮೊಬೈಲ್ ಫೋನ್ಗಳ ಬಳಕೆಯನ್ನು ಎಲ್ಲೆಡೆ ನಿರ್ಬಂಧಿಸಲು ಅವಕಾಶ ಕಲ್ಪಿಸಿಕೊಡುತ್ತದೆ.
ಕಳೆದುಹೋದ ಮೊಬೈಲ್ಅನ್ನು ಪತ್ತೆಹಚ್ಚುವುದು ಹೇಗೆ?
ತಂತ್ರಜ್ಞಾನಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:59 am, Wed, 17 May 23