AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ತಿಂಗಳಿಗೆ ಬರೋಬ್ಬರಿ 50,000 ರೂ.: ಪಾಕಿಸ್ತಾನದಲ್ಲಿ ಗಗನಕ್ಕೇರಿದ ಮೊಬೈಲ್ ರೀಚಾರ್ಜ್ ಬೆಲೆ

ಸರ್ಕಾರವು ಉಪಗ್ರಹ ಇಂಟರ್ನೆಟ್ ಅನ್ನು ಅನುಮೋದಿಸಿದರೆ, ಸಾಮಾನ್ಯ ಪಾಕಿಸ್ತಾನಿಗಳು ಅದನ್ನು ಬಳಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಪಾಕಿಸ್ತಾನದಲ್ಲಿ ಉಪಗ್ರಹ ಇಂಟರ್ನೆಟ್ ಬೆಲೆ ಗಗನಕ್ಕೇರುತ್ತಿರುವುದರಿಂದ ಇಂತಹ ಪ್ರಶ್ನೆ ತಲೆ ಎತ್ತಿದೆ. ಎಲೋನ್ ಮಸ್ಕ್ ಅವರ ಉಪಗ್ರಹ ಇಂಟರ್ನೆಟ್ ಸೇವೆ ಸ್ಟಾರ್‌ಲಿಂಕ್ ಅನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಈಗ ಅದರ ಬೆಲೆ ಬಹಿರಂಗವಾಗಿದೆ.

ಒಂದು ತಿಂಗಳಿಗೆ ಬರೋಬ್ಬರಿ 50,000 ರೂ.: ಪಾಕಿಸ್ತಾನದಲ್ಲಿ ಗಗನಕ್ಕೇರಿದ ಮೊಬೈಲ್ ರೀಚಾರ್ಜ್ ಬೆಲೆ
Pakistan Star Link
Follow us
ಮಾಲಾಶ್ರೀ ಅಂಚನ್​
| Updated By: Vinay Bhat

Updated on: Feb 11, 2025 | 11:58 AM

ನಿಧಾನಗತಿಯ ಇಂಟರ್ನೆಟ್ ವೇಗದ ಸಮಸ್ಯೆ ಪಾಕಿಸ್ತಾನದಲ್ಲಿ ತುಂಬಾ ಹಳೆಯದು. ಸೆನ್ಸಾರ್‌ಶಿಪ್‌ನಿಂದಾಗಿ ಇಂಟರ್ನೆಟ್ ವೇಗ ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಸರ್ಕಾರ ಜಲಾಂತರ್ಗಾಮಿ ಕೇಬಲ್‌ಗಳನ್ನು ಕಡಿತಗೊಳಿಸಿರುವುದರಿಂದ ಇಂಟರ್ನೆಟ್ ವೇಗ ಕಡಿಮೆಯಾಗಿದೆ ಎಂದು ಪಾಕಿಸ್ತಾನ ಹೇಳುತ್ತಿದೆ. ನಿಧಾನಗತಿಯ ಇಂಟರ್ನೆಟ್ ವೇಗದ ಸಮಸ್ಯೆಯನ್ನು ನಿವಾರಿಸಲು, ಸರ್ಕಾರವು ಉಪಗ್ರಹ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸುವತ್ತ ಕೆಲಸ ಮಾಡುತ್ತಿದೆ. ಪಾಕಿಸ್ತಾನದಲ್ಲಿ ಶೀಘ್ರದಲ್ಲೇ ಸ್ಯಾಟಲೈಟ್ ಇಂಟರ್ನೆಟ್‌ಗೆ ಅನುಮೋದನೆ ಸಿಗಬಹುದು ಎಂದು ನಂಬಲಾಗಿದೆ.

ಮಾಸಿಕ ರೀಚಾರ್ಜ್ ಯೋಜನೆ 50 ಸಾವಿರ ರೂಪಾಯಿಗಳು:

ಸರ್ಕಾರವು ಉಪಗ್ರಹ ಇಂಟರ್ನೆಟ್ ಅನ್ನು ಅನುಮೋದಿಸಿದರೆ, ಸಾಮಾನ್ಯ ಪಾಕಿಸ್ತಾನಿಗಳು ಅದನ್ನು ಬಳಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ವಾಸ್ತವವಾಗಿ, ಪಾಕಿಸ್ತಾನದಲ್ಲಿ ಉಪಗ್ರಹ ಇಂಟರ್ನೆಟ್ ಬೆಲೆ ಗಗನಕ್ಕೇರುತ್ತಿರುವುದರಿಂದ ಇಂತಹ ಪ್ರಶ್ನೆ ತಲೆ ಎತ್ತಿದೆ. ಎಲೋನ್ ಮಸ್ಕ್ ಅವರ ಉಪಗ್ರಹ ಇಂಟರ್ನೆಟ್ ಸೇವೆ ಸ್ಟಾರ್‌ಲಿಂಕ್ ಅನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಈಗ ಅದರ ಬೆಲೆ ಬಹಿರಂಗವಾಗಿದ್ದು, ಅದರ ಪ್ರಕಾರ ಸ್ಯಾಟಲೈಟ್ ಮೊಬೈಲ್ ಪ್ಯಾಕೇಜ್‌ನ ಬೆಲೆ 50 ಸಾವಿರ ರೂ. ಆಗಿದೆ. ಈ ಬೆಲೆಯಲ್ಲಿ, 50-250 Mbps ವೇಗವನ್ನು ನೀಡಲಾಗುತ್ತಿದ್ದು, ಹಾರ್ಡ್‌ವೇರ್‌ಗಾಗಿ 120,000 ಪಾಕಿಸ್ತಾನಿ ರೂಪಾಯಿಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಈ ಬೆಲೆಗೆ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನೇ ಖರೀದಿಸಬಹುದು.

ಬಿಸಿನೆಸ್ ಪ್ಯಾಕ್ ಯೋಜನೆ 95 ಸಾವಿರ ರೂಪಾಯಿಗಳು:

ಬಿಸಿನೆಸ್ ಪ್ಯಾಕೇಜ್ ಯೋಜನೆಯ ಬಗ್ಗೆ ನೋಡುವುದಾದರೆ, ಇದರ ಮಾಸಿಕ ಬೆಲೆ 35 ಸಾವಿರ ರೂ. ಆಗಿದೆ. ಅದರ ಹಾರ್ಡ್‌ವೇರ್‌ನಲ್ಲಿ ಸುಮಾರು 110,000 ರೂ. ಗಳ ಒಂದು ಬಾರಿ ಹೂಡಿಕೆ ಮಾಡಬೇಕಾಗುತ್ತದೆ. ಎಲಾನ್ ಮಸ್ಕ್ ಅವರ ಸ್ಯಾಟಲೈಟ್ ಇಂಟರ್ನೆಟ್ ಬಿಸಿನೆಸ್ ಪ್ಯಾಕೇಜ್‌ನ ಬೆಲೆ ತಿಂಗಳಿಗೆ 95 ಸಾವಿರ ರೂ. ಗಳಾಗಿರುತ್ತದೆ. ಈ ಯೋಜನೆಯಲ್ಲಿ ನೀವು 100-500 Mbps ವೇಗವನ್ನು ಪಡೆಯುತ್ತೀರಿ. ಅದೇ ಹಾರ್ಡ್‌ವೇರ್‌ಗಾಗಿ 220,000 ರೂ. ಗಳನ್ನು ಖರ್ಚು ಮಾಡಬೇಕಾಗುತ್ತದೆ.

Fake IVR Call: ನಕಲಿ ಐವಿಆರ್ ಕರೆ ಎಂದರೇನು?, ಅದನ್ನು ನೀವು ಹೀಗೆ ಗುರುತಿಸಬಹುದು?

ಉಪಗ್ರಹ ಇಂಟರ್ನೆಟ್ ಸೇವೆ ಎಂದರೇನು?:

ಎಲೋನ್ ಮಸ್ಕ್ ಸಾವಿರಾರು ಉಪಗ್ರಹಗಳನ್ನು ಭೂಮಿಯ ಕೆಳ-ಕಕ್ಷೆಗೆ ಕಳುಹಿಸಿದ್ದಾರೆ, ಇದು ನೆಲದ ಮೇಲಿನ ಕಿರಣಗಳ ಮೂಲಕ ಉಪಗ್ರಹ ಇಂಟರ್ನೆಟ್ ಅನ್ನು ಒದಗಿಸುತ್ತವೆ. ಇದರಲ್ಲಿ ಯಾವುದೇ ತಂತಿ ಅಥವಾ ಟವರ್​ಗಳ ಅಗತ್ಯವಿರುವುದಿಲ್ಲ. ಉಪಗ್ರಹ ಇಂಟರ್ನೆಟ್ ಸೇವೆಗೆ ರಿಸೀವರ್ ಅಗತ್ಯವಿದೆ. ಇದರರ್ಥ ಅಗತ್ಯವಿದ್ದರೆ, ಇದಕ್ಕಾಗಿ ಹಾರ್ಡ್‌ವೇರ್ ವೆಚ್ಚವನ್ನು ಭರಿಸಬೇಕಾಗುತ್ತದೆ.

11 GBPS ಭಾರತಕ್ಕೆ ಮೀಸಲು:

ಉಪಗ್ರಹದಿಂದ ಇಂಟರ್ನೆಟ್‌ ಸೇವೆ ಒದಗಿಸುವ ಯೋಜನೆಯಡಿ ಒನ್‌ ವೆಬ್‌ ಕಂಪನಿ ಜಗತ್ತಿನ ಬೇರೆ ಬೇರೆ ದೇಶಗಳಿಂದ 616 ಉಪಗ್ರಹಗಳನ್ನು ಈಗಾಗಲೇ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಜಗತ್ತಿನಾದ್ಯಂತ ಈ ವರ್ಷಾಂತ್ಯಕ್ಕೆ ಉಪಗ್ರಹ ಇಂಟರ್ನೆಟ್‌ ಸೇವೆ ಆರಂಭಿಸಲು ಇಷ್ಟು ಉಪಗ್ರಹಗಳು ಸಾಕು ಎಂದು ಕಂಪನಿ ಹೇಳಿಕೊಂಡಿದೆ. ಒನ್​​ ವೆಬ್ ಜಾಗತಿಕ ಸಾಮರ್ಥ್ಯವನ್ನು 1.1 TBPS ಹೊಂದಿದ್ದು ಅದರಲ್ಲಿ 11 GBPS ಭಾರತಕ್ಕೆ ಮೀಸಲಾಗಿದೆಯಂತೆ. ಭಾರತಿ ಗ್ರೂಪ್ ಸಂಸ್ಥಾಪಕರು ಭಾರತದಲ್ಲಿ ಸೇವೆಗಳನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಅಂತಿಮಗೊಳಿಸಲಿದ್ದಾರೆ. ಕಂಪನಿಯು ನೇರವಾಗಿ ಮಾರಾಟ ಮಾಡುವ ಬದಲು ಪಾಲುದಾರರ ಮೂಲಕ ಸೇವೆಯನ್ನು ಒದಗಿಸಲಿದೆಯಂತೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ