ಸ್ಮಾರ್ಟ್‌ಫೋನ್ ಅಡಿಕ್ಟ್ ಡ್ರಗ್ಸ್-ಆಲ್ಕೋಹಾಲ್ ಚಟವಿದ್ದಂತೆ?: ಇವೆಲ್ಲದಕ್ಕೂ ಡೋಪಮೈನ್ ಹಾರ್ಮೋನ್ ಕಾರಣ
Smartphone Addiction: ನಮ್ಮಲ್ಲಿ ಬಹಳಷ್ಟು ಜನರಿಗೆ ಒಂದು ಅಭ್ಯಾಸವಿದೆ. ಬೆಳಗ್ಗೆ ಎದ್ದಾಗ ಮತ್ತು ಮಲಗುವ ಮೊದಲು ಮಾಡುವ ಕೆಲಸ ಸ್ಮಾರ್ಟ್‌ಫೋನ್ ನೋಡುವುದು. ಇದು ಒಂದು ಕಾಯಿಲೆ ಎಂದರೆ ನಂಬಲೇಬೇಕು. ಇದು ನಮ್ಮ ಮೆದುಳಿನಲ್ಲಿರುವ ರಾಸಾಯನಿಕಗಳಿಂದ ನಿಯಂತ್ರಿಸಲ್ಪಡುವ ನಿರಂತರ ಪ್ರಚೋದನೆಯಾಗಿದೆ. ಈ ಹಾರ್ಮೋನ್ ಹೆಸರು ಡೋಪಮೈನ್. ಇದು ಎಷ್ಟು ಅಪಾಯಕಾರಿ?, ಇದರಿಂದ ಏನು ತೊಂದರೆ? ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂದು ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಗಳು ಸಿಗುತ್ತಿರುವ ಕಾರಣ ಇದರ ಬಳಕೆ ಕೂಡ ಹೆಚ್ಚಾಗಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರ ಕೈಯಲ್ಲೂ ಸ್ಮಾರ್ಟ್ಫೋನ್ಗಳು ಇವೆ. ಹಲವರು ಇದಕ್ಕೇ ಅಡಿಕ್ಟ್ ಆಗಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸಾಮಾನ್ಯ ವ್ಯಕ್ತಿಯು ತಮ್ಮ ಸ್ಮಾರ್ಟ್‌ಫೋನ್ ಬಳಕೆಗೆ ಪ್ರತಿದಿನ ಸುಮಾರು 3 ಗಂಟೆ 15 ನಿಮಿಷಗಳನ್ನು ಮೀಸಲಿಡುತ್ತಾರೆ. ಇದಲ್ಲದೆ, ಸುಮಾರು ಶೇ. 20 ರಷ್ಟು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಜೊತೆಗೆ ಪ್ರತಿ ದಿನ ಸರಾಸರಿ 4-5 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಕುತೂಹಲಕಾರಿಯಾಗಿ, ಜನರು ವಾರಾಂತ್ಯಕ್ಕಿಂತ ವಾರದ ದಿನಗಳಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಬಳಸುತ್ತಾರಂತೆ. ಅವರು ತಮ್ಮ ಫೋನ್‌ಗಳನ್ನು ದಿನಕ್ಕೆ ಸುಮಾರು 58 ಬಾರಿ ನೋಡುತ್ತಾರೆ ಎಂದು ಅಂಕಿಅಂಶಗಳು ಹೇಳುತ್ತದೆ. ಹಾಗಂತ ಸ್ಮಾರ್ಟ್‌ಫೋನ್ ಅನ್ನು ಅತಿ ಹೆಚ್ಚು ಬಳಸುವ ದೇಶದಲ್ಲಿ ಭಾರತ ಮುಂದಿಲ್ಲ. ಬದಲಾಗಿ ಫಿಲಿಪೈನ್ಸ್ 5 ಗಂಟೆ 47 ನಿಮಿಷಗಳ ಕಾಲ ಅತಿ ಹೆಚ್ಚು ಸರಾಸರಿ ದೈನಂದಿನ ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಮುಂದಿದೆ. ಜಪಾನ್ ದಿನಕ್ಕೆ 1 ಗಂಟೆ 29 ನಿಮಿಷಗಳಷ್ಟು ಕಡಿಮೆ ಸರಾಸರಿಯನ್ನು ಹೊಂದಿದೆ. ಏತನ್ಮಧ್ಯೆ, ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಉಪಯೋಗಿಸುವ ಸರಾಸರಿ ಸಮಯ 4 ಗಂಟೆ 5 ನಿಮಿಷಗಳು. ಬೆಳೆಯುತ್ತಲೇ ಇದೆ ಸ್ಮಾರ್ಟ್‌ಫೋನ್ ಮಾರುಕಟ್ಟೆ: $1 ಟ್ರಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಜಾಗತಿಕ ಮೊಬೈಲ್ ಉದ್ಯಮವು ವರ್ಷದಿಂದ ವರ್ಷಕ್ಕೆ ನಿರಂತರ ಬೆಳವಣಿಗೆ ಕಾಣುತ್ತಲೇ ಇದೆ. 2016 ರಿಂದ, ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯು ಸ್ಥಿರವಾಗಿ ಹೆಚ್ಚುತ್ತಿದೆ ಮತ್ತು ಕನಿಷ್ಠ ಮುಂದಿನ ಐದು ವರ್ಷಗಳವರೆಗೆ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಏರುತ್ತಲೇ ಇರುತ್ತದಂತೆ. 2016 ರಲ್ಲಿ, ಪ್ರಪಂಚವು...
Published On - 12:53 pm, Sat, 4 May 24