TRAI Spam Filter: ಟ್ರಾಯ್ ಹೊಸ ನಿಯಮ ಇಂದಿನಿಂದ ಜಾರಿ: ಸ್ಪ್ಯಾಮ್ ಕರೆ, ಎಸ್ಎಮ್ಎಸ್ ಬ್ಯಾನ್
ಇಂದಿನಿಂದ (ಮೇ 1) ಹೊಸ ನಿಯಮ ಜಾರಿಗೆ ಬಂದಿದ್ದು, ಇದರ ಪ್ರಕಾರ ಫೋನಿಗೆ ಬರುವ ನಕಲಿ ಕರೆಗಳು ಮತ್ತು ಎಸ್ಎಮ್ಎಸ್ಗಳನ್ನು ನಿರ್ಬಂಧಿಸಿದೆ. ಈ ಮೂಲಕ ಜನರಿಗೆ ಅನಗತ್ಯ ಕರೆ ಮತ್ತು ಸಂದೇಶಗಳು ಬರುವುದು ತಪ್ಪಲಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಟೆಲಿಕಾಂ ಈಗಾಗಲೇ ಬಳಕೆದಾರರ ಅನುಕೂಲಕ್ಕೆ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಸ್ಪ್ಯಾಮ್ ಕರೆಗಳು ಅಂದರೆ ಜಾಹೀರಾತು ಕುರಿತಾಗಿ ಬರುವ ಫೋನ್ ಕಾಲ್ಗಳು ಮತ್ತು ಮೆಸೇಜ್ಗಳಿಗೆ (Message) ಇದುವರೆಗೆ ಕಡಿವಾಣ ಹಾಕಿರಲಿಲ್ಲ. ಆದರೀಗ ಟ್ರಾಯ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ (Telemarketing Companies) ಶಾಕ್ ನೀಡಿದೆ. ಇಂದಿನಿಂದ (ಮೇ 1) ಹೊಸ ನಿಯಮ ಜಾರಿಗೆ ಬಂದಿದ್ದು, ಇದರ ಪ್ರಕಾರ ಫೋನಿಗೆ ಬರುವ ನಕಲಿ ಕರೆಗಳು ಮತ್ತು ಎಸ್ಎಮ್ಎಸ್ಗಳನ್ನು ನಿರ್ಬಂಧಿಸಿದೆ. ಈ ಮೂಲಕ ಜನರಿಗೆ ಅನಗತ್ಯ ಕರೆ ಮತ್ತು ಸಂದೇಶಗಳು ಬರುವುದು ತಪ್ಪಲಿದೆ.
ಇತ್ತೀಚಿನ ದಿನಗಳಲ್ಲಿ ಟೆಲಿ ಮಾರ್ಕೆಟಿಂಗ್ ಕಂಪನಿಗಳು ಬಳಕೆದಾರರಿಗೆ ಹಗಲು ರಾತ್ರಿಯೆನ್ನದೆ ಕರೆ ಮಾಡುತ್ತಿದೆ, ಮೆಸೇಜ್ಗಳನ್ನು ಕಳುಹಿಸುತ್ತಿದೆ. ಇದು ಬಳಕೆದಾರರಿಗೆ ಸಾಕಷಷ್ಟು ತೊಂದರೆ ಉಂಟು ಮಾಡುತ್ತಿದೆ ಎಂಬುದನ್ನು ಗಮನಿಸಿ ಜಾಹೀರಾತಿಗಾಗಿ ಕರೆ, ಮೆಸೇಜ್ ಮಾಡುವಂತಹ ವಿಶೇಷ ಸಂಖ್ಯೆಗಳನ್ನು ಟ್ರಾಯ್ ಸಂಸ್ಥೆ ನಿರ್ಬಂಧಿಸಿದೆ.ಈ ಮೂಲಕ ಬಳಕೆದಾರರಿಗೆ ಕಿರಿ ಕಿರಿ ನೀಡುವ ಕರೆಗಳು ಮತ್ತು ಮೆಸೇಜ್‌ಗಳ ಬಗ್ಗೆ ಟ್ರಾಯ್ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಟ್ರಾಯ್ ಹೊರಡಿಸಿರುವ ಆದೇಶದ ಪ್ರಕಾರ, ಟೆಲಿಮಾರ್ಕೆಟರ್‌ಗಳು 10 ಅಂಕಿಯ ಮೊಬೈಲ್ ಸಂಖ್ಯೆಗಳನ್ನು ಬಳಸುವುದನ್ನು ನಿಲ್ಲಿಸಬೇಕಾಗುತ್ತದೆ.
WhatsApp New Feature: ವಾಟ್ಸ್ಆ್ಯಪ್ನಲ್ಲಿ ಶಾರ್ಟ್ ವಿಡಿಯೋ: ಹೊಸ ಫೀಚರ್ ಕೇಳಿ ದಂಗಾದ ಬಳಕೆದಾರರು
ಟೆಲಿಕಾಂ ಸಂಸ್ಥೆಗಳು ಈ ನಿಯಮವನ್ನು ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದಂತೆ. ಇದರಿಂದ ಬ್ಯಾಂಕ್, ವಿಮಾ ಕಂಪನಿಗಳ ಹೆಸರಿನಲ್ಲಿ ನಾನಾ ಸಂಖ್ಯೆಗಳಿಂದ ವಂಚಕರು ಮಾಡುವ ಕರೆಗಳು ಅಥವಾ ಕಳಿಸುವ ಸಂದೇಶಗಳನ್ನು ತಡೆಯುತ್ತವೆ. ಈಗಾಗಲೇ ಏರ್ಟೆಲ್ ಸ್ಪ್ಯಾಮ್ ಫಿಲ್ಟರ್ ಬಳಕೆ ಪ್ರಾರಂಭಿಸಿದ್ದು, ರಿಲಯನ್ಸ್ ಜಿಯೋ ಕೂಡ ಶೀಘ್ರವೇ ಪ್ರಾರಂಭಿಸುವ ಸಾಧ್ಯತೆ ಇದೆ. ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ತಂತ್ರಜ್ಞಾನ ಬಳಕೆಯ ಮೂಲಕ ಅನಪೇಕ್ಷಿತ ಟೆಕ್ಸ್ಟ್ ಮೆಸೇಜ್ ಅಥವಾ ಕರೆಗಳನ್ನು ನಿರ್ಬಂಧಿಸಬೇಕು ಎಂದು ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ.
ಟ್ರೂ ಕಾಲರ್ ಮಾದರಿಯಲ್ಲಿ ಮತ್ತೊಂದು ಹೊಸ ಆ್ಯಪ್:
ಟ್ರೂ ಕಾಲರ್ ಅಪ್ಲಿಕೇಶನ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುವ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ ನಡೆಸಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಶೀಘ್ರದಲ್ಲೇ ಈ ಫೀಚರ್ಸ್ ಅನ್ನು ಪರಿಚಯಿಸಲಿದೆ ಎನ್ನಲಾಗಿದೆ. ಈ ಆ್ಯಪ್ನ ಮೂಲಕ ನಮಗೆ ಯಾರು ಕರೆ ಮಾಡುತ್ತಾರೋ ಅವರ KYC(ನೋ ಯುವರ್ ಕಸ್ಟಮರ್) ದಾಖಲೆ ನೀಡುವ ವೇಳೆ ಕೊಡುವ ಹೆಸರೇ ಫೋನ್ ಪರದೆ ಮೇಲೆ ಮೂಡುವಂತೆ ಮಾಡುತ್ತದೆ. ಅಂದರೆ ಟೆಲಿಕಾಂ ಆಪರೇಟರ್‌ಗಳಿಗೆ ಜನರು KYC ದಾಖಲೆಯನ್ನು ನೀಡುವಾಗ ಯಾವ ಹೆಸರು ಕೊಡುತ್ತಾರೋ ಅದೇ ಹೆಸರು ಫೋನ್ ಪರದೆ ಮೇಲೆ ಕಾಣಿಸಲಿದೆ ಎಂದು ಹೇಳಿದ್ದಾರೆ. ಅಪರಿಚಿತ ಕರೆಗಳ ಕಾಲರ್ ಐಡಿ ತೋರಿಸುವ ವ್ಯವಸ್ಥೆ ಜಾರಿಗೆ ಸಿದ್ಧತೆಗಳು ಆರಂಭವಾಗಿವೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಅಧ್ಯಕ್ಷ ಪಿ.ಡಿ.ವಘೇಲಾ ಇತ್ತೀಚೆಗಷ್ಟೆ ಹೇಳಿದ್ದರು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:06 pm, Mon, 1 May 23