TCS: ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಸಿಗಲಿದೆ ಚಿಪ್ ಆಧಾರಿತ ಇ- ಪಾಸ್‌ಪೋರ್ಟ್
e-passports: ತನ್ನ ನಾಗರಿಕರಿಗೆ ಈ ವರ್ಷದ ಕೊನೆಯಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು (E-Passports) ನೀಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಈ ವರ್ಷದ ಕೇಂದ್ರ ಬಜೆಟ್‌ನಲ್ಲಿಯೂ ಕೂಡ ಇ-ಪಾಸ್‌ಪೋರ್ಟ್ ಪ್ರಾರಂಭದ ಬಗ್ಗೆ ಪ್ರಾಸ್ತಪಿಸಲಾಗಿತ್ತು.
ಭಾರತದಲ್ಲಿ ಇ- ಪಾಸ್‌ಪೋರ್ಟ್ ಯಾವಾಗ ಸಿಗಲಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ತನ್ನ ನಾಗರಿಕರಿಗೆ ಈ ವರ್ಷದ ಕೊನೆಯಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು (E-Passports) ನೀಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಈ ವರ್ಷದ ಕೇಂದ್ರ ಬಜೆಟ್‌ನಲ್ಲಿಯೂ ಕೂಡ ಇ-ಪಾಸ್‌ಪೋರ್ಟ್ ಪ್ರಾರಂಭದ ಬಗ್ಗೆ ಪ್ರಾಸ್ತಪಿಸಲಾಗಿತ್ತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜನರ ಅನುಕೂಲಕ್ಕಾಗಿ ಇ- ಪಾಸ್ ಪೋರ್ಟ್ ಗಳನ್ನು ವಿತರಿಸುವುದಾಗಿ ಘೋಷಣೆ ಮಾಡಿದ್ದರು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಂಪನಿಯು ಈಗಾಗಲೇ ಹೊಸ ನಿಯಂತ್ರಣ ಕೇಂದ್ರ ಮತ್ತು ಹೊಸ ಡೇಟಾ ಸೆಂಟರ್ ಸ್ಥಾಪಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ನೊಂದಿಗೆ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಹೀಗಾದಲ್ಲಿ ಈ ವರ್ಷದ ಕೊನೆಯಲ್ಲಿಯೇ ದೇಶದಲ್ಲಿ ಚಿಪ್ ಆಧಾರಿತ ಇ-ಪಾಸ್‌ಪೋರ್ಟ್‌ಗಳು ದೊರೆಯಲಿವೆ.
ಪ್ರಸ್ತುತ ಭಾರತೀಯ ನಾಗರಿಕರಿಗೆ ವಿತರಿಸುತ್ತಿರುವ ಪಾಸ್ ಪೋರ್ಟ್ ಪುಸ್ತಕ ರೂಪದಲ್ಲಿದೆ. ಇದನ್ನು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ನಿಗದಿಪಡಿಸಿರುವ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇ-ಪಾಸ್ ಪೋರ್ಟ್ ಅನ್ನು ಕೂಡ ಎರಡು ವಿಧದಲ್ಲಿ ವಿತರಿಸಲಾಗೋದು. ಒಂದು ಸಾಂಪ್ರದಾಯಿಕ ಪುಸ್ತಕ ರೂಪದಲ್ಲಿರೋ ಪಾಸ್ ಪೋರ್ಟ್ಗೆ ಎಲೆಕ್ಟ್ರಾನಿಕ್ ಚಿಪ್ (electronic chip) ಅಳವಡಿಸೋದು.ಇದು ಪಾಸ್ ಪೋರ್ಟ್ ಪುಟ 2ರಲ್ಲಿರೋ ವೈಯಕ್ತಿಕ ಮಾಹಿತಿಗಳು ಹಾಗೂ ಡಿಜಿಟಲ್ ಸುರಕ್ಷೆ ವೈಶಿಷ್ಟ್ಯಗಳನ್ನು ಸಂಗ್ರಹಿಸಿರುತ್ತದೆ.
Electric Bikes: 50,000 ಕ್ಕಿಂತ ಕಡಿಮೆ ಬೆಲೆಯ ಇಲೆಕ್ಟ್ರಿಕ್ ಬೈಕ್ ಇಲ್ಲಿವೆ
ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಇ-ಪಾಸ್‌ಪೋರ್ಟ್ ಅನ್ನು ನೀಡುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜೊತೆಗೆ ಕೆಲಸ ಮಾಡುತ್ತಿದೆ. ಇ-ಪಾಸ್‌ಪೋರ್ಟ್ ಅನುಷ್ಠಾನ ಹಂತದ ಪ್ರಕ್ರಿಯೆಯ ಎರಡನೇ ಹಂತದಲ್ಲಿ ಹೊಸ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಸ್ಥಾಪಿಸ ಲಾಗುತ್ತದೆ ಎನ್ನಲಾಗಿದೆ. ಇದರಿಂದ ಹೆಚ್ಚು ಅನುಕೂಲಕರವಾಗಲಿದ್ದು, ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಸುಧಾರಿಸಲು ಸಾಧ್ಯವಾಗಲಿದೆ. ಮೈಕ್ರೋಚಿಪ್ ಪಾಸ್‌ಪೋರ್ಟ್ ಹೊಂದಿರುವವರ ಹೆಸರು, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ. ಇ-ಪಾಸ್‌ಪೋರ್ಟ್ ಪ್ರಯಾಣಿಕರಿಗೆ ಅತ್ಯಂತ ಉಪಯುಕ್ತವಾಗಿದೆ ಏಕೆಂದರೆ ಇದು ವಲಸೆ ಕೌಂಟರ್‌ನ ಮುಂದೆ ದೀರ್ಘ ಸರತಿಯಲ್ಲಿ ನಿಲ್ಲುವ ಅಗತ್ಯವನ್ನು ನಿವಾರಿಸುತ್ತದೆ.
ಇ-ಪಾಸ್‌ಪೋರ್ಟ್ ಅನ್ನು ಇಮಿಗ್ರೇಷನ್ ಕೌಂಟರ್‌ನಲ್ಲಿ ಭೌತಿಕ ಪರಿಶೀಲನೆಗೆ ವಿರುದ್ಧವಾಗಿ ನಿಮಿಷಗಳಲ್ಲಿ ಸ್ಕ್ಯಾನ್ ಮಾಡಬಹುದು. ಇದು ನಕಲಿ ಪಾಸ್‌ಪೋರ್ಟ್ ವ್ಯವಹಾರವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಏಕೆಂದರೆ ಸ್ಕ್ಯಾಮರ್‌ಗಳು ಮೈಕ್ರೋಚಿಪ್‌ನಲ್ಲಿ ದಾಖಲಾದ ಡೇಟಾವನ್ನು ಕದಿಯಲು ಕಷ್ಟವಾಗುತ್ತದೆ. ಈಗಾಗಲೇ ಬಯೋಮೆಟ್ರಿಕ್ ಇ-ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಹೊಂದಿರುವ US, UK ಮತ್ತು ಜರ್ಮನಿ ಸೇರಿದಂತೆ 120 ದೇಶಗಳಲ್ಲಿ ಇ-ಪಾಸ್‌ಪೋರ್ಟ್‌ನ ಪರಿಕಲ್ಪನೆಯನ್ನು ಈಗಾಗಲೇ ಪರಿಚಯಿಸಲಾಗಿದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ