ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ?: ಈ ತಪ್ಪುಗಳನ್ನು ಮಾಡಬೇಡಿ
Smartphone Tips in Kannada: ಸ್ಮಾರ್ಟ್‌ಫೋನ್ ನಿಂದಾಗಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂದು ಇಂಟರ್‌ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಅನೇಕರು ಹಣ ವರ್ಗಾವಣೆ ಮಾಡುತ್ತಾರೆ. ಇದು ವಂಚಕರಿಗೆ ಅಸ್ತ್ರವಾಗುತ್ತಿದೆ. ಸೈಬರ್ ಅಪರಾಧಿಗಳು ಜನರ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಐಡಿಯನ್ನು ತಿಳಿದು ಹಣ ಎಗರಿಸುತ್ತಿದ್ದಾರೆ.
ಇಂದು ಸ್ಮಾರ್ಟ್‌ಫೋನ್ (Smartphone) ಇಲ್ಲದವರನ್ನು ಹುಡುಕುವುದೂ ಕಷ್ಟ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರಲ್ಲೂ ಸ್ಮಾರ್ಟ್‌ಫೋನ್ ಕಾಮನ್ ಆಗಿಬಿಟ್ಟಿದೆ. ಮೊದಲಿನಂತೆ ಫೋನ್ ಮಾಡಲು ಮಾತ್ರವಲ್ಲ.. ಎಲ್ಲಾ ಅಗತ್ಯ ಕೆಲಸಗಳಿಗೂ ಮೊಬೈಲ್ ಬೇಕು. ಬ್ಯಾಂಕಿಂಗ್, ಮನರಂಜನೆ, ಶಾಪಿಂಗ್… ಹೀಗೆ ಪಟ್ಟಿ ದೊಡ್ಡದಿದೆ. ಒಟ್ಟಾರೆ ಸ್ಮಾರ್ಟ್‌ಫೋನ್ ಇದ್ದರೆ ಇಡೀ ಜಗತ್ತು ನಮ್ಮ ಅಂಗೈಯಲ್ಲಿದೆ ಎಂದರ್ಥ. ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಮೂಲಕ ಇಂದು ಸೌಲಭ್ಯಗಳು ಹೆಚ್ಚು ವಿಸ್ತಾರವಾಗಿವೆ. ಅದರೊಂದಿಗೆ ಅಪಾಯವೂ ಹಲವು ದುಪ್ಪಟ್ಟಾಗಿದೆ.
ಸ್ಮಾರ್ಟ್‌ಫೋನ್ ನಿಂದಾಗಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂದು ಇಂಟರ್‌ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಅನೇಕರು ಹಣ ವರ್ಗಾವಣೆ ಮಾಡುತ್ತಾರೆ. ಇದು ವಂಚಕರಿಗೆ ಅಸ್ತ್ರವಾಗುತ್ತಿದೆ. ಸೈಬರ್ ಅಪರಾಧಿಗಳು ಜನರ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಐಡಿಯನ್ನು ತಿಳಿದು ಹಣ ಎಗರಿಸುತ್ತಿದ್ದಾರೆ. ಇಂತಹ ವಂಚನೆಗಳನ್ನು ತಪ್ಪಿಸಲು ಏನು ಮಾಡಬೇಕು?.
ಈ ವಿಷಯಗಳನ್ನು ನೆನಪಿಡಿ:
ನೀವು ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಖರೀದಿಸಿದರೆ ಅದನ್ನು ಬಳಸಲು, ಜಿ-ಮೇಲ್ ಖಾತೆಯನ್ನು ರಚಿಸಬೇಕಾಗುತ್ತದೆ. ಅದರ ಸಹಾಯದಿಂದ ನೀವು ಎಲ್ಲಾ ಸೇವೆಗಳನ್ನು ಪ್ರವೇಶಿಸಬಹುದು. ಆದಾಗ್ಯೂ, ಜಿಮೇಲ್ ಪಾಸ್‌ವರ್ಡ್ ಅನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಇದರ ಸಹಾಯದಿಂದ ನಿಮ್ಮ ಫೋನ್‌ಗೆ ಸಂಬಂಧಿಸಿದ ಎಲ್ಲಾ ರೀತಿಯ ಡೇಟಾವನ್ನು ಪ್ರವೇಶಿಸಬಹುದು.
ಅಮೆಜಾನ್ನಲ್ಲಿ ಶುರುವಾಗುತ್ತಿದೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023: ಲೈವ್ ಆಗಿದೆ ಪೇಜ್
ನಿಮ್ಮ ಫೋನಿಗೆ ಅಪರಿಚಿತ ವ್ಯಕ್ತಿಯಿಂದ ಅಥವಾ ಅನುಮಾನಾಸ್ಪದ ಸಂಸ್ಥೆಗಳಿಂದ ಲಿಂಕ್ ಬಂದರೆ, ಅದರ ಮೇಲೆ ಕ್ಲಿಕ್ ಮಾಡಬೇಡಿ. ಬಹುಶಃ ಅದು ಸ್ಕ್ಯಾಮರ್‌ಗಳು ಕಳುಹಿಸಿದ ಸಂದೇಶವಾಗಿರಬಹುದು. ನಿಮ್ಮ OTP ಅನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಪಿನ್ ಮೂಲಕ ಫೋನ್ ಲಾಕ್ ಮಾಡಿ. ನಿಮ್ಮ ಪಿನ್, ಪ್ಯಾಟರ್ನ್ ಅನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಮೊಬೈಲ್‌ಗಳು ಬ್ಲೋಟ್‌ವೇರ್‌ನೊಂದಿಗೆ ಸಹ ಬರುತ್ತವೆ. ಅವುಗಳ ಮೇಲೆ ಕ್ಲಿಕ್ ಮಾಡಬೇಡಿ. ಏಕೆಂದರೆ ಸೈಬರ್ ಅಪರಾಧಿಗಳು ನಿಮ್ಮ ಡೇಟಾವನ್ನು ಸಂಗ್ರಹಿಸುತ್ತಾರೆ ನಂತರ ಅದನ್ನು ಜಾಹೀರಾತಿಗಾಗಿ ಬಳಸುತ್ತಾರೆ.
ಬ್ಯಾಂಕಿಂಗ್ ವಿವರಗಳೊಂದಿಗೆ ಜಾಗರೂಕರಾಗಿರುವುದು ಮುಖ್ಯ. ಸ್ಮಾರ್ಟ್‌ಫೋನ್‌ನ ಎಲ್ಲಾ ವೈಶಿಷ್ಟ್ಯಗಳನ್ನು ನೀವು ತಿಳಿಯುವವರೆಗೆ ಬ್ಯಾಂಕಿಂಗ್ ಸೇವೆಗಳನ್ನು ಬಳಸಬೇಡಿ. ಯಾವುದೇ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡಬೇಕು. ಹಾಡುಗಳು, ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಬಳಸಿ. ಅಗತ್ಯವಿಲ್ಲದಿದ್ದರೆ ಇಂಟರ್ನೆಟ್ ಅಥವಾ ಇತರ ಪ್ರಮುಖ ಸೆಟ್ಟಿಂಗ್‌ಗಳನ್ನು ಆಫ್ ಮಾಡಿ. ಇದರಿಂದ ವಂಚಕರು ಪ್ರವೇಶಿಸಲು ಕಷ್ಟವಾಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ