ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಬಹುಮುಖ್ಯ ಭಾಗವಾಗಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಅರ್ಧಕ್ಕಿಂತ ಹೆಚ್ಚು ಕೆಲಸಗಳು ಮನೆಯಲ್ಲಿ ಕುಳಿತು ಮೊಬೈಲ್ ಫೋನ್‌ಗಳ ಮೂಲಕವೇ ಪೂರ್ಣಗೊಳ್ಳುತ್ತವೆ. ಆದರೆ ಕೆಲವೊಮ್ಮೆ ಫೋನ್ ಕೆಟ್ಟು ಹೋದಾಗ ಅಥವಾ ಫೋನ್‌ನಲ್ಲಿ ಯಾವುದಾದರು ದೋಷ ಕಾಣಿಸಿಕೊಂಡರೆ, ನಾವು ನಮ್ಮ ಫೋನ್ ಅನ್ನು ಮನೆಯ ಹತ್ತಿರವಿರುವ ಮೊಬೈಲ್ ಫೋನ್ ಸೇವಾ ಕೇದ್ರಕ್ಕೆ ತೆಗೆದುಕೊಂಡು ಹೋಗುತ್ತೇವೆ. ಆದರೆ ಅನೇಕ ಬಾರಿ ಆತುರದಿಂದಾಗಿ, ಜನರು ಹೀಗೆ ತೆಗೆದುಕೊಂಡು ಹೋಗುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಇದರಿಂದಾಗಿ ನಂತರ ದೊಡ್ಡ ಪಶ್ಚಾತ್ತಾಪ ಪಡಬೇಕಾಗುತ್ತದೆ.
ಸ್ಮಾರ್ಟ್ಫೋನ್ ಕೇವಲ ಕರೆಗಳನ್ನು ಮಾಡಲು ಬಳಸಲಾಗುವ ಗ್ಯಾಜೆಟ್ ಮಾತ್ರವಲ್ಲದೆ, ಬ್ಯಾಂಕಿಂಗ್‌ನಿಂದ ಪ್ರಾರಂಭಿಸಿ ಅನೇಕ ಕಾರ್ಯಗಳಿಗೆ ಬಳಸಲಾಗುತ್ತದೆ. ವೈಯಕ್ತಿಕ ಫೋಟೋಗಳು, ಬ್ಯಾಂಕಿಂಗ್ ವಿವರಗಳು ಮತ್ತು ಇತರ ಹಲವು ವೈಯಕ್ತಿಕ ಡೇಟಾವು ಸ್ಮಾರ್ಟ್ಫೋನ್‌ನಲ್ಲಿ ಇರುತ್ತದೆ. ಹೀಗಿರುವಾಗ ಫೋನ್ ಅನ್ನು ಸರ್ವಿಸ್ ಸೆಂಟರ್ನಲ್ಲಿ ನೀಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.
ನಿಮ್ಮ ಮೊಬೈಲ್‌ನಲ್ಲಿ ಯಾವುದೇ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಹೊಂದಿದ್ದರೆ, ನೀವು ಮೊದಲು ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಬೇಕು. ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವ ಮೊದಲು ಪಾಸ್‌ವರ್ಡ್ ಮತ್ತು ಯೂಸರ್ ನೇಮ್ ಅನ್ನು ಬರೆದಿಟ್ಟುಕೊಳ್ಳುವುದು ಉತ್ತಮ.
ಸ್ಮಾರ್ಟ್‌ಫೋನ್‌ನ ನೋಟ್ ಪ್ಯಾಡ್‌ನಲ್ಲಿ ಪಾಸ್‌ವರ್ಡ್ ಮತ್ತು ವೈಯಕ್ತಿಕ ವಿವರಗಳನ್ನು ಬರೆಯುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಫೋನ್ ಅನ್ನು ಯಾರಿಗಾದರೂ ನೀಡುವಾಗ ನೋಟ್ ಪ್ಯಾಡ್‌ನಲ್ಲಿ ಇರುವುದನ್ನು ಅಳಿಸಲು ಮರೆಯಬೇಡಿ.
Amazon Great Republic Day Sale 2025: ಅಮೆಜಾನ್ ಸ್ಫೋಟಕ ಮಾರಾಟ ಆರಂಭ: ಸ್ಮಾರ್ಟ್ಫೋನ್ ಬೇಕಿದ್ರೆ ಇಂದೇ ಖರೀದಿಸಿ
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬಳಸದವರೇ ಇಲ್ಲ. ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ದುರುಪಯೋಗಪಡಿಸಿಕೊಳ್ಳದಿರಲು, ಎಲ್ಲಾ ಖಾತೆಗಳಿಂದ ಲಾಗ್ ಔಟ್ ಮಾಡಿದ ನಂತರವೇ ನೀವು ಫೋನ್ ಅನ್ನು ಸರ್ವಿಸ್ಗೆ ನೀಡಬೇಕು.
ಜಿಮೇಲ್ ಖಾತೆಯೂ ಲಾಗ್ ಔಟ್ ಆದ ನಂತರವೇ ಫೋನ್ ಸರ್ವಿಸ್ ಕೇಂದ್ರಕ್ಕೆ ನೀಡಬೇಕು. ಜಿಮೇಲ್ ಖಾತೆಗೆ ಸಂಬಂಧಿಸಿದ ಎಲ್ಲಾ ವಿವರಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಫೋನ್ ಗ್ಯಾಲರಿಯಲ್ಲಿ ಯಾವುದೇ ವೈಯಕ್ತಿಕ ಫೋಟೋಗಳಿದ್ದರೆ, ಅವುಗಳನ್ನು ಡಿಲೀಟ್ ಮಾಡಿ. ಫೋಟೋಗಳು ಬೇಕು ಎಂದಿದ್ದರೆ, ಅವುಗಳನ್ನು ಮೆಮೊರಿ ಕಾರ್ಡ್ ಅಥವಾ ಪೆನ್ ಡ್ರೈವ್‌ಗೆ ವರ್ಗಾಯಿಸಿ.
ನೀವು ಫೋನ್ ಅನ್ನು ಸೇವಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುತ್ತಿದ್ದರೆ ಮತ್ತು ನಿಮ್ಮ ಫೋನ್ ಆನ್ ಆಗಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಪ್ರಮುಖ ಡೇಟಾವನ್ನು ಬ್ಯಾಕಪ್ ತೆಗೆದುಕೊಳ್ಳಬೇಕು. ಆದರೆ ಅನೇಕ ಬಾರಿ ನಾವು ಅವಸರದಲ್ಲಿ ಅಗತ್ಯ ಮಾಹಿತಿಯನ್ನು ಸೇವ್ ಮಾಡಿಕೊಟ್ಟುಕೊಳ್ಳಲು ಮರೆತುಬಿಡುತ್ತೇವೆ. ಅನೇಕ ಬಾರಿ ಫೋನ್ ರಿಪೇರಿ ಮಾಡಿದಾಗ ಹಿಂದಿನ ಎಲ್ಲ ಡೇಟಾ ಹಾಗೆಯೆ ಇರುತ್ತದೆ ಎಂಬ ಗ್ಯಾರಂಟಿ ಇಲ್ಲ ಎಂದು ಸೇವಾ ಕೇಂದ್ರದಲ್ಲಿ ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಡ್ರೈವ್, ಡ್ರಾಪ್‌ಬಾಕ್ಸ್, ಗೂಗಲ್ ಫೋಟೋಗಳಲ್ಲಿ ಫೋಟೋಗಳನ್ನು ಬ್ಯಾಕಪ್ ಮಾಡಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Mon, 13 January 25