Tech Tips: ಮೊಬೈಲ್ ಬ್ಯಾಕ್ ಕವರ್​ನಲ್ಲಿ ಹಣ, ಮೆಟ್ರೋ ಕಾರ್ಡ್ ಇಡುತ್ತೀರಾ?: ಹಾಗಿದ್ರೆ ತಪ್ಪದೆ ಈ ಸ್ಟೋರಿ ಓದಿ

Mobile Blast: ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳೇ ಮೊಬೈಲ್ ಬ್ಲಾಸ್ಟ್ ಆಗಲು ಕಾರಣ ಎನ್ನಬಹುದು. ವರದಿಗಳ ಪ್ರಕಾರ, ಬಳಕೆದಾರರ ದುಬಾರಿ ಮತ್ತು ಅಗ್ಗದ ಫೋನ್‌ಗಳು ಸ್ಫೋಟಗಳ್ಳಲು ಮೊಬೈಲ್​ನ ಬ್ಯಾಕ್ ಕವರ್​​ನಲ್ಲಿ ಎಟಿಎಂ ಕಾರ್ಡ್, ಮೆಟ್ರೋ ಕಾರ್ಡ್, ಹಣವನ್ನು ಇಡುವುದು ಒಂದು ಕಾರಣ ಎಂಬುದು ತಿಳಿದುಬಂದಿದೆ.

Tech Tips: ಮೊಬೈಲ್ ಬ್ಯಾಕ್ ಕವರ್​ನಲ್ಲಿ ಹಣ, ಮೆಟ್ರೋ ಕಾರ್ಡ್ ಇಡುತ್ತೀರಾ?: ಹಾಗಿದ್ರೆ ತಪ್ಪದೆ ಈ ಸ್ಟೋರಿ ಓದಿ
Mobile Back Cover
Follow us
|

Updated on: May 15, 2024 | 11:12 AM

ನಿಮ್ಮ ಫೋನ್‌ನ ಹಿಂಬದಿಯ ಕವರ್‌ನಲ್ಲಿ ನೀವು ಚೀಟಿ, ಹಣ ಅಥವಾ ಯಾವುದೇ ಕಾಗದದ ವಸ್ತುವನ್ನು ಇಟ್ಟುಕೊಂಡಿದ್ದರೆ ಜಾಗರೂಕರಾಗಿರಿ. ಇಲ್ಲದಿದ್ದರೆ ನಿಮಗೆ ದೊಡ್ಡ ನಷ್ಟವಾಗಬಹುದು. ನಿಮ್ಮ ಫೋನ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಕಳೆದ ಕೆಲವು ತಿಂಗಳುಗಳಿಂದ ಮೊಬೈಲ್ (Mobile) ಫೋನ್‌ಗಳು ಸ್ಫೋಟಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳೇ ಇದಕ್ಕೆ ಕಾರಣ ಎನ್ನಬಹುದು. ವರದಿಗಳ ಪ್ರಕಾರ, ಬಳಕೆದಾರರ ದುಬಾರಿ ಮತ್ತು ಅಗ್ಗದ ಫೋನ್‌ಗಳು ಸ್ಫೋಟಗಳ್ಳಲು ಮೊಬೈಲ್​ನ ಬ್ಯಾಕ್ ಕವರ್​​ನಲ್ಲಿ ಎಟಿಎಂ ಕಾರ್ಡ್, ಮೆಟ್ರೋ ಕಾರ್ಡ್, ಹಣವನ್ನು ಇಡುವುದು ಒಂದು ಕಾರಣ ಎಂಬುದು ತಿಳಿದುಬಂದಿದೆ.

ಸ್ಮಾರ್ಟ್​ಫೋನ್‌ ಹೆಚ್ಚು ಬಿಸಿಯಾಗುವುದಕ್ಕೆ ಅನೇಕ ಕಾರಣಗಳಿವೆ. ಇದರಲ್ಲಿ ಮುಖ್ಯವಾಗಿ ಬರುವ ದೊಡ್ಡ ಕಾರಣವೆಂದರೆ ಫೋನ್‌ಗೆ ದಪ್ಪ ಕವರ್ ಅಳವಡಿಸಿರುವುದು. ಇದರ ಜೊತೆಗೆ ಕವರ್​ನೊಳಗೆ ಹಲವು ಬಗೆಯ ವಸ್ತುಗಳನ್ನು ಇಡುವುದು. ಫೋನಿಗೆ ದಪ್ಪನೆಯ ಬ್ಯಾಕ್ ಕವರ್ ಹಾಕಿದಾಗ ಮತ್ತು ಆ ಕವರ್​ನಲ್ಲಿ ವಸ್ತುಗಳನ್ನು ಇಟ್ಟಾಗ ಗಾಳಿಯು ಹಾದುಹೋಗಲು ಯಾವುದೇ ಸ್ಥಳಗಳಿರುವುದಿಲ್ಲ. ಇದರಿಂದಾಗಿ ಫೋನ್ ಹೆಚ್ಚು ಬಿಸಿಯಾಗುತ್ತದೆ ಮತ್ತು ಬ್ಲಾಸ್ಟ್ ಆಗುತ್ತದೆ.

ಇನ್ಮುಂದೆ ನೋಕಿಯಾ ಫೋನ್ ಬರಲ್ಲ: ಭಾರತದಲ್ಲಿ HMD ಕಂಪನಿಯ ಚೊಚ್ಚಲ ​ಫೋನ್ ಬಿಡುಗಡೆಗೆ ತಯಾರಿ

ಹಲವರಿಗೆ ಮೆಟ್ರೋ ಕಾರ್ಡ್, ನೋಟಿನ ಚೀಟಿ ಅಥವಾ ಕೆಲ ವಸ್ತುಗಳನ್ನು ಫೋನ್‌ನ ಹಿಂಬದಿಯ ಕವರ್‌ನಲ್ಲಿ ಇಡುವ ಅಭ್ಯಾಸವಿದೆ, ಕೆಲವರು ಅದನ್ನು ಅದೃಷ್ಟವೆಂದು ನಂಬುತ್ತಾರೆ. ಕೆಲವರು ವಿಭಿನ್ನ ಕಾರಣಗಳನ್ನು ಹೊಂದಿರುತ್ತಾರೆ. ಹಲವು ಬಾರಿ ಫೋನಿನ ಕವರ್​ನಲ್ಲಿ ಪೇಪರ್ ಅಥವಾ ಹಣ ಇಟ್ಟುಕೊಂಡರೆ ವೈರ್ ಲೆಸ್ ಚಾರ್ಜಿಂಗ್​ನಲ್ಲಿ ಸಮಸ್ಯೆ ಉಂಟಾಗುತ್ತದೆ. ನಿಮ್ಮ ಈ ಅಭ್ಯಾಸ ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು. ಫೋನ್ ಅನ್ನು ಚಾರ್ಜ್ ಮಾಡುವಾಗ, ಅದು ಸಂಪೂರ್ಣವಾಗಿ ಚಾರ್ಜ್ ಆಗುವವರೆಗೆ ಪಕ್ಕಕ್ಕೆ ಇಡಬೇಕು. ಚಾರ್ಜ್ ಮಾಡುವಾಗ ಫೋನ್ ಬಳಸಿದರೆ, ಫೋನ್ ಬಿಸಿ ಆಗಿ ಸ್ಫೋಟವಾಗುವ ಸಾಧ್ಯತೆಯನ್ನು ಹೆಚ್ಚಿರುತ್ತದೆ.

ಇವುಗಳನ್ನು ನೆನಪಿನಲ್ಲಿಡಿ:

  • ನಿಮಗೆ ಫೋನ್​ನಲ್ಲಿ ಬ್ಯಾಕ್ ಕವರ್ ಬೇಕು ಎಂದಾದರೆ ತೆಳುವಾದ, ಪಾರದರ್ಶಕ ಕವರ್ ಅನ್ನು ಇರಿಸಿಕೊಳ್ಳಿ. ಇದರಿಂದ ವೈರ್ಲೆಸ್ ಚಾರ್ಜಿಂಗ್​ನಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.
  • ಫೋನ್ ಅತಿಯಾಗಿ ಬಿಸಿಯಾಗುವ ಸಮಸ್ಯೆಗೆ ಒಂದು ದೊಡ್ಡ ಕಾರಣವೆಂದರೆ ಫೋನ್‌ನ ಕವರ್‌ನ ದಪ್ಪ ಅಥವಾ ಹಣ, ಎಟಿಎಂ ಕಾರ್ಡ್, ಮೆಟ್ರೋ ಕಾರ್ಡ್ ಫೋನ್‌ನ ಕವರ್‌ನಲ್ಲಿ ಇಡುವುದು.
  • ಮತ್ತೊಂದು ಕಂಪನಿಯ ಚಾರ್ಜರ್ ಅನ್ನು ಬಳಸುವುದು ಅಥವಾ ಸ್ಥಳೀಯ ಚಾರ್ಜರ್‌ನೊಂದಿಗೆ ಫೋನ್ ಅನ್ನು ಚಾರ್ಜ್ ಮಾಡುವುದರಿಂದ ನಿಮ್ಮ ಫೋನ್ ಬಿಸಿಯಾಗುತ್ತದೆ. ಇದರಿಂದ ಫೋನ್‌ ಸ್ಫೋಟವಾಗುತ್ತದೆ.
  • ಕೆಲವೊಮ್ಮೆ ನಿಮ್ಮ ಫೋನ್ ಹೆಚ್ಚಿನ ತಾಪಮಾನದಿಂದಾಗಿ ಬಿಸಿಯಾಗಬಹುದು. ಹೀಗಾಗಿ ಬಿಸಿಲಿನಲ್ಲಿ ಫೋನ್ ಅನ್ನು ದೀರ್ಘಕಾಲ ಬಳಸುವುದನ್ನು ತಪ್ಪಿಸಿ.
  • ಫೋನ್ ಅನ್ನು ಚಾರ್ಜ್‌ನಲ್ಲಿ ಇರಿಸಿದಾಗ ಯಾವುದೇ ಕಾರಣಕ್ಕೂ ಗೇಮಿಂಗ್ ಅಥವಾ ಫೋನ್ ಅನ್ನು ಬಳಸುವುದನ್ನು ತಪ್ಪಿಸಿ. ನೀವು ಚಾರ್ಜಿಂಗ್ ಸಮಯದಲ್ಲಿ ಬಳಸಿದರೆ, ಫೋನ್ ಬ್ಲಾಸ್ಟ್ ಆಗುವ ಅಪಾಯವು ಹೆಚ್ಚಾಗಿರುತ್ತದೆ.
  • ಫೋನ್ ಅನ್ನು ಚಾರ್ಜ್ ಮಾಡುವಾಗ, ಅದರ ಕವರ್ ಅನ್ನು ತೆಗೆದಿಟ್ಟರೆ ಉತ್ತಮ.

ವಿದೇಶದಲ್ಲಿ ಗೂಗಲ್ ಪೇ, ಫೋನ್ ಪೇ ಬಳಕೆ ಹೇಗೆ?: ಸೆಟ್ಟಿಂಗ್ಸ್​ನಲ್ಲಿ ಏನು ಬದಲಾವಣೆ ಮಾಡಬೇಕು?

ಫೋನ್ ಸ್ಫೋಟಗೊಳ್ಳುವ ಮೊದಲು ಇದನ್ನು ಮಾಡಿ:

ನಿಮ್ಮ ಫೋನ್ ಬಿಸಿಯಾಗಲು ಪ್ರಾರಂಭಿಸಿದಾಗ, ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ. ಸ್ವಲ್ಪ ಸಮಯದ ನಂತರ ಫೋನ್ ಅನ್ನು ಆನ್ ಮಾಡಿ ಬಳಸಿ. ನಂತರವೂ ಫೋನ್ ಬಿಸಿಯಾಗುತ್ತಿದ್ದರೆ, ಯಾವ ಅಪ್ಲಿಕೇಶನ್ ಎಷ್ಟು ಬ್ಯಾಟರಿಯನ್ನು ಬಳಸುತ್ತಿದೆ ಎಂಬುದನ್ನು ಫೋನ್‌ನ ಸೆಟ್ಟಿಂಗ್‌ಗಳಲ್ಲಿ ಪರಿಶೀಲಿಸಿ ಕ್ಲೀಯರ್ ಮಾಡಿ. ಅನಗತ್ಯ ಅಪ್ಲಿಕೇಶನ್ ಇದ್ದರೆ ತಕ್ಷಣ ಅದನ್ನು ಫೋನ್‌ನಿಂದ ಅನ್​ಇನ್​ಸ್ಟಾಲ್ ಮಾಡಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ