Tech Tips: ನಿಮ್ಮ ಜಿಮೇಲ್​ನಲ್ಲಿ ಸ್ಟೋರೇಜ್​ ಫುಲ್ ಆಗಿದ್ದರೆ ಟೆನ್ಶನ್ ಬೇಡ: ಈ ಟ್ರಿಕ್ ಫಾಲೋ ಮಾಡಿ

|

Updated on: Mar 18, 2023 | 6:30 PM

Gmail Tricks: ಕೆಲವೊಂದು ಟ್ರಿಕ್ಸ್ ಉಪಯೋಗಿಸಿ ಗೂಗಲ್ ಸ್ಟೋರೇಜ್ ಅನ್ನು ಹೆಚ್ಚಿಸಬಹುದು. ಅದು ಹೇಗೆ?, ಇಲ್ಲಿದೆ ನೋಡಿ ಮಾಹಿತಿ.

Tech Tips: ನಿಮ್ಮ ಜಿಮೇಲ್​ನಲ್ಲಿ ಸ್ಟೋರೇಜ್​ ಫುಲ್ ಆಗಿದ್ದರೆ ಟೆನ್ಶನ್ ಬೇಡ: ಈ ಟ್ರಿಕ್ ಫಾಲೋ ಮಾಡಿ
gmail
Follow us on

ಪ್ರಸಿದ್ಧ ಗೂಗಲ್ (Google) ಒಡೆತನದ ಜೀಮೇಲ್ ಅನ್ನು ವಿಶ್ವದಲ್ಲಿ ಕೋಟಿಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ. ಅದು ವೈಯಕ್ತಿಕ ಕೆಸಲಕ್ಕೆ ಆಗಿರಬಹುದು ಅಥವಾ ಕಛೇರಿ ಕೆಲಸದ ವಿಚಾರವಾಗಿ ಆಗಿರಬಹುದು. ಹಾಗಂತ ಜಿಮೇಲ್ (Gmail)​ನಲ್ಲಿ ನಮಗೆ ಬೇಕಾದ ಎಲ್ಲ ಫೈಲ್​ಗಳ್ನು ತುಂಬಿಸಿ ಇಡಲು ಸಾಧ್ಯವಿಲ್ಲ. ಯಾಕೆಂದರೆ ಇದರಲ್ಲಿ 15GB ವರೆಗೆ ಮಾತ್ರ ಫೋಟೋ, ವಿಡಿಯೋ ಅಥವಾ ಇತರೆ ಏನಾದರು ಫೈಲ್​ಗಳು ಇಡಲು ಸಾಧ್ಯ. ಸ್ಟೋರೇಜ್ ಫುಲ್ ಆದರೆ ಯಾವುದೇ ಫೈಲ್ ಅಪ್ಲೋಡ್ ಮಾಡಲು ಆಗುವುದಿಲ್ಲ. 15 ಜಿಬಿ ವರೆಗೆ ಉಚಿತ ಸಂಗ್ರಹಣೆಯನ್ನು ಬಳಸಿದ ನಂತರ ಸ್ಪೇಸ್ ಇಲ್ಲ ಎಂಬ ನೋಟಿಫಿಕೇಶನ್ ಬರುತ್ತದೆ. ಹೀಗಿರುವಾಗ ಕೆಲವೊಂದು ಟ್ರಿಕ್ಸ್ (Tricks) ಉಪಯೋಗಿಸಿ ಗೂಗಲ್ ಸ್ಟೋರೇಜ್ ಅನ್ನು ಹೆಚ್ಚಿಸಬಹುದು. ಅದು ಹೇಗೆ?, ಇಲ್ಲಿದೆ ನೋಡಿ ಮಾಹಿತಿ.

ಮೊದಲು ನೀವು ನಿಮ್ಮ ಜಿಮೇಲ್​ನಲ್ಲಿರುವ ದೊಡ್ಡ ಘಾತ್ರದ ಫೈಲ್ ಅನ್ನು ಡಿಲೀಟ್ ಮಾಡಬೇಕು. ಇದಕ್ಕಾಗಿ ನೀವು ನಿಮ್ಮ ಜಿಮೇಲ್ ಖಾತೆಗೆ ಲಾಗಿನ್ ಆಗಿ ಮತ್ತು ಸರ್ಚ್ ಬಾರ್​ನಲ್ಲಿ (Search mail) ‘has: attachment larger:10M’ ನಲ್ಲಿ ಎಂದು ಟೈಪ್ ಮಾಡಿ. ಈಗ 10MB ಗಾತ್ರದ ಅಟ್ಯಾಚ್ ಮೆಂಟ್ ಗಳಿರುವ ಎಲ್ಲಾ ಇಮೇಲ್‌ಗಳು ನಿಮಗೆ ಲಭಿಸುತ್ತವೆ. ಇವುಗಳಲ್ಲಿ ಅನಗತ್ಯವಾದ ಎಲ್ಲಾ ಇಮೇಲ್‌ಗಳನ್ನು ಆಯ್ಕೆಮಾಡಿ ಡಿಲೀಟ್ ಮಾಡಿ. ಕೇವಲ ಡಿಲೀಟ್ ಮಾಡಿ ಬಿಟ್ಟರೆ ಸಾಲದು ಇದಾದ ನಂತರ Trashನಲ್ಲಿರುವ ಇಮೇಲ್ ಗಳನ್ನು, Spam ಫೋಲ್ಡರ್​​ನಲ್ಲಿರುವ ಇಮೇಲ್ ಗಳನ್ನೂ ಡಿಲೀಟ್ ಮಾಡಬೇಕು.

ಇನ್ನು ನಿಮಗೆ ಅನೇಕ ಜಾಹೀರಾತುಗಳ ಮೇಲ್ ಅಥವಾ ಕೆಲವು ನ್ಯೂಸ್ ಲೆಟರ್ಸ್ ಈರೀತಿಯ ಮೇಲ್​ಗಳು ಬರುತ್ತಲೇ ಇರುತ್ತದೆ. ಇದನ್ನು ಅನ್‌ಸಬ್‌ಸ್ಕ್ರೈಬ್ ಮಾಡಬಹುದು ಮತ್ತು ಗೂಗಲ್ ಸಂಗ್ರಹ ಸ್ಥಳವನ್ನು ಮುಕ್ತಗೊಳಿಸಲು ಹಳೆಯದನ್ನು ಅಳಿಸಬಹುದು. ಉದಾಹರಣೆಗೆ, ಈ ಇಮೇಲ್‌ಗಳನ್ನು ಪಡೆಯುವುದನ್ನು ನಿಲ್ಲಿಸಲು ನಿಮಗ ಬರುವ ನ್ಯೂಸ್ ಲೆಟರ್​ಗಳನ್ನು ನೀವು ಅನ್‌ಸಬ್‌ಸ್ಕ್ರೈಬ್ ಮಾಡಿ.

ಇದನ್ನೂ ಓದಿ
Instagram Blue Tick: ಇನ್​ಸ್ಟಾಗ್ರಾಮ್, ಫೇಸ್​ಬುಕ್​ನಲ್ಲಿ ಬಂದೇ ಬಿಡ್ತು ಹಣ ಕೊಟ್ಟು ಬ್ಲೂ ಟಿಕ್ ಪಡೆಯುವ ಆಯ್ಕೆ: ಬೆಲೆ ಎಷ್ಟು?
Mobile Blast: ಬಾಂಬ್​ನಂತೆ ಸ್ಪೋಟಗೊಂಡ ಶವೋಮಿ ಕಂಪನಿಯ ಸ್ಮಾರ್ಟ್​ಫೋನ್: ನಿಮ್ಮ ಬಳಿ ಇದೆಯೇ ಈ ಫೋನ್?
Airtel 5G: ಏರ್ಟೆಲ್​ನಿಂದ ಧಮಾಕ ಆಫರ್: ಅನ್ಲಿಮಿಟೆಡ್ 5G ಡೇಟಾ ಕೊಡುಗೆ: ಶಾಕ್ ಆದ ಜಿಯೋ
iQOO Z7 5G: ರೋಚಕತೆ ಸೃಷ್ಟಿಸಿರುವ ಐಕ್ಯೂ Z7 5G ಸ್ಮಾರ್ಟ್​ಫೋನ್​ನ ಬೆಲೆ ಬಹಿರಂಗ: ಎಷ್ಟು ಗೊತ್ತೇ?

ಗೂಗಲ್ ನೀತಿಗಳ ಪ್ರಕಾರ ಮೇಲಿಂಗ್ ಪಟ್ಟಿಯು ನಿಮಗೆ ಅನಗತ್ಯ ಇಮೇಲ್‌ಗಳನ್ನು ಕಳುಹಿಸುವುದನ್ನು ನಿಲ್ಲಿಸಲು ಕೆಲವು ದಿನಗಳು ತೆಗೆದುಕೊಳ್ಳಬಹುದು. ಅನಗತ್ಯ ಇಮೇಲ್‌ಗಳಿಂದ ಅನ್‌ಸಬ್‌ಸ್ಕ್ರೈಬ್ ಮಾಡಲು, ನಿಮ್ಮ Gmail ಖಾತೆಯನ್ನು ತೆರೆಯಿರಿ ಮತ್ತು ನೀವು ಅನ್‌ಸಬ್‌ಸ್ಕ್ರೈಬ್ ಮಾಡಲು ಬಯಸುವ ಯಾವುದೇ ಇಮೇಲ್ ಅನ್ನು ತೆರೆಯಿರಿ. ಕಳುಹಿಸುವವರ ಹೆಸರಿನ ಬಳಿ ಇರುವ ಅನ್‌ಸಬ್‌ಸ್ಕ್ರೈಬ್ ಬಟನ್ ಅನ್ನು ಈಗ ಟ್ಯಾಪ್ ಮಾಡಿ.

ಇಂಟರ್ನೆಟ್ ಇಲ್ಲದೆಯೂ ಇಮೇಲ್ ಕಳುಹಿಸಿ:

ಎಲ್ಲ ಆ್ಯಪ್ ಮಾದರಿಯಂತೆ ಜಿಮೇಲ್​​ನಲ್ಲಿ ಕೂಡ ಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ಇಂಟರ್ನೆಟ್  ಅಗತ್ಯವಿದೆ. ಆದರೆ ಕೆಲವೊಂದು ಟ್ರಿಕ್‌ ಬಳಸಿ ಇಂಟರ್ನೆಟ್‌ ಇಲ್ಲದೆಯೂ ನೀವು ಜಿಮೇಲ್‌ ಮೂಲಕ ಮೇಲ್‌ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಇದಕ್ಕಾಗಿ ಗೂಗಲ್ ಜಿಮೇಲ್ ಅನ್ನು ಆಫ್​ಲೈನ್​ನಲ್ಲಿ ಉಪಯೋಗಿಸಬಹುದಾದ ಆಯ್ಕೆಯನ್ನು ನೀಡಿದೆ. ಇದು ಗೂಗಲ್ ನಿಂದ ಒಂದು ಯಶಸ್ವಿ ವೈಶಿಷ್ಟ್ಯವಾಗಿದ್ದು ಕಡಿಮೆ ಸಂಪರ್ಕವಿರುವ ಸ್ಥಳಗಳಲ್ಲಿ ಅಥವಾ ಇಂಟರ್ನೆಟ್ ಇಲ್ಲದ ಸ್ಥಳಗಳಲ್ಲಿ, ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಜಿಮೇಲ್ ಅನ್ನು ಆಫ್ ಲೈನ್ ನಲ್ಲಿ ಆನ್ ಮಾಡುವುದು ಸಹ ಸುಲಭ ಮತ್ತು ಬಳಕೆದಾರರು ಅದನ್ನು ಕೆಲವು ಸರಳ ಹಂತಗಳಲ್ಲಿ ಮಾಡಬಹುದು.