Tech Tips: ನೀವು ರಾಂಗ್ ನಂಬರ್​ಗೆ ರೀಚಾರ್ಜ್ ಮಾಡಿದ್ದೀರಾ?: ಹಣ ವಾಪಸ್ ಪಡೆಯಲು ಇಲ್ಲಿದೆ ನೋಡಿ ಟ್ರಿಕ್

ಅನೇಕ ಬಾರಿ ನಾವು ತರಾತುರಿಯಲ್ಲಿ ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡುತ್ತೇವೆ. ದೊಡ್ಡ ಮೊತ್ತ ರಾಂಗ್ ನಂಬರ್​ಗೆ ರೀಚಾರ್ಜ್ ಆಗಿದ್ದರೆ ಟೆನ್ಶನ್ ಆಗುತ್ತದೆ. ಆದರೆ, ರಾಂಗ್ ನಂಬರ್​ಗೆ ರೀಚಾರ್ಜ್ ಮಾಡಿದರೆ ಈ ಹಣ ಹಿಂಪಡೆಯಬಹುದು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

Tech Tips: ನೀವು ರಾಂಗ್ ನಂಬರ್​ಗೆ ರೀಚಾರ್ಜ್ ಮಾಡಿದ್ದೀರಾ?: ಹಣ ವಾಪಸ್ ಪಡೆಯಲು ಇಲ್ಲಿದೆ ನೋಡಿ ಟ್ರಿಕ್
Wrong Number Recharge
Follow us
|

Updated on: May 01, 2023 | 6:05 PM

ಈ ಹಿಂದೆ ಮೊಬೈಲ್ ರೀಚಾರ್ಜ್‌ಗಾಗಿ (Mobile Recharg) ಜನರು ಅಂಗಡಿಗಳಿಗೆ ಹೋಗಿ ಟಾಪ್ ಅಪ್ ಕಾರ್ಡ್‌ಗಳನ್ನು ಖರೀದಿಸುತ್ತಿದ್ದ ಕಾಲವಿತ್ತು. ಆ ಸಮಯದಲ್ಲಿ ಇಂಟರ್‌ನೆಟ್ ಕೂಡ ತುಂಬಾ ದುಬಾರಿಯಾಗಿತ್ತು. ಆದರೀಗ ಕಾಲ ಬದಲಾಗಿದೆ. ತಂತ್ರಜ್ಞಾನ ಮಾರುಕಟ್ಟೆ ಸಾಕಷ್ಟು ಬೆಳವಣಿಗೆ ಕಂಡಿದ್ದು ಇಂದು ಮನೆಯಲ್ಲಿಯೇ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಅನೇಕ ಅಪ್ಲಿಕೇಷನ್​ಗಳಿಗೆ. ಫೋನ್ ಪೇ (PhonePe), ಗೂಗಲ್ ಪೇ, ಪೇಟಿಎಂ ಸೇರಿದಂತೆ ಅನೇಕ ಆ್ಯಪ್​ಗಳು ಬಳಸುತ್ತೀರಿ. ಆದರೆ ಅನೇಕ ಬಾರಿ ನಾವು ತರಾತುರಿಯಲ್ಲಿ ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡುತ್ತೇವೆ. ಅದು ಸಣ್ಣ ಮೊತ್ತದ ರೀಚಾರ್ಜ್ ಆಗಿದ್ದರೆ ನಿರ್ಲಕ್ಷಿಸುತ್ತಾರೆ, ಅದೇ ದೊಡ್ಡ ಮೊತ್ತ ರಾಂಗ್ ನಂಬರ್​ಗೆ (Wrong Number) ರೀಚಾರ್ಜ್ ಆಗಿದ್ದರೆ ಟೆನ್ಶನ್ ಆಗುತ್ತದೆ. ಆದರೆ, ರಾಂಗ್ ನಂಬರ್​ಗೆ ರೀಚಾರ್ಜ್ ಮಾಡಿದರೆ ಈ ಹಣ ಹಿಂಪಡೆಯಬಹುದು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ನೀವು ತಪ್ಪು ಸಂಖ್ಯೆ ನಮೂದಿಸಿದರೆ ಏನು ಮಾಡಬೇಕು?:

ನೀವು ತಪ್ಪಾಗಿ ಅಥವಾ ತರಾತುರಿಯಲ್ಲಿ ರಾಂಗ್ ನಂಬರ್‌ಗೆ ರೀಚಾರ್ಜ್ ಮಾಡಿದ್ದರೆ, ನೀವು ಸಿಮ್ ಕಾರ್ಡ್ ಬಳಸುತ್ತಿರುವ ಟೆಲಿಕಾಂ ಆಪರೇಟರ್‌ನ ಕಸ್ಟಮರ್ ಕೇರ್‌ಗೆ ತಕ್ಷಣ ಕರೆ ಮಾಡಿ ಮತ್ತು ಅವರಿಗೆ ಎಲ್ಲಾ ಮಾಹಿತಿಯನ್ನು ನೀಡಿ. ಅಂದರೆ ನೀವು ಎಷ್ಟು ಮೊತ್ತ ರೀಚಾರ್ಜ್ ಮಾಡಿದ್ದೀತಿ, ಯಾವ ಕಂಪನಿಯ ನಂಬರ್ ರೀಚಾರ್ಜ್ ಮಾಡಲಾಗಿದೆ ಹಾಗೂ ಯಾವ ಆ್ಯಪ್​ ಅನ್ನು ರೀಚಾರ್ಜ್ ಮಾಡಲು ಬಳಸಿದ್ದೀರಿ, ಹೀಗೆ ಎಲ್ಲ ಮಾಹಿತಿಯನ್ನು ಟೆಲಿಕಾಂ ಆಪರೇಟರ್‌ಗೆ ನೀಡಬೇಕು.

Poco F5 Pro 5G: ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಹೊಸ ಪೋಕೋ F5 ಪ್ರೊ 5G ಸ್ಮಾರ್ಟ್‌ಫೋನ್‌: ಫೀಚರ್ಸ್ ಏನಿದೆ ನೋಡಿ

ಇದನ್ನೂ ಓದಿ
Image
TRAI Spam Filter: ಟ್ರಾಯ್ ಹೊಸ ನಿಯಮ ಇಂದಿನಿಂದ ಜಾರಿ: ಸ್ಪ್ಯಾಮ್ ಕರೆ, ಎಸ್​ಎಮ್​ಎಸ್​ ಬ್ಯಾನ್
Image
ಪಾಕಿಸ್ತಾನದಲ್ಲಿರುವ ತಮ್ಮ ನಾಯಕರಿಗೆ ರಹಸ್ಯ ಸಂದೇಶ ಕಳುಹಿಸಲು ಉಗ್ರರು ಬಳಸುತ್ತಿದ್ದ 14 ಮೆಸೆಂಜರ್ ಆ್ಯಪ್​ಗಳನ್ನು ನಿಷೇಧಿಸಿದ ಭಾರತ ಸರ್ಕಾರ
Image
Tech Tips: ನಿಮ್ಮ ಸ್ಮಾರ್ಟ್​ಫೋನ್ ಡಿಸ್ ಪ್ಲೇ ಒಡೆದು ಹೋಗಿದ್ದರೆ ಸರಿಪಡಿಸಲು ಈ ಟ್ರಿಕ್ ಫಾಲೋ ಮಾಡಿ
Image
Flipkart Big Saving Days sale: ಫ್ಲಿಪ್​ಕಾರ್ಟ್​ ಬಿಗ್‌ ಸೇವಿಂಗ್‌ ಡೇಸ್‌ ಸೇಲ್​ಗೆ ಕ್ಷಣಗಣನೆ: ಈ ಬಾರಿ ಬಂಪರ್ ಆಫರ್ಸ್

ಇದಲ್ಲದೆ, ನೀವು ತಪ್ಪಾಗಿ ರೀಚಾರ್ಜ್ ಮಾಡಿದ ಬಗ್ಗೆ ಸಂಪೂರ್ಣ ವಿವರಗಳನ್ನು ಇಮೇಲ್ ಮೂಲಕ ಸಂಬಂಧಪಟ್ಟ ಕಂಪನಿಗೆ ಕಳುಹಿಸಬಹುದು. ಈ ಮೂಲಕ ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಭಾರತದಲ್ಲಿ ಹೆಚ್ಚಿನ ಜನರು ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಿಮ್ ಕಾರ್ಡ್‌ಗಳನ್ನು ಬಳಸುತ್ತಾರೆ. ನೀವು ಈ ಟೆಲಿಕಾಂ ಕಂಪನಿಯ ಇಮೇಲ್ ಐಡಿಯನ್ನು ಸುಲಭವಾಗಿ ಪಡೆಯಬಹುದು. ಹೀಗೆ ಅವರಿಗೆ ಮೇಲ್ ಮೂಲಕ ಸ್ಪಷ್ಟ ಮಾಹಿತಿಯನ್ನು ನೀಡಿ.

ಟೆಲಿಕಾಂ ಕಂಪನಿ ಪ್ರತಿಕ್ರಿಯಿಸದಿದ್ದಲ್ಲಿ ಏನು ಮಾಡುವುದು?:

ಅನೇಕ ಬಾರಿ ಟೆಲಿಕಾಂ ಕಂಪನಿಗಳು ಗ್ರಾಹಕರ ದೂರುಗಳನ್ನು ಸ್ವೀಕರಿಸುವುದಿಲ್ಲ. ದೀರ್ಘಕಾಲದವರೆಗೆ ಕರೆಯಲ್ಲಿ ಕಾದರೂ ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಕೆಲವು ಬಾರಿ ಕಾಲ್ ಕನೆಕ್ಟ್ ಕೂಡ ಆಗುವುದಿಲ್ಲ. ಟೆಲಿಕಾಂ ಕಂಪನಿಯು ನಿಮ್ಮ ದೂರಿನ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿದ್ದರೂ ಸಹ, ನೀವು ಕಸ್ಟಮರ್ ಕೇರ್ ಪೋರ್ಟಲ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಬಹುದು. ಅಥವಾ ನಿಮ್ಮ ದೂರನ್ನು ವಾಟ್ಸ್​ಆ್ಯಪ್ ಮೂಲಕವೂ ದಾಖಲಿಸಬಹುದು. ಇದಲ್ಲದೆ, ನೀವು ಪ್ಲೇ ಸ್ಟೋರ್‌ನಿಂದ ಗ್ರಾಹಕ ಸೇವಾ ಪೋರ್ಟಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕವೂ ದೂರು ಸಲ್ಲಿಸಬಹುದು.

ಈ ವಿಚಾರ ನೆನಪಿನಲ್ಲಿಡಿ:

ಆದರೆ ಒಂದು ವಿಷಯ ನೆನಪಿಡಿ, ನೀವು ಸಮಯಕ್ಕೆ ಸರಿಯಾಗಿ ದೂರು ಸಲ್ಲಿಸಿದರೆ ಮಾತ್ರ ನಿಮ್ಮ ಹಣವನ್ನು ನೀವು ಹಿಂಪಡೆಯಬಹುದು. ಅಲ್ಲದೆ ನಿಮ್ಮ ಮೊಬೈಲ್ ಸಂಖ್ಯೆಯು ರೀಚಾರ್ಜ್ ಮಾಡಿದ ಸಂಖ್ಯೆಯೊಂದಿಗೆ ಹೊಂದಾಣಿಕೆಯಾಗಬೇಕು. ಅಂದರೆ, ಒಂದು ಅಥವಾ ಎರಡು ಸಂಖ್ಯೆಗಳಿಂದಾಗಿ ರೀಚಾರ್ಜ್ ತಪ್ಪು ಸಂಖ್ಯೆಗೆ ಹೋದರೆ, ಹಣವನ್ನು ಮರಳಿ ಪಡೆಯುವ ಅವಕಾಶವಿದೆ. ಅದೇ ಸಂಪೂರ್ಣ ಸಂಖ್ಯೆ ವಿಭಿನ್ನವಾಗಿದ್ದರೆ, ಅಂತಹ ಸಂದರ್ಭದಲ್ಲಿ ಕಂಪನಿಯು ಪಾವತಿಸಲು ಹಿಂಜರಿಯುತ್ತದೆ. ಏಕೆಂದರೆ ಅನೇಕ ಜನರು ಉದ್ದೇಶಪೂರ್ವಕವಾಗಿ ಈರೀತಿ ಮಾಡುವವರೂ ಇರುತ್ತಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ