WhatsApp: ವಾಟ್ಸ್ಆ್ಯಪ್​​ನಲ್ಲಿರುವ ಈ ಹಿಡನ್ ಫೀಚರ್ ನೀವು ಬಳಸಿದ್ದೀರಾ?: ಒಮ್ಮೆ ಇಲ್ಲಿ ನೋಡಿ

WhatsApp Tips and Tricks: ವಾಟ್ಸ್​ಆ್ಯಪ್​ನಲ್ಲಿ ಯಾವುದೇ ಥರ್ಡ್​ ಪಾರ್ಟಿ ಆ್ಯಪ್​ಗಳನ್ನು ಬಳಸದೆ ನೀವು ಒಬ್ಬರಿಗೆ ಫೋಟೋ ಅಥವಾ ವಿಡಿಯೋವೊಂದನ್ನು ಕಳುಹಿಸಿದಾಗ, ಅದನ್ನು ಅವರು ಓಪನ್ ಮಾಡಿ ನೋಡಿದ ತಕ್ಷಣ ಡಿಲೀಟ್ ಆಗುವಂತಹ ಆಯ್ಕೆ ನೀಡಲಾಗಿದೆ.

WhatsApp: ವಾಟ್ಸ್ಆ್ಯಪ್​​ನಲ್ಲಿರುವ ಈ ಹಿಡನ್ ಫೀಚರ್ ನೀವು ಬಳಸಿದ್ದೀರಾ?: ಒಮ್ಮೆ ಇಲ್ಲಿ ನೋಡಿ
WhatsApp
TV9kannada Web Team

| Edited By: Vinay Bhat

Jun 28, 2022 | 2:57 PM

ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಲೇ ಇದೆ. ಇದಕ್ಕೆ ತಕ್ಕಂತೆ ಅನೇಕ ಟ್ರಿಕ್​ಗಳು ಕೂಡ ಹುಟ್ಟಿಕೊಳ್ಳುತ್ತಾ ಇರುತ್ತವೆ. ಈಗಾಗಲೇ ವಾಟ್ಸ್​ಆ್ಯಪ್​ನಲ್ಲಿ ಡಿಲೀಟ್ ಆದ ಮೆಸೇಜ್​ಗಳನ್ನು ಓದಲು, ಡಿಪಿ ಯಾರು ನೋಡಿದ್ದಾರೆಂದು ತಿಳಿಯಲು ಹೀಗೆ ಹೆಚ್ಚಿನ ಆಯ್ಕೆಗಳನ್ನು ತಿಳಿಯಲು ಬೇರೆ ಬೇರೆ ಥರ್ಡ್​ ಪಾರ್ಟಿ ಆ್ಯಪ್​ಗಳಿವೆ (Third Party App). ಅಂತೆಯೆ ನೀವು ಒಬ್ಬರಿಗೆ ಫೋಟೋ ಅಥವಾ ವಿಡಿಯೋವೊಂದನ್ನು ಕಳುಹಿಸಿದಾಗ, ಅದನ್ನು ಅವರು ಓಪನ್ ಮಾಡಿ ನೋಡಿದ ತಕ್ಷಣ ಡಿಲೀಟ್ ಆಗಿ ಬಿಡುವ ಆಯ್ಕೆ ಕೂಡ ವಾಟ್ಸ್​ಆ್ಯಪ್​ನಲ್ಲಿದೆ. ಇದಕ್ಕೆ ನೀವು ಯಾವುದೇ ಥರ್ಡ್ ಪಾರ್ಟಿ ಆ್ಯಪ್​​ಗಳನ್ನು ಡೌನ್​ಲೋಡ್ ಮಾಡುವ ಅವಶ್ಯಕತೆಯಿಲ್ಲ. ಬದಲಾಗಿ ಈ ಆಯ್ಕೆ ಸ್ವತಃ ವಾಟ್ಸ್​ಆ್ಯಪ್​ನಲ್ಲಿಯೇ ಇದೆ.

ಹೌದು, ವಾಟ್ಸ್​ಆ್ಯಪ್​ನಲ್ಲಿ View Once Feature ಎಂಬ ಸೌಲಭ್ಯ ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಎರಡೂ ಬಳಕೆದಾರರಿಗೆ ಕೆಲ ಸಮಯದ ಹಿಂದೆ ಪರಿಚಯಿಸಿದೆ. ಇದರಲ್ಲಿ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಅದು ಮಾಯವಾಗುವುದು ಮಾತ್ರವಲ್ಲದೆ, ಇವು ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗದಿರುವುದು ವಿಶೇಷವಾಗಿದೆ. ವಾಟ್ಸ್​ಆ್ಯಪ್ ಪರಿಚಯಿಸಿರುವ ಈ ಸಿಂಗಲ್ ವೀವಿಂಗ್ ಆಯ್ಕೆಯನ್ನು ಈಗಾಗಲೇ ಅನೇಕರು ಮೆಚ್ಚಿಕೊಂಡಿದ್ದಾರೆ. ವಾಟ್ಸ್​ಆ್ಯಪ್​ ಕೆಲ ತಿಂಗಳ ಹಿಂದಷ್ಟೆ ಈ ಆಯ್ಕೆಯನ್ನು ಪರಿಚಯಿಸಿತ್ತು.

Moto G42: ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ ಮೋಟೋ G42 ಸ್ಮಾರ್ಟ್​​ಫೋನ್: ಜುಲೈ 4ಕ್ಕೆ ಬಿಡುಗಡೆ

ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ಉದಾಹರಣೆಗೆ ನೀವು ನಿಮ್ಮ ಸ್ನೇಹಿತರ ಚಾಟ್ ಬಾಕ್ಸ್ ಓಪನ್ ಮಾಡಿ ಫೋಟೋ ಅಥವಾ ವಿಡಿಯೋ ಕಳುಹಿಸ ಬೇಕೆಂದಿದ್ದರೆ, ಐಕಾನ್ ಮೇಲೆ ಕ್ಲಿಕ್ ಮಾಡುತ್ತೀರಿ. ಆಗ ಫೋಟೋ ಅಥವಾ ವಿಡಿಯೋ ಸೆಲಕ್ಟ್ ಮಾಡಿ ಸೆಂಡ್ ಬಟನ್ ಪ್ರೆಸ್ ಮಾಡುವ ಪಕ್ಕದಲ್ಲೇ ವೀವ್ ಒನ್ಸ್ ಮೋಡ್ ಆಯ್ಕೆ ಇರುತ್ತದೆ. ಅದನ್ನು ಪ್ರೆಸ್ ಮಾಡಿ ಕಳುಹಿಸಿದರೆ, ನೀವು ಸೆಂಡ್ ಮಾಡಿದ ಫೈಲ್ ಅನ್ನು ಅವರಿಗೆ ಒಮ್ಮೆಗೆ ಮಾತ್ರ ಓಪನ್ ಮಾಡಲು ಸಾಧ್ಯವಾಗುತ್ತಿದೆ.

ಈ View Once Feature ತನ್ನದೇ ಆದ ಕೆಲ ಅನುಕೂಲತೆಗಳೊಂದಿಗೆ ಕೆಲ ಅನಾನುಕೂಲಗಳನ್ನು ಸಹ ಹೊಂದಿದೆ. ಚಾಟ್ ಒಂದನ್ನು ಓಪನ್ ಮಾಡಿದ ತಕ್ಷಣ ಅದು ಚಾಟ್ ಬಾಕ್ಸ್ ನಿಂದ ಮಾಯವಾಗುವುದು ಈ ಫೀಚರ್​ನ ಅತ್ಯಂತ ಕುತೂಹಲಕಾರಿ ವಿಷಯವಾಗಿದೆ. ಈ ಚಾಟ್ ಅಥವಾ ಇದರಲ್ಲಿನ ಫೋಟೋ, ವಿಡಿಯೋ ಫೋನಿನಲ್ಲಿ ಎಲ್ಲಿಯೂ ಸೇವ್ ಆಗಿರುವುದಿಲ್ಲ ಹಾಗೂ ಇದನ್ನು ನೀವು ಮತ್ತೊಬ್ಬರಿಗೆ ಫಾರ್ವರ್ಡ್ ಕೂಡ ಮಾಡಲಾಗುವುದಿಲ್ಲ ಎಂಬುದು ಬೇಸರದ ಸಂಗತಿ.

ಡಿಪಿ, ಲಾಸ್ಟ್​ ಸೀನ್ ಕೆಲವರಿಗೆ ಮಾತ್ರ ಕಾಣುವಂತೆ ಮಾಡಿ:

ವಾಟ್ಸ್​ಆ್ಯಪ್​ನಲ್ಲಿ ಈಗ ನೀವು ನಿಮ್ಮ ಪ್ರೊಫೈಲ್ ಫೋಟೋವನ್ನು, ಲಾಸ್ಟ್​​ ಸೀನ್ ಮತ್ತು ಎಬೌಟ್ ಆಯ್ಕೆಯನ್ನು ಯಾರಿಗೆ ಬೇಕು ಅವರಿಗೆ ಮಾತ್ರ ಕಾಣುವಂತೆ ಮಾಡಬಹುದು. ಈ ಹಿಂದೆ ಇದರಲ್ಲಿ ನೋಬಡಿ (Nobody), ಮೈ ಕಾಂಟ್ಯಾಕ್ಟ್ಸ್ (My Contacts), ಎವರಿಒನ್ (Everyone) ಎಂಬ ಆಯ್ಕೆ ಮಾತ್ರ ನೀಡಲಾಗಿತ್ತು. ಇದೀಗ ಹೊಸ ಅಪ್ಡೇಟ್​ನಲ್ಲಿ ‘ಮೈ ಕಾಂಟ್ಯಾಕ್ಸ್ಟ್​​ ಎಕ್ಸೆಪ್ಟ್’ ಎಂಬ ಹೊಸ ಆಯ್ಕೆ ನೀಡಲಾಗಿದೆ. ಈ ಮೂಲಕ ನಿಮಗೆ ಅಗತ್ಯವಿರುವವರಿಗೆ ಮಾತ್ರ ನಿಮ್ಮ ಡಿಪಿ, ಲಾಸ್ಟ್​​ ಸೀನ್ ಮತ್ತು ಎಬೌಟ್ ಆಯ್ಕೆಯನ್ನು ನೋಡುವಂತೆ ಮಾಡಬಹುದು. ಸೆಟ್ಟಿಂಗ್​​ಗ ಹೋಗಿ ಎಕೌಂಟ್-ಪ್ರೈವಸಿ ಮೂಲಕ ಈ ಆಯ್ಕೆಯನ್ನು ನೀವು ಗಮನಿಸಬಹುದು. ವಾಟ್ಸ್​ಆ್ಯಪ್ ಈ ಹೊಸ ಆಯ್ಕೆಯನ್ನು ತನ್ನೆಲ್ಲ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ನೀಡಿದೆ.

ಇದನ್ನೂ ಓದಿ

Laptops Under Rs. 25000: ಬಜೆಟ್ ಬೆಲೆಯ ಬೆಸ್ಟ್​ ಲ್ಯಾಪ್​ಟಾಪ್ ಹುಡುಕುತ್ತಿದ್ದೀರಾ?: ಇಲ್ಲಿದೆ ನೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada