AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಮೊಬೈಲ್ ಫೋನ್ ಅನ್ನು ದಿನಕ್ಕೆ ಎಷ್ಟು ಬಾರಿ ಚಾರ್ಜ್ ಮಾಡಬೇಕು?: ನೀವೂ ಈ ತಪ್ಪು ಮಾಡದಿರಿ

ಚಾರ್ಜಿಂಗ್ ವಿಷಯಕ್ಕೆ ಬಂದರೆ, ತಮ್ಮ ಫೋನ್​ನಲ್ಲಿ ಬ್ಯಾಟರಿ ಸ್ವಲ್ಪ ಖಾಲಿಯಾದ ತಕ್ಷಣ ಅದನ್ನು ಚಾರ್ಜಿಂಗ್‌ಗೆ ಹಾಕುವುದನ್ನು ನಾವು ನಮ್ಮ ಸುತ್ತಲೂ ನೋಡುತ್ತೇವೆ. ಅಲ್ಲದೆ, ಫೋನ್ ಅನ್ನು ಚಾರ್ಜಿಂಗ್ ಮಾಡಿದ ಸ್ವಲ್ಪ ಸಮಯದ ನಂತರ ಮತ್ತೆ ಹೊರತೆಗೆಯುವವರೂ ಅನೇಕರಿದ್ದಾರೆ. ನಿಮಗೂ ಈ ಅಭ್ಯಾಸವಿದ್ದರೆ ನಿಮ್ಮ ಫೋನ್ ಬೇಗ ಕೆಟ್ಟು ಹೋಗಬಹುದು.

Tech Tips: ಮೊಬೈಲ್ ಫೋನ್ ಅನ್ನು ದಿನಕ್ಕೆ ಎಷ್ಟು ಬಾರಿ ಚಾರ್ಜ್ ಮಾಡಬೇಕು?: ನೀವೂ ಈ ತಪ್ಪು ಮಾಡದಿರಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Dec 23, 2024 | 12:53 PM

Share

ಫೋನ್ ಬ್ಯಾಟರಿ ಬೇಗನೆ ಖಾಲಿಯಾಗಲು ಪ್ರಾರಂಭಿಸಿದರೆ ಅದು ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಪದೇ ಪದೇ ಬ್ಯಾಟರಿ ಡೆಡ್ ಆಯಿತು ಎಂದರೆ ಒಳ್ಳೆಯ ಹೊಸ ಫೋನ್ ಕೂಡ ಕೆಟ್ಟು ಹೋಗುತ್ತಿದೆ ಎಂದರ್ಥ. ನಾವು ಹೊಸ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ, ಆದರೆ ಫೋನ್ ಸ್ವಲ್ಪ ಹಳೆಯದಾಗಲು ಪ್ರಾರಂಭಿಸಿದಾಗ ಅದನ್ನು ಬೇಕಾಬಿಟ್ಟಿ ಉಪಯೋಗಿಸಿ ಅದರ ಕಾಳಜಿಯನ್ನು ಮರೆತುಬಿಡುತ್ತೇವೆ. ಇದರಲ್ಲಿ ಮುಖ್ಯವಾಗಿ ಚಾರ್ಜ್ ಮಾಡುವುದು. ಜನರು ಸಾಮಾನ್ಯವಾಗಿ ಕಡಿಮೆ ಬ್ಯಾಟರಿ ಇದ್ದಾಗ ಫೋನ್ ಅನ್ನು ಚಾರ್ಜ್ ಮಾಡಲು ಮುಂದಾಗುತ್ತಾರೆ. ಹಾಗಾದರೆ ಫೋನ್ ಅನ್ನು ದಿನಕ್ಕೆ ಎಷ್ಟು ಬಾರಿ ಚಾರ್ಜ್ ಮಾಡಬೇಕು?.

ಚಾರ್ಜಿಂಗ್ ವಿಷಯಕ್ಕೆ ಬಂದರೆ, ತಮ್ಮ ಫೋನ್​ನಲ್ಲಿ ಬ್ಯಾಟರಿ ಸ್ವಲ್ಪ ಖಾಲಿಯಾದ ತಕ್ಷಣ ಅದನ್ನು ಚಾರ್ಜಿಂಗ್‌ಗೆ ಹಾಕುವುದನ್ನು ನಾವು ನಮ್ಮ ಸುತ್ತಲೂ ನೋಡುತ್ತೇವೆ. ಅಲ್ಲದೆ, ಫೋನ್ ಅನ್ನು ಚಾರ್ಜಿಂಗ್ ಮಾಡಿದ ಸ್ವಲ್ಪ ಸಮಯದ ನಂತರ ಮತ್ತೆ ಹೊರತೆಗೆಯುವವರೂ ಅನೇಕರಿದ್ದಾರೆ. ನಿಮಗೂ ಈ ಅಭ್ಯಾಸವಿದ್ದರೆ ನಿಮ್ಮ ಫೋನ್ ಬೇಗ ಕೆಟ್ಟು ಹೋಗಬಹುದು.

ಫೋನ್ ಅನ್ನು ಚಾರ್ಜಿಂಗ್‌ನಲ್ಲಿ ಇರಿಸಲು ಸರಿಯಾದ ಮಾರ್ಗವಿದೆ. ಮೊಬೈಲ್ ಫೋನ್ ಅನ್ನು ದಿನಕ್ಕೆ ಎರಡು ಬಾರಿ ಚಾರ್ಜ್ ಮಾಡಬೇಕು ಎಂದು ಟೆಕ್ ಪಂಡಿತರು ಹೇಳುತ್ತಾರೆ. ಆದ್ದರಿಂದ ಒಂದು ದಿನದಲ್ಲಿ ಫೋನ್ ಅನ್ನು ಹೆಚ್ಚಾಗಿ ಅಥವಾ ಆಗಾಗ್ಗೆ ಚಾರ್ಜ್ ಮಾಡುವುದು ನಿಮ್ಮ ಫೋನ್‌ನ ಬ್ಯಾಟರಿ ಅವಧಿಯ ಮೇಲೆ ಪರಿಣಾಮ ಬೀರುತ್ತದೆ.

ಫೋನಿನಲ್ಲಿ ಶೇ. 20 ಚಾರ್ಜ್ ಉಳಿದಿರುವಾಗ ಫೋನ್ ಚಾರ್ಜ್ ಮಾಡಬೇಕು ಮತ್ತು ಶೇ. 80 ಚಾರ್ಜ್ ಆದ ತಕ್ಷಣ ಹೊರತೆಗೆಯಬೇಕು. ಬ್ಯಾಟರಿಯನ್ನು ಸಂಪೂರ್ಣವಾಗಿ ಡಿಸ್ಚಾರ್ಜ್ ಮಾಡುವುದನ್ನು ತಪ್ಪಿಸಿ. ಬ್ಯಾಟರಿ ಮಟ್ಟವು ಶೇ. 80 ಇದ್ದಾಗ ಮಾತ್ರ ಫೋನ್ ಅನ್ನು ಚಾರ್ಜರ್‌ನಿಂದ ಅನ್‌ಪ್ಲಗ್ ಮಾಡಿ. ನೀವು 45-75 ನಿಯಮವನ್ನು ಸಹ ಅನುಸರಿಸಬಹುದು. ಅಂದರೆ, ಫೋನ್‌ನ ಬ್ಯಾಟರಿ ಶೇ. 45 ಅಥವಾ ಅದಕ್ಕಿಂತ ಕಡಿಮೆ ಇದ್ದಾಗ, ನೀವು ಚಾರ್ಜ್‌ ಹಾಕಬಹುದು ಮತ್ತು ಅದು ಶೇ. 75 ರಷ್ಟು ತಲುಪಿದಾಗ ಚಾರ್ಜಿಂಗ್ ಅನ್ನು ತೆಗೆದುಹಾಕಬಹುದು. ಈ ವಿಧಾನವು ಫೋನ್‌ನ ಬ್ಯಾಟರಿಯನ್ನು ದೀರ್ಘಕಾಲದವರೆಗೆ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಚೀನಾದಲ್ಲಿ Insta, FB, ಯೂಟ್ಯೂಬ್ ನಿಷೇಧ: ಇದರ ಬದಲು ಯಾವ ಆ್ಯಪ್ ಯೂಸ್ ಮಾಡ್ತಾರೆ ನೋಡಿ

ಇತರೆ ಫೋನ್‌ನ ಚಾರ್ಜರ್‌ನೊಂದಿಗೆ ನಿಮ್ಮ ಫೋನ್ ಚಾರ್ಜ್ ಮಾಡುವಾಗ ತುಂಬಾ ನಿಧಾನವಾಗಿ ಚಾರ್ಜ್ ಆಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಏಕೆಂದರೆ ನೀವು ಬಳಸುತ್ತಿರುವ ಚಾರ್ಜರ್ ನಿಮ್ಮ ಫೋನ್ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಫೋನ್‌ನೊಂದಿಗೆ ಒದಗಿಸಲಾದ ಚಾರ್ಜರ್‌ನೊಂದಿಗೆ ಅದನ್ನು ಚಾರ್ಜ್ ಮಾಡಿ. ನಿಮ್ಮ ಫೋನ್ 20W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಭಾವಿಸೋಣ, ಆದರೆ, ನೀವು ಕನೆಕ್ಟ್ ಮಾಡಿರುವ ಚಾರ್ಜರ್ 120W ಅಥವಾ 65W ನದ್ದಾಗಿದ್ದರೆ ಫೋನ್ ಬಿಸಿಯಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ