ಇನ್​ಸ್ಟಾಗ್ರಾಮ್​ ಪ್ರೊಫೈಲ್ ಕಾರ್ಡ್ ಉಪಯೋಗಿಸಿದ್ದೀರಾ?: ಇದರಿಂದ ಫಾಲೋವರ್ಸ್ ಹೆಚ್ಚಿಸುವುದು ಹೇಗೆ?

ಇನ್​ಸ್ಟಾಗ್ರಾಮ್​ನಲ್ಲಿ ಒಂದೇ ಹೆಸರಿನೊಂದಿಗೆ ಹಲವು ಬಾರಿ ಹಲವಾರು ಪ್ರೊಫೈಲ್‌ಗಳನ್ನು ಕ್ರಿಯೆಟ್ ಆಗಿರುತ್ತದೆ. ಆದರೆ, ಈ ಕಾರ್ಡ್ ಮೂಲಕ ಯಾರು ಬೇಕಾದರೂ ನಿಮ್ಮನ್ನು ಮಾತ್ರ ಅನುಸರಿಸಲು ಸಾಧ್ಯವಾಗುತ್ತದೆ. ಉತ್ತಮ ವಿಷಯವೆಂದರೆ ಈ ಕಾರ್ಡ್ ಕ್ಯೂಆರ್ ಕೋಡ್ ಅನ್ನು ಸಹ ಹೊಂದಿದೆ.

ಇನ್​ಸ್ಟಾಗ್ರಾಮ್​ ಪ್ರೊಫೈಲ್ ಕಾರ್ಡ್ ಉಪಯೋಗಿಸಿದ್ದೀರಾ?: ಇದರಿಂದ ಫಾಲೋವರ್ಸ್ ಹೆಚ್ಚಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 25, 2024 | 10:35 AM

Instagram Profile Card: ಮೆಟಾ ತನ್ನ ಫೋಟೋ-ವಿಡಿಯೋ ಹಂಚಿಕೆ ವೇದಿಕೆ ಇನ್​ಸ್ಟಾಗ್ರಾಮ್​ನಲ್ಲಿ ಪ್ರತಿದಿನ ಕೆಲವು ಹೊಸ ನವೀಕರಣಗಳನ್ನು ತರುತ್ತದೆ. ಇತ್ತೀಚೆಗೆ, ಇನ್​ಸ್ಟಾ​ ಬಳಕೆದಾರರ ಅನುಕೂಲಕ್ಕಾಗಿ, ಪ್ರೊಫೈಲ್ ಕಾರ್ಡ್ ಎಂಬ ಹೊಸ ಅಪ್ಡೇಟ್ ಅನ್ನು ನೀಡಿದೆ. ಇದರ ಮೂಲಕ ನೀವು ನಿಮ್ಮ ಪ್ರೊಫೈಲ್ ಅನ್ನು ಹೆಚ್ಚಿನ ಜನರೊಂದಿಗೆ ಹಂಚಿಕೊಳ್ಳಬಹುದು. ಆದರೆ, ಈ ಫೀಚರ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಇದನ್ನು ಹೇಗೆ ಉಪಯೋಗಿಸಬೇಕು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.

ಇನ್​ಸ್ಟಾಗ್ರಾಮ್​ನಲ್ಲಿ ಒಂದೇ ಹೆಸರಿನೊಂದಿಗೆ ಹಲವು ಬಾರಿ ಹಲವಾರು ಪ್ರೊಫೈಲ್‌ಗಳನ್ನು ಕ್ರಿಯೆಟ್ ಆಗಿರುತ್ತದೆ. ಆದರೆ, ಈ ಕಾರ್ಡ್ ಮೂಲಕ ಯಾರು ಬೇಕಾದರೂ ನಿಮ್ಮನ್ನು ಮಾತ್ರ ಅನುಸರಿಸಲು ಸಾಧ್ಯವಾಗುತ್ತದೆ. ಉತ್ತಮ ವಿಷಯವೆಂದರೆ ಈ ಕಾರ್ಡ್ ಕ್ಯೂಆರ್ ಕೋಡ್ ಅನ್ನು ಸಹ ಹೊಂದಿದೆ, ಅದನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರೊಫೈಲ್ ನೇರವಾಗಿ ತೆರೆಯುತ್ತದೆ.

ಇನ್​ಸ್ಟಾಗ್ರಾಮ್​ ಪ್ರೊಫೈಲ್ ಕಾರ್ಡ್ ಹೇಗೆ ಕೆಲಸ ಮಾಡುತ್ತದೆ?:

ಈ ಡಿಜಿಟಲ್ ಕಾರ್ಡ್‌ನಲ್ಲಿ, ನಿಮ್ಮ ಬಯೋ, ಇತರ ಪುಟಗಳಿಗೆ ಲಿಂಕ್‌ಗಳು, ನಿಮ್ಮ ನೆಚ್ಚಿನ ಹಾಡು ಮುಂತಾದ ವಿಷಯಗಳನ್ನು ನೀವು ಬರೆಯಬಹುದು. ಇದಲ್ಲದೆ, ನೀವು ನಿಮ್ಮ ಕಾರ್ಡ್ ಅನ್ನು ಕಸ್ಟಮೈಸ್ ಮಾಡಬಹುದು, ಬ್ಯಾಕ್​ಗ್ರೌಂಡ್ ಕಲರ್ ಬದಲಾಯಿಸಬಹುದು, ಸೆಲ್ಫಿಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಎಮೋಜಿಗಳನ್ನು ಸಹ ಸೇರಿಸಬಹುದು.

ಇನ್​ಸ್ಟಾಗ್ರಾಮ್​ ಪ್ರೊಫೈಲ್ ಕಾರ್ಡ್ ಅನ್ನು ಹೇಗೆ ಹಂಚಿಕೊಳ್ಳುವುದು?:

ನಿಮ್ಮ ಪ್ರೊಫೈಲ್ ಕಾರ್ಡ್ ಅನ್ನು ಹಂಚಿಕೊಳ್ಳುವುದು ಸುಲಭವಾಗಿದೆ. ಇದಕ್ಕಾಗಿ ಇನ್​ಸ್ಟಾಗ್ರಾಮ್​ ಪ್ರೊಫೈಲ್‌ಗೆ ಹೋಗಿ. ಇಲ್ಲಿ ನಿಮಗೆ ಶೇರ್ ಪ್ರೊಫೈಲ್ ಆಯ್ಕೆಯನ್ನು ತೋರಿಸಲಾಗುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ಪ್ರೊಫೈಲ್ ಕಾರ್ಡ್‌ನಲ್ಲಿ ವಿವರಗಳನ್ನು ನಮೂದಿಸಿ. ಇದರ ನಂತರ ನೀವು ನಿಮ್ಮ ಇನ್​ಸ್ಟಾಗ್ರಾಮ್​ ಪ್ರೊಫೈಲ್ ಕಾರ್ಡ್ ಅನ್ನು ಸ್ಟೋರಿಯಲ್ಲಿ ಹಂಚಿಕೊಳ್ಳಬಹುದು ಮತ್ತು ಅದನ್ನು ಇತರ ನೆಟ್‌ವರ್ಕ್‌ಗಳಲ್ಲಿ ಸಹ ಶೇರ್ ಮಾಡಬಹುದು. ವಾಟ್ಸ್​ಆ್ಯಪ್ ಗ್ರೂಪ್​ಗಳಲ್ಲಿ ಕೂಡ ಹಂಚಿಕೊಳ್ಳಬಹುದು.

ಇದನ್ನೂ ಓದಿ: ಫೋನ್ ಚಾರ್ಜ್ ಮಾಡಲು ಕರೆಂಟ್ ಬೇಡ: ಬಂದಿದೆ ಸೂರ್ಯನ ಬೆಳಕಲ್ಲಿ ಚಾರ್ಜ್ ಮಾಡುವ ಪವರ್ ಬ್ಯಾಂಕ್

ಅನುಯಾಯಿಗಳನ್ನು ಹೆಚ್ಚಿಸುವುದು ಹೇಗೆ?:

ನಿಮ್ಮನ್ನು ಫಾಲೋ ಮಾಡಲು ಯಾರಾದರು ನಿಮ್ಮ ಬಳಿ ಕೇಳಿದಾಗ, ನೀವು ನಿಮ್ಮ ಹೆಸರನ್ನು ಹೇಳುತ್ತೀರಿ. ಆದರೆ, ನಿಮ್ಮ ಹೆಸರಿನ ಅನೇಕ ಅಕೌಂಟ್ ಇನ್​ಸ್ಟಾದಲ್ಲಿ ಇರುತ್ತದೆ. ಅವರಿಗೆ ಇದರಲ್ಲಿ ಯಾವುದು ಎಂಬ ಗೊಂದಲ ಉಂಟಾಗುತ್ತದೆ. ಆದರೆ ಈ ಕಾರ್ಡ್‌ನ ಸಹಾಯದಿಂದ ಅವನು ನೇರವಾಗಿ ನಿಮ್ಮ ಪ್ರೊಫೈಲ್‌ಗೆ ಬಂದು ನಿಮ್ಮನ್ನು ಅನುಸರಿಸಬಹುದು. ಬೇಕಾದಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ಈ ಸ್ಟೋರಿಯನ್ನು ವಿವಿಧ ನೆಟ್‌ವರ್ಕ್‌ಗಳಲ್ಲಿ ಪೋಸ್ಟ್ ಮಾಡುವ ಮೂಲಕ ಮತ್ತು ಗ್ರೂಪ್​ಗಳಲ್ಲಿ ಹಂಚಿಕೊಳ್ಳುವ ಮೂಲಕ, ನಿಮ್ಮ ಫಾಲೋವರ್ಸ್ ಹೆಚ್ಚಿಸಬಹುದು. ಇದು ನಿಮ್ಮ ಪ್ರೊಫೈಲ್ ಅನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಹಾಸನಾಂಬ ದೇವಿ ದರ್ಶನ​​ ಲೈವ್​
ಹಾಸನಾಂಬ ದೇವಿ ದರ್ಶನ​​ ಲೈವ್​
ಇಂದಿನಿಂದ ಹಾಸನಾಂಬ ದರ್ಶನಕ್ಕೆ ಅವಕಾಶ: ಶುಕ್ರವಾರ ಹರಿದು ಬಂದ ಭಕ್ತಸಾಗರ
ಇಂದಿನಿಂದ ಹಾಸನಾಂಬ ದರ್ಶನಕ್ಕೆ ಅವಕಾಶ: ಶುಕ್ರವಾರ ಹರಿದು ಬಂದ ಭಕ್ತಸಾಗರ
ಜನಸಾಮಾನ್ಯರಿಗೆ ‘ಬಿಗ್ ಬಾಸ್​’ ಮನೆ ಪ್ರವೇಶಕ್ಕೆ ಕೊನೆಗೂ ಸಿಕ್ಕಿತು ಅವಕಾಶ
ಜನಸಾಮಾನ್ಯರಿಗೆ ‘ಬಿಗ್ ಬಾಸ್​’ ಮನೆ ಪ್ರವೇಶಕ್ಕೆ ಕೊನೆಗೂ ಸಿಕ್ಕಿತು ಅವಕಾಶ
Daily Devotional: ಆಯಸ್ಸು ವೃದ್ಧಿಗಾಗಿ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಆಯಸ್ಸು ವೃದ್ಧಿಗಾಗಿ ಏನು ಮಾಡಬೇಕು? ವಿಡಿಯೋ ನೋಡಿ
ಶುಕ್ರವಾರ ಶುಭದಿನದಂದು ಈ ರಾಶಿಯವರಿಗೆ 4 ರಾಶಿಗಳ ಶುಭ ಫಲವಿದೆ
ಶುಕ್ರವಾರ ಶುಭದಿನದಂದು ಈ ರಾಶಿಯವರಿಗೆ 4 ರಾಶಿಗಳ ಶುಭ ಫಲವಿದೆ
ಬೆಂಗಳೂರು, ಒಂದಾದಮೇಲೊಂದು ಕಟ್ಟಡ ಕುಸಿಯುವ ಭೀತಿ: ಮತ್ತೊಂದು ಕಟ್ಟಡ ಬಿರುಕು
ಬೆಂಗಳೂರು, ಒಂದಾದಮೇಲೊಂದು ಕಟ್ಟಡ ಕುಸಿಯುವ ಭೀತಿ: ಮತ್ತೊಂದು ಕಟ್ಟಡ ಬಿರುಕು
ದಿವ್ಯ ನಿರ್ಲಕ್ಷ್ಯ ತೊರಿ ರನೌಟ್​ಗೆ ಬಲಿಯಾದ ಕಿವೀಸ್ ನಾಯಕಿ
ದಿವ್ಯ ನಿರ್ಲಕ್ಷ್ಯ ತೊರಿ ರನೌಟ್​ಗೆ ಬಲಿಯಾದ ಕಿವೀಸ್ ನಾಯಕಿ
ಚನ್ನಪಟ್ಟಣದಲ್ಲಿ ನಮ್ಮ ಎದುರಾಳಿ ಯಾರೇ ಆದರೂ ಯೋಗೇಶ್ವರ್ ಗೆಲ್ತಾರೆ: ಸಿಎಂ
ಚನ್ನಪಟ್ಟಣದಲ್ಲಿ ನಮ್ಮ ಎದುರಾಳಿ ಯಾರೇ ಆದರೂ ಯೋಗೇಶ್ವರ್ ಗೆಲ್ತಾರೆ: ಸಿಎಂ
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ: ಸೋಮಶೇಖರ್
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ: ಸೋಮಶೇಖರ್
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ