Tech Tips: ಬೇಸಿಗೆ ಬಿಸಿಲಿಗೆ ಬ್ಲಾಸ್ಟ್ ಆಗುತ್ತಿದೆ ಸ್ಮಾರ್ಟ್​ಫೋನ್​ಗಳು: ನಿರ್ಲಕ್ಷಿಸದಿರಿ

Mobile Blast: ಈಗಿರುವ ಫಾಸ್ಟ್ ಚಾರ್ಜರ್​ಗಳಿಂದ ಬೇಗನೆ ಬಿಸಿ ಆಗುವ ಮೊಬೈಲ್​ಗಳು ಬಿಸಿಲಿನಿಂದ ಇನ್ನಷ್ಟು ಹೆಚ್ಚಾಗಿ ಹೀಟ್ ಆಗುತ್ತಿದೆ. ಹಾಗಾದರೆ ಬಿಸಿಲ ಬೇಗೆಯಿಂದ ನಿಮ್ಮ ಮೊಬೈಲ್ ಅನ್ನು ತಂಪಾಗಿಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.

Tech Tips: ಬೇಸಿಗೆ ಬಿಸಿಲಿಗೆ ಬ್ಲಾಸ್ಟ್ ಆಗುತ್ತಿದೆ ಸ್ಮಾರ್ಟ್​ಫೋನ್​ಗಳು: ನಿರ್ಲಕ್ಷಿಸದಿರಿ
phone explosion
Follow us
Vinay Bhat
|

Updated on: May 15, 2023 | 6:55 AM

ಈ ಬಾರಿಯ ಬೇಸಿಗೆ ಬಿಸಿಲು (Summer 2023) ವಿಪರೀತವಾಗಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇದೆ. ಹಲವು ನಗರಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್​ ದಾಟಿದೆ. ದೆಹಲಿಯ ಬಹುತೇಕ ಎಲ್ಲಾ ಭಾಗವು ತೀವ್ರ ಶಾಖದ ಪರಿಣಾಮದಿಂದ ಅಪಾಯದಲ್ಲಿದೆ ಎಂದು ಇತ್ತೀಚೆಗಷ್ಟೆ ವರದಿ ಹೇಳಿತ್ತು. ಈ ಬಿಸಿಲ ಬಿಸಿ ಸ್ಮಾರ್ಟ್​ಫೋನ್​ಗಳಿಗೂ (Smartphones) ತಟ್ಟಿದೆ. ಮೊಬೈಲ್​ಗಳು ಸಿಕ್ಕಾಪಟ್ಟೆ ಹೀಟ್ ಆಗುತ್ತಿದೆ. ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಬ್ಲಾಸ್ಟ್ (Mobile Blast) ಆಗುವಂತಹ ತೊಂದರೆಗಳು ಕೂಡ ಎದುರಾಗುತ್ತದೆ. ಈಗಿರುವ ಫಾಸ್ಟ್ ಚಾರ್ಜರ್​ಗಳಿಂದ ಬೇಗನೆ ಬಿಸಿ ಆಗುವ ಮೊಬೈಲ್​ಗಳು ಬಿಸಿಲಿನಿಂದ ಇನ್ನಷ್ಟು ಹೆಚ್ಚಾಗಿ ಹೀಟ್ ಆಗುತ್ತಿದೆ. ಹಾಗಾದರೆ ಬಿಸಿಲ ಬೇಗೆಯಿಂದ ನಿಮ್ಮ ಮೊಬೈಲ್ ಅನ್ನು ತಂಪಾಗಿಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.

ಮೊಬೈಲ್​ ಅತೀಯಾಗಿ ಬಿಸಿಯಾಗಲು ಅಥವಾ ಬ್ಲಾಸ್ಟ್​​ ಆಗಲು ಮುಖ್ಯ ಕಾರಣದಲ್ಲಿ ಚಾರ್ಜ್​ ಆಗುತ್ತಿರುವಾಗಲೇ ಮೊಬೈಲ್​ ಬಳಕೆ ಮಾಡುವುದು. ಕಳೆದ ತಿಂಗಳು ಕೇರಳದಲ್ಲಿ ಎಂಟು ವರ್ಷದ ಬಾಲಕಿ ಮೊಬೈಲ್​ ಅನ್ನು ಚಾರ್ಜ್​ಗೆ ಹಾಕಿ ವಿಡಿಯೋ ನೋಡುವಾಗ ಬ್ಲಾಸ್ಟ್ ಆಗಿ ಪ್ರಾಣ ಕಳೆದುಕೊಂಡ ಬಗ್ಗೆ ಸುದ್ದಿಯಾಗಿತ್ತು. ಚಾರ್ಜ್​ಗೆ ಹಾಕಿ ಮೊಬೈಲ್ ಉಪಯೋಗಿಸಿದಾಗ RAM ಸೇರಿದಂತೆ ಪ್ರೊಸೆಸರ್​ಗಳು ಎಲ್ಲವೂ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ. ಹೀಗಾಗಿ ಮೊಬೈಲ್​ ಬೇಗನೇ ಬಿಸಿಯಾಗುತ್ತದೆ. ತಾಪಮಾನ ಕೂಡ ಅಧಿಕವಿರುವ ಕಾರಣ ಹೆಚ್ಚಿನ ಸಂದರ್ಭದಲ್ಲಿ ಇದು ಬ್ಲಾಸ್ಟ್​ ಕೂಡಾ ಆಗುತ್ತದೆ. ಚಾರ್ಜ್ ಮಾಡುವಾಗ ಕೆಲವು ಫೋನ್‌ಗಳು ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತವೆ ಎಂಬುದು ನಿಮಗೆ ಗೊತ್ತಿರಲಿ.

ಇನ್ನು ಕಾರನ್ನು ನಿಲ್ಲಿಸುವಾಗ ಮತ್ತು ಲಾಕ್ ಮಾಡುವಾಗ ಅನೇಕ ಜನರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಕಾರಿನಲ್ಲಿ ಇಡುತ್ತಾರೆ. ಬೇಸಿಗೆಯಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುತ್ತದೆ. ಇಂತಹ ಬಿಸಿ ವಾತಾವರಣದಲ್ಲಿ ಸೆಲ್ ಫೋನ್ ಬ್ಯಾಟರಿ ಹಾಳಾಗುವ ಸಾಧ್ಯತೆ ಇರುತ್ತದೆ. 35 ಡಿಗ್ರಿಗಿಂತ ಹೆಚ್ಚಿನ ತಾಪಮಾನದ ಸ್ಥಿತಿಯಲ್ಲಿ ಇರಿಸಿದಾಗ ಐಫೋನ್ ಬ್ಯಾಟರಿಗಳು ವಿಶೇಷವಾಗಿ ಪರಿಣಾಮ ಬೀರುತ್ತವೆ ಎಂದು ಗಮನಿಸಬೇಕು. ತಡೆದುಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚು ಬಿಸಿ ಆದರೆ ಸ್ಮಾರ್ಟ್​ಫೋನ್​ಗಳು ಸ್ಪೋಟಗೊಳ್ಳಬಹುದು.

ಇದನ್ನೂ ಓದಿ
Image
Realme 11 Pro+: ಬರೋಬ್ಬರಿ 200MP ಕ್ಯಾಮೆರಾ, ಅತಿ ಕಡಿಮೆ ಬೆಲೆ: ಮೇ 16ಕ್ಕೆ ಭಾರತದಲ್ಲಿ ರಿಯಲ್ ಮಿ 11 ಪ್ರೊ ಬಿಡುಗಡೆ
Image
Tech Tips: ವಾಟ್ಸ್​ಆ್ಯಪ್​ನಲ್ಲಿ ಟೈಪ್ ಮಾಡದೇ​​​ ಮೆಸೇಜ್ ಕಳುಹಿಸುವುದು ಹೇಗೆ ಗೊತ್ತೇ?
Image
Motorola Edge 40: ಭಾರತಕ್ಕೆ ಕಾಲಿಡಲಿದೆ ಮೋಟೋ ಎಡ್ಜ್‌ 40 ಸ್ಮಾರ್ಟ್‌ಫೋನ್‌: ಫೀಚರ್ಸ್ ಏನಿದೆ ನೋಡಿ
Image
Redmi A2: ಮೇ 19ರ ಒಂದೇ ದಿನ ಎರಡು ಹೊಸ ಫೋನ್ ಬಿಡುಗಡೆ ಮಾಡಲಿದೆ ರೆಡ್ಮಿ

WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಕೆಲ ಬಳಕೆದಾರರಿಗೆ ಸಿಗುತ್ತಿದೆ ಈ ಅಚ್ಚರಿ ಫೀಚರ್: ತಕ್ಷಣ ಅಪ್ಡೇಟ್ ಮಾಡಿ

ಸ್ಮಾರ್ಟ್‌ಫೋನ್‌ಗಳು ಇತರೆ ವಸ್ತುವಿನಂತೆ ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ. ಸಾಧ್ಯವಾದಷ್ಟು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸೂರ್ಯನ ಬೆಳಕಿಗೆ ಒಡ್ಡುವುದನ್ನು ತಪ್ಪಿಸಿ. ಸ್ಮಾರ್ಟ್‌ಫೋನ್ ಅನ್ನು ತಂಪಾದ, ಶುಷ್ಕ ಸ್ಥಳದಲ್ಲಿರಿಸಿ ಚಾರ್ಜ್ ಮಾಡಿ. ಅಂತೆಯೆ ನಿಮ್ಮ ಮೊಬೈಲ್​​ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಫೋನ್ ಅನ್ನು ಚಾರ್ಜ್ ಮಾಡಿರಿ. ಕಂಪ್ಯೂಟರ್​​ಗೆ ಹಾಕಿ ಇಲ್ಲವೇ ಬೇರೆ ಕಂಪನಿಗಳ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಸಮಸ್ಯೆ ಎದುರಾಗುತ್ತದೆ.

ಇಂದಿನ ದಿನದಲ್ಲಿ ಬಳಕೆದಾರರು ಮೊಬೈಲ್‌ಗಳು ಹಾಳಾಗದಿರಲಿ ಎಂದು ಫ್ಲಿಪ್ ಕವರ್ ಅನ್ನು ಅಳವಡಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಇದು ಫ್ಯಾಷನ್​​ಗಾಗಿಯೂ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ನಿಮ್ಮ ಮೊಬೈಲ್ ಚಾರ್ಜ್ ಮಾಡುವಾಗ ರಕ್ಷಣಾ ಕವಚಗಳನ್ನು ತೆಗೆಯುವುದು ಉತ್ತಮ. ಇದರಿಂದ ಬ್ಯಾಟರಿ ಬಾಳಿಕೆ ಮತ್ತು ವೇಗವಾಗಿ ಚಾರ್ಜ್ ಆಗಲಿದೆ. ಮೊಬೈಲ್ ಬಿಸಿಯಾಗುವುದು ಕೂಡ ತಪ್ಪಲಿದೆ.

ನಾವು ನಮ್ಮ ಫೋನಿನ ಬ್ಯಾಕ್ ಗ್ರೌಂಡ್ ರನ್ನಿಂಗ್ ಅಪ್ಲಿಕೇಶನ್​ಗಳನ್ನು ತೆಗೆಯದೆ ಇದ್ದಾಗ, ಫೋನಿನ ವೇಗ ಕಡಿಮೆಯಗುವುದಲ್ಲದೆ ನಮ್ಮ ಮೊಬೈಲ್ ಬಿಸಿ ಆಗಬಹುದು. ಇದಕ್ಕಾಗಿ ಯಾವುದೇ ಅಪ್ಲಿಕೇಶನ್ ಬಳಸಿದ ಮೇಲೆ ಅದನ್ನು ಪೂರ್ಣವಾಗಿ ಕ್ಲೀನ್ ಮಾಡಿ, ಇಲ್ಲದಿದ್ದಲ್ಲಿ ಅದು ಸ್ವಯಂ ಚಾಲನೆಯಲ್ಲಿ ಇರುತ್ತದೆ. ಹಾಗೆಯೆ ಬಹಳ ಸಮಯ Wi-Fi ಮತ್ತು HotSpot ಬಳಸಿದರೆ ನಮ್ಮ ಮೊಬೈಲ್ ಬಿಸಿ ಬರುತ್ತದೆ.

ಮನೆಯ ಒಳಗಡೆ ಮತ್ತು ರಾತ್ರಿಯ ಸಮಯದಲ್ಲಿ ಬ್ರೈಟ್ ನೆಸ್ ಅಧಿಕವಾಗಿ ಹೆಚ್ಚಿಸುವ ಅಗತ್ಯವಿರುವುದಿಲ್ಲ. ಆಗ ಬ್ರೈಟ್ ಕಡಿಮೆಗೊಳಿಸಿ, ಇದರಿಂದ ಮೊಬೈಲ್ ಬಿಸಿ ಆಗುವುದು ತಪ್ಪುತ್ತದೆ. ಇನ್ನು ಶೇ 90ರಷ್ಟು ಚಾರ್ಜ್ ಆದ ಕೂಡಲೇ ಚಾರ್ಜರ್ ಆಫ್ ಮಾಡಿ. ಈ ಅಭ್ಯಾಸ ರೂಡಿಸಿಕೊಂಡರೆ ಒಳ್ಳೆಯದರು. ಮಾರುಕಟ್ಟೆಯಲ್ಲಿ ವೈಫೈ, ಬ್ಲ್ಯೂಟೂತ್ ಮೂಲಕ ಚಾರ್ಜ್ ಮಾಡಿಕೊಳ್ಳುವ ವೈರ್ ಲೈಸ್ ಚಾರ್ಜರ್ ಲಭ್ಯವಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಇವುಗಳಿಂದ ದೂರವಿರಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್