Tech Tips: ಪಾಸ್‌ವರ್ಡ್ ಹಾಕಿದ್ದರೂ ಅದನ್ನು ನಮೋದಿಸದೆ ಫೋನ್ ಅನ್‌ಲಾಕ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

ಪಾಸ್‌ಕೋಡ್ ಅನ್ನು ಮರೆತುಬಿಡುವುದು ಸಾಮಾನ್ಯ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಅನ್ನು ಅನ್ಲಾಕ್ ಮಾಡುವುದು ಹೇಗೆ?. ನಿಮ್ಮ ಲಾಕ್ ಆಗಿರುವ ಫೋನ್ ಅನ್ನು ನೀವೇ ಸುಲಭವಾಗಿ ಅನ್‌ಲಾಕ್ ಮಾಡಬಹುದು. ಇದಕ್ಕಾಗಿ ನೀವು ಹೆಚ್ಚಿನ ಸಮಯ ಕೂಡ ವ್ಯರ್ಥ ಮಾಡಬೇಕಾಗಿಲ್ಲ. ಕೆಳಗೆ ನೀಡಲಾದ ಕೆಲವು ಟ್ರಿಕ್ಗಳನ್ನು ಅನುಸರಿಸಿ.

Tech Tips: ಪಾಸ್‌ವರ್ಡ್ ಹಾಕಿದ್ದರೂ ಅದನ್ನು ನಮೋದಿಸದೆ ಫೋನ್ ಅನ್‌ಲಾಕ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Smartphone Unlock Tricks

Updated on: May 20, 2025 | 4:53 PM

ಬೆಂಗಳೂರು (ಏ. 20): ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್‌ಫೋನ್‌ಗೆ ಲಾಕ್ (Smartphone Lock) ಇಟ್ಟುಕೊಳ್ಳುತ್ತಾರೆ. ಏಕೆಂದರೆ ನಾವು ನಮ್ಮ ಫೋನ್‌ಗಳಲ್ಲಿ ಬಹಳಷ್ಟು ವೈಯಕ್ತಿಕ ಮತ್ತು ಪ್ರಮುಖ ವಿಷಯಗಳನ್ನು ಸೇವ್ ಮಾಡಿಕೊಟ್ಟುಕೊಂಡಿರುತ್ತೇವೆ. ಇವುಗಳನ್ನು ಯಾರೂ ನೋಡಬಾರದು ಎಂದು ನಾವು ಬಯಸುತ್ತೇವೆ. ಆದರೆ ನಿಮ್ಮ ಪಾಸ್‌ಕೋಡ್ ಮರೆತರೆ ಏನಾಗುತ್ತದೆ?. ಇದು ಸಂಭವಿಸಿದಲ್ಲಿ, ನಿಮ್ಮ ಎಲ್ಲಾ ಡೇಟಾ ಕೂಡ ಕಳೆದುಹೋಗಬಹುದು. ಏಕೆಂದರೆ ಒಮ್ಮೆ ಪಾಸ್‌ಕೋಡ್ ಮರೆತುಹೋದರೆ, ಅದನ್ನು ಮರುಪಡೆಯುವುದು ತುಂಬಾ ಕಷ್ಟಕರವಾಗುತ್ತದೆ. ಆದರೆ, ನೀವು ಎಂದಾದರೂ ನಿಮ್ಮ ಪಾಸ್‌ವರ್ಡ್ ಅಥವಾ ಪ್ಯಾಟರ್ನ್ ಲಾಕ್ ಅನ್ನು ಮರೆತಿದ್ದರೆ ಮತ್ತು ನಿಮ್ಮ ಫೋನ್ ಅನ್‌ಲಾಕ್ ಆಗುತ್ತಿಲ್ಲದಿದ್ದರೆ, ಈ ಟ್ರಿಕ್ ಮೂಲಕ ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಬಹುದು.

ಸ್ಮಾರ್ಟ್ ಲಾಕ್: ಇದು ಆಂಡ್ರಾಯ್ಡ್ ವೈಶಿಷ್ಟ್ಯವಾಗಿದ್ದು, ಕೆಲವು ಸಂದರ್ಭಗಳಲ್ಲಿ ಲಾಕ್ ಸ್ಕ್ರೀನ್ ಭದ್ರತೆಯನ್ನು ಬೈಪಾಸ್ ಮಾಡಲು ನಿಮಗೆ ಅನುಮತಿಸುತ್ತದೆ. ಇದಕ್ಕಾಗಿ, ನೀವು ಸೆಟ್ಟಿಂಗ್‌ಗಳಿಗೆ ಹೋಗಿ ಸೆಕ್ಯುರಿಟಿ ಆಯ್ಕೆ ಮಾಡಬೇಕು. ಇದರ ನಂತರ, ಸ್ಮಾರ್ಟ್ ಲಾಕ್‌ಗೆ ಹೋಗಿ. ಇದು ನಿಮ್ಮ ಫೋನ್ ಲಾಕ್ ಅನ್ನು ನೆನಪಿಟ್ಟುಕೊಳ್ಳುತ್ತದೆ. ಆದಾಗ್ಯೂ, ಪಿನ್ ಹೊಂದಿಸುವ ಮೊದಲು ನೀವು ಇದನ್ನು ಮಾಡಬೇಕು. ಇದು ಫೇಸ್ ಅಥವಾ ಫಿಂಗರ್‌ಪ್ರಿಂಟ್ ಲಾಕ್ ಅನ್ನು ಹೊಂದಿರುತ್ತದೆ.

ಫೈಂಡ್ ಮೈ ಡಿವೈಸ್: ನೀವು Samsung ಫೋನ್ ಹೊಂದಿದ್ದರೆ ಮತ್ತು ಅದನ್ನು ನಿಮ್ಮ Samsung ಖಾತೆಯೊಂದಿಗೆ ನೋಂದಾಯಿಸಿದ್ದರೆ, ಫೋನ್ ಅನ್ನು ದೂರದಿಂದಲೇ ಅನ್‌ಲಾಕ್ ಮಾಡಲು ನೀವು Samsung Find My Mobile ಅನ್ನು ಬಳಸಬಹುದು. ನೀವು ನಿಮ್ಮ Samsung ಖಾತೆಯನ್ನು ಹೊಂದಿಸಿದ್ದರೆ ಮತ್ತು ರಿಮೋಟ್ ಅನ್‌ಲಾಕಿಂಗ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ್ದರೆ ಈ ವಿಧಾನವು ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಇತರ ಕಂಪನಿಗಳು ಸಹ ತಮ್ಮ ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ನೀಡುತ್ತವೆ.

ಇದನ್ನೂ ಓದಿ
ಏರ್‌ಟೆಲ್​ನಿಂದ ಬಂಪರ್ ಪ್ಲ್ಯಾನ್: ಫಾರಿನ್ ಟ್ರಿಪ್ ಹೋದ್ರು ಟೆನ್ಶನ್ ಇರಲ್ಲ
200MP ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭಾರೀ ಇಳಿಕೆ
ನಿಮ್ಮ ಫೋನ್‌ನಲ್ಲಿ 1930 ಸಂಖ್ಯೆಯನ್ನು ಸೇವ್ ಮಾಡಿದ್ದೀರ? ಏನು ಪ್ರಯೋಜನ?
ಬರೋಬ್ಬರಿ 27 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಲ್ಯಾಪ್‌ಟಾಪ್ ಬಿಡುಗಡೆ

ಗೂಗಲ್ ಫೈಂಡ್ ಮೈ ಡಿವೈಸ್: ಆಂಡ್ರಾಯ್ಡ್ 4.0 ಅಥವಾ ನಂತರದ ಆವೃತ್ತಿಗಳನ್ನು ಚಾಲನೆ ಮಾಡುವ ಆಂಡ್ರಾಯ್ಡ್ ಬಳಕೆದಾರರಿಗೆ, ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಲು ಗೂಗಲ್ ಫೈಂಡ್ ಮೈ ಡಿವೈಸ್ ಮತ್ತೊಂದು ಉಪಯುಕ್ತ ಆಯ್ಕೆಯಾಗಿದೆ. ಇದಕ್ಕೆ ನಿಮ್ಮ ಸಾಧನದೊಂದಿಗೆ ಸಂಯೋಜಿತವಾಗಿರುವ ಗೂಗಲ್ ಖಾತೆಯ ಅಗತ್ಯವಿದೆ ಮತ್ತು ಫೋನ್ ಇಂಟರ್ನೆಟ್‌ಗೆ ಸಂಪರ್ಕಗೊಂಡಿರಬೇಕು.

Airtel Plan: ಏರ್‌ಟೆಲ್​ನಿಂದ ಬಂಪರ್ ಪ್ಲ್ಯಾನ್: ಇನ್ನುಂದೆ ಫಾರಿನ್ ಟ್ರಿಪ್ ಹೋದ್ರು ಟೆನ್ಶನ್ ಇರಲ್ಲ

ಥರ್ಡ್ ಪಾರ್ಟಿ ಅನ್‌ಲಾಕಿಂಗ್ ಸಾಫ್ಟ್‌ವೇರ್: ಮೇಲಿನ ವಿಧಾನಗಳು ಕೆಲಸ ಮಾಡದಿದ್ದರೆ, ನೀವು ಮೂರನೇ ವ್ಯಕ್ತಿಯ ಅನ್‌ಲಾಕಿಂಗ್ ಸಾಫ್ಟ್‌ವೇರ್ ಅನ್ನು ಪ್ರಯತ್ನಿಸಬಹುದು. ಪಾಸ್‌ವರ್ಡ್ ಅಗತ್ಯವಿಲ್ಲದೇ ಮತ್ತು ನಿಮ್ಮ ಡೇಟಾವನ್ನು ಕಳೆದುಕೊಳ್ಳದೆ ನಿಮ್ಮ ಆಂಡ್ರಾಯ್ಡ್ ಸಾಧನವನ್ನು ಅನ್‌ಲಾಕ್ ಮಾಡಲು ಈ ಉಪಕರಣಗಳು ನಿಮಗೆ ಸಹಾಯ ಮಾಡಬಹುದು. ಅವುಗಳಲ್ಲಿ ಎರಡು ಜನಪ್ರಿಯ ಸಾಫ್ಟ್‌ವೇರ್‌ಗಳಿವೆ. ಅದರಲ್ಲಿ ಒಂದು DroidKit ಮತ್ತು ಇನ್ನೊಂದು PhonesGo Android Unlocker.

ಫ್ಯಾಕ್ಟರಿ ರೀಸೆಟ್: ಇಷ್ಟೆಲ್ಲಾ ಮಾಡಿದ ನಂತರವೂ ನಿಮ್ಮ ಫೋನ್ ಅನ್‌ಲಾಕ್ ಆಗದಿದ್ದರೆ, ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ನೀವು ಫ್ಯಾಕ್ಟರಿ ರೀಸೆಟ್ ಮಾಡಬಹುದು. ಇದು ಅಪ್ಲಿಕೇಶನ್‌ಗಳು, ಫೋಟೋಗಳು ಮತ್ತು ವೈಯಕ್ತಿಕ ಫೈಲ್‌ಗಳು ಸೇರಿದಂತೆ ನಿಮ್ಮ ಸಾಧನದಲ್ಲಿರುವ ಎಲ್ಲಾ ಡೇಟಾವನ್ನು ಅಳಿಸುತ್ತದೆ ಎಂಬುದು ನೆನಪಿರಲಿ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ