Second Hand Laptop Buying Tips : ಇಂದಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳು ಸಾಕಷ್ಟು ದುಬಾರಿಯಾಗಿದೆ. ಹೊಸ ಲ್ಯಾಪ್ ಟಾಪ್ ಖರೀದಿಸಲು 30 ಸಾವಿರ ರೂ. ಗಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಅನೇಕ ಲ್ಯಾಪ್‌ಟಾಪ್‌ಗಳು ಬಜೆಟ್ ಸ್ನೇಹಿ ಮತ್ತು 30,000 ರೂ. ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ ನಿಜ, ಆದರೆ ಅವುಗಳು ಹೆಚ್ಚು ಬಾಳಿಕೆ ಬರುವುದಿಲ್ಲ ಅಥವಾ ಸಣ್ಣ ಪ್ರೊಸೆಸರ್, ರ್ಯಾಮ್ನಿಂದ ಹ್ಯಾಂಗಿಂಗ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆ ಲ್ಯಾಪ್‌ಟಾಪ್‌ಗಳೊಂದಿಗೆ ಬಳಕೆದಾರರು ಬೇಗನೆ ನಿರಾಶೆಗೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಕಡಿಮೆ ಬೆಲೆಯಲ್ಲಿ ಉತ್ತಮ ಲ್ಯಾಪ್ಟಾಪ್ ಪಡೆಯಲು, ಮನಸ್ಸಿನಲ್ಲಿ ಬರುವ ಎರಡನೇ ಆಯ್ಕೆಯು ಸೆಕೆಂಡ್ ಹ್ಯಾಂಡ್ ಲ್ಯಾಪ್ಟಾಪ್ ಆಗಿದೆ.
ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಖರೀದಿಸುವುದು ಹಣವನ್ನು ಉಳಿಸಲು ಉತ್ತಮ ಮಾರ್ಗವಾಗಿದೆ. ಆದಾಗ್ಯೂ, ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಖರೀದಿಸುವ ಮೊದಲು ನೀವು ತಿಳಿದಿರಬೇಕಾದ ಕೆಲವು ವಿಷಯಗಳಿವೆ.
ಲ್ಯಾಪ್ಟಾಪ್ ಯಾವ ಕೆಲಸಕ್ಕೆ ಬೇಕು?:
ಮೊದಲನೆಯದಾಗಿ ನೀವು ಲ್ಯಾಪ್‌ಟಾಪ್ ಅನ್ನು ಯಾವುದಕ್ಕಾಗಿ ಬಳಸುತ್ತೀರಿ ಎಂದು ತಿಳಿಯುವುದು ಮುಖ್ಯ. ಇಂಟರ್ನೆಟ್ ಬ್ರೌಸಿಂಗ್ ಮತ್ತು ಇಮೇಲ್‌ಗಳನ್ನು ಕಳುಹಿಸುವಂತಹ ಕಾರ್ಯಗಳಿಗಾಗಿ ನೀವು ಇದನ್ನು ಬಳಸುತ್ತೀರಾ ಅಥವಾ ವಿಡಿಯೋ ಎಡಿಟಿಂಗ್‌ಗಾಗಿ ಲ್ಯಾಪ್‌ಟಾಪ್ ಬೇಕೇ?. ಹೀಗೆ ಯಾವ ಕೆಲಸವನ್ನು ಮಾಡಲು ನಿಮಗೆ ಲ್ಯಾಪ್‌ಟಾಪ್ ಬೇಕು ಎಂಬುದನ್ನು ತಿಳಿದುಕೊಳ್ಳಿ.
ಫೀಚರ್ಸ್ ಪರಿಶೀಲಿಸಿ:
ನಿಮಗೆ ಲ್ಯಾಪ್‌ಟಾಪ್ ಯಾವುದಕ್ಕೆ ಬೇಕು ಎಂದು ತಿಳಿದ ನಂತರ, ನೀವು ಖರೀದಿಸಲು ಯೋಚಿಸುತ್ತಿರುವ ಯಾವುದೇ ಲ್ಯಾಪ್‌ಟಾಪ್‌ನ ಫೀಚರ್ಸ್ ಪರಿಶೀಲಿಸಿ. ಪ್ರೊಸೆಸರ್, RAM ಮತ್ತು ಸ್ಟೋರೇಜ್ನಂತಹ ವಿಷಯಗಳನ್ನು ಪರಿಶೀಲಿಸಿ. ಲ್ಯಾಪ್‌ಟಾಪ್ ನಿಮ್ಮ ಕೆಲಸವನ್ನು ಮಾಡಲು ಸಮರ್ಥವಾಗಿದೆಯೇ ಎಂದು ನೋಡುವುದು ಮುಖ್ಯ.
Tech tips: ಯಾವುದೇ ಬಟನ್ ಪ್ರೆಸ್ ಮಾಡದೆ ಐಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು: ಹೇಗೆ ನೋಡಿ
ಹೇಗಿದೆ ಪರಿಶೀಲಿಸಿ:
ಖರೀದಿಸುವ ಮೊದಲು, ಲ್ಯಾಪ್ಟಾಪ್ ಉತ್ತಮ ಸ್ಥಿತಿಯಲ್ಲಿದೆಯೇ ಎಂದು ಪರಿಶೀಲಿಸಿ. ಗೀರುಗಳು ಅಥವಾ ಡೆಂಟ್‌ಗಳಿಗಾಗಿ ಹೊರಭಾಗವನ್ನು ಪರಿಶೀಲಿಸಿ ಮತ್ತು ಕೀಬೋರ್ಡ್ ಮತ್ತು ಡಿಸ್ಪ್ಲೇ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಿ. ಜೊತೆಗೆ ಕೀಬೋರ್ಡ್ ಒರಿಜಿನಲ್ ಎಂಬುದು ನೋಡಬೇಕು. ಲ್ಯಾಪ್ಟಾಪ್ ಅನ್ನು ಆನ್ ಮಾಡಿ ಮತ್ತು ಆಪರೇಟಿಂಗ್ ಸಿಸ್ಟಮ್ ಅಥವಾ ಹಾರ್ಡ್ವೇರ್ನಲ್ಲಿ ಯಾವುದಾದರು ಸಮಸ್ಯೆಗಳಿವೆಯೇ ಎಂದು ಪರಿಶೀಲಿಸಿ.
ಬ್ಯಾಟರಿ ಬಾಳಿಕೆ ಪರಿಶೀಲಿಸಿ:
ಲ್ಯಾಪ್ಟಾಪ್ ಕೊಳ್ಳುವಾಗ ಅದರಲ್ಲೂ ಹಳೆಯ ಲ್ಯಾಪ್ಟಾಪ್ ಖರೀದಿಸುವಾಗ ಬ್ಯಾಟರಿ ಬಾಳಿಕೆಯನ್ನು ಪರಿಶೀಲಿಸುವುದು ಬಹಳ ಮುಖ್ಯ.
ವಾರಂಟಿ ಪರಿಶೀಲಿಸಿ
ಲ್ಯಾಪ್‌ಟಾಪ್ ಯಾವುದೇ ವಾರಂಟಿ ಅಥವಾ ಗ್ಯಾರಂಟಿಯೊಂದಿಗೆ ಬರುತ್ತದೆಯೇ ಎಂದು ಮಾರಾಟಗಾರನನ್ನು ಕೇಳಿ. ಲ್ಯಾಪ್‌ಟಾಪ್ ವಾರಂಟಿಯೊಂದಿಗೆ ಬರದಿದ್ದರೆ, ನೀವು ವಿಸ್ತೃತ ವಾರಂಟಿಯನ್ನು ಖರೀದಿಸುವುದನ್ನು ಪರಿಗಣಿಸಬಹುದು.
ಕೆಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ನೀವು ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಖರೀದಿಸುತ್ತಿದ್ದರೆ, ಹೆಚ್ಚು ಜಾಗರೂಕರಾಗಿರಬೇಕು. ಕಡಿಮೆ ಗುಣಮಟ್ಟದ ಲ್ಯಾಪ್‌ಟಾಪ್‌ಗಳನ್ನು ಬ್ರಾಂಡೆಡ್ ಲ್ಯಾಪ್‌ಟಾಪ್‌ಗಳ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ, ಆದ್ದರಿಂದ ಎರಡು ಬಾರಿ ಪರಿಶೀಲಿಸಿ. ಅಲ್ಲದೆ ಕೆಲವು ಸಂದರ್ಭಗಳಲ್ಲಿ ಕದ್ದ ಲ್ಯಾಪ್‌ಟಾಪ್‌ಗಳನ್ನು ಸಹ ಮಾರಾಟ ಮಾಡಲಾಗುತ್ತದೆ. ಈ ರೀತಿ ಖರೀದಿಸಿದರೆ ನೀವು ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ