Tech Tips: ಕೆಲಸ ಮುಗಿದ ನಂತರ ಲ್ಯಾಪ್‌ಟಾಪ್ ಅನ್ನು ತೆರೆದಿಡುವುದು ಸರಿಯೇ? ಇಲ್ಲಿದೆ ಮಾಹಿತಿ
Laptop Tips: ನೀವು ಕೆಲಸ ಮುಗಿಸಿದ ತಕ್ಷಣ ನಿಮ್ಮ ಲ್ಯಾಪ್‌ಟಾಪ್ ಅನ್ನು ಮುಚ್ಚಬೇಕು ಮತ್ತು ಅದನ್ನು ಎಂದಿಗೂ ತೆರೆದಿಡಬಾರದು ಎಂದು ಟೆಕ್ ಪಂಡಿತರು ಹೇಳುತ್ತಾರೆ. ಕೆಲವು ಲ್ಯಾಪ್‌ಟಾಪ್‌ಗಳನ್ನು ದೀರ್ಘಕಾಲದವರೆಗೆ ತೆರೆದಿಡುವಂತೆ ವಿನ್ಯಾಸಗೊಳಿಸಲಾಗಿಲ್ಲ. ನೀವು ನಿಮ್ಮ ಲ್ಯಾಪ್‌ಟಾಪ್ ಬಳಸುತ್ತಿಲ್ಲವಾದರೂ, ಅದನ್ನು ತೆರೆದಿಟ್ಟಿದ್ದರೆ, ಅದು ಸ್ವಲ್ಪ ಹಾನಿಯನ್ನುಂಟುಮಾಡಬಹುದು.

ಬೆಂಗಳೂರು (ಮಾ. 13): ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳಂತೆ ಲ್ಯಾಪ್‌ಟಾಪ್‌ಗಳು (Laptops) ಕೂಡ ಎಲ್ಲರಿಗೂ ಅನಿವಾರ್ಯವಾಗಿವೆ. ನಿಮ್ಮ ನೆಚ್ಚಿನ OTT ಕಾರ್ಯಕ್ರಮವನ್ನು ನೋಡುವುದರಿಂದ ಹಿಡಿದು ಕಚೇರಿ ಕೆಲಸಗಳನ್ನು ಪೂರ್ಣಗೊಳಿಸುವವರೆಗೆ, ನಾವು ಎಲ್ಲವನ್ನೂ ನಮ್ಮ ಲ್ಯಾಪ್‌ಟಾಪ್ ಮೂಲಕ ಮಾಡುತ್ತೇವೆ. ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮುಗಿದ ನಂತರ ಅದನ್ನು ಆಫ್ ಮಾಡುವುದು ವಾಡಿಗೆ. ಆದರೆ ಎಲ್ಲರೂ ಈ ಕೆಲಸವನ್ನು ಮಾಡುವುದಿಲ್ಲ. ಕೆಲವರು ಲ್ಯಾಪ್‌ಟಾಪ್‌ನಲ್ಲಿ ತಮ್ಮ ಕೆಲಸ ಮಗಿದಿದ್ದರೂ ಅದನ್ನು ಆಫ್ ಮಾಡದೆ ಹಾಗೆ ತೆರೆದಿಡುತ್ತಾರೆ. ಈ ರೀತಿ ಮಾಡುವುದು ಸರಿಯೇ ಅಥವಾ ತಪ್ಪಾ?.
ನೀವು ಕೆಲಸ ಮುಗಿಸಿದ ತಕ್ಷಣ ನಿಮ್ಮ ಲ್ಯಾಪ್‌ಟಾಪ್ ಅನ್ನು ಮುಚ್ಚಬೇಕು ಮತ್ತು ಅದನ್ನು ಎಂದಿಗೂ ತೆರೆದಿಡಬಾರದು ಎಂದು ಟೆಕ್ ಪಂಡಿತರು ಹೇಳುತ್ತಾರೆ. ಕೆಲವು ಲ್ಯಾಪ್‌ಟಾಪ್‌ಗಳನ್ನು ದೀರ್ಘಕಾಲದವರೆಗೆ ತೆರೆದಿಡುವಂತೆ ವಿನ್ಯಾಸಗೊಳಿಸಲಾಗಿಲ್ಲ. ನೀವು ನಿಮ್ಮ ಲ್ಯಾಪ್‌ಟಾಪ್ ಬಳಸುತ್ತಿಲ್ಲವಾದರೂ, ಅದನ್ನು ತೆರೆದಿಟ್ಟಿದ್ದರೆ, ಅದು ಸ್ವಲ್ಪ ಹಾನಿಯನ್ನುಂಟುಮಾಡಬಹುದು.
ಬ್ಯಾಟರಿ ಬಾಳಿಕೆಯ ಮೇಲೆ ಪರಿಣಾಮ: ಲ್ಯಾಪ್‌ಟಾಪ್ ಅನ್ನು ತೆರೆದಿಡುವುದರಿಂದ ಅದರ ಬ್ಯಾಟರಿ ಖಾಲಿಯಾಗುತ್ತಲೇ ಇರುತ್ತದೆ. ಹೀಗಾಗಿ ಇದು ಬ್ಯಾಟರಿಯ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ಬ್ಯಾಟರಿ ಬಾಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ನೀವು ಪ್ರತಿದಿನ ನಿಮ್ಮ ಲ್ಯಾಪ್‌ಟಾಪ್ ಅನ್ನು ಆಫ್ ಮಾಡುವುದು ಅಥವಾ ಸ್ವಿಚ್ ಆಫ್ ಮಾಡುವುದು ಅಭ್ಯಾಸ ಮಾಡಿಕೊಂಡರೆ, ನೀವು ಅದರ ಬ್ಯಾಟರಿ ಬಾಳಿಕೆಯನ್ನು ವಿಸ್ತರಿಸಬಹುದು.
ಡೇಟಾ ಕಳ್ಳತನದ ಅಪಾಯ: ಲ್ಯಾಪ್‌ಟಾಪ್ ಆನ್ ಆಗಿಯೇ ಇದ್ದರೆ, ಡೇಟಾ ಕಳ್ಳತನದ ಅಪಾಯ ಹೆಚ್ಚಾಗುತ್ತದೆ. ಲ್ಯಾಪ್‌ಟಾಪ್‌ನಲ್ಲಿ ಪಾಸ್‌ವರ್ಡ್ ಹೊಂದಿಸದಿದ್ದರೆ, ಯಾರಾದರೂ ನಿಮ್ಮ ಡೇಟಾವನ್ನು ಕದಿಯಬಹುದು.
ಆಪರೇಟಿಂಗ್ ಸಿಸ್ಟಮ್ ಕ್ರ್ಯಾಶ್ ಆಗಬಹುದು: ಆಪರೇಟಿಂಗ್ ಸಿಸ್ಟಮ್ ಸರಿಯಾಗಿ ಕಾರ್ಯನಿರ್ವಹಿಸಲು, ಸಿಸ್ಟಮ್ ಅನ್ನು ರೀಬೂಟ್ ಮಾಡುವುದು ಅವಶ್ಯಕ. ಹಲವು ಬಾರಿ ಲ್ಯಾಪ್‌ಟಾಪ್ ಸ್ಲೀಪ್ ಮೋಡ್‌ನಿಂದ ಆನ್ ಆಗಿರುವಾಗ, ಡ್ರೈವರ್‌ಗಳು ಸರಿಯಾಗಿ ಲೋಡ್ ಆಗುವುದಿಲ್ಲ, ಇದರಿಂದಾಗಿ ಸಿಸ್ಟಮ್ ಆಗಾಗ್ಗೆ ಕ್ರ್ಯಾಶ್ ಆಗುತ್ತದೆ.
Cyber Scam: ಸೈಬರ್ ವಂಚನೆಯಿಂದ 9 ತಿಂಗಳಲ್ಲಿ ಜನರು 107 ಕೋಟಿ ಕಳೆದುಕೊಂಡಿದ್ದಾರೆ: ಶಾಕಿಂಗ್ ಮಾಹಿತಿ ಬಹಿರಂಗ
ಸಿಸ್ಟಂಗೆ ವಿಶ್ರಾಂತಿ ಬೇಕು: ಲ್ಯಾಪ್‌ಟಾಪ್ ಅನ್ನು ಆಫ್ ಮಾಡಿ ಮತ್ತೆ ಆನ್ ಮಾಡುವುದರಿಂದ ಸಿಸ್ಟಂ ರೀಬೂಟ್ ಆಗಲು ಸಮಯ ಸಿಗುತ್ತದೆ. ಇದರಿಂದಾಗಿ ಸಾಫ್ಟ್‌ವೇರ್ ಕ್ರ್ಯಾಶ್ ಆಗುವುದಿಲ್ಲ ಮತ್ತು ಲ್ಯಾಪ್‌ಟಾಪ್‌ನ ಕಾರ್ಯಕ್ಷಮತೆ ಉತ್ತಮವಾಗಿ ಉಳಿಯುತ್ತದೆ.
ಲ್ಯಾಪ್‌ಟಾಪ್ ಅನ್ನು ಸರಿಯಾದ ತಾಪಮಾನದಲ್ಲಿ ಇರಿಸಿ, ಅಂದರೆ ಅದನ್ನು ತುಂಬಾ ಬಿಸಿಯಾದ ಸ್ಥಳದಲ್ಲಿ ಇಡಬೇಡಿ. ಶಾಖದಿಂದಾಗಿ ಬ್ಯಾಟರಿ ಶಕ್ತಿ ಕಡಿಮೆಯಾಗುತ್ತದೆ. ಲ್ಯಾಪ್‌ಟಾಪ್ ಅನ್ನು ನಿರಂತರವಾಗಿ ಬಳಸುವ ಬದಲು ಸ್ವಲ್ಪ ವಿಶ್ರಾಂತಿ ನೀಡಿ. ನಿರಂತರ ಬಳಕೆಯಿಂದಾಗಿ, ಬ್ಯಾಟರಿಯು ಬಿಸಿಯಾಗುತ್ತದೆ, ಇದರಿಂದಾಗಿ ಅದು ಬೇಗನೆ ಬರಿದಾಗಲು ಪ್ರಾರಂಭಿಸುತ್ತದೆ.
ಹಾಗೆಯೆ ಮಳೆಗಾಲದಲ್ಲಿ ಹೊರಗೆ ಹೋಗುವಾಗ ಯಾವಾಗಲೂ ವಾಟರ್ ಪ್ರೂಫ್ ಲ್ಯಾಪ್‌ಟಾಪ್ ಬ್ಯಾಗ್ ಬಳಸಿ. ಇದು ನಿಮ್ಮ ಲ್ಯಾಪ್‌ಟಾಪ್ ಅನ್ನು ಮಳೆ ನೀರಿನಿಂದ ರಕ್ಷಿಸುತ್ತದೆ ಮತ್ತು ತೇವಾಂಶದಿಂದ ದೂರವಿರಿಸುತ್ತದೆ. ವಾಟರ್ ಪ್ರೋಫ್ ಬ್ಯಾಗ್ನಲ್ಲಿ ಚೆನ್ನಾಗಿ ಪ್ಯಾಕ್ ಮಾಡಿ ಲ್ಯಾಪ್‌ಟಾಪ್ ತೆಗೆದುಕೊಂಡು ಹೋಗಬಹುದು. ಅಂತೆಯೆ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೆ ಲ್ಯಾಪ್‌ಟಾಪ್‌ನ ಬ್ಯಾಟರಿ ಮತ್ತು ಪವರ್ ಸಾಕೆಟ್ ಬಗ್ಗೆ ಗಮನಹರಿಸಿ. ಲ್ಯಾಪ್‌ಟಾಪ್ ಅನ್ನು ನೀರು ಅಥವಾ ತೇವಾಂಶದ ಬಳಿ ಚಾರ್ಜ್ ಮಾಡದಿರಲು ಪ್ರಯತ್ನಿಸಿ ಮತ್ತು ಸರಿಯಾಗಿ ಇನ್ಸುಲೇಟೆಡ್ ಪವರ್ ಸಾಕೆಟ್ ಬಳಸಿ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ