AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನಿಮ್ಮ ಇನ್​ಬಾಕ್ಸ್ OTP ಗಳಿಂದ ತುಂಬಿದೆಯೇ?: 24 ಗಂಟೆಯೊಳಗೆ ಸ್ವಯಂಚಾಲಿತವಾಗಿ ಡಿಲೀಟ್ ಮಾಡೋದು ಹೇಗೆ?

Message Inbox OTP Clear Tips: ನಿಮ್ಮ ಫೋನ್‌ನ ಇನ್ ಬಾಕ್ಸ್ OTP ಗಳಿಂದ ತುಂಬಿದ್ದರೆ, ನೀವು ಗೂಗಲ್ ಮೆಸೇಜೆಸ್ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ 24 ಗಂಟೆಗಳ ಒಳಗೆ ಆ ಎಲ್ಲಾ OTP ಸಂದೇಶಗಳನ್ನು ಸ್ವಯಂಚಾಲಿತವಾಗಿ ಅಳಿಸಬಹುದು. ಇದಕ್ಕಾಗಿ ಒಂದು ಟ್ರಿಕ್ ಒದೆ, ಅದು ಹೇಗೆ?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Tech Tips: ನಿಮ್ಮ ಇನ್​ಬಾಕ್ಸ್ OTP ಗಳಿಂದ ತುಂಬಿದೆಯೇ?: 24 ಗಂಟೆಯೊಳಗೆ ಸ್ವಯಂಚಾಲಿತವಾಗಿ ಡಿಲೀಟ್ ಮಾಡೋದು ಹೇಗೆ?
Inbox
ಪ್ರೀತಿ ಭಟ್​, ಗುಣವಂತೆ
| Updated By: Vinay Bhat|

Updated on: Mar 04, 2025 | 3:26 PM

Share

(ಬೆಂಗಳೂರು, ಮಾ: 04): ಇದು ಲಕ್ಷಾಂತರ ಬಳಕೆದಾರರು ಬಳಸುತ್ತಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೀಫಾಲ್ಟ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಡಿಜಿಟಲ್ ಯುಗದಲ್ಲಿ, ಆನ್‌ಲೈನ್ ಶಾಪಿಂಗ್‌ನಿಂದ ಹಿಡಿದು ಯಾವುದೇ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಲಾಗಿನ್ ಆಗುವವರೆಗೆ ಎಲ್ಲದಕ್ಕೂ ಈಗ ಒನ್ ಟೈಮ್ ಪಾಸ್‌ವರ್ಡ್ (OTP) ಅಗತ್ಯವಿದೆ. ಇದರಿಂದಾಗಿ ಇನ್ ಬಾಕ್ಸ್ OTP ಗಳಿಂದ ತುಂಬಿರುತ್ತದೆ. ಈ OTP ಸಂದೇಶವು ಫೋನ್‌ನ ಸ್ಟೋರೇಜ್ ಅನ್ನು ಭರ್ತಿ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಆ ಹಳೆಯ ಸಂದೇಶಗಳನ್ನು ಒಂದೊಂದಾಗಿ ಡಿಲೀಟ್ ಮಾಡುತ್ತಾ ಕೂರಬೇಕು. ಅದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಒಂದು ಸರಳ ತಂತ್ರವನ್ನು ಹೇಳುತ್ತೇವೆ.

ನಿಮ್ಮ ಫೋನ್‌ನ ಇನ್ ಬಾಕ್ಸ್ OTP ಗಳಿಂದ ತುಂಬಿದ್ದರೆ, ನೀವು ಗೂಗಲ್ ಮೆಸೇಜೆಸ್ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ 24 ಗಂಟೆಗಳ ಒಳಗೆ ಆ ಎಲ್ಲಾ OTP ಸಂದೇಶಗಳನ್ನು ಸ್ವಯಂಚಾಲಿತವಾಗಿ ಅಳಿಸಬಹುದು. ಇದು ಹೇಗೆ?, ಇಲ್ಲಿದೆ ನೋಡಿ ಟಿಪ್ಸ್.

  • ಮೊದಲು ನಿಮ್ಮ ಫೋನ್‌ನಲ್ಲಿ ಗೂಗಲ್ ಮೆಸೇಜೆಸ್ ಅಪ್ಲಿಕೇಶನ್ ತೆರೆಯಿರಿ. ನಿಮ್ಮ ಫೋನ್‌ನಲ್ಲಿ ಇದು ಇಲ್ಲದಿದ್ದರೆ, ಅದನ್ನು ಡೌನ್‌ಲೋಡ್ ಮಾಡಿ ಏಕೆಂದರೆ ಹೆಚ್ಚಿನ ಫೋನ್‌ಗಳು ಅದನ್ನು ತಮ್ಮ ಡೀಫಾಲ್ಟ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಹೊಂದಿವೆ. ಹೀಗೆ ಗೂಗಲ್ ಮೆಸೇಜೆಸ್ ಇನ್​ಸ್ಟಾಲ್ ಮಾಡಿದ ನಂತರ, ಅದನ್ನು ತೆರೆಯಿರಿ.
  • ಇದಾದ ನಂತರ, ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ.
  • ಈಗ, ಮೆಸೇಜ್ ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.
  • ಬಳಿಕ, ಮೆಸೇಜ್ ಆರ್ಗನೈಜೇಷನ್ ಮೇಲೆ ಟ್ಯಾಪ್ ಮಾಡಿ.
  • ಈಗ, “Auto Delete OTPs After 24 hrs” ಆಯ್ಕೆಯ ಪಕ್ಕದಲ್ಲಿ ಒಂದು ಟಾಗಲ್ ಕಾಣಿಸಿಕೊಳ್ಳುತ್ತದೆ, ಅದನ್ನು ಆನ್ ಮಾಡಿ.
  • ಈ ಟಾಗಲ್ ಆನ್ ಮಾಡಿದ ನಂತರ, ನಿಮ್ಮ ಇನ್ ಬಾಕ್ಸ್​ನಲ್ಲಿ ಸ್ವೀಕರಿಸಿದ OTP 24 ಗಂಟೆಗಳ ನಂತರ ನಿಮ್ಮ ಸಂದೇಶ ಪೆಟ್ಟಿಗೆಯಿಂದ ಸ್ವಯಂಚಾಲಿತವಾಗಿ ಅಳಿಸಲ್ಪಡುತ್ತದೆ. ಈ ರೀತಿಯಾಗಿ, ನೀವು ಮೆಸೇಜ್ ಇನ್​ ಬಾಕ್ಸ್​ಗೆ ಹೋಗಿ ಪ್ರತಿ OTP ಸಂದೇಶವನ್ನು ಹಸ್ತಚಾಲಿತವಾಗಿ ಹುಡುಕಿ ಅಳಿಸಬೇಕಾಗಿಲ್ಲ.

Free Wi-fi: ಬಿಟ್ಟಿ ಸಿಕ್ಕಿತೆಂದು ಉಚಿತ ವೈಫೈ ಬಳಸುವ ಮುನ್ನ ಎಚ್ಚರ! ಏನೆಲ್ಲ ಅಪಾಯ ಇದೆ ನೋಡಿ

ಜಿಮೇಲ್ ಇನ್‌ ಬಾಕ್ಸ್ ಕ್ಲೀಯರ್ ಮಾಡೋದು ಹೇಗೆ?:

  • ಮೊದಲು ನೀವು ನಿಮ್ಮ ಜಿಮೇಲ್​ನಲ್ಲಿರುವ ದೊಡ್ಡ ಘಾತ್ರದ ಫೈಲ್ ಅನ್ನು ಡಿಲೀಟ್ ಮಾಡಬೇಕು. ಇದಕ್ಕಾಗಿ ನೀವು ನಿಮ್ಮ ಜಿಮೇಲ್ ಖಾತೆಗೆ ಲಾಗಿನ್ ಆಗಿ ಮತ್ತು ಸರ್ಚ್ ಬಾರ್​ನಲ್ಲಿ (Search mail) ‘has: attachment larger:10M’ ನಲ್ಲಿ ಎಂದು ಟೈಪ್ ಮಾಡಿ.
  • ಈಗ 10MB ಗಾತ್ರದ ಅಟ್ಯಾಚ್ ಮೆಂಟ್ ಗಳಿರುವ ಎಲ್ಲಾ ಇಮೇಲ್‌ಗಳು ನಿಮಗೆ ಲಭಿಸುತ್ತವೆ. ಇವುಗಳಲ್ಲಿ ಅನಗತ್ಯವಾದ ಎಲ್ಲಾ ಇಮೇಲ್‌ಗಳನ್ನು ಆಯ್ಕೆಮಾಡಿ ಡಿಲೀಟ್ ಮಾಡಿ. ಕೇವಲ ಡಿಲೀಟ್ ಮಾಡಿ ಬಿಟ್ಟರೆ ಸಾಲದು ಇದಾದ ನಂತರ Trashನಲ್ಲಿರುವ ಇಮೇಲ್ ಗಳನ್ನು, Spam ಫೋಲ್ಡರ್​​ನಲ್ಲಿರುವ ಇಮೇಲ್ ಗಳನ್ನೂ ಡಿಲೀಟ್ ಮಾಡಬೇಕು.
  • ಇನ್ನು ನಿಮಗೆ ಅನೇಕ ಜಾಹೀರಾತುಗಳ ಮೇಲ್ ಅಥವಾ ಕೆಲವು ನ್ಯೂಸ್ ಲೆಟರ್ಸ್ ಈರೀತಿಯ ಮೇಲ್​ಗಳು ಬರುತ್ತಲೇ ಇರುತ್ತದೆ. ಇದನ್ನು ಅನ್‌ಸಬ್‌ಸ್ಕ್ರೈಬ್ ಮಾಡಬಹುದು ಮತ್ತು ಗೂಗಲ್ ಸಂಗ್ರಹ ಸ್ಥಳವನ್ನು ಮುಕ್ತಗೊಳಿಸಲು ಹಳೆಯದನ್ನು ಅಳಿಸಬಹುದು. ಉದಾಹರಣೆಗೆ, ಈ ಇಮೇಲ್‌ಗಳನ್ನು ಪಡೆಯುವುದನ್ನು ನಿಲ್ಲಿಸಲು ನಿಮಗ ಬರುವ ನ್ಯೂಸ್ ಲೆಟರ್​ಗಳನ್ನು ನೀವು ಅನ್‌ಸಬ್‌ಸ್ಕ್ರೈಬ್ ಮಾಡಿ.
  • ಗೂಗಲ್ ನೀತಿಗಳ ಪ್ರಕಾರ ಮೇಲಿಂಗ್ ಪಟ್ಟಿಯು ನಿಮಗೆ ಅನಗತ್ಯ ಇಮೇಲ್‌ಗಳನ್ನು ಕಳುಹಿಸುವುದನ್ನು ನಿಲ್ಲಿಸಲು ಕೆಲವು ದಿನಗಳು ತೆಗೆದುಕೊಳ್ಳಬಹುದು. ಅನಗತ್ಯ ಇಮೇಲ್‌ಗಳಿಂದ ಅನ್‌ಸಬ್‌ಸ್ಕ್ರೈಬ್ ಮಾಡಲು, ನಿಮ್ಮ Gmail ಖಾತೆಯನ್ನು ತೆರೆಯಿರಿ ಮತ್ತು ನೀವು ಅನ್‌ಸಬ್‌ಸ್ಕ್ರೈಬ್ ಮಾಡಲು ಬಯಸುವ ಯಾವುದೇ ಇಮೇಲ್ ಅನ್ನು ತೆರೆಯಿರಿ. ಕಳುಹಿಸುವವರ ಹೆಸರಿನ ಬಳಿ ಇರುವ ಅನ್‌ಸಬ್‌ಸ್ಕ್ರೈಬ್ ಬಟನ್ ಅನ್ನು ಈಗ ಟ್ಯಾಪ್ ಮಾಡಿ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ