AC Gas Leak: ಎಸಿ ಹಾಳಾಗಿದೆ ಎಂದು ಮೆಕ್ಯಾನಿಕ್ ಕರೆಯುವ ಮುನ್ನ ಈ ಅಂಶಗಳನ್ನು ನೆನಪಿನಲ್ಲಿಡಿ

ನೀವು ನಿಯಮಿತವಾಗಿ ಎಸಿ ಬಳಸಬೇಕು. ಸಮಯಕ್ಕೆ ತಕ್ಕಂತೆ ನೀವು ಎಸಿಯನ್ನು ಸರಿಯಾಗಿ ಸರ್ವಿಸ್ ಮಾಡದಿದ್ದರೆ, ಅದು ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು.

AC Gas Leak: ಎಸಿ ಹಾಳಾಗಿದೆ ಎಂದು ಮೆಕ್ಯಾನಿಕ್ ಕರೆಯುವ ಮುನ್ನ ಈ ಅಂಶಗಳನ್ನು ನೆನಪಿನಲ್ಲಿಡಿ
AC Gas Leak
Follow us
Vinay Bhat
|

Updated on: Jun 24, 2023 | 11:45 AM

ಇಂದಿನ ಹವಾಮಾನವನ್ನು (Weather) ಗಮನಿಸಿದರೆ ಕೇವಲ ಬೇಸಿಗೆಯಲ್ಲಿ ಮಾತ್ರವಲ್ಲದೆ ಮಳೆ, ಚಳಿಗಾಲದಲ್ಲಿ ಕೂಡ ಶೆಕೆ ಇರುತ್ತದೆ. ಇದಕ್ಕಾಗಿ ಹೆಚ್ಚಿನ ಮನೆಯವರು ಈಗ ಏರ್ ಕಂಡಿಷನರ್ (Air Conditioner) ಮೊರೆ ಹೋಗುತ್ತಿದ್ದಾರೆ. ಆದರೆ ಹೆಚ್ಚಿನ ಸಮಯ ಎಸಿ ಆನ್ ಇರುವುದರಿಂದ ಇದು ಸರಿಯಾಗಿ ಕೆಲಸ ಮಾಡದೆ ಅನೇಕ ಜನರು ಸಮಸ್ಯೆಗಳನ್ನು ಎದುರಿಸುತ್ತಾರೆ. ಮುಖ್ಯವಾಗಿ ಎಸಿ ಗ್ಯಾಸ್ ಸೋರಿಕೆ ಹೆಚ್ಚಾಗುತ್ತದೆ. ಈ ರೀತಿಯ ಸಮಸ್ಯೆ ಕಾಣಿಸಿಕೊಂಡಾಗ ಸ್ವತಃ ನಮಗೇ ಇದನ್ನು ಸರಿ ಪಡಿಸಲು ಸಾಧ್ಯವಿಲ್ಲ. ಹೀಗಾಗಿ ಮೆಕ್ಯಾನಿಕ್ (Mechanic) ಅನ್ನು ಕರೆಯುವುದು ಅನಿವಾರ್ಯ. ಆಗ ಸಾಕಷ್ಟು ಹಣವನ್ನು ಖರ್ಚಾಗುತ್ತದೆ. ಆದರೆ, ಈ ಸಮಸ್ಯೆಗಳು ಬಾರದಂತೆ ತಡೆದರೆ ಮೆಕ್ಯಾನಿಕ್ ಕರೆಯುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ನಿಮ್ಮ ಮನೆಯಲ್ಲಿ ಎಸಿ ಇದ್ದರೆ ಈ ಅಂಶಗಳನ್ನು ನೆನಪಿನಲ್ಲಿಡಿ.

ಸಮಯಕ್ಕೆ ತಕ್ಕಂತೆ ನೀವು ಎಸಿಯನ್ನು ಸರಿಯಾಗಿ ಸರ್ವಿಸ್ ಮಾಡದಿದ್ದರೆ, ಅದು ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ನಿಯಮಿತವಾಗಿ ಎಸಿ ಬಳಸಬೇಕು. ಬಳಕೆ ಹೆಚ್ಚಾದರೆ ನಿಮ್ಮ ಎಸಿ ಗ್ಯಾಸ್ ಸೋರಿಕೆಯಾಗಬಹುದು.

ಕೆಲವೊಮ್ಮೆ ಎಸಿಯಲ್ಲಿರುವ ಕಾರ್ಬನ್ ಅನಿಲ ಸೋರಿಕೆಗೆ ಕಾರಣವಾಗಬಹುದು. ಎಷ್ಟೋ ಬಾರಿ ಎಸಿಯ ಕಂಡೆನ್ಸರ್ ಪೈಪುಗಳೂ ತುಕ್ಕು ಹಿಡಿಯುತ್ತವೆ. ಇದು ಅನಿಲ ಸೋರಿಕೆಗೆ ದಾರಿಯಾಗಿದೆ. ಹೀಗಿದ್ದಾಗ ಎಸಿ ಸರಿಯಾಗಿ ಕೆಲಸ ನಿರ್ವಹಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ
Image
WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಪಿನ್‌ ಮೆಸೇಜ್‌ ಡ್ಯುರೇಷನ್‌ ಫೀಚರ್: ಏನಿದು ನೋಡಿ
Image
Asus Zenfone 10: ತಯಾರಾಗಿ: ಬರುತ್ತಿದೆ 200MP ಕ್ಯಾಮೆರಾದ ಮತ್ತೊಂದು ಸ್ಮಾರ್ಟ್​ಫೋನ್
Image
Boult Crown R Pro: ಪ್ರೀಮಿಯಂ ಲುಕಿಂಗ್ ಮತ್ತು ಸೂಪರ್ ಫೀಚರ್ಸ್ ಬೋಲ್ಟ್ ಸ್ಮಾರ್ಟ್​ವಾಚ್
Image
Best Smartphones: ₹15,000 ಬಜೆಟ್​ಗೆ ಬೆಸ್ಟ್ ಸ್ಮಾರ್ಟ್​ಫೋನ್ ಯಾವುದು ಗೊತ್ತಾ?

Honor 90 Lite: ಗ್ಯಾಜೆಟ್ ಲೋಕಕ್ಕೆ ಲೇಟೆಸ್ಟ್ ಸ್ಮಾರ್ಟ್​ಫೋನ್ ಹಾನರ್ 90 ಎಂಟ್ರಿ

ನಾವು ಆಕಸ್ಮಿಕವಾಗಿ ಅನೇಕ ಬಾರಿ ಎಸಿ ಮೇಲೆ ವಸ್ತುಗಳನ್ನು ಇಡುತ್ತೇವೆ. ತಪ್ಪಿಯೂ ಹೀಗೆ ಮಾಡಬೇಡಿ. ಎಸಿ ಮುಂಭಾಗದಿಂದ ತಂಪಾದ ಗಾಳಿ ಬೀಸುತ್ತದೆ. ಆದರೆ ಹಿಂಭಾಗದಿಂದ ಬಿಸಿ ಗಾಳಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ವಸ್ತುಗಳನ್ನು ಎಸಿ ಮೇಲೆ ಇರಿಸಿದರೆ ಬಿಸಿ ಗಾಳಿಯು ಹೊರಬರುವುದಿಲ್ಲ. ಇದು ಎಸಿ ಹಾಳಾಗಿ, ಗ್ಯಾಸ್ ಸೋರಿಕೆಯಾಗಬಹುದು.

ಇನ್ನು ಎಸಿ ಏರ್ ಫಿಲ್ಟರ್ ಅನ್ನು ಬದಲಾಯಿಸುವುದು ಸಹ ಬಹಳ ಮುಖ್ಯ. ಅದನ್ನು ಬದಲಾಯಿಸದಿದ್ದರೆ, ಎಸಿ ಮೇಲೆ ಒತ್ತಡ ಹೆಚ್ಚಾಗುತ್ತದೆ ಮತ್ತು ಅನಿಲ ಸೋರಿಕೆಯಾಗುತ್ತದೆ. ಇದರಿಂದ ಪೈಪ್​ಗಳು ಹಾಳಾಗಬಹುದು.

ನೀವು AC ಯ ಒಳಚರಂಡಿ ವ್ಯವಸ್ಥೆಯನ್ನು ಪರಿಶೀಲಿಸದಿದ್ದರೆ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತೀರಿ. ಹವಾನಿಯಂತ್ರಣದ ಒಳಚರಂಡಿ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಕೂಲೆಂಟ್ ಸೋರಿಕೆ ಆಗುವ ಸಾಧ್ಯತೆ ಹೆಚ್ಚು. ಎಸಿಯ ಒಳಚರಂಡಿ ವ್ಯವಸ್ಥೆಯು ನೀರನ್ನು ಹರಿಸುತ್ತವೆ. ಇದು ಸರಿಯಾಗಿ ಕೆಲಸ ಮಾಡದಿದ್ದರೆ ಪೈಪ್‌ನಲ್ಲಿ ನೀರು ಸಂಗ್ರಹವಾಗುತ್ತದೆ. ಹೀಗಾಗಿ ಪೈಪ್ ಲೀಕೆಜ್ ಆಗುವ ಸಾಧ್ಯತೆ ಹೆಚ್ಚುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ