ಅತಿಯಾದ ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್ ಬಳಕೆಯಿಂದ ಏನಾಗುತ್ತೇ?: ಅಚ್ಚರಿ ವಿಚಾರ ಬಹಿರಂಗ

ನಮ್ಮ ನಿಜ ವಯಸ್ಸಿಗಿಂತ ಹೆಚ್ಚು ವಯಸ್ಸಾದವರಂತೆ ಕಾಣಲು ಈ ಗ್ಯಾಜೆಟ್​ಗಳು ಕಾರಣವಾಗಿರಬಹುದು. ಹೀಗೊಂದು ಅಚ್ಚರಿಯ ವಿಚಾರ ಸಂಶೋಧನೆಯಿಂದ ತಿಳಿದುಬಂದಿದೆ.

ಅತಿಯಾದ ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್ ಬಳಕೆಯಿಂದ ಏನಾಗುತ್ತೇ?: ಅಚ್ಚರಿ ವಿಚಾರ ಬಹಿರಂಗ
Smartphones
TV9kannada Web Team

| Edited By: Vinay Bhat

Sep 26, 2022 | 6:05 AM

ಇಂದು ನಾವು ದಿನದ 24 ಗಂಟೆಯೂ ಯಾವುದಾದರೊಂದು ಗ್ಯಾಜೆಟ್ಸ್​ಗೆ (Gadgets) ಅಂಟಿಕೊಂಡಿರುತ್ತೇವೆ. ಅದು ಸ್ಮಾರ್ಟ್​ಫೋನ್ ಆಗಿರಬಹುದು, ಸ್ಮಾರ್ಟ್ ವಾಚ್, ಈಯರ್ ಫೋನ್, ಲ್ಯಾಪ್​ಟಾಪ್ ಅಥವಾ ಇನ್ನು ಅನೇಕ ಗ್ಯಾಜೆಟ್​​ಗಳನ್ನು ನಾವು ಉಪಯೋಗಿಸುತ್ತಲೇ ಇರುತ್ತೇವೆ. ಅದರಲ್ಲೂ ಸ್ಮಾರ್ಟ್​ಫೋನ್​ಗಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಮೊಬೈಲ್ (Mobile) ಇಲ್ಲ ಎಂದು ಊಹಿಸುವುದು ಕೂಡ ಕಷ್ಟ. ಆದರೆ, ನಮ್ಮ ನಿಜ ವಯಸ್ಸಿಗಿಂತ ಹೆಚ್ಚು ವಯಸ್ಸಾದವರಂತೆ ಕಾಣಲು ಈ ಗ್ಯಾಜೆಟ್​ಗಳು ಕಾರಣವಾಗಿರಬಹುದು. ಹೀಗೊಂದು ಅಚ್ಚರಿಯ ವಿಚಾರ ಸಂಶೋಧನೆಯಿಂದ ತಿಳಿದುಬಂದಿದೆ. ಫ್ರಾಂಟಿಯರ್ಸ್ ಇನ್ ಏಜಿಂಗ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ (Laptops) ಗ್ಯಾಜೆಟ್‌ಗಳು ನೀಲಿ ಬೆಳಕನ್ನು ಹೆಚ್ಚು ಒಡ್ಡಿಕೊಳ್ಳುತ್ತದೆ. ಇದರಿಂದ ವಯಸ್ಸಾದ ಪ್ರಕ್ರಿಯೆಯನ್ನು ವೇಗಗೊಳಿಸಬಹುದು ಎಂದು ಹೇಳಿದೆ.

ಯುಎಸ್‌ನ ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಅಧ್ಯಯನದ ಸಹಲೇಖಕರಾದ ಜಾಡ್ವಿಗಾ ಗೀಬುಲ್ಟೋವಿಚ್ ಈ ಬಗ್ಗೆ ಮಾಹಿತಿ ನೀಡಿದ್ದು, “ಟಿವಿಗಳು, ಲ್ಯಾಪ್‌ಟಾಪ್‌ಗಳು ಮತ್ತು ಫೋನ್‌ಗಳಂತಹ ದೈನಂದಿನ ಸಾಧನಗಳಿಂದ ನೀಲಿ ಬೆಳಕು ಅತಿಯಾಗಿ ಮನುಷ್ಯ ನೋಡುತ್ತಿರುತ್ತಾನೆ. ಇದು ದೇಹದಲ್ಲಿನ ವ್ಯಾಪಕ ಶ್ರೇಣಿಯ ಜೀವಕೋಶಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು,” ಎಂದು ಅವರು ಹೇಳಿದ್ದಾರೆ.

‘ಮುಖ್ಯವಾಗಿ ಲ್ಯಾಪ್​ಟಾಪ್, ಮೊಬೈಲ್​ನಿಂದ ಬರುವಂತಹ ನೀಲಿ ಬೆಳಕು ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ ಎಂದು ಹೇಳಿದ್ದಾರೆ. ಮೊಬೈಲಿನಿಂದ ಹೊರಹೊಮ್ಮುವ ನೀಲಿ ಬೆಳಕು ಮನುಷ್ಯನ ದೇಹಕ್ಕೆ ಬಹಳ ಅಪಾಯಕಾರಿ. ಈ ನೀಲಿ ಬೆಳಕು ಯು.ವಿ ಬೆಳಕಿನ ಭಾಗ. ಯು.ವಿ ಬೆಳಕು ಮನುಷ್ಯ ದೇಹದ ಮೇಲೆ ನಾನಾ ಪರಿಣಾಮಗಳನ್ನು ಬೀರುತ್ತದೆ. ಈ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮೆಲಟೋನಿನ್ ಉತ್ಪಾದನೆ ಹೆಚ್ಚಾಗುತ್ತದೆ, ಮನುಷ್ಯನ ನಿದ್ರಾ ಚಕ್ರದ ಮೇಲೆ ಪರಿಣಾಮ ಬೀರುತ್ತದೆ.

ಅಲ್ಲದೆ ಹೆಚ್ಚು ಗಂಟೆಗಳ ಕಾಲ ಸ್ಮಾರ್ಟ್​ಫೋನ್​ ಬಳಸಿದರೆ ಬೊಜ್ಜಿನ ಅಪಾಯ ಎದುರಾಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅತಿಯಾಗಿ ಸ್ಮಾರ್ಟ್​ಫೋನ್​ ಬಳಕೆ ಮಾಡುವವರಲ್ಲಿ ಶೇ.43 ರಷ್ಟು ಜನರು ಬೊಜ್ಜು ಮತ್ತು ಹೃದ್ರೋಗ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಸಂಶೋಧನೆಯ ಮೂಲಕ ತಿಳಿಸಿದ್ದಾರೆ. ಸೈಮನ್​​​ ಬೊಲಿವಾರ್​ ವಿಶ್ವವಿದ್ಯಾಲಯ ಆರೋಗ್ಯ ಮತ್ತು ವಿಜ್ನಾನ ವಿಭಾಗದ 1060 ವಿದ್ಯಾರ್ಥಿಗಳನ್ನು ಸಂಶೋಧನೆಗೆ ಒಳಪಡಿಸಿದಾಗ ಇಂತಹದೊಂದು ಅಚ್ಚರಿಯ ಸಂಗತಿ ಸಂಶೋಧಕರ ಕೈಗೆ ಸಿಕ್ಕಿದೆ.

ಇದನ್ನೂ ಓದಿ

ಮೊಬೈಲ್​ನಲ್ಲಿ ಘಂಟೆಗಟ್ಟಲೇ ಮಾತನಾಡುವಾಗ, ನಿಮ್ಮ ಸ್ಮಾರ್ಟ್​ಫೋನ್ ವಿಪರೀತವಾಗಿ ಬಿಸಿಯಾಗಿಬಿಡುತ್ತದೆ. ಈ ಶಾಖವು ನಿಮ್ಮ ಆರೋಗ್ಯ ಮತ್ತು ಚರ್ಮದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಸತತವಾಗಿ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಆ ಭಾಗದ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚುತ್ತದೆ. ಇದರಿಂದಾಗಿ ನಿಮ್ಮ ಚರ್ಮದ ಮೇಲೆ ಚುಕ್ಕೆಗಳಾಗುತ್ತದೆ ಮತ್ತು ಚರ್ಮದ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada